- Home
- Automobile
- Bike News
- ಬೆಂಗಳೂರಲ್ಲಿ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ ಎಲೆಕ್ಟ್ರಿಕ್ ಬೈಕ್ ಖರೀದಿ ಮತ್ತಷ್ಟು ಸುಲಭ
ಬೆಂಗಳೂರಲ್ಲಿ ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ ಎಲೆಕ್ಟ್ರಿಕ್ ಬೈಕ್ ಖರೀದಿ ಮತ್ತಷ್ಟು ಸುಲಭ
ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಿರುವ ಫ್ಲೈಯಿಂಗ್ ಫ್ಲೀ ಎಲೆಕ್ಟ್ರಿಕ್ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಲ್ಲಿ ಫ್ಲೈಯಿಂಗ್ ಫ್ಲೀ ಬೈಕ್ ಖರೀದಿಯನ್ನು ಮತ್ತಷ್ಟು ಸುಲಭಗೊಳಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫೀ ಖರೀದಿಗೆ ಪ್ಲಾನ್ ಮಾಡಿದ್ದೀರಾ?
ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ ಎಲೆಕ್ಟ್ರಿಕ್ ಆಕರ್ಷಕ ವಿನ್ಯಾಸ, ಮೈಲೇಜ್ ರೇಂಜ್, ರೆಟ್ರೋ ಸೇರಿದಂತೆ ರಾಯಲ್ ಲುಕ್ ಬೈಕ್ ಬಹುತೇಕ ನೆಚ್ಚಿನ ಬೈಕ್ ಆಗಿ ಮಾರ್ಪಟ್ಟಿದೆ. ಬೆಂಗಳೂರಿನಲ್ಲಿ ಫ್ಲೈಯಿಂಗ್ ಫ್ಲೀ ಬೈಕ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಖರೀದಿ ಮತ್ತಷ್ಟು ಸುಲಭವಾಗಿದೆ.
ಬೆಂಗಳೂರಲ್ಲಿ ಫ್ಲೈಯಿಂಗ್ ಫ್ಲೀ ವಿಸ್ತರಣೆ
ನಗರದಾದ್ಯಂತ ತನ್ನ ಬ್ರಾಂಡ್‌ನ್ನು ಗ್ರಾಹಕರ ಬಳಿ ಕೊಂಡೊಯ್ಯಲು ಮುಂದಾಗಿದೆ. ರಾಯಲ್ ಎನ್‌ಫೀಲ್ಡ್ ನ ಹೊಸ ಸಿಟಿ+ ಎಲೆಕ್ಟ್ರಿಕ್ ಮೊಬಿಲಿಟಿ ಬ್ರಾಂಡ್ ಫ್ಲೈಯಿಂಗ್ ಫ್ಲೀ ಬೆಂಗಳೂರಿನಲ್ಲಿ ತನ್ನ ಗ್ರಾಹಕ ಸಂಪರ್ಕ ಕೇಂದ್ರಗಳನ್ನು ವಿಸ್ತರಿಸಿದೆ. ಜಯನಗರದಲ್ಲಿ ಪ್ರಾರಂಭಿಸಲಾದ ತನ್ನ ಮೊದಲ ಮಳಿಗೆಯ ಜೊತೆಗೆ ಈ ಬ್ರಾಂಡ್ ಈಗ 10 ಹೊಸ ರೀಟೇಲ್ ಟಚ್ ಪಾಯಿಂಟ್ ಗಳನ್ನು ಸೇರ್ಪಡೆಗೊಳಿಸುತ್ತಿದೆ.
ಬೆಂಗಳೂರಿನ ಎಲ್ಲೆಡೆ ಫ್ಲೈಯಿಂಗ್ ಫ್ಲೀ ಶೋ ರೂಂ
ಬ್ರಾಂಡ್ ನ ಮೊದಲ ಮೋಟಾರ್‌ಸೈಕಲ್ ಆದ ಫ್ಲೈಯಿಂಗ್ ಫ್ಲೀ C6 ಮೇಲಿನ ಅಭೂತಪೂರ್ವ ಆಸಕ್ತಿಗೆ ಪ್ರತಿಕ್ರಿಯೆಯಾಗಿ ಈ ತ್ವರಿತ ಶೋರೂಮ್ ಜಾಲದ ವಿಸ್ತರಣೆ ನಡೆಯುತ್ತಿದೆ. ಪ್ರಮುಖ ಪ್ರದೇಶಗಳಲ್ಲಿ ನೆಲೆಗೊಂಡಿರುವ ಈ ಹೊಸ ಮಳಿಗೆಗಳು, ಬೆಂಗಳೂರಿನಾದ್ಯಂತ ಮಾರಾಟ ಮತ್ತು ಮಾರಾಟದ ನಂತರದ ಬೆಂಬಲಕ್ಕೆ ಸುಲಭವಾಗಿ ಲಭ್ಯವಾಗುತ್ತವೆ. ಸಂಪರ್ಕಿತ, ಅನುಕೂಲಕರ ಮತ್ತು ಸುಗಮ ಮಾಲೀಕತ್ವದ ಅನುಭವವನ್ನು ನಿರ್ಮಿಸುವ ಫ್ಲೈಯಿಂಗ್ ಫ್ಲೀ ಬದ್ಧತೆಯನ್ನು ಎತ್ತಿಹಿಡಿಯಲು, ದಕ್ಷ ಹಾಗೂ ವಿಶ್ವಾಸಾರ್ಹ ಸೇವೆಯನ್ನು ಒದಗಿಸಲು ಹಬ್-ಆಂಡ್-ಸ್ಪೋಕ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಬಿಟಿಎಂ ಲೇಔಟ್ ನಲ್ಲಿರುವ ಸರ್ವೀಸ್ ಹಬ್ ವಿಶೇಷ ತಾಂತ್ರಿಕ ಬೆಂಬಲವನ್ನು ಒದಗಿಸಿದರೆ, ಬೆಂಗಳೂರಿನಾದ್ಯಂತ ಇರುವ ಹಲವಾರು ಸ್ಪೋಕ್ ಸೆಂಟರ್ ಗಳು ದೈನಂದಿನ ಸೇವೆ ಮತ್ತು ನಿರ್ವಹಣಾ ಅಗತ್ಯಗಳನ್ನು ಪೂರೈಸುತ್ತವೆ.
ಫ್ಲೈಯಿಂಗ್ ಫ್ಲೀ ಬೆಲೆ
ರಾಯಲ್ ಎನ್‌ಫೀಲ್ಡಿಂಗ್ ಫ್ಲೈಯಿಂಗ್ ಫ್ಲೀ ಸಿ6 ಬೈಕ್ ಬೆಲೆ 2.79 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸ್ವಾಪ್ ಬ್ಯಾಟರಿ ಮೂಲಕ 1.99 ಲಕ್ಷ ರೂಪಾಯಿಗೆ ಲಭ್ಯವಿದೆ. ಹೊಸ ಬೈಕ್ ಸ್ಟಾರ್ಮ್ ಬ್ಲಾಕ್ ಮತ್ತು ಫ್ಲೀ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷ ಅಂದರೆ ಪ್ರತಿ ಎಫ್.ಎಫ್.ಸಿ.6 24x7 ರೋಡ್ ಸೈಡ್ ಅಸಿಸ್ಟೆನ್ಸ್ ಸೌಲಭ್ಯದೊಂದಿದೆ ಲಭ್ಯವಿದೆ.
1940ರ ದಶಕದ ಫ್ಲೈಯಿಂಗ್ ಫ್ಲೀ ಮೋಟಾರ್ ಪ್ರೇರಿತ
1940ರ ದಶಕದ ಮೂಲ ಫ್ಲೈಯಿಂಗ್ ಫ್ಲೀ ಮೋಟಾರ್ ಸೈಕಲ್ ನಿಂದ ಪ್ರೇರಿತಗೊಂಡು ಆಧುನಿಕ ಫ್ಲೈಯಿಂಗ್ ಫ್ಲೀ ಸಿ6 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಂದಿನ ರೈಡರ್ ಅಗತ್ಯಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅತ್ಯಂತ ಸುಲಭ ಹಾಗೂ ಆಳವಾದ ಚಾಲನಾ ಅನುಭವವನ್ನು ನೀಡುತ್ತದೆ.

