ಅಬ್ಬಬ್ಬಾ..ಭರ್ತಿ ಮೂರು ದಿನ ಗ್ರ್ಯಾಂಡ್ ಆಗಿ ನಡೆಯಲಿದೆ ಅನಂತ್ ಅಂಬಾನಿ ಬರ್ತ್‌ಡೇ ಪಾರ್ಟಿ, ಸಿದ್ಧತೆ ಹೇಗಿದೆ?
ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇತ್ತೀಚಿಗೆ ಗುಜರಾತ್‌ನ ಜಾಮ್ನಾನಗರದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಈಗ ಮತ್ತೊಮ್ಮೆ ಜಾಮ್ನಾ ನಗರ ಅಂಬಾನಿ ಕುಟುಂಬದ ಗ್ರ್ಯಾಂಡ್ ಪಾರ್ಟಿಯೊಂದಕ್ಕೆ ಸಜ್ಜಾಗ್ತಿದೆ. ಅನಂತ್ ಅಂಬಾನಿಯ ಅದ್ಧೂರಿ ಬರ್ತ್‌ಡೇ ಸೆಲಬ್ರೇಶನ್‌ಗೆ ಸಿದ್ಧತೆ ನಡೀತಿದೆ.
ಭಾರತದ ಅತಿದೊಡ್ಡ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ. ಯಾವಾಗ್ಲೂ ಲಕ್ಸುರಿಯಸ್ ಲೈಫ್‌ಸ್ಟೈಲ್ ಫಾಲೋ ಮಾಡುತ್ತಾರೆ. ಕೋಟಿ ಕೋಟಿ ಮೌಲ್ಯದ ಕಾರು, ವಾಚ್‌ಗಳನ್ನು ಹೊಂದಿದ್ದಾರೆ.
ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪ್ರಿ ವೆಡ್ಡಿಂಗ್ ಇತ್ತೀಚಿಗೆ ಗುಜರಾತ್‌ನ ಜಾಮ್ನಾನಗರದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಬಾಲಿವುಡ್ ಸೆಲೆಬ್ರಿಟಿಗಳು, ಅಂತಾರಾಷ್ಟ್ರೀಯ ಉದ್ಯಮಿಗಳು, ರಾಜಕಾರಣಿಗಳು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈಗ ಮತ್ತೊಮ್ಮೆ ಜಾಮ್ನಾ ನಗರ ಅಂಬಾನಿ ಕುಟುಂಬದ ಗ್ರ್ಯಾಂಡ್ ಪಾರ್ಟಿಯೊಂದಕ್ಕೆ ಸಜ್ಜಾಗ್ತಿದೆ.
ಅಂಬಾನಿ ಫ್ಯಾಮಿಲಿ ಅನಂತ್ ಅಂಬಾನಿ ಬರ್ತ್‌ಡೇಯನ್ನು ಗುಜರಾತ್‌ನ ಜಾಮ್ನಾನಗರದಲ್ಲಿ ಅದ್ಧೂರಿಯಾಗಿ ಆಯೋಜಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಏಪ್ರಿಲ್ 10ರಂದು ಅನಂತ್ ಅಂಬಾನಿ ತಮ್ಮ 29ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಅಂಬಾನಿ ಫ್ಯಾನ್ಸ್ ಪೇಜ್ ಪ್ರಕಾರ, ಭಾರತೀಯ ಗಾಯಕ, ಸಂಗೀತ ನಿರ್ದೇಶಕ, ಸಂಯೋಜಕ ಮತ್ತು ಸಂಗೀತ ನಿರ್ಮಾಪಕ ಬಿ ಪ್ರಾಕ್, ಅನಂತ್ ಅಂಬಾನಿ ಹುಟ್ಟುಹಬ್ಬದ ಸಮಾರಂಭದಲ್ಲಿ ಲೈವ್ ಪ್ರದರ್ಶನ ನೀಡಲಿದ್ದಾರೆ.
ಜಾಮ್‌ನಗರದಲ್ಲಿ ಅನಂತ್ ಅವರ ಹುಟ್ಟುಹಬ್ಬದ ಸಮಾರಂಭದ ಸಂಪೂರ್ಣ ಸ್ಥಳವನ್ನು ದೀಪಗಳಿಂದ ಅಲಂಕರಿಸಲಾಗಿದೆ. ಅತಿಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಭೋಜನದ ವ್ಯವಸ್ಥೆ ಮಾಡಲಾಗಿದೆ.
ಮಾತ್ರವಲ್ಲ ಸಮಾರಂಭದಲ್ಲಿ ಬಾಲಿವುಡ್‌ನ ನಟ-ನಟಿಯರು ಸಹ ಭಾಗಿಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಈಗಾಗ್ಲೇ ಸಲ್ಮಾನ್ ಖಾನ್, ಓರಿ ಮೊದಲಾದವರು ಜಾಮ್ನಾನಗರದತ್ತ ತೆರಳಿದ್ದಾರೆ ಎಂದು ವರದಿಯಾಗಿದೆ.
ಜಾಮ್ನಾ ನಗರದಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಗಮನಿಸಿದಾಗ ಅನಂತ್ ಅಂಬಾನಿ ಹುಟ್ಟುಹಬ್ಬದ ಪಾರ್ಟಿ ಬರೋಬ್ಬರಿ ಮೂರು ದಿನಗಳ ಕಾಲ ನಡೆಯಲಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ. 3 ಟಯರ್‌ನ ಕೇಕ್ ಪೋಟೋ ಸಹ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಜುಲೈ 12, 2024ರಂದು ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್‌ರನ್ನು ಮದುವೆಯಾಗಲಿದ್ದಾರೆ. ಇವರಿಬ್ಬರೂ ಇತ್ತೀಚಿಗೆ ಅಂತರಾಷ್ಟ್ರೀಯ ವೆಡ್ಡಿಂಗ್ ಪ್ಲಾನರ್ ಜೊತೆಗೆ ದುಬೈನಲ್ಲಿ ಕಾಣಿಸಿಕೊಂಡಿದ್ದರು.
GQ ಇಂಡಿಯಾದ ವರದಿಯು ಅಂಬಾನಿಗಳು ಬಹುಶಃ ರೂ. ಅನಂತ್ ಮತ್ತು ರಾಧಿಕಾ ಮದುವೆಗೆ 1000 ಕೋಟಿ ರೂ. ಖರ್ಚು ಮಾಡಲಿದ್ದಾರೆ ಎಂದು ತಿಳಿದುಬಂದಿದೆ.