MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Bike News
  • ಬೆಂಗಳೂರಲ್ಲಿ ರಾಯಲ್ ಎನ್‌ಫೀಲ್ಡ್ GRRR ನೈಟ್ಸ್ ಉತ್ಸವ, ಬೈಕ್ ಡ್ರಿಫ್ಟ್, ಡಿಜೆ ಸೇರಿ ಯವಮನಸ್ಸುಗಳ ಸಂಗಮ

ಬೆಂಗಳೂರಲ್ಲಿ ರಾಯಲ್ ಎನ್‌ಫೀಲ್ಡ್ GRRR ನೈಟ್ಸ್ ಉತ್ಸವ, ಬೈಕ್ ಡ್ರಿಫ್ಟ್, ಡಿಜೆ ಸೇರಿ ಯವಮನಸ್ಸುಗಳ ಸಂಗಮ

ಹೈ-ಎನರ್ಜಿ ಕಾರ್ಯಕ್ರಮ. ಲೈವ್ ಮ್ಯೂಸಿಕ್, ಡಿಜೆ, ಬೈಕ್ ಡ್ರಾಗ್ ಆ್ಯಂಡ್ ಡ್ರಿಫ್ಟ್ ಸೇರಿದಂತೆ ಅತ್ಯಂತ ರೋಮಾಂಚನಕಾರಿಯಾದ ರಾಯಲ್ ಎನ್‌ಫೀಲ್ಡ್ ‘GRRR ನೈಟ್ಸ್ x ಅಂಡರ್‌ಗ್ರೌಂಡ್ ಉತ್ಸವ ಯುವಮನಸ್ಸುಗಳ ಸಂಭ್ರಮಕ್ಕೆ ಕಾರಣವಾಗಿದೆ.

2 Min read
Author : Chethan Kumar
Published : Jun 03 2026, 07:13 PM IST
Share this Photo Gallery
  • FB
  • TW
  • Linkdin
  • Whatsapp
16
ರಾಯಲ್ ಎನ್‌ಫೀಲ್ಡ್ GRRR ನೈಟ್ಸ್ x
Image Credit : Asianet News

ರಾಯಲ್ ಎನ್‌ಫೀಲ್ಡ್ GRRR ನೈಟ್ಸ್ x

ಬೆಂಗಳೂರಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield), ತನ್ನ ಬಹುನಿರೀಕ್ಷಿತ ಹಾಗೂ ಅತ್ಯಂತ ರೋಮಾಂಚನಕಾರಿಯಾದ ‘GRRR ನೈಟ್ಸ್ x ಅಂಡರ್‌ಗ್ರೌಂಡ್’ (GRRR Nights x Underground)ಕಾರ್ಯಕ್ರಮ ಯುವಮನಸ್ಸುಗಳ ಒಂದುಗೂಡಿಸಿದೆ. ನಗರದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮ ಮೋಟಾರ್ ಸೈಕ್ಲಿಂಗ್, ಮ್ಯೂಸಿಕ್ ಮತ್ತು ಆಟೋಮೊಬೈಲ್ ಸಂಸ್ಕೃತಿಯನ್ನು ಒಂದೇ ಸೂರಿನಡಿ ತರುವ ಮೂಲಕ ಯುವಕರಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಈ ಹೈ-ಎನರ್ಜಿ ಪ್ರದರ್ಶನ
Image Credit : Asianet News

ಈ ಹೈ-ಎನರ್ಜಿ ಪ್ರದರ್ಶನ

ಈ ಹೈ-ಎನರ್ಜಿ ಪ್ರದರ್ಶನವು ಆಟೋಮೊಬೈಲ್ ಲೋಕದ ವಿಶಿಷ್ಟ ಸಂಸ್ಕೃತಿ, ಕಲೆ, ಪ್ರದರ್ಶನ ಯಂತ್ರಗಳು, ತಲ್ಲೀನಗೊಳಿಸುವ ಸಂಗೀತ ಮತ್ತು ಮೋಟಾರ್ ಸೈಕ್ಲಿಂಗ್ ಪ್ರೇಮಿಗಳ ಆತ್ಮ ಅಭಿವ್ಯಕ್ತಿಗೆ ಸಾಕ್ಷಿಯಾಯಿತು. ವೇಗ, ಕೌಶಲ್ಯ ಮತ್ತು ಸ್ಪರ್ಧೆಯ ಸುತ್ತ ಹೆಣೆಯಲಾದ ಲೈವ್ ಮ್ಯೂಸಿಕ್ ಹಾಗೂ ಅಡ್ರಿನಾಲಿನ್ ರಶ್ ಹೆಚ್ಚಿಸುವ ಮೋಟಾರ್ ಸ್ಪೋರ್ಟ್ಸ್ ಸಾಹಸಗಳು ಇಲ್ಲಿ ನೆರೆದಿದ್ದವರ ರೋಮಾಂಚನವನ್ನು ಉತ್ತುಂಗಕ್ಕೇರಿಸಿದವು.

Related Articles

Related image1
ಮನುಷ್ಯನಂತೆ ಬುದ್ಧಿವಂತ ತಂತ್ರಜ್ಞಾನ ಹೊಂದಿದ ಹೊಸ ಅವೋರ್ ಇವಿ ಬೈಕ್ ಲಾಂಚ್, ಏನಿದರ ವಿಶೇಷತೆ?
Related image2
ರಾಯಲ್ ಆಗಿ ರೈಡ್ ಮಾಡಿ ರಾಯಲ್ ಎನ್‌ಫೀಲ್ಡ್ 650, ಕೈಗೆಟುಕುವ ದರಲ್ಲಿ ಬೈಕ್ ಬಿಡುಗಡೆ
36
ಕಾರ್ಯಕ್ರಮದ ಪ್ರಮುಖ ಹೈಲೈಟ್ಸ್ ಮತ್ತು ಆಕರ್ಷಣೆಗಳು:
Image Credit : Asianet News

ಕಾರ್ಯಕ್ರಮದ ಪ್ರಮುಖ ಹೈಲೈಟ್ಸ್ ಮತ್ತು ಆಕರ್ಷಣೆಗಳು:

ಲೈವ್ ಸಾಹಸ ಪ್ರದರ್ಶನಗಳು (Live Shows): ವೃತ್ತಿಪರ ಸ್ಟಂಟ್ ರೈಡರ್‌ಗಳು ಬೈಕುಗಳ ಬ್ಯಾಲೆನ್ಸ್, ನಿಯಂತ್ರಣ ಮತ್ತು ಮಷಿನ್ ಸಾಮರ್ಥ್ಯದ ಅದ್ಭುತ ಪ್ರದರ್ಶನ ನೀಡಿ ನೆರೆದಿದ್ದವರ ಉಸಿರು ಬಿಗಿಹಿಡಿಯುವಂತೆ ಮಾಡಿದರು.

ಡ್ರಾಗ್ ಮತ್ತು ಡ್ರಿಫ್ಟ್ ಕ್ಲಬ್ (Drag & Drift Club): ನಿಯಂತ್ರಿತ ವೇಗ ಮತ್ತು ಮಷಿನ್ ಹ್ಯಾಂಡ್ಲಿಂಗ್‌ನ ಅದ್ಭುತ ಕೌಶಲ್ಯಗಳನ್ನು ಅತ್ಯಂತ ಹತ್ತಿರದಿಂದ ವೀಕ್ಷಿಸುವ ಅವಕಾಶವನ್ನು ಇದು ಕಲ್ಪಿಸಿಕೊಟ್ಟಿತು.

ಕಸ್ಟಮ್ ವಾಹನಗಳ ಪ್ರದರ್ಶನ (Custom Motor Vehicle Showcase): ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿ ಮಾರ್ಪಾಡು ಮಾಡಲಾದ (Custom Built) ಗ್ಯುರಿಲ್ಲಾ 450 (Guerrilla 450) ಸೇರಿದಂತೆ ರಾಯಲ್ ಎನ್‌ಫೀಲ್ಡ್‌ನ ಇತರೆ ಮೋಟಾರ್ ಸೈಕಲ್‌ಗಳು ಇಲ್ಲಿ ಗಮನಸೆಳೆದವು. ಇದರೊಂದಿಗೆ, ಸೃಜನಶೀಲತೆ ಮತ್ತು ವೈಯಕ್ತಿಕ ರೇಸಿಂಗ್ ಕ್ರೇಜ್ ಬಿಂಬಿಸುವ 60ಕ್ಕೂ ಹೆಚ್ಚು ಸೂಪರ್ ಹಾಗೂ ಟ್ಯೂನ್ಡ್ ಕಾರುಗಳು ಪ್ರದರ್ಶನಗೊಂಡವು

46
ವೇದಿಕೆ ರಂಗೇರಿಸಿದ ಸಂಗೀತಗಾರರು ಮತ್ತು ಡಿಜೆಗಳು:
Image Credit : Asianet News

ವೇದಿಕೆ ರಂಗೇರಿಸಿದ ಸಂಗೀತಗಾರರು ಮತ್ತು ಡಿಜೆಗಳು:

ಕಾರ್ನರ್ ರೈಡ್ ಪರಿಚಯ:

ರಾಯಲ್ ಎನ್‌ಫೀಲ್ಡ್ ಗ್ಯುರಿಲ್ಲಾ 450 ಬೈಕ್‌ನ ಅಧಿಕೃತ ಸ್ಟ್ರೀಟ್ ರೇಸಿಂಗ್ ಐಪಿ (Street Racing IP) ಆದ ‘ಕಾರ್ನರ್ ರೈಡ್’ (Corner Raid) ಅನ್ನು ಈ ವೇದಿಕೆಯಲ್ಲಿ ಪರಿಚಯಿಸಲಾಯಿತು

ಬ್ರೋಧಾ ವಿ (Brodha V): ಭಾರತದ ಪ್ರಸಿದ್ಧ ರಾಪರ್ ಬ್ರೋಧಾ ವಿ ತಮ್ಮ ಚುರುಕಾದ ಸಾಹಿತ್ಯ, ಅದ್ಭುತ ವರ್ಡ್‌ಪ್ಲೇ ಮತ್ತು ಹೈ-ಎನರ್ಜಿ ಸ್ಟೇಜ್ ಪರ್ಫಾರ್ಮೆನ್ಸ್ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು

ಡಿಜೆ ತಾಲಮ್ ಮತ್ತು ಡಿಜೆ ಸ್ಟೋಕ್: ಈ ಜೋಡಿ ಇಡೀ ರಾತ್ರಿಯಾದ್ಯಂತ ತಮ್ಮ ಮ್ಯೂಸಿಕ್ ಮೂಲಕ ನೆರೆದಿದ್ದವರ ಎನರ್ಜಿ ಕುಗ್ಗದಂತೆ ನೋಡಿಕೊಂಡರು

ಡಿಜೆ ಫ್ರಾಂಕಿ: ಜನಪ್ರಿಯ ಮತ್ತು ಎಲ್ಲರ ನೆಚ್ಚಿನ ಹಾಡುಗಳ ಎಲೆಕ್ಟ್ರಿಫೈಯಿಂಗ್ ಸೆಟ್ ಪ್ಲೇ ಮಾಡುವ ಮೂಲಕ ಜನಸಂದಣಿಯು ತಾವರೆ ಎದ್ದು ಕುಣಿಯುವಂತೆ ಮಾಡಿದರು

56
ಇತರೆ ಪ್ರಮುಖ ಪ್ರದರ್ಶನಗಳು ಮತ್ತು ವಿಶೇಷತೆಗಳು:
Image Credit : Asianet News

ಇತರೆ ಪ್ರಮುಖ ಪ್ರದರ್ಶನಗಳು ಮತ್ತು ವಿಶೇಷತೆಗಳು:

ಫೈರ್ ಪರ್ಫಾರ್ಮೆನ್ಸ್: ತರಬೇತಿ ಪಡೆದ ವೃತ್ತಿಪರರಿಂದ ನೃತ್ಯ ಸಂಯೋಜನೆಗೊಂಡ ಬೆಂಕಿಯ ಸಾಹಸ ಪ್ರದರ್ಶನಗಳು (Fire Performance) ಸಂಜೆಯ ಕಾರ್ಯಕ್ರಮಕ್ಕೆ ಭವ್ಯವಾದ ದೃಶ್ಯ ವೈಭವವನ್ನು ತಂದುಕೊಟ್ಟವು.

ಪ್ರಿ-ಇವೆಂಟ್ ಡ್ರಾಗ್ ರೇಸ್: ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ಏರ್‌ಸ್ಟ್ರಿಪ್ (Airstrip) ಒಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ಡ್ರಾಗ್ ರೇಸ್‌ನ ರೋಮಾಂಚಕ ದೃಶ್ಯಗಳನ್ನು ಮುಖ್ಯ ವೇದಿಕೆಯಲ್ಲಿದ್ದ ಪ್ರೇಕ್ಷಕರಿಗಾಗಿ ನೇರ ಪ್ರಸಾರ (Live Stream) ಮಾಡಲಾಯಿತು

66
ಡ್ರಿಫ್ಟ್ ಶೋಕೇಸ್:
Image Credit : Asianet News

ಡ್ರಿಫ್ಟ್ ಶೋಕೇಸ್:

ಭಾರತದ ಖ್ಯಾತ ಕಾರ್ ಡ್ರಿಫ್ಟರ್‌ಗಳಲ್ಲಿ ಒಬ್ಬರಾದ ಸನಮ್ ಸೇಖೋನ್ (Sanam Sekhon) ಅವರ ರೋಮಾಂಚಕ ಕಾರ್ ಡ್ರಿಫ್ಟಿಂಗ್ ಪ್ರದರ್ಶನ ಹಾಗೂ ಪದ್ಮ ಪ್ರಶಾಂತ್ ಮತ್ತು 'ಟೀಮ್ ನೆವರ್ ಇನಫ್' (Team Never Enough) ತಂಡದ ಅದ್ಭುತ ಬೈಕ್ ಸ್ಟಂಟ್‌ಗಳು ನೆರೆದಿದ್ದವರ ರಕ್ತದೊತ್ತಡ ಹೆಚ್ಚಿಸುವಂತಿದ್ದವು.

1901 ರಿಂದ ಸತತವಾಗಿ ಮೋಟಾರ್ ಸೈಕಲ್‌ಗಳನ್ನು ಉತ್ಪಾದಿಸುತ್ತಾ ಬಂದಿರುವ ರಾಯಲ್ ಎನ್‌ಫೀಲ್ಡ್, ಜಗತ್ತಿನ ಅತ್ಯಂತ ಹಳೆಯ ಮೋಟಾರ್ ಸೈಕಲ್ ಬ್ರ್ಯಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಿಟಿಷ್ ಮೂಲವನ್ನು ಹೊಂದಿದ್ದರೂ, 1955 ರಲ್ಲಿ ಮದ್ರಾಸ್‌ನಲ್ಲಿ (ಚೆನ್ನೈ) ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ಭಾರತದ ಮಧ್ಯಮ ಗಾತ್ರದ ದ್ವಿಚಕ್ರ ವಾಹನ ಮಾರುಕಟ್ಟೆಯ ಬೆಳವಣಿಗೆಗೆ ಇದು ನಾಂದಿ ಹಾಡಿತು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆಟೋಮೊಬೈಲ್
ಬೈಕ್
ಬೆಂಗಳೂರು
Latest Videos
Recommended Stories
Recommended image1
ಮನುಷ್ಯನಂತೆ ಬುದ್ಧಿವಂತ ತಂತ್ರಜ್ಞಾನ ಹೊಂದಿದ ಹೊಸ ಅವೋರ್ ಇವಿ ಬೈಕ್ ಲಾಂಚ್, ಏನಿದರ ವಿಶೇಷತೆ?
Recommended image2
ರಾಯಲ್ ಆಗಿ ರೈಡ್ ಮಾಡಿ ರಾಯಲ್ ಎನ್‌ಫೀಲ್ಡ್ 650, ಕೈಗೆಟುಕುವ ದರಲ್ಲಿ ಬೈಕ್ ಬಿಡುಗಡೆ
Recommended image3
ಕಡಿಮೆ ಬೆಲೆ, ಶೂನ್ಯ ಮೇಂಟೆನೆನ್ಸ್: ಭಾರತದಲ್ಲಿ ಮಿಂಚಿದ ಎರಡು ಹೀರೊ ಬೈಕ್‌ಗಳು; ಒಂದೇ ತಿಂಗಳಲ್ಲಿ 4 ಲಕ್ಷ ಜನ ಖರೀದಿ!
Related Stories
Recommended image1
ಮನುಷ್ಯನಂತೆ ಬುದ್ಧಿವಂತ ತಂತ್ರಜ್ಞಾನ ಹೊಂದಿದ ಹೊಸ ಅವೋರ್ ಇವಿ ಬೈಕ್ ಲಾಂಚ್, ಏನಿದರ ವಿಶೇಷತೆ?
Recommended image2
ರಾಯಲ್ ಆಗಿ ರೈಡ್ ಮಾಡಿ ರಾಯಲ್ ಎನ್‌ಫೀಲ್ಡ್ 650, ಕೈಗೆಟುಕುವ ದರಲ್ಲಿ ಬೈಕ್ ಬಿಡುಗಡೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved