ಬೆಂಗಳೂರಿನಲ್ಲಿ ಸೂರ್ಯಗ್ರಹಣ ವೀಕ್ಷಿಸಿ ಸಂಭ್ರಮಿಸಿದ ಜನ, ರಸ್ತೆಗಳು ಖಾಲಿ ಖಾಲಿ!
ಕೇತುಗ್ರಸ್ತ ಸೂರ್ಯಗ್ರಹಣ ಅಂತ್ಯಗೊಂಡಿದೆ. ಬೆಂಗಳೂರಿನಲ್ಲಿ ನೆಹರೂ ತಾರಾಲಯ ಸೇರಿದಂತೆ ಕೆಲ ಭಾಗದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ರಸ್ತೆಗಳು ಖಾಲಿ ಖಾಲಿಯಾಗಿದ್ದರೆ, ಗ್ರಹಣದ ವೇಳೆ ಆಹಾರ ಸೇವೆಸಿಬಾರದು ಅನ್ನೋದು ಮೌಢ್ಯ ಎಂದು ಹಲವರು ಅದೇ ಸಮಯದಲ್ಲಿ ಆಹಾರ ಸೇವಿಸಿ ಸಮರ ಸಾರಿದರು. ಬೆಂಗಳೂರಿನಲ್ಲಿ ಕಂಡ ಸೂರ್ಯಗ್ರಹಣ ಹಾಗೂ ಅದರ ಎಫೆಕ್ಟ್ ಚಿತ್ರಗಳು ಇಲ್ಲಿವೆ.
ಪಾಶ್ರ್ವ ಸೂರ್ಯಗ್ರಹಣ ಬೆಂಗಳೂರಿನಲ್ಲಿ ಸಂಜೆ 5.12 ರಿಂದ 5.49ವರೆಗೂ ಗೋಚರಿಸಿದೆ. ಬೆಂಗಲೂರಿನ ನೆಹರು ತಾರಾಲಯದಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಷ್ಟೇ ಅಲ್ಲ ನೆಹರು ತಾರಾಲಯವು ವೆಬ್‌ಸೈಟ್/ಯುಟ್ಯೂಬ್ ಮೂಲಕ ನೇರ ಪ್ರಸಾರದ ಅವಕಾಶವನ್ನೂ ಕಲ್ಪಿಸಿಕೊಟ್ಟಿತ್ತು. ನಗರದ ಜನ ಸೂರ್ಯಗ್ರಹಣ ವೀಕ್ಷಿಸಿ ಸಂಭ್ರಮಿಸಿದರು.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ಪಾಶ್ವ ಸೂರ‍್ಯಗ್ರಹಣ ಅತ್ಯಂತ ಸುಂದರವಾಗಿ ಬೆಂಗಳೂರಿನಲ್ಲಿ ಗೋಚರಿಸಿದೆ. ಈ ಸೂರ್ಯಗ್ರಹಣ ವೀಕ್ಷಿಸಿದ ಜನ, ಗ್ರಹಣದ ಕುರಿತ ಮಾಹಿತಿಗಳನ್ನು ಪಡೆದರು.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ಪಾಶ್ವ ಸೂರ‍್ಯಗ್ರಹಣ ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ ಎಂದು ಎಚ್ಚರಿಸಲಾಗಿತ್ತು. ಮಕ್ಕಳು, ವಯಸ್ಕರು, ವೃದ್ಧರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯಗ್ರಹಣ ವೀಕ್ಷಿಸಿ ಸಂಭ್ರಮಿಸಿದ್ದಾರೆ.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ಗ್ರಹಣದ ವೇಳೆ ಆಹಾರ ಸೇವನೆ ಮಾಡಬಾರದು ಅನ್ನೋದು ಮೌಢ್ಯ. ಇದರ ವಿರುದ್ಧ ಕೆಲ ಸಂಘಟನೆಗಳು ಸಮರ ಸಾರಿತ್ತು. ಗ್ರಹಣ ನಡೆಯುತ್ತಿರುವ ಸಂದರ್ಭದಲ್ಲೇ ಆಹಾರ ಸೇವಿಸಿ ಗಮನಸೆಳೆದರು.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ದೀಪಾವಳಿ ಅಮವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು. ಈ ಇನ್ನೂ ಕೆಲವರು ಗ್ರಹಣದ ವೇದಾರಂಭಗಳು ಆರಂಭಕ್ಕೂ ಮೊದಲೇ ಮಾರುಕಟ್ಟೆಗೆ ಆಗಮಿಸಿ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದಿರುವ ದೃಶ್ಯಗಳು ಕಂಡು ಬಂತು.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ಸೂರ್ಯಗ್ರಹಣದ ಎಫೆಕ್ಟ್ ಸಾರ್ವಜನಿಕರ ಸಂಚಾರದ ಮೇಲೂ ಕಂಡುಬಂತು. ನಗರದ ಹಲವಾರು ಮುಖ್ಯರಸ್ತೆಗಳು ಮಧ್ಯಾಹ್ನದ ನಂತರ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಇದರಿಂದ ಬೀದರ್ ಬಸ್‌ನಿಲ್ದಾಣ ಸಹ ಖಾಲಿ ಖಾಲಿಯಾಗಿತ್ತು. ಪ್ರಯಾಣಿಕರಿಲ್ಲದೇ ಬಸ್‌ಗಳ ಓಡಾಟ ಸಹ ಸ್ತಬ್ಧವಾಗಿತ್ತು.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ಸುಮಾರು 27 ವರ್ಷಗಳ ನಂತರ ಸೂರ್ಯ ಗ್ರಹಣ ಬಂದಿದ್ದು, ಹೀಗಾಗಿ ಬಹುತೇಕ ದೇವಸ್ಥಾನಗಳು ಮಧ್ಯಾಹ್ನ 2 ಗಂಟೆಯಿಂದಲೇ ಭಕ್ತರಿಗೆ ದರ್ಶನಕ್ಕೆ ಬ್ರೇಕ್ ಹಾಕಿ ತಮ್ಮ ಬಾಗಿಲು ಮುಚ್ಚಿಕೊಂಡಿದ್ದರೆ ನಗರದ ಹಲವಾರು ಮುಖ್ಯರಸ್ತೆಗಳು ಮಧ್ಯಾಹ್ನದ ನಂತರ ಬಿಕೋ ಎನ್ನುತ್ತಿದ್ದವು. ಜನರ ಓಡಾಟ ಇಲ್ಲವಾಗಿತ್ತು.
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)
ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಿದ ಬಳಿಕ ದೇವಸ್ಥಾನಗಳನ್ನು ಶುಚಿಗೊಳಿಸುವ ಕಾರ್ಯಗಳು ನಡೆದವು. ಬಳಿಕ ಎಂದಿನಂತೆ ಪೂಜೆಗಳ, ವಿಶೇಷ ಸೇವೆಗಳು ಸಲ್ಲಿಕೆಯಾಗಿದೆ
ಫೋಟೋ ಕೃಪೆ: ಎ ವೀರಮಣಿ, ಪಿ ಸುರೇಶ್(ಕನ್ನಡ ಪ್ರಭ)