- Home
- Karnataka Districts
- Bengaluru Urban
- ಚಿಕ್ಕಬಾಣಾವರ ಅಪ್ಪ-ಮಗನ ಸಾವಿನ ಕೇಸಿಗೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಮಾಡಿದ ಮಸಲತ್ತು ಬಿಚ್ಚಿಟ್ಟ ಹೆಂಡತಿ!
ಚಿಕ್ಕಬಾಣಾವರ ಅಪ್ಪ-ಮಗನ ಸಾವಿನ ಕೇಸಿಗೆ ಬಿಗ್ ಟ್ವಿಸ್ಟ್; ಪ್ರಿಯಕರನೊಂದಿಗೆ ಮಾಡಿದ ಮಸಲತ್ತು ಬಿಚ್ಚಿಟ್ಟ ಹೆಂಡತಿ!
ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವಿನ ಕಥೆ ಮುಗಿಸಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಗಂಡ ಹಾಗೂ 5 ವರ್ಷದ ಮಗ ಸತ್ತಿದ್ದರೂ ತನಗೆ ಗೊತ್ತೇ ಇಲ್ಲವೆಂದು ಕಥೆ ಕಟ್ಟಿದ್ದ ಹೆಂಡತಿ ಪೊಲೀಸರು ಚೆನ್ನಾಗಿ ರುಬ್ಬುತ್ತಿದ್ದಂತೆ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಪ್ರಿಯಕರನೊಂದಿಗೆ ಸೇರಿಕೊಂಡು ಗಂಡ ಹಾಗೂ ಮಗುವನ್ನು ಕೊಲೆ ಮಾಡಿದ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪದ ಗುಡ್ಡೆ ಬಸವಪುರದಲ್ಲಿ ಅಭಿನಂದನ್ (33) ಹಾಗೂ ಆತನ 5 ವರ್ಷದ ಪುತ್ರ ಯದುವೀರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೇಲ್ನೋಟಕ್ಕೆ ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಘಟನೆ ಸಂಬಂಧ ಮೃತನ ಪತ್ನಿ ಹರಿಣಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಹೇಳುತ್ತಿದ್ದರೂ, ಪೊಲೀಸರು ತನಿಖೆಯ ಸ್ಟೈಲ್ ಚೇಂಗ್ ಮಾಡಿದಾಗ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.
ಮನೆಗೆ ಸೇರಿಸಿಕೊಂಡಿದ್ದೇ ತಪ್ಪಾಯ್ತು?
ಕೆಲವು ದಿನಗಳ ಹಿಂದೆ ಮನೆಯಿಂದ ಬೇರೊಬ್ಬನ ಜೊತೆಗೆ ಓಡಿ ಹೋಗಿದ್ದ ಹರಿಣಿ 3 ತಿಂಗಳ ಬಳಿಕ ಮನೆಗೆ ವಾಪಸ್ ಬಂದಿದ್ದಳು. ಆದರೆ, ಮನೆಯಲ್ಲಿ ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ಮತ್ತೆ ಸಂಸಾರ ಮಾಡಿಕೊಂಡು ಹೋಗುವಂತೆ ಬುದ್ಧಿ ಹೇಳಿ ಒಂದುಗೂಡಿಸಿದ್ದರು. ಆದರೆ, ಹೀಗೆ ಮನೆಯಿಂದ ಓಡಿಹೋಗಿದ್ದವಳನ್ನು ಕ್ಷಮಿಸಿ ಮನೆಗೆ ವಾಪಸ್ ಸೇರಿಸಿಕೊಂಡಿದ್ದೇ ಗಂಡನ ದೊಡ್ಡ ತಪ್ಪಾಗಿ ಹೋಯ್ತು. ಇತ್ತ ಹರಿಣಿ ಮಾತ್ರ ತನ್ನ ಪ್ರಿಯಕರನ ಸಹವಾಸವನ್ನು ಬಿಟ್ಟಿರಲಿಲ್ಲ. ಗಂಡನಿಗೆ ಚಟ್ಟ ಕಟ್ಟಿ ಪ್ರಿಯಕರನೊಂದಿಗೆ ಸುಖವಾಗಿರಬಹುದು ಎಂದು ಯೋಜನೆ ರೂಪಿಸಿದ್ದಳು. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ನೀಡಿದ್ದನು.
ಮಗ ಕೊಲೆ ನೋಡಿದನೆಂದು ಅವನ ಉಸಿರು ನಿಲ್ಲಿಸಿದಳು
ಭಾನುವಾರ ರಾತ್ರಿ 11 ಗಂಟೆಗೆ ಪ್ರಿಯಕರ ವಿನಯ್‌ನನ್ನು ಕರೆಸಿಕೊಂಡಿದ್ದಾಳೆ. ಪ್ರಿಯಕರ ಮನೆಗೆ ಬರುವ ವೇಳೆಗೆ ಸಿಸಿ ಕ್ಯಾಮೆರಾ ಆಫ್ ಮಾಡಿದ್ದಾಳೆ. ರಾತ್ರಿ ಹಾಸಿಗೆಯಲ್ಲಿ ಮಲಗಿದ್ದ ಗಂಡ ಅಭಿನಂದನ್ ತಲೆಗೆ ದಪ್ಪನೆಯ ಸೌಟ್‌ನಿಂದ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಆದರೆ, ಗಂಡನಿಗೆ ಹೊಡೆದು ಕೊಲೆ ಮಾಡದೋದನ್ನ ತನ್ನ 5 ವರ್ಷದ ಮಗ ಯದುವೀರ್ ನೋಡಿದ್ದನು. ಈ ಮಗು ಕೊಲೆ ಮಾಡುವುದನ್ನುನೋಡಿದಗ್ದರಿಂದ ನಾಳೆ ನಮಗೆ ತೊಂದರೆಯಾಗ್ತಾನೆ ಎಂದು ಪ್ಲಾನ್ ಮಾಡಿ ಮಗನನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ನೀಡಿದ್ದಾನೆ.
ಇನ್ನು ಗಂಡನ ತಲೆಗೆ ಹೊಡೆತ ಬಿದ್ದು, ಮನೆಯಲ್ಲಿ ರಕ್ತಸ್ರಾವ ಉಂಟಾಗಿತ್ತು. ಪೊಲೀಸರಿಗೆ ಕೊಲೆಯ ಸುಳಿವು ಸಿಗಬಾರದೆಂದು ಎಲ್ಲ ರಕ್ತವನ್ನೂ ತೊಳೆದು ಕ್ಲೀನ್ ಮಾಡಿದ್ದರು.ಜೊತೆಗೆ, ಅಭಿನಂದನ್ ರಕ್ತದ ಕಲೆ ಬಟ್ಟೆ ಬದಲಾಯಿಸಿ ರಾತ್ರೋ ರಾತ್ರಿ ಒಗೆದುಹಾಕಿದ್ದಳು. ನಂತರ, ಗಂಡನೇ ನಿದ್ದೆಯಲ್ಲಿ ಮಗುವಿನ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಳು. ಕೊಲೆಯ ಪ್ಲಾನ್ ಸಕ್ಸಸ್ ನಂತರ ವಿನಯ್ ಅಲ್ಲಿಂದ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿ ವಿನಯ್ ಬೆನ್ನು ಬಿದ್ದಿದ್ದಾರೆ.

