- Home
- Karnataka Districts
- Bengaluru Urban
- ಫೆಬ್ರವರಿಯಿಂದ ಮೆಟ್ರೋ ದರ ಏರಿಕೆಗೆ ಭಾರಿ ಆಕ್ರೋಶ, ಯೂ ಟರ್ನ್ ಹೊಡೆಯಿತಾ BMRCL?
ಫೆಬ್ರವರಿಯಿಂದ ಮೆಟ್ರೋ ದರ ಏರಿಕೆಗೆ ಭಾರಿ ಆಕ್ರೋಶ, ಯೂ ಟರ್ನ್ ಹೊಡೆಯಿತಾ BMRCL?
ಫೆಬ್ರವರಿಯಿಂದ ಮೆಟ್ರೋ ದರ ಏರಿಕೆಗೆ ಭಾರಿ ಆಕ್ರೋಶ, ದರ ಏರಿಕೆ ಕುರಿತು ಬಿಎಂಆರ್‌ಸಿಎಲ್ ನಿರ್ಧಾರ ಕೆಲ ಗೊಂದಲಕ್ಕೆ ಕಾರಣವಾಗಿದೆ. ದರ ಏರಿಕೆ ಚೆಂಡು ಇದೀಗ ಸರ್ಕಾರದ ಅಂಗಳ ತಲುಪಿದೆ.

ಫೆಬ್ರವರಿಯಿಂದ ಮೆಟ್ರೋ ದರ ಏರಿಕೆ
ಫೆಬ್ರವರಿಯಿಂದ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಈಗಾಗಲೇ ಲೆಕ್ಕಾಚಾರಗಳು ನಡೆಯುತ್ತಿದೆ. ಶೇಕಡಾ 5ರಷ್ಟು ಟಿಕೆಟ್ ದರ ಏರಿಕೆ ಮಾಡಲಾಗುತ್ತದೆ. ಈ ಕುರಿತು ಮಹತ್ವದ ಸಭೆ ನಡೆದಿದೆ. ನಮ್ಮ ಮೆಟ್ರೋ ದರ ಏರಿಕೆ ನಿಯಮದಂತೆ ಪ್ರತಿ ವರ್ಷ ಫೆಬ್ರವರಿಯಲ್ಲಿ ದರ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
ದರ ಏರಿಕಗೆ ಭಾರಿ ಆಕ್ರೋಶ
ನಮ್ಮ ಮೆಟ್ರೋ ದರ ಏರಿಕೆಗೆ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕಳೆದ ವರ್ಷದ ದರ ಏರಿಕೆಯಿಂದ ಇನ್ನು ಜನಸಾಮಾನ್ಯರು ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೆ ಶೇಕಡಾ 5ರಷ್ಟು ದರ ಏರಿಕೆ ಹೊರೆಯಾಗಲಿದೆ ಎಂದು ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನಮ್ಮ ಮೆಟ್ರೋ ದರ ಏರಿಕೆ ಇದೀಗ ಸರ್ಕಾರದ ಅಂಗಳ ತಲುಪಿದೆ.
ಮೆಟ್ರೋ ಗರಿಷ್ಠ ಟಿಕೆಟ್ ದರ 95 ರೂಗೆ ಏರಿಕೆ
ನಮ್ಮ ಮೆಟ್ರೋ ಶೇಕಡಾ 5ರಷ್ಟು ಟಿಕೆಟ್ ದರ ಏರಿಕೆಗೆ ಮುಂದಾಗಿದೆ. ಇದರಿಂದ ನಮ್ಮ ಮೆಟ್ರೋದ ಗರಿಷ್ಠ ಟಿಕೆಟ್ ದರ 90 ರೂಪಾಯಿಯಿಂದ 95 ರೂಪಾಯಿಗೆ ಏರಿಕೆಯಾಗಲಿದೆ. ಹಾಲಿ ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ 10 ರೂಪಾಯಿ ಟಿಕೆಟ್ ದರವಿದೆ, ದರ ಏರಿಕೆ ಬಳಿ 11 ರೂಪಾಯಿ ಆಗಲಿದೆ.
ರಾಜ್ಯ ಸರ್ಕಾರದ ಕೈಯಲ್ಲಿದೆ ದರ ಏರಿಕೆ ನಿರ್ಣಯ
ಮೆಟ್ರೋ ದರ ಏರಿಕೆಗೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ದರ ಏರಿಕೆ ನಿರ್ಧಾರವನ್ನು ಸರ್ಕಾರಕ್ಕೆ ನೀಡಿದೆ. ದರ ಏರಿಕೆ ಅನಿವಾರ್ಯವಾಗಿದೆ ಎಂದು ಬಿಎಂಆರ್ ಸಿಎಲ್ ಹೇಳಿದೆ. ಆದರೆ ಸರ್ಕಾರ ಒಪ್ಪಿದರೆ ಮಾತ್ರ ದರ ಏರಿಕೆ ಜಾರಿಯಾಗಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ.
ದರ ಏರಿಕಗೆ ಹಲವರ ಅಸಮಾಧಾನ
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಕೆಟ್ ದರ ಏರಿಸದಂತೆ ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಪತ್ರ ಬರೆದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆ ಮಾಡದಂತೆ ಮನವಿ ಮಾಡಿದ್ದಾರೆ.

