- Home
- Automobile
- Bike News
- 30 ದಿನದಲ್ಲಿ ಈ ಕಂಪನಿಯ 6.46 ಲಕ್ಷ ದ್ವಿಚಕ್ರ ವಾಹನ ಖರೀದಿ, ಸೆಪ್ಟೆಂಬರ್‍ನಲ್ಲಿ ಬಂಪರ್ ಮಾರಾಟ
30 ದಿನದಲ್ಲಿ ಈ ಕಂಪನಿಯ 6.46 ಲಕ್ಷ ದ್ವಿಚಕ್ರ ವಾಹನ ಖರೀದಿ, ಸೆಪ್ಟೆಂಬರ್‍ನಲ್ಲಿ ಬಂಪರ್ ಮಾರಾಟ
ಆಟೋ ಮೊಬೈಲ್ ಕಂಪನಿಗಳಿಗೆ ಸೆಪ್ಟೆಂಬರ್ ತಿಂಗಳು ಬಂಪರ್ ಆಗಿತ್ತು. ಅದರಲ್ಲೂ ವಿಶೇಷವಾಗಿ ಟಿವಿಎಸ್ ಮೋಟಾರ್ (tvs motors) ಭರ್ಜರಿ ಲಾಭವನ್ನು ಪಡೆದುಕೊಂಡಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ತ್ರೈಮಾಸಿಕ ವರದಿ ಪ್ರಕಾರ..
ಟಿವಿಎಸ್ ಮೋಟಾರ್ ವರ್ಷದ ತ್ರೈಮಾಸಿಕ ವರದಿ ಪ್ರಕಾರ.. ಸೆಪ್ಟೆಂಬರ್ ತಿಂಗಳು ಬರೋಬ್ಬರಿ 672790 ವಾಹನಗಳನ್ನ ಮಾರಾಟ ಮಾಡಿದೆ. ಅಂದರೆ ಇದರ ಬೆಳವಣಿಗೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಶೇಕಡಾ 24.35 ಬೆಳವಣಿಯನ್ನು ದಾಖಲಿಸಿದೆ. ಇನ್ನು, ಆಗಸ್ಟ್‌ನಲ್ಲಿ ಅದರ ಮಾರಾಟವು ಶೇಕಡಾ 9.12 ರಷ್ಟು ಆಗಿತ್ತು.
ರಫ್ತಿನಲ್ಲೂ ಏರಿಕೆ
ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಭಾರೀ ಬೇಡಿಕೆ ಬಂದಿದೆ. ಅವುಗಳ ರಫ್ತು ಸಂಖ್ಯೆ ಕೂಡ ಗಣನೀಯವಾಗಿ ಏರಿಕೆ ಕಂಡಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ಮಾರಾಟದಲ್ಲೂ ಟಿವಿಎಸ್ ಭಾರೀ ಬೇಡಿಕೆಯನ್ನ ಹೊಂದಿದೆ.
ಮೂರು ತಿಂಗಳಲ್ಲಿ ಎಷ್ಟು ಮಾರಾಟ?
- ಜುಲೈ ಮತ್ತು ಸೆಪ್ಟೆಂಬರ್ ನಡುವೆ 18.40 ಲಕ್ಷ ಮೋಟಾರ್ ಮಾರಾಟ
- ದ್ವಿಚಕ್ರ ವಾಹನಗಳ ಮಾರಾಟವು ಶೇಕಡಾ 24.05 ರಷ್ಟ ಹೆಚ್ಚಳವಾಗಿದೆ
- ರಫ್ತು ಶೇಕಡಾ 34.37 ರಷ್ಟು ಹೆಚ್ಚಳವಾಗಿದೆ
- ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಶೇ.34.82 ರಷ್ಟು ಹೆಚ್ಚಳ
- ಒಟ್ಟು ತ್ರೈಮಾಸಿಕದಲ್ಲಿ ರಫ್ತು ಶೇಕಡಾ 28.11 ರಷ್ಟು ಏರಿಕೆ
- ದೇಶಿಯವಾಗಿ ಕಂಪನಿಯು 482073 ಯೂನಿಟ್‌ಗಳನ್ನ ಮಾರಿದೆ
ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಬೇಡಿಕೆ
ಇನ್ನು, ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಬೇಡಿಕೆ ಭಾರೀ ಬೇಡಿಕೆ ಹೆಚ್ಚಿದೆ. ದ್ವಿಚಕ್ರ ವಾಹಗಳ ಒಟ್ಟು ಮಾರಾಟದಲ್ಲಿ ಕಾಲು ಭಾಗ ಎಲೆಕ್ಟ್ರಿಕ್ ವಾಹಗಳದ್ದು. ಐಕ್ಯೂಬ್, ಆರ್ಬಿಟರ್ ಸ್ಕೂಟರ್‍ಗಳು 65777 ಎಲೆಕ್ಟ್ರಿಕ್ ಸ್ಕೂಟರ್‍ಗಳು ಮಾರಾಟ ಆಗಿವೆ. ಕಂಪನಿಯ ಒಟ್ಟು ಮಾರಾಟದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಾಲು ಶೇ.10.19 ರಷ್ಟಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ, ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಶೇ.132.71 ರಷ್ಟು ಹೆಚ್ಚಾಗಿ 186186 ಯೂನಿಟ್‌ಗಳಿಗೆ ತಲುಪಿದೆ.

