ರಿಲೆಯನ್ಸ್ ಮಾತ್ರವಲ್ಲ ಈ ಕಂಪನಿಗಳ ಒಡೆಯನೂ ಅನಂತ್ ಅಂಬಾನಿಯೇ; ಇವರ ನೆಟ್‌ವರ್ತ್ ಎಷ್ಷು?
ಅನಂತ್ ಅಂಬಾನಿ ಹಾಗೂ ರಾಧಿಕಾ ಅದ್ಧೂರಿ ವಿವಾಹ ಜುಲೈ12ಕ್ಕೆ ನಡೆಯಲಿದೆ. ಈಗಾಗಲೇ ಮದುವಯ ಪೂರ್ವ ಕಾರ್ಯಕ್ರಮಗಳು ಶುರುಗಾಗಿದೆ. ಇದರ ನಡುವೆಯೇ ಅನಂತ್ ಅಂಬಾನಿಗೆ ಸಂಬಂಧಿಸಿದ ವಿಷಯಗಳು ಸಾಕಷ್ಷು ಚರ್ಚೆಯಾಗುತ್ತಿವೆ. ಅನಂತ್ ಅಂಬಾನಿ ಅವರ ನೆಟ್ ವರ್ತ್, ಶಿಕ್ಷಣದ ವಿವರ ಮತ್ತು ಆಸ್ತಿ ಮಾಹಿತಿ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿವೆ
ನೀತಾ ಮತ್ತು ಮುಕೇಶ್ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ತಮ್ಮ ಶಿಕ್ಷಣ ಹಾಗೂ ಅನುಭವದಿಂದ ವ್ಯಾಪಾರ ಜಗತ್ತಿನಲ್ಲಿ ತಮ್ಮದೇ ಆದ ಹೆಸರು ಗಳಿಸಿದ್ದಾರೆ.
ಅವರು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದ ಅತಿದೊಡ್ಡ ಖಾಸಗಿ ವಲಯದ ನಿಗಮ ಮತ್ತು ಫಾರ್ಚೂನ್ 500 ಕಂಪನಿಯ ಪ್ರಮುಖ ಶೇರುದಾರರಲ್ಲಿ ಒಬ್ಬರು.
ಅನಂತ್ ಅವರು ತಮ್ಮ ತಾಯಿ ನೀತಾ ಅಂಬಾನಿ ಸ್ಥಾಪಿಸಿದ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು.
ನಂತರ ಅನಂತ್ ಅಮೆರಿಕದ ರೋಡ್ ಐಲ್ಯಾಂಡ್ ನಲ್ಲಿರುವ ಬ್ರೌನ್ ವಿಶ್ವವಿದ್ಯಾಲಯಕ್ಕೆ ಹೋದರು. ಬ್ರೌನ್ ಯೂನಿವರ್ಸಿಟಿ ಐವಿ ಲೀಗ್ ಶಾಲೆಯಾಗಿದ್ದು, ಅದು ಫ್ಲೆಕ್ಸಿಬಲ್ ಪಠ್ಯಕ್ರಮಕ್ಕೆ ಹೆಸರುವಾಸಿ.
ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ, ಅವರು ವ್ಯಾಪಾರ ನಿರ್ವಹಣೆಯನ್ನು (Business Management) ಅಧ್ಯಯನ ಮಾಡಿದರು, ಇದು ಅವರಿಗೆ ವ್ಯಾಪಾರ ಮತ್ತು ಅರ್ಥಶಾಸ್ತ್ರದ (Economics) ಆಳವಾದ ತಿಳುವಳಿಕೆಯನ್ನು ನೀಡಿತು.
ಅನಂತ್ ಹಲವಾರು ರಿಲಯನ್ಸ್ ಅಂಗಸಂಸ್ಥೆಗಳ ಮಂಡಳಿಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾರೆ. ಶಕ್ತಿ ಮತ್ತು ವಸ್ತುಗಳ ವ್ಯಾಪಾರವನ್ನು ವಿಸ್ತರಿಸುವುದರ ಮೇಲೆ ಅವರು ಕೇಂದ್ರೀಕರಿಸುತ್ತಾರೆ. ಈ ರೀತಿ ಅವರು ತನ್ನ ಶಿಕ್ಷಣವನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳುತ್ತಾರೆ
ಅನಂತ್ ಅವರಿಗೆ ಪ್ರಾಣಿ ಕಲ್ಯಾಣದ ಬಗ್ಗೆಯೂ ಒಲವಿದೆ. ಅಪಾಯದಲ್ಲಿರುವ ಪ್ರಾಣಿಗಳಿಗೆ ಸಹಾಯ ಮಾಡುವ ಪ್ರಾಜೆಕ್ಟ್‌ನಲ್ಲಿ ಅನಂತ್ ತೊಡಗಿಸಿಕೊಂಡಿರುವುದು ವ್ಯವಹಾರ ಕೌಶಲ್ಯಗಳ ಜೊತೆಗೆ ಅವರಿಗಿರುವ ಮಾನವೀಯ ಮೌಲ್ಯಗಳಿಗೆ ಬದ್ಧತೆಯನ್ನು ತೋರಿಸುತ್ತದೆ.
ಅವರ ಉದ್ಯಮಗಳು ಹೊಸತನವನ್ನು ಪ್ರತಿಬಿಂಬಿಸುತ್ತವೆ ಮತ್ತು ವರದಿಗಳ ಪ್ರಕಾರ 40 ಶತಕೋಟಿ ಡಾಲರ್ ಅಥವಾ 3.3 ಲಕ್ಷ ಕೋಟಿಯಷ್ಟು ಅನಂತ್ ಅಂಬಾನಿಯ ವೈಯಕ್ತಿಕ ನೆಟ್‌ವರ್ತ್ ಆಗಿದೆ.
10 ಬೆಡ್‌ರೂಮ್, ಖಾಸಗಿ ಸ್ಪಾ ಮತ್ತು ಒಳಾಂಗಣ ಮತ್ತು ಹೊರಾಂಗಣ ಪೂಲ್ ಹೊಂದಿರುವ ಭವ್ಯತೆಗೆ ಹೆಸರುವಾಸಿಯಾದ ದುಬೈನಲ್ಲಿರುವ ಪ್ಲಾಮ್ ಜುಮೇರಾ ವಿಲ್ಲಾದ ಅರ್ಧ ಮಾಲೀಕತ್ವವನ್ನು ಅನಂತ್ ಹೊಂದಿದ್ದಾರೆ.
ಅನಂತ್ ಅಂಬಾನಿ ಕಾರಿನ ಸಂಗ್ರಹ ಅವರ ಹೈಎಂಡ್ ಆಟೋಮೊಬೈಲ್‌ಗಳ ಒಲವಿಗೆ ಸಾಕ್ಷಿಯಾಗಿದೆ, ಅವರ ಕಲೆಕ್ಷನ್ ಬುಲೆಟ್ ಪ್ರೂಫ್ ಮರ್ಸಿಡಿಸ್ ಬೆಂಜ್ Sಕ್ಲಾಸ್, ರೇಂಜ್ ರೋವರ್ ವೋಗ್ಸ್, BMW i8 ಮತ್ತು Mercedes Benz G63 AMG ಅನ್ನು ಒಳಗೊಂಡಿದೆ.