ಆಧಾರ್ ಕಾರ್ಡ್‌ನಲ್ಲಿ ಈ ಮಾಹಿತಿಗಳನ್ನು ಒಮ್ಮೆ ಮಾತ್ರ ಬದಲಾಯಿಸ್ಬೋದು: ಹೆಸರು ಎಷ್ಟು ಬಾರಿ ಚೇಂಜ್ ಮಾಡ್ಬೋದು ಗೊತ್ತಾ?
ಕೆಲವು ಸಂದರ್ಭಗಳಲ್ಲಿ, ನಾವು ಆಧಾರ್‌ನಲ್ಲಿ ಒದಗಿಸಿದ ಡೇಟಾವನ್ನು ನವೀಕರಿಸಬೇಕು. ಈ ಮಾಹಿತಿಯನ್ನು ಬದಲಾಯಿಸಲು ಮಿತಿಯನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..
ಭಾರತೀಯ ನಾಗರಿಕರಿಗೆ ಇತ್ತೀಚಿನ ಕೆಲ ವರ್ಷಗಳಿಂದ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆ ಎನಿಸಿಕೊಂಡಿದೆ. ಇದನ್ನು ಗುರುತಿಸುವ ಸಾಧನವಾಗಿ ವೈಯಕ್ತಿಕ ಮತ್ತು ಸರ್ಕಾರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಆದರೆ ಕೆಲವು ಸಂದರ್ಭಗಳಲ್ಲಿ, ನಾವು ಆಧಾರ್‌ನಲ್ಲಿ ಒದಗಿಸಿದ ಡೇಟಾವನ್ನು ನವೀಕರಿಸಬೇಕು. ಈ ಮಾಹಿತಿಯನ್ನು ಬದಲಾಯಿಸಲು ಮಿತಿಯನ್ನು ಹೊಂದಿದೆ. ನೀವು ಯಾವ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ವಿವರ..
ನಿಮ್ಮ ಆಧಾರ್ ಕಾರ್ಡ್‌ನಲ್ಲಿ, ನಿಮ್ಮ ಲಿಂಗ ಮತ್ತು ಜನ್ಮದಿನಾಂಕವನ್ನು ಒಮ್ಮೆ ಮಾತ್ರ ನೀವು ಮಾರ್ಪಡಿಸಬಹುದು. ಹಾಗೂ, ನಿಮ್ಮ ಹೆಸರನ್ನು 2 ಬಾರಿ ಮಾತ್ರ ಬದಲಾಯಿಸಬಹುದಾಗಿದೆ.
ಇನ್ನು, ನೀವು ನಿಮ್ಮ ನಿವಾಸದ ವಿಳಾಸವನ್ನು ಬದಲಾಯಿಸಲು ನಿಮ್ಮ ಆಧಾರ್ ಕಾರ್ಡ್ ನಿಮಗೆ ಅನುಮತಿಸುತ್ತದೆ. ಅದರೆ, ಇದಕ್ಕೆ ನೀವು ಗುರುತಿನ ಪುರಾವೆ ಅಂದ್ರೆ ಪಾಸ್‌ಪೋರ್ಟ್, ರೇಷನ್ ಕಾರ್ಡ್ ಅಥವಾ ವಿಳಾಸದ ಇತರ ಪುರಾವೆಗಳನ್ನು ಪ್ರಸ್ತುತಪಡಿಸಬೇಕು. ಈ ಎಲ್ಲಾ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಹ ಅಪ್‌ಡೇಟ್ ಮಾಡಬಹುದಾಗಿದೆ.
ಇನ್ನು ಒಂದು ವೇಳೆ ನೀವು ಮೂರನೇ ಬಾರಿಗೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ಪ್ಲ್ಯಾನ್ ಮಾಡಿದ್ರೆ, ನೀವು ಹತ್ತಿರದ ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ. UIDAI ನ ಪ್ರಾದೇಶಿಕ ಕಚೇರಿಗೆ ಹೋಗಿ, ನಿಮ್ಮ ಹೆಸರನ್ನು ಅಪ್ಡೇಟ್ ಮಾಡಿಸಲು ಅನುಮತಿ ಪಡೆಯಿರಿ.
ಆಧಾರ್ ಕಾರ್ಡ್ ಬಹಳ ಮಹತ್ವ ಹೊಂದಿದ್ದು, ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಎಂದಿಗೂ ಅಪರಿಚಿತ ವ್ಯಕ್ತಿಗೆ ನೀಡಬಾರದು. ಅಲ್ಲದೆ, ನೀವು ಇದನ್ನು ಎಚ್ಚರಿಕೆಯಿಂದ ಬಳಸಬೇಕಿದೆ.
ಇತ್ತೀಚಿನ ದಿನಗಳಲ್ಲಿ, ಆಧಾರ್ ಕಾರ್ಡ್‌ಗಳನ್ನು ವಿವಿಧ ರೀತಿಯ ವಂಚನೆಗಳಲ್ಲಿ ಬಳಸಲಾಗುತ್ತಿದೆ. ಈ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ನೀವು ನಿಮ್ಮ ಆಧಾರ್ ವಿವರಗಳನ್ನು ಯಾರಿಗೂ ನೀಡಬಾರದು.
ಇದರ ಹೊರತಾಗಿ, ನಿಮ್ಮ ಫೋನ್‌ನಲ್ಲಿ ನೀವು ಪಡೆದ ಆಧಾರ್ ಓಟಿಪಿಯನ್ನು ಗುರುತಿಸದ ವ್ಯಕ್ತಿಗೆ ಎಂದಿಗೂ ನೀಡಬೇಡಿ. ಒಂದು ವೇಳೆ ನೀವು ಈ ಕೆಲಸ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಇದೆ.