- Home
- Automobile
- Bike News
- Bike Tyres: ನಿಮ್ಮ ಬೈಕ್‌ಗಳಿಗೆ ಯಾವ ಟೈರ್ ಬೆಸ್ಟ್? ಇಲ್ಲಿದೆ ಟ್ಯೂಬ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳ ವ್ಯತ್ಯಾಸ
Bike Tyres: ನಿಮ್ಮ ಬೈಕ್‌ಗಳಿಗೆ ಯಾವ ಟೈರ್ ಬೆಸ್ಟ್? ಇಲ್ಲಿದೆ ಟ್ಯೂಬ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳ ವ್ಯತ್ಯಾಸ
ಬೈಕ್‌ಗಳಿಗೆ ಟ್ಯೂಬ್ ಮತ್ತು ಟ್ಯೂಬ್‌ಲೆಸ್ ಟೈರ್‌ಗಳ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿವರಿಸುತ್ತದೆ. ಪಂಕ್ಚರ್, ಸುರಕ್ಷತೆ, ಮತ್ತು ಮೈಲೇಜ್ ದೃಷ್ಟಿಯಿಂದ ಇವೆರಡರ ವ್ಯತ್ಯಾಸ ತಿಳಿಯಿರಿ. ಸರಿಯಾದ ನಿರ್ಧಾರ ತೆಗೆದುಕೊಳ್ಳಿ!

ಬೈಕ್ ಓಡಿಸುವಾಗ ನಮ್ಮ ಸುರಕ್ಷತೆ ಮತ್ತು ಆರಾಮ ಬಹುತೇಕ ಟೈರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಮುಖ್ಯವಾಗಿ ಟ್ಯೂಬ್ ಮತ್ತು ಟ್ಯೂಬ್‌ಲೆಸ್ ಎಂಬ ಎರಡು ವಿಧದ ಟೈರ್‌ಗಳಿವೆ. ಹೊಸ ಟೈರ್ ಖರೀದಿಸುವಾಗ, ನಮ್ಮ ಬೈಕ್‌ಗೆ ಯಾವುದು ಸರಿ ಎಂದು ಗೊಂದಲವಾಗುವುದು ಸಾಮಾನ್ಯ. ಇವೆರಡರ ನಡುವಿನ ವ್ಯತ್ಯಾಸ ಮತ್ತು ಯಾವುದು ಉತ್ತಮ ಎಂಬುದನ್ನು ತಿಳಿಯೋಣ.
ಟ್ಯೂಬ್ ಟೈರ್‌ಗಳು
ಟ್ಯೂಬ್ ಟೈರ್‌ಗಳ ಅನುಕೂಲಗಳು
ಇದು ನಾವು ಹಲವು ವರ್ಷಗಳಿಂದ ನೋಡುತ್ತಿರುವ ಹಳೆಯ ತಂತ್ರಜ್ಞಾನ. ಈ ಟೈರ್‌ನೊಳಗೆ ರಬ್ಬರ್ ಟ್ಯೂಬ್ ಇರುತ್ತದೆ, ಅದರಲ್ಲಿ ಗಾಳಿಯನ್ನು ತುಂಬಲಾಗುತ್ತದೆ. ಈ ಟೈರ್‌ಗಳನ್ನು ಸ್ಪೋಕ್ ವೀಲ್‌ಗಳಿಗೆ ಸುಲಭವಾಗಿ ಅಳವಡಿಸಬಹುದು. ಹಳ್ಳ-ದಿಣ್ಣೆಗಳ ರಸ್ತೆಯಲ್ಲಿ ಉಂಟಾಗುವ ಹೊಡೆತಗಳನ್ನು ಹೀರಿಕೊಳ್ಳಲು ಇವು ಸಹಕಾರಿ.
ಟ್ಯೂಬ್ ಟೈರ್‌ಗಳ ದೊಡ್ಡ ಸಮಸ್ಯೆ:
ಈ ಟ್ಯೂಬ್ ಟೈರ್‌ಗಳಿಗೆ ಮೊಳೆ ಚುಚ್ಚಿದರೆ, ಒಳಗಿನ ಟ್ಯೂಬ್ ಒಡೆದು ಗಾಳಿ ಸಂಪೂರ್ಣವಾಗಿ ಹೊರಹೋಗುತ್ತದೆ. ನೀವು ವೇಗವಾಗಿ ಬೈಕ್ ಓಡಿಸುತ್ತಿದ್ದರೆ, ಇದ್ದಕ್ಕಿದ್ದಂತೆ ಗಾಳಿ ಖಾಲಿಯಾಗುವುದರಿಂದ ಬೈಕ್‌ನ ಬ್ಯಾಲೆನ್ಸ್ ತಪ್ಪಿ ಅಪಘಾತದ ಅಪಾಯ ಹೆಚ್ಚಾಗುತ್ತದೆ.
ಟ್ಯೂಬ್‌ಲೆಸ್ ಟೈರ್‌ಗಳು ಮತ್ತು ಪ್ರಯೋಜನಗಳು.
ಇತ್ತೀಚಿನ ಹೆಚ್ಚಿನ ಹೊಸ ಮತ್ತು ಆಧುನಿಕ ಬೈಕ್‌ಗಳಲ್ಲಿ ಟ್ಯೂಬ್‌ಲೆಸ್ ಟೈರ್‌ಗಳನ್ನೇ ಬಳಸುತ್ತಾರೆ. ಹೆಸರೇ ಹೇಳುವಂತೆ, ಈ ಟೈರ್‌ಗಳಲ್ಲಿ ಟ್ಯೂಬ್ ಇರುವುದಿಲ್ಲ. ಟೈರ್ ನೇರವಾಗಿ ರಿಮ್‌ಗೆ ಬಿಗಿಯಾಗಿ ಅಂಟಿಕೊಂಡಿರುತ್ತದೆ, ಇದು ಗಾಳಿ ಲೀಕ್ ಆಗುವುದನ್ನು ತಡೆಯುತ್ತದೆ.
ತಳ್ಳುವ ಪ್ರಮೇಯ ಬರುವುದಿಲ್ಲ
ಈ ಟ್ಯೂಬ್‌ಲೆಸ್ ಟೈರ್‌ಗಳಿಗೆ, ರಸ್ತೆಯಲ್ಲಿ ಮೊಳೆ ಅಥವಾ ಚೂಪಾದ ವಸ್ತು ಚುಚ್ಚಿದರೂ, ಗಾಳಿ ತಕ್ಷಣವೇ ಹೊರಹೋಗುವುದಿಲ್ಲ, ಬದಲಾಗಿ ನಿಧಾನವಾಗಿ ಕಡಿಮೆಯಾಗುತ್ತದೆ. ಟೈರ್ ಪಂಕ್ಚರ್ ಆದರೂ ನೀವು ಗಾಡಿ ನಿಲ್ಲಿಸದೆ ಕೆಲವು ಕಿಲೋಮೀಟರ್‌ಗಳವರೆಗೆ ಓಡಿಸಿ ಮೆಕ್ಯಾನಿಕ್ ಬಳಿ ಕೊಂಡೊಯ್ಯಬಹುದು. ರಸ್ತೆಯಲ್ಲಿ ಬೈಕ್ ತಳ್ಳುವ ಪ್ರಸಂಗ ಬರುವುದಿಲ್ಲ.
- ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಅನುಕೂಲತೆಯ ದೃಷ್ಟಿಯಿಂದ, ಟ್ಯೂಬ್‌ಲೆಸ್ ಟೈರ್‌ಗಳೇ ಸದ್ಯಕ್ಕೆ ಉತ್ತಮ ಆಯ್ಕೆ.
- ಟೈರ್ ಪಂಕ್ಚರ್ ಆದಾಗ ಗಾಡಿಯ ಬ್ಯಾಲೆನ್ಸ್ ತಪ್ಪುವುದಿಲ್ಲ, ಇದರಿಂದ ನೀವು ಸುರಕ್ಷಿತವಾಗಿರುತ್ತೀರಿ.
- ಟ್ಯೂಬ್‌ಲೆಸ್ ಟೈರ್ ಪಂಕ್ಚರ್ ಆದರೆ ವೀಲ್ ಬಿಚ್ಚುವ ಅಗತ್ಯವಿಲ್ಲ. ಮೆಕ್ಯಾನಿಕ್ ಪಂಕ್ಚರ್ ಕಿಟ್ ಬಳಸಿ ಕೇವಲ 2 ನಿಮಿಷಗಳಲ್ಲಿ ಅದನ್ನು ಸರಿಪಡಿಸಬಹುದು.
- ಟ್ಯೂಬ್ ಇಲ್ಲದಿರುವುದರಿಂದ ಈ ಟೈರ್‌ಗಳು ಹಗುರವಾಗಿರುತ್ತವೆ. ಇದರಿಂದ ಇಂಜಿನ್ ಮೇಲಿನ ಒತ್ತಡ ಕಡಿಮೆಯಾಗಿ, ಬೈಕ್‌ನ ಮೈಲೇಜ್ ಹೆಚ್ಚುತ್ತದೆ.
- ಈ ಟೈರ್‌ಗಳನ್ನು ನಿರಂತರವಾಗಿ ಬಳಕೆ ಮಾಡಿದರೂ ಕಡಿಮೆ ಬಿಸಿಯಾಗುತ್ತವೆ.
- ನೀವು ಟೈರ್ ಬದಲಾಯಿಸಲು ಯೋಚಿಸುತ್ತಿದ್ದರೆ, ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಟ್ಯೂಬ್‌ಲೆಸ್ ಟೈರ್ ಆಯ್ಕೆ ಮಾಡುವುದು ಜಾಣತನದ ನಿರ್ಧಾರ.

