- Home
- Karnataka Districts
- Bengaluru Urban
- Bengaluru: ಚಪ್ಪರಿಸಿಕೊಂಡು ತಿನ್ನೋ ಬಿರಿಯಾನಿಯೇ ಇಲ್ಲಿ ಫೇಮಸ್, ಬೆಂಗಳೂರಿನ ಟಾಪ್-5 ಚಿಕನ್ ಬಿರಿಯಾನಿ ರೆಸ್ಟೋರೆಂಟ್‌ಗಳಿವು
Bengaluru: ಚಪ್ಪರಿಸಿಕೊಂಡು ತಿನ್ನೋ ಬಿರಿಯಾನಿಯೇ ಇಲ್ಲಿ ಫೇಮಸ್, ಬೆಂಗಳೂರಿನ ಟಾಪ್-5 ಚಿಕನ್ ಬಿರಿಯಾನಿ ರೆಸ್ಟೋರೆಂಟ್‌ಗಳಿವು
Bengaluru ಬೆಂಗಳೂರು ಬಿರಿಯಾನಿ ಪ್ರಿಯರಿಗೆ ಸ್ವರ್ಗ. ಆಂಧ್ರ ಸ್ಟೈಲ್ ಬಿರಿಯಾನಿಯಿಂದ ಹಿಡಿದು, ಸಾಂಪ್ರದಾಯಿಕ ದೊಣ್ಣೆ ಬಿರಿಯಾನಿ ತನಕ, ಬೆಂಗಳೂರಿನಲ್ಲಿ ನೀವು ಮಿಸ್ ಮಾಡಲೇಬಾರದ 5 ಪ್ರಸಿದ್ಧ ಬಿರಿಯಾನಿ ಹೋಟೆಲ್‌ಗಳ ಪಟ್ಟಿ ಇಲ್ಲಿದೆ!

1. ನಂದನ ಪ್ಯಾಲೇಸ್ (Nandhana Palace)
ಖಾರವಾದ ಆಂಧ್ರ ಸ್ಟೈಲ್ ಬಿರಿಯಾನಿಗೆ ಈ ರೆಸ್ಟೋರೆಂಟ್ ತುಂಬಾ ಫೇಮಸ್. ಬಾಯಲ್ಲಿ ನೀರೂರಿಸುವ ಸ್ಪೈಸಿ ಫುಡ್ ಇಷ್ಟಪಡುವವರು ಇಲ್ಲಿ ಒಮ್ಮೆ ಟ್ರೈ ಮಾಡಲೇಬೇಕು.
ಟ್ರೈ ಮಾಡಬೇಕಾದ ಡಿಶ್: ಚಿಕನ್ ಬೋನ್‌ಲೆಸ್ 555 ಬಿರಿಯಾನಿ (Chicken Boneless 555 Biryani), ಆಂಧ್ರ ಸ್ಟೈಲ್ ಸ್ಪೈಸಿ ಬಿರಿಯಾನಿಗಳು. ಸ್ಥಳ: ಬೆಂಗಳೂರು ನಗರದಾದ್ಯಂತ ಇದರ ಶಾಖೆಗಳಿವೆ. ಸಮಯ: ಮಧ್ಯಾಹ್ನ 11:30 ರಿಂದ ರಾತ್ರಿ 11:00 ರವರೆಗೆ.
ಶಿವಾಜಿ ಮಿಲಿಟರಿ ಹೋಟೆಲ್ (Shivaji Military Hotel)
ಬೆಂಗಳೂರಿನ ಸಾಂಪ್ರದಾಯಿಕ ರುಚಿಯನ್ನು ಸವಿಯಬೇಕೆಂದರೆ, ಜಯನಗರದಲ್ಲಿರುವ ಶಿವಾಜಿ ಮಿಲಿಟರಿ ಹೋಟೆಲ್. ಇಲ್ಲಿ ಮಂದಾರ ಎಲೆಯಿಂದ ಮಾಡಿದ ದೊಣ್ಣೆಯಲ್ಲಿ ಕೊಡುವ ಬಿರಿಯಾನಿ ಪ್ರಸಿದ್ಧ.
ಟ್ರೈ ಮಾಡಬೇಕಾದ ಡಿಶ್: ಚಿಕನ್ ಅಥವಾ ಮಟನ್ ದೊಣ್ಣೆ ಬಿರಿಯಾನಿ (Donne Biryani). ಸ್ಥಳ: ಜಯನಗರ (Jayanagar). ಸಮಯ: ಬೆಳಗ್ಗೆ 08:00 ರಿಂದ ಮುಂಜಾನೆ 03:30 ರವರೆಗೆ (ಸೋಮವಾರ ರಜೆ).
ಎಂಪೈರ್ ರೆಸ್ಟೋರೆಂಟ್ (Empire Restaurant)
ರಾತ್ರಿ ಹೊತ್ತು ಹಸಿವಾದರೆ ಬೆಂಗಳೂರಿಗರ ಮೊದಲ ಆಯ್ಕೆಯೇ ಎಂಪೈರ್. ಸುವಾಸನಾಯುಕ್ತ ಹೈದರಾಬಾದಿ ಮತ್ತು ಉತ್ತರ ಭಾರತದ ಬಿರಿಯಾನಿಗಳಿಗೆ ಈ ರೆಸ್ಟೋರೆಂಟ್ ಹೆಸರುವಾಸಿ.
ಟ್ರೈ ಮಾಡಬೇಕಾದ ಡಿಶ್: ಗ್ರಿಲ್ಡ್ ಚಿಕನ್ ಬಿರಿಯಾನಿ (Grilled Chicken Biryani) ಮತ್ತು ಮಟನ್ ಬಿರಿಯಾನಿ. ಸ್ಥಳ: ನಗರದ ಪ್ರಮುಖ ಭಾಗಗಳಲ್ಲಿ ಹಲವು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸಮಯ: ಬೆಳಗ್ಗೆ 11:00 ರಿಂದ ಮುಂಜಾನೆ 02:30 ರವರೆಗೆ.
ಮೇಘನಾ ಫುಡ್ಸ್ (Meghana Foods)
ಇದು ಬೆಂಗಳೂರಿನ ಬಿರಿಯಾನಿ ಪ್ರಿಯರ 'ಆಲ್-ಟೈಮ್ ಫೇವರಿಟ್' ಸ್ಪಾಟ್. ಮಾಂಸಾಹಾರಿಗಳಷ್ಟೇ ಅಲ್ಲ, ಸಸ್ಯಾಹಾರಿಗಳಿಗೂ ಇಷ್ಟವಾಗುವಂತಹ ಅದ್ಭುತ ಬಿರಿಯಾನಿ ಆಯ್ಕೆಗಳು ಇಲ್ಲಿ ಲಭ್ಯ.
ಟ್ರೈ ಮಾಡಬೇಕಾದ ಡಿಶ್:: ಮೇಘನಾ ಸ್ಪೆಷಲ್ ಬಿರಿಯಾನಿ (Meghana Special), ಬೋನ್‌ಲೆಸ್ ಚಿಕನ್ ಬಿರಿಯಾನಿ, ಮತ್ತು ಸಸ್ಯಾಹಾರಿಗಳಿಗಾಗಿ ಮೇಘನಾ ಸ್ಪೆಷಲ್ ವೆಜಿಟೇಬಲ್ ಬಿರಿಯಾನಿ. ಸ್ಥಳ: ನಗರದಾದ್ಯಂತ ಇದರ ಶಾಖೆಗಳು ಹರಡಿವೆ. ಸಮಯ: ಪ್ರತಿದಿನ ಮಧ್ಯಾಹ್ನ 11:30 ರಿಂದ ರಾತ್ರಿ 01:00 ರವರೆಗೆ.
ಪ್ಯಾರಡೈಸ್ ಬಿರಿಯಾನಿ (Paradise Biryani)
ಬಿರಿಯಾನಿ ಅಂದರೆ ಹೈದರಾಬಾದ್ ದಮ್ ಬಿರಿಯಾನಿ ಎನ್ನುವವರಿಗೆ ಇದು ಹೇಳಿ ಮಾಡಿಸಿದ 'ಪ್ಯಾರಡೈಸ್'. ಬಾಸಮತಿ ಅಕ್ಕಿಯ ಸುವಾಸನೆ ಮತ್ತು ಮಸಾಲೆಗಳ ಅಸಲಿ ರುಚಿಯೇ ಇವರ ವಿಶೇಷತೆ.
ಟ್ರೈ ಮಾಡ ಬೇಕಾದ ಡಿಶ್:: ಹೈದರಾಬಾದ್ ಚಿಕನ್ ದಮ್ ಬಿರಿಯಾನಿ, ಹೈದರಾಬಾದ್ ಮಟನ್ ದಮ್ ಬಿರಿಯಾನಿ. ಇದರೊಂದಿಗೆ ವಿಶೇಷವಾಗಿ 'ಗುತ್ತಿ ವಂಕಾಯ ಬಿರಿಯಾನಿ' (ಬದನೆಕಾಯಿ ಬಿರಿಯಾನಿ).
ಸ್ಥಳ: ಜೆ.ಪಿ ನಗರ, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಶಾಖೆಗಳಿವೆ.
ಸಮಯ: ಬೆಳಗ್ಗೆ 11:00 ರಿಂದ ರಾತ್ರಿ 11:00 ಅಥವಾ ಮಧ್ಯರಾತ್ರಿ 12:00 ರವರೆಗೆ (ಶಾಖೆಗಳನ್ನು ಅವಲಂಬಿಸಿ ಬದಲಾಗಬಹುದು).