ಶೂನ್ಯದಿಂದ ಬಿಸಿನೆಸ್ ಆರಂಭಿಸಿದ ವ್ಯಕ್ತಿಯೀಗ ಬೆಂಗಳೂರಿನ ಅತ್ಯಂತ ಶ್ರೀಮಂತ ವ್ಯಕ್ತಿ, ಒಟ್ಟು ಆಸ್ತಿ ಮೌಲ್ಯವೆಷ್ಟು ಗೊತ್ತಾ?
ಬೆಂಗಳೂರು, ಭಾರತದ ಐಟಿ ಹಬ್. ಹಲವಾರು ಶ್ರೀಮಂತ ಉದ್ಯಮಿಗಳು ಮತ್ತು ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಬೆಂಗಳೂರಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಕಿರಣ್ ಮಜುಂದಾರ್-ಶಾ, ವಿಪ್ರೊದ ಅಜೀಂ ಪ್ರೇಮ್‌ಜಿ ಮತ್ತು ಇನ್ಫೋಸಿಸ್‌ನ ಎನ್‌ಆರ್ ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಇದ್ದಾರೆ. ಆದರೆ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಆಸ್ತಿಯನ್ನು ಹೊಂದಿರುವ ವ್ಯಕ್ತಿ ಯಾರೆಂದು ನಿಮ್ಗೆ ಗೊತ್ತಿದ್ಯಾ?
ಬೆಂಗಳೂರು, ಭಾರತದ ಐಟಿ ಹಬ್. ಹಲವಾರು ಶ್ರೀಮಂತ ಉದ್ಯಮಿಗಳು ಮತ್ತು ಬಿಲಿಯನೇರ್‌ಗಳಿಗೆ ನೆಲೆಯಾಗಿದೆ. ಬೆಂಗಳೂರಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಕಿರಣ್ ಮಜುಂದಾರ್-ಶಾ, ವಿಪ್ರೊದ ಅಜೀಂ ಪ್ರೇಮ್‌ಜಿ ಮತ್ತು ಇನ್ಫೋಸಿಸ್‌ನ ಎನ್‌ಆರ್ ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಇದ್ದಾರೆ. ಆದರೆ ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ಆಸ್ತಿಯನ್ನು ಹೊಂದಿರುವ ವ್ಯಕ್ತಿ ಯಾರೆಂದು ನಿಮ್ಗೆ ಗೊತ್ತಿದ್ಯಾ?
ಬಿಲಿಯನೇರ್ ಅರ್ಜುನ್ ಮೆಂಡಾ ಅವರು 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023ರಲ್ಲಿ ಬೆಂಗಳೂರಿನ ಅತ್ಯಂತ ಶ್ರೀಮಂತ ವ್ಯಕ್ತಿಯೆಂದು ಗುರುತಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ RMZ ಕಾರ್ಪ್ ಅನ್ನು ನಡೆಸುತ್ತಿರುವ ಅರ್ಜುನ್ ಮೆಂಡಾ ಮತ್ತು ಅವರ ಕುಟುಂಬವು 37,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದೆ.
ಅರ್ಜುನ್ ಮೆಂಡಾ ಯಾರು?
ಅರ್ಜುನ್ ಮೆಂಡಾ, ಈಗ ಪಾಕಿಸ್ತಾನದಲ್ಲಿರುವ ಶಿಕರ್‌ಪುರ್ ಸಿಂಗ್‌ನಲ್ಲಿ ಜನಿಸಿದರು. ಮೆಂಡಾ ಮತ್ತು ಅವರ ಕುಟುಂಬವು ವಿಭಜನೆಯ ಸಮಯದಲ್ಲಿ ಭಾರತಕ್ಕೆ ಮರಳಿತು. ಈ ಸಂದರ್ಭದಲ್ಲಿ ಅವರು ತಮ್ಮ ಸಂಪೂರ್ಣ ಆಸ್ತಿಯನ್ನು ತ್ಯಜಿಸಬೇಕಾಯಿತು. ಮೆಂಡಾ ಬಿಲಿಯನೇರ್ ಆಗುವ ಮೊದಲು ಕೇವಲ ಚಿಕ್ಕದೊಂದು ಬಿಸಿನೆಸ್ ಹೊಂದಿದ್ದರು. ನಂತರ ಬಹಳ ಕಷ್ಟಪಟ್ಟು ತಮ್ಮ ಬಿಸಿನೆಸ್‌ನ್ನು ಮೇಲಕ್ಕೆ ತಂದರು. ಯಶಸ್ಸಿನ ಹಾದಿಯಲ್ಲಿ ಸಾಗಿದರು.
ಕುಟುಂಬದ ಸೀಮಿತ ಆರ್ಥಿಕ ಸಾಮರ್ಥ್ಯದ ಹೊರತಾಗಿಯೂ, ವಿದ್ಯಾರ್ಥಿವೇತನದ ಕಾರಣದಿಂದ ಅರ್ಜುನ್ ಮೆಂಡಾ ಐಐಟಿ ಖರಗ್‌ಪುರದಲ್ಲಿ ವಿದ್ಯಾಭ್ಯಾಸ ಪೂರೈಸಿದರು, ಮೆಂಡಾ ಫೌಂಡೇಶನ್ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಈ ಮೂಲಕ ಅರ್ಜುನ್ ಮೆಂಡಾ ಎಜುಕೇಶನ್ ಪೂರ್ಣಗೊಳಸಿಇದರು.
ಮೆಂಡಾ ಅವರು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನಲ್ಲಿ ಕೈಗಾರಿಕಾ ಎಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1967ರಲ್ಲಿ, ಅವರು ಸಣ್ಣ ಉದ್ಯಮಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ ತಮ್ಮ ಜೀವನದ ಹಾದಿಯನ್ನು ಬದಲಾಯಿಸಿದರು ಮತ್ತು 1980ರ ದಶಕದಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಪ್ರವೇಶಿಸಿದರು.
Arjun menda
2002ರಲ್ಲಿ, RMZ ಕಾರ್ಪ್ ಅನ್ನು ಸ್ಥಾಪಿಸಲಾಯಿತು. ಇದು ಈಗ ಕೋಟಿಗಟ್ಟಲೆ ವ್ಯವಹಾರ ಮಾಡುತ್ತಿದೆ. ವ್ಯವಹಾರವನ್ನು ಅರ್ಜುನ್ ಮೆಂಡಾ ಇಬ್ಬರು ಪುತ್ರರಾದ ರಾಜ್ ಮತ್ತು ಮನೋಜ್ ಮೆಂಡಾ ನಿರ್ವಹಿಸುತ್ತಿದ್ದಾರೆ.
ಕಂಪನಿಯು ಪ್ರಸ್ತುತ ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಮತ್ತು ಇತರ ಸಾಫ್ಟ್‌ವೇರ್ ಹಬ್‌ಗಳಲ್ಲಿ ಕಾರ್ಪೊರೇಟ್ ಕಚೇರಿಗಳ ಉನ್ನತ ಬಿಲ್ಡರ್‌ಗಳಲ್ಲಿ ಒಂದಾಗಿದೆ.