ಈದ್ ಹಬ್ಬದಿಂದ ಸೌದಿಯಲ್ಲಿ ಭಾರಿ ಕುಸಿತ ಕಂಡ ಚಿನ್ನದ ಬೆಲೆ, ಬೆಂಗಳೂರಲ್ಲಿ ಎಷ್ಟು?
ಈದ್ ಹಬ್ಬದ ಕಾರಣ ಸೌದಿಯಲ್ಲಿ ಚಿನ್ನದ ದರ ಭಾರಿ ಕುಸಿತ ಕಂಡಿದೆ. ಇದು ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆಯಾ? ಬೆಂಗಳೂರು ಸೇರಿದಂತೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆಯಾ?

ಸೌದಿ ಅರೆಬಿಯಾ, ಯುಎಐ ಸೇರಿದಂತೆ ಮಧ್ಯಪ್ರಾಚ್ಯ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಈದ್ ಹಬ್ಬದ ಪ್ರಯುಕ್ತ ಅರಬ್ ರಾಷ್ಟ್ರದಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಸೌದಿ ಅರೆಬಿಯಾದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 100 ಗ್ರಾಂಗೆ 4575 ರೂಪಾಯಿ ಇಳಿಕೆಯಾಗಿದ್ದರೆ, ದುಬೈ, ಅಬು ಧಾಬಿಯಲ್ಲಿ 2,336 ರೂಪಾಯಿ ಇಳಿಕೆಯಾಗಿದೆ. ಇದು ಭಾರತದ ಮಾರುಕಟ್ಟೆಯಲ್ಲಿ ಪರಿಣಾಮ ಬೀರಿದೆಯಾ? ಬೆಂಗಳೂರು ಸೇರಿದಂತೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ.
ಬೆಂಗಳೂರಿನಲ್ಲಿ ಚಿನ್ನದ ದರ 1 ಲಕ್ಷ ರೂಪಾಯಿ ಸನಿಹಕ್ಕೆ ತಲುಪಿದೆ. 24 ಕ್ಯಾರೆಟ್ 100 ಗ್ರಾಂ ಚಿನ್ನದ ದರ 9,96,100 ರೂಪಾಯಿ ಆಗಿದೆ. 10 ಗ್ರಾಂಗೆ 9,960 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 9,130 ರೂಪಾಯಿ ಆಗಿದೆ. 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 9,13,000 ರೂಪಾಯಿ ಆಗಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದ್ದು ಮತ್ತೆ 1 ಲಕ್ಷ ರೂಪಾಯಿ ಹತ್ತಿರದಲ್ಲಿದೆ. ಇದೀಗ ಜನಸಾಮಾನ್ಯರಿಗೆ ಚಿನ್ನ ದುಬಾರಿಯಾಗಿ ಪರಿಣಿಸುತ್ತಿದೆ.
24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂ ಚಿನ್ನದ ಬೆಲೆ: 9,960 ರೂಪಾಯಿ
8 ಗ್ರಾಂ ಚಿನ್ನದ ಬೆಲೆ: 79,680 ರೂಪಾಯಿ
10 ಗ್ರಾಂ ಚಿನ್ನದ ಬೆಲೆ: 99,600 ರೂಪಾಯಿ
100 ಗ್ರಾಂ ಚಿನ್ನದ ಬೆಲೆ: 9,96,000 ರೂಪಾಯಿ
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ಬೆಲೆ: 9,130 ರೂಪಾಯಿ
8 ಗ್ರಾಂ ಚಿನ್ನದ ಬೆಲೆ: 93,040 ರೂಪಾಯಿ
10ಗ್ರಾಂ ಚಿನ್ನದ ಬೆಲೆ: 91,300 ರೂಪಾಯಿ
100 ಗ್ರಾಂ ಚಿನ್ನದ ಬೆಲೆ: 9,13,000 ರೂಪಾಯಿ
18 ಕ್ಯಾರೆಟ್ ಚಿನ್ನದ ದರ
1ಗ್ರಾಂ ಚಿನ್ನದ ಬೆಲೆ: 7,470 ರೂಪಾಯಿ
8ಗ್ರಾಂ ಚಿನ್ನದ ಬೆಲೆ: 59,760 ರೂಪಾಯಿ
10ಗ್ರಾಂ ಚಿನ್ನದ ಬೆಲೆ: ₹74,700 ರೂಪಾಯಿ
100ಗ್ರಾಂ ಚಿನ್ನದ ಬೆಲೆ: 7,47,000 ರೂಪಾಯಿ
ಮಲ್ಟಿ ಕಾಮೋಡಿಟಿ ಎಕ್ಸ್‌ಚೇಂಜ್ (MCX) ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ದುಬಾರಿಯಾಗಿದೆ. ಸದ್ಯ ಮದುವೆ ಸೀಸನ್ ಮುಗಿದಿದೆ. ಸಾಮಾನ್ಯವಾಗಿ ಮದುವೆ ಸೀಸನ್, ಕಾರ್ಯಕ್ರಮಗಳ ಸೀಸನ್ ಮುಗಿದ ಬಳಿಕ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗುತ್ತಿತ್ತು. ಆದರೆ ಈ ಬಾರಿ ಅಮೆರಿಕ ಹಾಗೂ ಚೀನಾದ ತೆರಿಗೆ ಯುದ್ಧ ಕಾರಣ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ.