ಅದ್ಧೂರಿ ಮದುವೆಗೆ ಸಿಂಪಲ್ ಪತ್ರಿಕೆ ಮಾಡಿಸಿ ವ್ಯಾಪಕ ಟೀಕೆಗೆ ಗುರಿಯಾದ ಅಮೆಜಾನ್ ಬಿಲಿಯನೇರ್ ಜೆಫ್!
ಜೆಫ್ ಬೆಜೋಸ್ ಮತ್ತು ಲಾರೆನ್ ಸ್ಯಾಂಚೆಜ್ ವೆನಿಸ್‌ನಲ್ಲಿ ವೈಭವದ ವಿವಾಹ ಮಹೋತ್ಸವಕ್ಕೆ ಸಜ್ಜಾಗಿದ್ದಾರೆ. ಆದರೆ, ಆಮಂತ್ರಣ ಪತ್ರಿಕೆಯ ವಿನ್ಯಾಸ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಉಡುಗೊರೆಗಳ ಬದಲು UNESCOಗೆ ದೇಣಿಗೆ ನೀಡುವಂತೆ ಕೋರಿದ್ದಾರೆ.

ವೆನಿಸ್: ಅಮೆಜಾನ್ ಬಿಲಿಯನೇರ್ ಜೆಫ್ ಬೆಜೋಸ್ ಮತ್ತು ಮಾಜಿ ಟಿವಿ ನಿರೂಪಕಿ ಲಾರೆನ್ ಸ್ಯಾಂಚೆಜ್ ಅವರು, ಆರು ವರ್ಷಗಳ ಪ್ರೇಮ ಸಂಬಂಧದ ನಂತರ, ಇಟಾಲಿಯ ನೆಮ್ಮದಿ ನಗರ ಎಂದೇ ಹೆಸರುವಾಸಿಯಾಗಿರುವ ವೆನಿಸ್‌ನಲ್ಲಿ ವೈಭವೋಪೇತವಾಗಿ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಈ ವಿಶೇಷ ಕಾರ್ಯಕ್ರಮಕ್ಕೆ ಹಲವು ಎ-ಲಿಸ್ಟ್ ಸೆಲೆಬ್ರಿಟಿಗಳು ಈಗಾಗಲೇ ಆಗಮಿಸಿದ್ದು, ಈ ಮದುವೆ ವರ್ಷದ ಜಗತ್ತಿನ ಅತ್ಯಂತ ವೈಭವಶಾಲಿ ಕಾರ್ಯಕ್ರಮಗಳಲ್ಲಿ ಒಂದಾಗಲಿದೆ ಎಂದು ಹೇಳಲಾಗುತ್ತಿದೆ.
ಹಲವಾರು ಕಾರಣಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ವಿವಾಹದ ಬಗ್ಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ವಿಶೇಷವಾಗಿ ವಿವಾಹ ಆಮಂತ್ರಣ ಪತ್ರದ ವಿನ್ಯಾಸ, ಪಕ್ಷಿಗಳು ಮತ್ತು ಚಿಟ್ಟೆಗಳ ಚಿತ್ರಗಳನ್ನು ಒಳಗೊಂಡಿರುವ ವಿವಾಹ ಆಮಂತ್ರಣ ಪತ್ರಿಕೆಯು ವಿನ್ಯಾಸದಲ್ಲಿ ತುಂಬಾ ಹವ್ಯಾಸಿ ಮತ್ತು ವಿವಾಹದ ಐಷಾರಾಮಿ ಥೀಮ್‌ಗೆ ವಿರುದ್ಧವಾಗಿದೆ ಎಂದು ಟೀಕಿಸಲಾಗಿದೆ. ವೆನಿಸ್‌ನಂತಹ ಐತಿಹಾಸಿಕ ನಗರದಲ್ಲಿ ಮದುವೆ ಆಯೋಜನೆ, ಭಾರೀ ವೆಚ್ಚ ಹಾಗೂ ಉಡುಗೊರೆಗಳನ್ನು ನಿರಾಕರಿಸುವ ಸೂಚನೆ ಸೇರಿದಂತೆ ಟೀಕೆಗೆ ಗುರಿಯಾಗಿದೆ.
ವಿವಾಹ ಆಮಂತ್ರಣ ವಿನ್ಯಾಸ ಹೇಗಿದೆ?
ವಿವಾಹದ ಆಮಂತ್ರಣ ಪತ್ರಿಕೆಯ ಚಿತ್ರವನ್ನು ಪ್ರಸಿದ್ಧ ಎಬಿಸಿ ನ್ಯೂಸ್ ಸಂಸ್ಥೆ ಬಹಿರಂಗಪಡಿಸಿದ್ದು, ಜನರ ದೃಷ್ಠಿಯಲ್ಲಿ ಅದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಪಾರಂಪರಿಕ ವೆನೆಷಿಯನ್ ಸೌಂದರ್ಯ, ಪಕ್ಷಿಗಳು, ಚಿಟ್ಟೆಗಳು ಸೇರಿದ ವಿನ್ಯಾಸವನ್ನು ಹಲವರು "ಹವ್ಯಾಸಿ" ಎಂದು ನಿರೂಪಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಬಳಕೆದಾರರು ಬರೆದಿದ್ದಾರೆ, "ಇಷ್ಟೊಂದು ಕೋಟಿ ಸಂಪತ್ತು ಹೊಂದಿದವರು ಹೇಗೆ ಇಂಥ ಆಮಂತ್ರಣವನ್ನು ಆಯ್ಕೆ ಮಾಡಬಹುದು?" ಇನ್ನೊಬ್ಬನು ಟೀಕಿಸುವ ರೀತಿಯಲ್ಲಿ ಈ ರೀತಿ ಬರೆದಿದ್ದ: "ಇದು 15 ವರ್ಷದ ಹುಡುಗನ ಕಲೆಯಂತೆ ಕಾಣುತ್ತಿದೆ." ಆದರೆ ಈ ವಿನ್ಯಾಸವನ್ನು ಅನೇಕರು "ಮಾತೇರಿಯಲ್ ಡಿಸೈನಿನೊಂದಿಗೆ ಹೊಂದುವುದಿಲ್ಲ" ಎಂಬಂತೆ ಟೀಕಿಸಿದರು.
ಉಡುಗೊರೆ ಬದಲು UNESCO ಗೆ ದೇಣಿಗೆ ನೀಡಿದ ಬೆಜೋಸ್
ಬೆಜೋಸ್ ಮತ್ತು ಸ್ಯಾಂಚೆಜ್ ಅವರ ಆಹ್ವಾನ ಪತ್ರಿಕೆಯಲ್ಲಿ ವಿಶೇಷವಾಗಿ "ನೀವು ನಮ್ಮೊಂದಿಗೆ ಈ ಕ್ಷಣವನ್ನು ಹಂಚಿಕೊಳ್ಳುವುದು ನಮ್ಮ ಪಾಲಿಗೆ ಅತ್ಯಂತ ಬೆಲೆಬಾಳುವ ಉಡುಗೊರೆ. ದಯವಿಟ್ಟು ಯಾವುದೇ ಉಡುಗೊರೆ ತರಬೇಡಿ" ಎಂದು ಬರೆಯಲಾಗಿದೆ. ಅಂದರೆ ಆಶೀರ್ವಾದ ಅಥವಾ ಆಗಮನವೇ ನಮಗೆ ಉಡುಗೊರೆ ಎಂಬರ್ಥ. ವೆನಿಸ್‌ನಲ್ಲಿ ಮದುವೆ ಆಯೋಜನೆಗೈದು ಸ್ಥಳೀಯ ಪರಿಸರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಜೆಫ್ ಬೆಜೋಸ್ ಅವರಿಗೆ ಟೀಕೆಗಳು ಎದುರಾಯಿತು. ಇದಕ್ಕೆ ಪ್ರತಿಯಾಗಿ ಅವರು UNESCO ಹಾಗೂ CORILAಗೆ ದೇಣಿಗೆಯಾಗಿ ಹಣವನ್ನು ನೀಡಿದ್ದಾರೆ. “ವೆನಿಸ್‌ನ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ, ಲಗೂನ್ ಆವಾಸಸ್ಥಾನಗಳ ಪುನಶ್ಚೇತನಕ್ಕಾಗಿ ಈ ಕೊಡುಗೆಗಳನ್ನು ನೀಡಲಾಗುತ್ತಿದೆ” ಎಂದು ಆಹ್ವಾನ ಪತ್ರದಲ್ಲಿಯೇ ಅವರು ಸ್ಪಷ್ಟಪಡಿಸಿದ್ದಾರೆ. ಈ ಮಾಂತ್ರಿಕ ನಗರವು ಮುಂದಿನ ತಲೆಮಾರಿಗೆ ಪ್ರೇರಣೆಯ ಆಗಸವಾಗಿರಲಿ ಎಂಬುದು ನಮ್ಮ ಆಶಯ ಎಂದು ಬರೆದುಕೊಂಡಿದ್ದಾರೆ.
ಮದುವೆ ಖರ್ಚು: $46-56 ಮಿಲಿಯನ್ ಅಂದಾಜು
ವಿವಾಹ ಸಮಾರಂಭದ ವೆಚ್ಚವನ್ನು ಸುಮಾರು €40-48 ಮಿಲಿಯನ್, ಅಂದರೆ $46-56 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಮದುವೆಯು ಮೂರು ದಿನಗಳ ಕಾಲ ನಡೆಯಲಿದ್ದು, ಈ ಕೆಳಗಿನ ಪ್ರಮುಖ ಕಾರ್ಯಕ್ರಮಗಳನ್ನು ಒಳಗೊಂಡಿರಲಿದೆ:
ಗುರುವಾರ: ಮಡೋನಾ ಡೆಲ್’ಓರ್ಟೋದಲ್ಲಿ ಸ್ವಾಗತ ಸಮಾರಂಭ
ಶುಕ್ರವಾರ: ಮ್ಯಾಟಿಯೊ ಬೊಸೆಲ್ಲಿ ಗಾಯನದೊಂದಿಗೆ ಸ್ಯಾನ್ ಜಾರ್ಜಿಯೊ ಮ್ಯಾಗಿಯೋರ್ ದ್ವೀಪದಲ್ಲಿ ಬ್ಲಾಕ್ ಟೈ ಕಾರ್ಯಕ್ರಮ
ಶನಿವಾರ: ಆರ್ಸೆನೆಲ್‌ನ ಮಧ್ಯಕಾಲೀನ ಹಡಗು ಕಂಕಣ ಪ್ರದೇಶದಲ್ಲಿ ಅಂತಿಮ ಸಮಾರಂಭ
ಇವುಗಳಿಗೆ ಇವಾಂಕಾ ಟ್ರಂಪ್, ಓಪ್ರಾ ವಿನ್‌ಫ್ರೇ, ಲಿಯೊನಾರ್ಡೊ ಡಿಕಾಪ್ರಿಯೋ ಸೇರಿದಂತೆ 200ಕ್ಕೂ ಹೆಚ್ಚು ಎ-ಲಿಸ್ಟ್ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಈ ಸಂದರ್ಭದಲ್ಲಿ 90ಕ್ಕೂ ಹೆಚ್ಚು ಖಾಸಗಿ ಜೆಟ್‌ಗಳು ವೆನಿಸ್ ಮಾರ್ಕೊ ಪೋಲೊ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದು, ಇದರಿಂದ ಭದ್ರತೆ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳೂ ಸೃಷ್ಟಿಯಾಗುವ ಸಾಧ್ಯತೆ ಇದೆ.
ಆಮಂತ್ರಣದ ವಿನ್ಯಾಸದ ಬಗ್ಗೆ ಟೀಕೆಗಳ ಸುರಿಮಳೆ
ಆಮಂತ್ರಣ ಪತ್ರಿಕೆಯ ವಿನ್ಯಾಸವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
"ಇದು ಬಹುಬಿಲಿಯನೇರ್‌ರ ಮದುವೆಗೆ ತಕ್ಕಂತಹ ಆಹ್ವಾನವಲ್ಲ" ಎಂದು ಒಬ್ಬರು X ನಲ್ಲಿ ಪ್ರತಿಕ್ರಿಯಿಸಿದರು.
ಮತ್ತೊಬ್ಬರು ಏಕವಚನವಾಗಿ ಟೀಕಿಸಿದ ರೀತಿಯಲ್ಲಿ, "15 ವರ್ಷದ ಹುಡುಗನೊಬ್ಬ Canva ಬಳಸಿ ಮಾಡಿರುವ ಡಿಸೈನ್‌ಗೂ ಇತ್ತೀಚಿನ ಆಹ್ವಾನವೂ ವ್ಯತ್ಯಾಸವಿಲ್ಲ."
“ನೋಡಿದ ಅತ್ಯಂತ ರುಚಿಯಿಲ್ಲದ ಆಹ್ವಾನಗಳಲ್ಲಿ ಒಂದಿದು,” ಎಂದು ಆಂಡ್ರ್ಯೂ ಎಂಬ ಬಳಕೆದಾರರು ಹೇಳಿದರು.