ಭಾರತದ ಟಾಪ್ 10 ಶ್ರೀಮಂತ ಕುಟುಂಬಗಳಿವು!
ಭಾರತದ ಟಾಪ್ 10 ಶ್ರೀಮಂತ ಕುಟುಂಬಗಳು: ಭಾರತವು ವಿಶ್ವದ ಕೆಲವು ಶ್ರೀಮಂತ ಕುಟುಂಬಗಳಿಗೆ ತವರಾಗಿದೆ. ಅವರು ದೊಡ್ಡ ವ್ಯಾಪಾರ ಸಾಮ್ರಾಜ್ಯಗಳನ್ನು ಸ್ಥಾಪಿಸುವುದಲ್ಲದೆ, ಭಾರತದ ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡಿದ್ದಾರೆ. ತಂತ್ರಜ್ಞಾನ, ಇಂಧನ, ಔಷಧಗಳು, ಗ್ರಾಹಕ ಸರಕುಗಳು ಮುಂತಾದ ಹಲವು ಕ್ಷೇತ್ರಗಳಲ್ಲಿ ಅವರು ಪ್ರಾಬಲ್ಯ ಹೊಂದಿದ್ದಾರೆ. ನಾವಿಂದು ಭಾರತದ ಟಾಪ್ 10 ಶ್ರೀಮಂತ ಕುಟುಂಬಗಳು ಮತ್ತು ಅವರ ಸಂಪತ್ತಿನ ಬಗ್ಗೆ ತಿಳಿದುಕೊಳ್ಳೋಣ.
ಮುಖೇಶ್ ಅಂಬಾನಿ ಕುಟುಂಬ
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಭಾರತದ ನಂಬರ್ ಒನ್ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಕುಟುಂಬದ ಸಂಪತ್ತು ಸುಮಾರು 95.4 ಬಿಲಿಯನ್ ಡಾಲರ್. ಮುಖೇಶ್ ಅಂಬಾನಿ ವಿಶ್ವದ 18ನೇ ಶ್ರೀಮಂತ ವ್ಯಕ್ತಿ.
ಗೌತಮ್ ಅದಾನಿ ಕುಟುಂಬ
ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರ ಕುಟುಂಬವು 62.3 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ. ಅವರು ವಿಶ್ವದ 25ನೇ ಶ್ರೀಮಂತ ವ್ಯಕ್ತಿ.
ಶಿವ್ ನಾಡಾರ್ ಕುಟುಂಬ
ಎಚ್‌ಸಿಎಲ್ ಸಂಸ್ಥಾಪಕ ಶಿವ್ ನಾಡಾರ್ ಕುಟುಂಬವು 42.1 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 37ನೇ ಸ್ಥಾನದಲ್ಲಿದ್ದಾರೆ.
ಸಾವಿತ್ರಿ ಜಿಂದಾಲ್ ಕುಟುಂಬ
ಸಾವಿತ್ರಿ ಜಿಂದಾಲ್ ಕುಟುಂಬವು ಓ.ಪಿ. ಜಿಂದಾಲ್ ಗ್ರೂಪ್ ಅನ್ನು ನಡೆಸುತ್ತಿದೆ. ಈ ಕುಟುಂಬದ ಸಂಪತ್ತು 38.5 ಬಿಲಿಯನ್ ಡಾಲರ್. ವಿಶ್ವ ಶ್ರೀಮಂತರ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದ್ದಾರೆ.
ದಿಲೀಪ್ ಶಾಂಘ್ವಿ ಕುಟುಂಬ
ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್ ಎಂಬ ಭಾರತದ ಪ್ರಮುಖ ಔಷಧ ತಯಾರಿಕಾ ಕಂಪನಿಯನ್ನು ನಡೆಸುತ್ತಿರುವವರು ದಿಲೀಪ್ ಶಾಂಘ್ವಿ. ಅವರ ಕುಟುಂಬದ ಸಂಪತ್ತು 29.8 ಬಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 59ನೇ ಸ್ಥಾನದಲ್ಲಿದ್ದಾರೆ.
ಸೈರಸ್ ಪೂನಾವಾಲಾ ಕುಟುಂಬ
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದ ಮತ್ತೊಂದು ಪ್ರಸಿದ್ಧ ಔಷಧ ಕಂಪನಿ. ಇದರ ಅಧ್ಯಕ್ಷ ಸೈರಸ್ ಪೂನಾವಾಲಾ ಅವರ ಕುಟುಂಬವು 22.2 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ. ವಿಶ್ವದಲ್ಲಿ 89ನೇ ಸ್ಥಾನದಲ್ಲಿದ್ದಾರೆ.
ಕುಮಾರ್ ಬಿರ್ಲಾ ಕುಟುಂಬ
ಕುಮಾರ್ ಬಿರ್ಲಾ ಅವರ ಕುಟುಂಬವು 21.4 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕುಟುಂಬವು ಆದಿತ್ಯ ಬಿರ್ಲಾ ಗ್ರೂಪ್ ಅನ್ನು ನಡೆಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಟಾಪ್ 100 ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿದೆ.
ಕುಶಾಲ್ ಪಾಲ್ ಸಿಂಗ್ ಕುಟುಂಬ
ಆರಂಭಿಕ ದಿನಗಳಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕರಾಗಿ ಪ್ರಸಿದ್ಧವಾಗಿದ್ದ ಕಂಪನಿ ಡಿಎಲ್‌ಎಫ್ ಲಿಮಿಟೆಡ್. ಈ ಕಂಪನಿಯ ಅಧಿಪತಿ ಕುಶಾಲ್ ಪಾಲ್ ಸಿಂಗ್ ಅವರ ಕುಟುಂಬದ ಸಂಪತ್ತು ಒಟ್ಟು 18.1 ಬಿಲಿಯನ್ ಡಾಲರ್ ಇರಬಹುದು ಎಂದು ವರದಿಗಳು ತಿಳಿಸಿವೆ.
ರವಿ ಜೈಪುರಿಯಾ ಕುಟುಂಬ
ಪೆಪ್ಸಿ,7 ಅಪ್, ಮಿರಿಂಡಾ ಮುಂತಾದ ಜನಪ್ರಿಯ ತಂಪು ಪಾನೀಯಗಳನ್ನು ತಯಾರಿಸಿ ಮಾರಾಟ ಮಾಡುವ ವರುಣ್ ಬೆವರೆಜಸ್ ಕಂಪನಿಯ ಅಧ್ಯಕ್ಷ ರವಿ ಜೈಪುರಿಯಾ. ಅವರ ಕುಟುಂಬದ ಸಂಪತ್ತು ಸುಮಾರು 17.9 ಬಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ.
ರಾಧಾಕಿಶನ್ ದಮಾನಿ ಕುಟುಂಬ
ದಿನನಿತ್ಯದ ಮನೆ ಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ತಾಣವನ್ನು ನಡೆಸುವ ಡಿಮಾರ್ಟ್ ಕಂಪನಿಯ ಅಧ್ಯಕ್ಷ ರಾಧಾಕಿಶನ್ ದಮಾನಿ. ಅವರ ಕುಟುಂಬವು 15.8 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ.