ನೌಕರಿ ಬಿಟ್ಟು ಬ್ಯುಸಿನೆಸ್ ಶುರು ಮಾಡುತ್ತಿದ್ದೀರಾ? ಹೀಗೆ ಮಾಡಿದರೆ ದುಡ್ಡಿನ ಸಮಸ್ಯೆ ಬರಲ್ಲ
ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡೋಕೆ ಆಗ್ತಿಲ್ಲ ಅಂತ ಬಹಳಷ್ಟು ಜನ ಹೇಳ್ತಾರೆ. ಕಾರಣ ಸಿಗೋ ಸಂಬಳಕ್ಕೂ, ಮಾಡಿಸೋ ಕೆಲಸಕ್ಕೂ ಹೊಂದಾಣಿಕೆ ಇರಲ್ಲ. ಆದಾಯ ಸಾಲದೆ, ಮನೆಯ ಖರ್ಚುಗಳನ್ನು ನಿಭಾಯಿಸಲಾಗದೆ ಬಹಳಷ್ಟು ಜನ ಕೆಲಸ ಬಿಟ್ಟು ಬಿಸಿನೆಸ್ ಮಾಡಬೇಕು ಅಂತ ಯೋಚಿಸ್ತಾರೆ. ನೀವು ಕೂಡ ಹಾಗೆ ಯೋಚಿಸ್ತಿದ್ದೀರಾ? ಕೆಲಸ ಬಿಡೋ ಮುಂಚೆ ಹೀಗೆ ಮಾಡಿದ್ರೆ ನೀವು, ನಿಮ್ಮ ಮನೆಯವರು ದುಡ್ಡಿನ ಸಮಸ್ಯೆಗೆ ಸಿಲುಕಲ್ಲ. ಬಿಸಿನೆಸ್ ಕೂಡ ಚೆನ್ನಾಗಿ ಬೆಳೆಯುತ್ತೆ.

ಇತ್ತೀಚಿನ ದಿನಗಳಲ್ಲಿ ಕೆಲಸ ಮಾಡೋದು ಎಷ್ಟು ಒತ್ತಡ ಅಂತ ಎಲ್ಲರಿಗೂ ಗೊತ್ತು. ಕೆಲಸದ ಒತ್ತಡ ಹೆಚ್ಚಾಗ್ತಿರೋದ್ರಿಂದ 8 ಗಂಟೆ ಕೆಲಸ 12 ಗಂಟೆಗೂ ಹೆಚ್ಚಾಗ್ತಿದೆ. ಇಂಥ ಸಂದರ್ಭದಲ್ಲಿ ಮನೆಯ ಜವಾಬ್ದಾರಿ, ಕೆಲಸದ ಒತ್ತಡ ಎರಡನ್ನೂ ನಿಭಾಯಿಸೋಕೆ ಆಗದೆ ಕೆಲಸ ಬಿಟ್ಟು ಚಿಕ್ಕ ಬಿಸಿನೆಸ್ ಮಾಡಿದ್ರೆ ಸಾಕು ಅಂತ ಬಹಳಷ್ಟು ಜನ ಅಂದುಕೊಳ್ತಾರೆ. ನೀವು ಕೂಡ ಹಾಗೆ ಅಂದುಕೊಳ್ತಿದ್ದೀರಾ?
ಕೆಲಸದ ಒತ್ತಡ ತಾಳ್ಕೊಳ್ಳೋಕೆ ಆಗದೆ ಏಕಾಏಕಿ ಕೆಲಸ ಬಿಟ್ರೆ ನಿಮ್ಮ ಮನೆಯವರು ಕಷ್ಟಕ್ಕೆ ಸಿಲುಕ್ತಾರೆ. ದುಡ್ಡಿನ ಅವಶ್ಯಕತೆಗಳನ್ನು ಪೂರೈಸೋಕೆ ಆಗದೆ ನೀವು ಸಾಲ ಮಾಡ್ಬೇಕಾಗುತ್ತೆ. ಅದನ್ನು ಸರಿಯಾದ ಸಮಯಕ್ಕೆ ತೀರ್ಸೋಕೆ ಆಗದಿದ್ರೆ ಇನ್ನಷ್ಟು ಸಮಸ್ಯೆಗಳು ನಿಮ್ಮನ್ನು ಸುತ್ತುವರಿಯುತ್ತವೆ. ಹಾಗಾಗದಿರೋಕೆ ಇಲ್ಲಿ ಹೇಳಿರೋ ರೀತಿ ಟ್ರೈ ಮಾಡಿ.
ಕೆಲಸ ಬಿಡಬೇಕು ಅನ್ನೋ ಯೋಚನೆ ಬಂದ ಕೂಡಲೇ ಈ ವಿಷಯಗಳನ್ನು ಒಮ್ಮೆ ಚೆಕ್ ಮಾಡ್ಕೊಳ್ಳಿ.
ಕೆಲಸ ಬಿಟ್ಟು ಬೇರೆ ಆದಾಯದ ಮೂಲಗಳು ಏನಾದ್ರೂ ಇದೆಯಾ? ಅಂದ್ರೆ ಪ್ರತಿ ತಿಂಗಳು ಬಾಡಿಗೆ ಆದಾಯ, ಜಮೀನು ಇದ್ರೆ ಅದರಿಂದ ಆದಾಯ, ಮನೆಯ ಬಿಸಿನೆಸ್ ಇದ್ರೆ ಅದರಲ್ಲಿ ನಿಮಗೆ ಏನಾದ್ರೂ ಆದಾಯ ಬರುತ್ತಾ? ಇಂಥ ಆದಾಯದ ಮೂಲಗಳು ಇದೆಯಾ ಇಲ್ವಾ ಅಂತ ಚೆಕ್ ಮಾಡ್ಕೊಳ್ಳಿ.
ಒಂದು ವೇಳೆ ಇದ್ರೆ ಈಗಿರೋ ಸಾಲಗಳು, EMIಗಳು, ಬೇರೆ ಸಾಲಗಳನ್ನು ನೆನಪಿಟ್ಟುಕೊಂಡು ನಿಮಗೆ ಬರೋ ಆದಾಯ, ತೀರಿಸಬೇಕಾದ ಸಾಲಗಳು ಹೊಂದಿಕೆ ಆಗುತ್ತಾ, ಇಲ್ವಾ ಅಂತ ಯೋಚಿಸಿ. ಹಾಗೆ ನಿಮ್ಮ ದಿನನಿತ್ಯದ ಜೀವನಕ್ಕೆ ತೊಂದರೆ ಆಗದ ರೀತಿ ಇದ್ರೆ ನೀವು ಆರಾಮಾಗಿ ಕೆಲಸ ಬಿಟ್ಟು ಬಿಸಿನೆಸ್ ಪ್ಲಾನ್ ಮಾಡ್ಕೊಳ್ಳಿ.
ಹಾಗಲ್ಲದೆ ಬೇರೆ ಯಾವ ಆದಾಯದ ಮೂಲಗಳೂ ಇಲ್ಲದೆ ನೀವು ಕೆಲಸ ಬಿಡಬೇಕು ಅಂತ ಅಂದುಕೊಂಡ್ರೆ ಏಕಾಏಕಿ ಆ ಕೆಲಸ ಮಾಡ್ಬೇಡಿ. ಇದಕ್ಕೆ ನೀವೇನು ಮಾಡಬೇಕು ಅಂದ್ರೆ.. ಮೊದಲು ನೀವು ಶುರು ಮಾಡ್ಬೇಕು ಅಂತ ಇರೋ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ. ಲೋಪದೋಷಗಳು, ಕಷ್ಟಗಳು, ಲಾಭಗಳು, ಒತ್ತಡಗಳು ಹೀಗೆ ಎಲ್ಲದರ ಬಗ್ಗೆ ಒಂದು ಅರಿವು ಮೂಡಿಸಿಕೊಳ್ಳಿ.
ಕೆಲಸ ಮಾಡ್ತಾನೇ ನೀವು ಶುರು ಮಾಡ್ಬೇಕು ಅಂತ ಇರೋ ಬಿಸಿನೆಸ್‌ನ ಚಿಕ್ಕದಾಗಿ ಶುರು ಮಾಡಿ. ಉದಾಹರಣೆಗೆ ನೀವು ಹೋಟೆಲ್ ಶುರು ಮಾಡ್ಬೇಕು ಅಂದುಕೊಳ್ಳಿ. ಇದು ಬೆಳಿಗ್ಗೆ, ಸಾಯಂಕಾಲ ಮಾಡೋ ಕೆಲಸ. ಹಾಗಾಗಿ ನೀವು ಕೆಲಸ ಮಾಡ್ತಾನೇ ಟ್ರಕ್ ವೆಹಿಕಲ್‌ನಲ್ಲಿ ಹೋಟೆಲ್ ಶುರು ಮಾಡಿ. ನೀವು ಮಾಡೋಕೆ ಆದ್ರೆ ಮಾಡಿ. ಇಲ್ಲಾಂದ್ರೆ ಕೆಲಸಗಾರರನ್ನ ಇಟ್ಕೊಂಡು ನೀವು ಮೇಲ್ವಿಚಾರಣೆ ಮಾಡಿ. ಎರಡು, ಮೂರು ತಿಂಗಳು ಲಾಭದ ಆಸೆ ಇಟ್ಟುಕೊಳ್ಳದೆ ಕಷ್ಟಪಡಿ. ಇದ್ರಿಂದ ನಿಮಗೆ ಒಂದು ಸ್ಪಷ್ಟತೆ ಸಿಗುತ್ತೆ.
ಈ ಬಿಸಿನೆಸ್‌ನ ಇನ್ನೂ ಹೆಚ್ಚಿಸಿದ್ರೆ ಖಂಡಿತ ಲಾಭ ಬರುತ್ತೆ ಅಂತ ನಿಮಗೆ ನಂಬಿಕೆ ಬಂದ್ರೆ ಆಗ ಕೆಲಸ ಬಿಟ್ಟು, ನಿಮ್ಮ ಪೂರ್ಣ ಸಮಯವನ್ನು ಬಿಸಿನೆಸ್‌ಗೆ ಮೀಸಲಿಡಿ. ಸ್ವಂತ ಬಿಸಿನೆಸ್‌ಗಾಗಿ 24 ಗಂಟೆ ಕಷ್ಟಪಟ್ಟರೂ ಕಷ್ಟ ಅನ್ನಿಸಲ್ಲ. ನಿಮ್ಮ ಹೋಟೆಲ್‌ಗೆ ಒಂದು ಬ್ರ್ಯಾಂಡ್ ಬರೋವರೆಗೂ ಕಷ್ಟಪಡಿ. ಊಟ ಈ ಹೋಟೆಲ್‌ನಲ್ಲಿ ತುಂಬಾ ಚೆನ್ನಾಗಿರುತ್ತೆ ಅನ್ನೋ ಹೆಸರು ನಿಮಗೆ ಬಂದ್ರೆ ನೀವು ಗೆದ್ದ ಹಾಗೆ. ಆಗ ಟ್ರಕ್ ವೆಹಿಕಲ್‌ನಲ್ಲಿರೋ ಹೋಟೆಲ್‌ನ ಬೇರೆಡೆ ಕೂಡ ಶುರು ಮಾಡಿ. ಇಲ್ಲಾಂದ್ರೆ ಒಳ್ಳೆ ಜಾಗ ನೋಡ್ಕೊಂಡು ಬಿಲ್ಡಿಂಗ್ ಬಾಡಿಗೆಗೆ ತಗೊಂಡು ದೊಡ್ಡದಾಗಿ ಹೋಟೆಲ್ ಶುರು ಮಾಡಿ. ನಿಮ್ಮ ಆದಾಯ ತಾನಾಗೇ ಹತ್ತು ಪಟ್ಟು ಹೆಚ್ಚಾಗುತ್ತೆ.
ಆ ಐಡಿಯಾ ಹೋಟೆಲ್‌ಗೆ ಮಾತ್ರ ಅಲ್ಲ. ಟೀ ಅಂಗಡಿ, ಬಟ್ಟೆ ಅಂಗಡಿ, ವ್ಯವಸಾಯ, ಫ್ಯಾನ್ಸಿ ಅಂಗಡಿ, ಸೂಪರ್ ಮಾರ್ಕೆಟ್ ಹೀಗೆ ಯಾವ ಬಿಸಿನೆಸ್ ಆದ್ರೂ ಹೀಗೆ ಪ್ಲಾನಿಂಗ್ ಪ್ರಕಾರ ಕಷ್ಟಪಟ್ಟರೆ ಖಂಡಿತ ಗೆಲ್ತೀರಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.