MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಗಂಡ ಸೆಕ್ಸುಯಲ್ಲಿ ಹೈಪರ್ ಆಕ್ಟಿವ್, ಅವನಿಗೆ ಮಕ್ಕಳಾಗಲ್ಲ: ಪತಿಯ ನೀಚತನ ಎಳೆ ಎಳೆಯಾಗಿ ಬಿಚ್ಚಿಟ್ಟ ಪತ್ನಿ

ಗಂಡ ಸೆಕ್ಸುಯಲ್ಲಿ ಹೈಪರ್ ಆಕ್ಟಿವ್, ಅವನಿಗೆ ಮಕ್ಕಳಾಗಲ್ಲ: ಪತಿಯ ನೀಚತನ ಎಳೆ ಎಳೆಯಾಗಿ ಬಿಚ್ಚಿಟ್ಟ ಪತ್ನಿ

Bengaluru bedroom video case:ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪತಿಯ ವಿರುದ್ಧ ಪತ್ನಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತನ್ನ ಪತಿ ಸೆಕ್ಸುಯಲಿ ಹೈಪರ್ ಆಕ್ಟಿವ್ ಆಗಿದ್ದು, ಹೆಸೋಸ್ಪರ್ಮಿಯಾ ಸಮಸ್ಯೆಯಿಂದ ಮಕ್ಕಳಾಗುವುದಿಲ್ಲ ಎಂದು ವೈದ್ಯಕೀಯ ವರದಿಯ ಸಮೇತ ಹೇಳಿದ್ದಾರೆ. 

2 Min read
Mahmad Rafik
Published : Oct 05 2025, 10:27 AM IST
Share this Photo Gallery
  • FB
  • TW
  • Linkdin
  • Whatsapp
17
ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣ
Image Credit : Asianet News

ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣ

ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಂಡ ಸೈಯದ್ ಇನಾಮುಲ್ ಹಕ್ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದನು. ಪತ್ನಿಯಿಂದಲೇ ನನಗೆ ಕಿರುಕುಳ ಆಗಿದೆ. ಆಕೆ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದನು. ಇದೀಗ ಗಂಡನ ವಿಡಿಯೋ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂತ್ರಸ್ತೆ, ಗಂಡ ಸೆಕ್ಸುಯಲ್ಲಿ ಹೈಪರ್ ಆಕ್ಟಿವ್, ಅವನಿಗೆ ಮಕ್ಕಳಾಗಲ್ಲ. ಗಂಡ ಹೆಸೋಸ್ಪರ್ಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಸಂಬಂಧ ನನ್ನ ಬಳಿ ಮೆಡಿಕಲ್ ರಿಪೋರ್ಟ್ ಇದೆ ಎಂದು ಹೇಳಿದ್ದಾರೆ.

27
ನಮಗೆ ಏನು ಗೊತ್ತಿರಲಿಲ್ಲ
Image Credit : Asianet News

ನಮಗೆ ಏನು ಗೊತ್ತಿರಲಿಲ್ಲ

ಮದುವೆಗೂ ಮುಂಚೆ ಸೈಯದ್ ಇನಾಮುಲ್ ಹಕ್ ಬಗ್ಗೆ ನಮಗೆ ಏನು ಗೊತ್ತಿರಲಿಲ್ಲ. ನಮ್ಮ ತಂದೆ ಮತ್ತು ತಾಯಿ ಹಾರ್ಟ್ ಪೇಷೆಂಟ್‌ಗಳು. ಮದುವೆ ಸಮಯದಲ್ಲಿ ಮಹರ್ ರೂಪದಲ್ಲಿ ಚಿನ್ನಾಭರಣ ನೀಡಿದ್ದು ನಿಜ. ಮಹರ್‌ನಲ್ಲಿ (ಮುಸ್ಲಿಂ ಸಂಪ್ರದಾಯದಲ್ಲಿ ಗಂಡ ಹೆಂಡ್ತಿಗೆ ಕೊಡುವ ಒಡವೆ) ಏನು ಕೊಡಲಾಗಿದೆ ಎಂಬುದಕ್ಕೆ ದಾಖಲೆಗಳಿವೆ. ಗಂಡ ಬೆಡ್‌ರೂಮ್‌ನಲ್ಲಿ ವಿಡಿಯೋ ಮಾಡಿದ್ದು ನಿಜ. ಸೈಯದ್ ಮೊದಲನೇ ಹೆಂಡ್ತಿ ಜೊತೆಯಲ್ಲಿಯೂ ಮಾತನಾಡಿದ್ದೇನೆ. ಮದುವೆ ಬಳಿಕ ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

Related Articles

Related image1
ಮಾಜಿ ಗಂಡ-ಹೆಂಡತಿಯ ಕೆಸರೆರಚಾಟ, ಗಾಯಕನ ಜನ್ಮ ಜಾಲಾಡಿದ ಮಾಜಿ ಪತ್ನಿ; ಕೌಂಟರ್‌ ಈಗ ಶುರು!
Related image2
Now Playing
ಸರ್ಕಾರಿ ಕೆಲಸ, ಕೈತುಂಬಾ ಸಂಬಳ; ಮೊಮ್ಮಕ್ಕಳಾದರೂ ತೀರದ ಕಾಮದಾಹದಿಂದ ಹೆಂಡತಿ ಹೊಡೆತಕ್ಕೆ ಪ್ರಾಣಬಿಟ್ಟ ಗಂಡ!
37
ಸಂತ್ರಸ್ತೆ ಪ್ರಶ್ನೆ
Image Credit : Asianet News

ಸಂತ್ರಸ್ತೆ ಪ್ರಶ್ನೆ

ಗಂಡನ ಗೆಳೆಯ ಸೈಯದ್ ಬುಕಾರಿ ವಸೀಂ ಎಂಬಾತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸೈಯದ್ ಬುಕಾರಿ ವಾಸೀಂ ಹೆಂಡತಿ ಹೀನಾ ಕೌಸರ್ ಗರ್ಭಿಣಿಯಾಗಿದ್ದಾಳೆ ಅಂತ ನನ್ನನ್ನು ಲೈಂಗಿ*ಕವಾಗಿ ಬಳಸಿಕೊಳ್ಳಲಾಗಿದೆ. ಇವರಿಬ್ಬರು ನನಗೆ ಕಿರುಕುಳ ನೀಡಿದ್ದಾರೆ. ನಾನು ಕೆಟ್ಟವಳಾದ್ರೆ ಮೊದಲನೇ ಹೆಂಡ್ತಿಯೂ ಕೆಟ್ಟವಳಾ? ಈ ಮೊದಲಿಗಿದ್ದ 19 ಹುಡುಗಿಯರು ಕೆಟ್ಟವರಾ ಎಂದು ಸಂತ್ರಸ್ತೆ ಪ್ರಶ್ನೆ ಮಾಡಿದ್ದಾರೆ.

47
ಮಹಿಳಾ ಪೀಡಕ
Image Credit : Asianet News

ಮಹಿಳಾ ಪೀಡಕ

ಈ ಹಿಂದೆ ಗಂಡ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೂ ಅಸಭ್ಯವಾಗಿ ವರ್ತನೆ ಮಾಡಿದ್ದರಿಂದಲೇ ಆತನ ಪ್ರಾಜೆಕ್ಟ್ ಚೇಂಜ್ ಮಾಡಲಾಗಿತ್ತು. ಕೆಲಸ ಮಾಡುವ ಸ್ಥಳದಲ್ಲಿಯೂ ಮಹಿಳಾ ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವಾಸವಾಗಿರುವ ಏರಿಯಾದಲ್ಲಿಯೂ ಅನೇಕರೊಂದಿಗೆ ಸಂಬಂಧ ಹೊಂದಿದ್ದಾನೆ. ಇಬ್ಬರು ಮಕ್ಕಳಿರುವ ಮಹಿಳೆ ಜೊತೆಯಲ್ಲಿಯೂ ಗಂಡ ಅಕ್ರಮ ಸಂಬಂಧ ಹೊಂದಿದ್ದನು. ಈ ಸಂಬಂಧ ವಿದ್ಯಾರಣ್ಯಪುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೇಕಿದ್ರೆ ಪರಿಶೀಲಿಸಬಹುದು ಎಂದು ಸಂತ್ರಸ್ತೆ ಹೇಳಿದ್ದಾರೆ.

57
 ಅವನಿಗೆ ಮಕ್ಕಳಾಗಲ್ಲ
Image Credit : Asianet News

ಅವನಿಗೆ ಮಕ್ಕಳಾಗಲ್ಲ

ನಮ್ಮ ಮನೆಗೆಲಸಕ್ಕೆ ಬರುವ ಹುಡುಗಿಗೂ ಲೈಂ*ಗಿಕ ಕಿರುಕುಳ ನೀಡಿದ್ದರಿಂದ ಆಕೆ ನಮ್ಮ ಮನೆಗೂ ಬರೋದನ್ನು ನಿಲ್ಲಿಸಿದಳು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಹುಡುಗಿಯೊಬ್ಬಳನ್ನು ಗರ್ಭಿಣಿ ಮಾಡಿದ್ದನು. ಆಮೇಲೆ ಏನಾಯ್ತು ಅಂತ ನನಗೆ ಗೊತ್ತಿಲ್ಲ. ಸೆಕ್ಸುಯಲ್ಲಿ ಹೈಪರ್ ಆಕ್ಟಿವ್‌ನಿಂದ ಹೆಸೋಸ್ಪರ್ಮಿಯಾ ಆಗಿದೆ. ಈಗ ಅವನಿಗೆ ಮಕ್ಕಳಾಗಲ್ಲ. ಆತ ಹಲವು ಯುವತಿಯರಿಗೆ ಮೋಸ ಮಾಡಿದ್ದಾನೆ. ಈತನಿಂದ ಮೋಸಕ್ಕೊಳಗಾದವರು ಮುಂದೆ ಬರಬೇಕು ಎಂದು ಸಂತ್ರಸ್ತೆ ಕರೆ ನೀಡಿದ್ದಾರೆ.

67
210 ಗ್ರಾಂ ಚಿನ್ನದ ಹಾರ
Image Credit : Asianet News

210 ಗ್ರಾಂ ಚಿನ್ನದ ಹಾರ

ನನ್ನ ಅಕ್ಕನಿಗೆ ಡಿವೋರ್ಸ್ ಆಗಿರೋದು ನಿಜ. ವಯಸ್ಸು 30ರ ನಂತರ ಮದುವೆಯಾಗಿದ್ದರಿಂದ ಎಲ್ಲವನ್ನು ಸಹಿಸಿಕೊಂಡಿದ್ದೆ. ನಾನು ಫೋರ್ಸ್ ಮಾಡಿ ಮದುವೆಯಾಗಿಲ್ಲ. ಜಿಮ್ ಓಪನ್ ಮಾಡಬೇಕೆಂದು ತಾಯಿ ಬಳಿಯಲ್ಲಿದ್ದ 210 ಗ್ರಾಂ ಚಿನ್ನದ ಹಾರವನ್ನು ತೆಗೆದುಕೊಂಡು ಹೋಗಿದ್ದಾನೆ. ಆ ಬಗ್ಗೆ ಕೇಳಿದ್ರೆ ಜಗಳ ಮಾಡುತ್ತಾನೆ.

ಇದನ್ನೂ ಓದಿ: ದಾಂಪತ್ಯ ಕಲಹದ ಭಯಾನಕ ತಿರುವು: ಗಂಡನ ಖಾಸಗಿ ಭಾಗಕ್ಕೆ ಬ್ಲೇಡ್ ಹಾಕಿದ ಹೆಂಡ್ತಿ

77
ಪರೀಕ್ಷೆ ಬರೆಯಲು ಬಿಡಲಿಲ್ಲ
Image Credit : Asianet News

ಪರೀಕ್ಷೆ ಬರೆಯಲು ಬಿಡಲಿಲ್ಲ

ನನ್ನ ತಂದೆ ಮತ್ತು ಅಜ್ಜ ಇಬ್ಬರು ಕೇಂದ್ರ ಸರ್ಕಾರಿ ನೌಕರರು. ನಾನು ಸಹ ಎರಡು ಬಾರಿ UPSC ಬರೆದಿದ್ದೆ. ಆದ್ರೆ 3ನೇ ಬಾರಿ ಪರೀಕ್ಷೆ ಬರೆಯಲು ಬಿಡಲಿಲ್ಲ. ಗಂಡ ಮತ್ತು ಸೈಯದ್ ಬುಕಾರಿ ವಸೀಂ ಇಬ್ಬರ ಮೊಬೈಲ್ ಪರಿಶೀಲಿಸಿದ್ರೆ ಎಲ್ಲಾ ಸತ್ಯ ಹೊರಬರುತ್ತದೆ. ಇಬ್ಬರ ಮೊಬೈಲ್‌ನಲ್ಲಿ ಹಲವು ಯುವತಿಯರ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಇದನ್ನೂ  ಓದಿ: ಬೆಡ್‌ರೂಮ್‌ನಲ್ಲಿ ಹೆಂಡತಿ ವಿಡಿಯೋ ಶೂಟ್ ಮಾಡಿದ ಗಂಡನ ಪ್ರಕರಣಕ್ಕೆ ಟ್ವಿಸ್ಟ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು
ಕ್ರೈಮ್ ನ್ಯೂಸ್
ಗಂಡ
ಪತ್ನಿ
ದಂಪತಿಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved