- Home
- Automobile
- Bike News
- ರೆಟ್ರೋ ಲುಕ್, ಚಿನ್ನದಂಥ ಹೊಳಪು! ರಾಯಲ್ ಎನ್ಫಿಲ್ಡ್ಗೆ ಟಫ್ ಕಾಂಪಿಟೇಟರ್ ಈ ಬೈಕ್ ಅದ್ಭುತ
ರೆಟ್ರೋ ಲುಕ್, ಚಿನ್ನದಂಥ ಹೊಳಪು! ರಾಯಲ್ ಎನ್ಫಿಲ್ಡ್ಗೆ ಟಫ್ ಕಾಂಪಿಟೇಟರ್ ಈ ಬೈಕ್ ಅದ್ಭುತ
BSA ತನ್ನ ಗೋಲ್ಡ್ ಸ್ಟಾರ್ 650 ರ ಎರಡು ಹೊಸ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಬರ್ಮಿಂಗ್ಹ್ಯಾಮ್ ಬ್ಲೂ ಮತ್ತು ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಂಬ ಈ ಬೈಕ್ಗಳು 652cc ಎಂಜಿನ್ ಹೊಂದಿವೆ. ಇವು ರಾಯಲ್ ಎನ್ಫೀಲ್ಡ್ಗೆ ಪ್ರಬಲ ಪೈಪೋಟಿ ನೀಡಲಿವೆ.

BSA ಗೋಲ್ಡ್ ಸ್ಟಾರ್ 650
BSA ತನ್ನ ಗೋಲ್ಡ್ ಸ್ಟಾರ್ 650 ರ ಎರಡು ಹೊಸ ವಿಶೇಷ ಆವೃತ್ತಿಗಳನ್ನು ರಿಲೀಸ್ ಮಾಡಿದೆ. ಈ ಎರಡು ಬೈಕ್ಗಳಿಗೆ ಕಂಪನಿ ಬರ್ಮಿಂಗ್ಹ್ಯಾಮ್ ಬ್ಲೂ ಮತ್ತು ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ ಎಂದು ನಾಮಕರ ಮಾಡಿದೆ.
ಖಡಕ್ ಲುಕ್
ಖಡಕ್ ಲುಕ್, ಶಕ್ತಿಶಾಲಿ ಎಂಜಿನ್ ಹೊಂದಿರುವ ಬೈಕ್ನ ಬೆಲೆ 3.56 ಲಕ್ಷ ರೂಪಾಯಿ. ಎರಡೂ ಬೈಕ್ಗಳು ಬೇರೆ ಬೇರೆ ಪ್ರೈಸ್ ಹೊಂದಿದೆ. ಬರ್ಮಿಂಗ್ಹ್ಯಾಮ್ ಬ್ಲೂ 3.55 ಲಕ್ಷ ರೂಪಾಯಿ. ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ 3.64 ಲಕ್ಷ ರೂಪಾಯಿ ಎಂದು ಕಂಪನಿ ಹೇಳಿದೆ. ಇದು ರಾಯಲ್ ಎನ್ಫೀಲ್ಡ್ಗೆ ಪ್ರತಿಸ್ಪರ್ಧಿ ಬೈಕ್ ಇದಾಗಿದೆ.
ಹೇಗಿದೆ ಬೈಕ್ಗಳು?
ಬರ್ಮಿಂಗ್ಹ್ಯಾಮ್ ಬ್ಲೂ
- ನೀಲಿ ಬಣ್ಣ
- ಸೈಡ್ ಪ್ಯಾನಲ್
- ಬೆಳ್ಳಿ ಬ್ಯಾಡ್ಜ್
- ಕ್ಲಾಸಿಕ್ ಲುಕ್
- ವಿಂಟೇಜ್ ಬ್ರಿಟಿಷ್ ಮೋಟಾರ್ ಸೈಕಲ್ ಇಷ್ಟಪಡೋರಿಗೆ ಇದು ಬೆಸ್ಟ್
ಬ್ರೂಕ್ಲ್ಯಾಂಡ್ಸ್ ಬ್ಲ್ಯಾಕ್ ಲೆಗಸಿ
- ಹೆಚ್ಚುವರಿ ಪ್ರಿಮಿಯಂ ಲುಕ್
- ಕ್ರೋಮ್-ಫಿನಿಶ್ಡ್ ಫೆಂಡರ್ಗಳು
- ಚಿನ್ನದ ಪಿನ್ಸ್ಟ್ರಿಪಿಂಗ್
- ಬ್ಲಾಕ್ ಫಿನಿಶ್
- ಕ್ರೋಮ್-ಫಿನಿಶ್ಡ್ ಇಂಧನ ಟ್ಯಾಂಕ್
- ಕ್ವಿಲ್ಟೆಡ್ ಸೀಟ್
ವಿಶೇಷತೆ ಏನು?
ಇನ್ನೂ ಎರಡೂ ಬೈಕ್ಗಳು ಇತಿಹಾಸದೊಂದಿಗೆ ಕನೆಕ್ಟ್ ಮಾಡಲು BSA ಪ್ರಯತ್ನಿಸಿದೆ. ಬರ್ಮಿಂಗ್ಹ್ಯಾಮ್ ಬ್ಲೂ ಹೆಸರು ಬ್ರಿಟಿಷ್ ಮೋಟಾರ್ಸೈಕಲ್ ಬ್ರ್ಯಾಂಡ್ ಹುಟ್ಟಿಕೊಂಡ ಬರ್ಮಿಂಗ್ಹ್ಯಾಮ್ ನಗರದಿಂದ ಪ್ರೇರಿತವಾಗಿದೆ.
652cc
ಬ್ರೂಕ್ಲ್ಯಾಂಡ್ಸ್ ಇಂಗ್ಲೆಂಡ್ನ ಪ್ರಸಿದ್ಧ ಬ್ರೂಕ್ಲ್ಯಾಂಡ್ಸ್ ರೇಸಿಂಗ್ ಸರ್ಕ್ಯೂಟ್ನಿಂದ ಪ್ರೇರಿತವಾಗಿದೆ. ಕಂಪನಿಯು ಈ ಬೈಕ್ಗಳ ಮೂಲಕ ತನ್ನ ಪರಂಪರೆ ಮತ್ತು ಕ್ಲಾಸಿಕ್ ಗುರುತನ್ನು ಪ್ರದರ್ಶಿಸಿದೆ. 652cc, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಹಂಚಿಕೊಳ್ಳುತ್ತದೆ, 45bhp ಮತ್ತು 55Nm ಟಾರ್ಕ್ ಉತ್ಪಾದಿಸುತ್ತದೆ. ಹೊಸ ಆವೃತ್ತಿಯಲ್ಲಿನ ದೊಡ್ಡ ಬದಲಾವಣೆ ಏನೆಂದರೆ ಅದರ ಲುಕ್, ಸ್ಟೈಲ್, ಡಿಸೈನ್. ಬ್ರೆಂಬೊ ಬ್ರೇಕ್ಗಳು, ಡ್ಯುಯಲ್-ಚಾನೆಲ್ ABS ಮತ್ತುವೈರ್-ಸ್ಪೋಕ್ ಚಕ್ರಗಳನ್ನು ಹೊಂದಿವೆ.

