- Home
- Karnataka Districts
- Bengaluru Urban
- ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ನಿವಾರಣೆಗೆ ಮೆಗಾ ಪ್ಲಾನ್? ಗೂಡ್ಸ್ ವಾಹನ ಬ್ಯಾನ್!
ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಟ್ರಾಫಿಕ್ ನಿವಾರಣೆಗೆ ಮೆಗಾ ಪ್ಲಾನ್? ಗೂಡ್ಸ್ ವಾಹನ ಬ್ಯಾನ್!
ಬೆಂಗಳೂರಿನ ಈ ರಸ್ತೆಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಮೆಗಾ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಪೀಕ್ ಅವರ್‌ಗಳಲ್ಲಿ ಗೂಡ್ಸ್ ವಾಹನಗಳ ಪ್ರವೇಶ ತಡೆದು, ಪಾದಚಾರಿಗಳಿಗೆ ಆದ್ಯತೆ ನೀಡಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಹೊರಬೀಳಲಿದೆ.

ಬೆಂಗಳೂರು ಸಂಚಾರ ವ್ಯವಸ್ಥೆ ಬದಲಾವಣೆಗೆ ಸಿದ್ಧತೆ
ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನ ಅವೆನ್ಯೂ ರಸ್ತೆಯಲ್ಲಿ ಸಂಚಾರ ನಿಯಂತ್ರಣಕ್ಕಾಗಿ ಹೊಸ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಅವೆನ್ಯೂ ರಸ್ತೆಯಲ್ಲಿ ಆಟೋಗಳು ಮತ್ತು ತಳ್ಳುವ ಗಾಡಿಗಳ ಪ್ರವೇಶಕ್ಕೆ ಸಂಚಾರ ಪೊಲೀಸರು ನಿರ್ಬಂಧ ಹೇರಿದ್ದಾರೆ.
ಸ್ಥಳದಲ್ಲೇ ಪೊಲೀಸರ ನಿಗಾ, ಟ್ರಾಫಿಕ್ ನಿಯಂತ್ರಣ
ರಸ್ತೆಯಲ್ಲಿ ಉಂಟಾಗುವ ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಸ್ಥಳದಲ್ಲೇ ನಿಂತು ನಿಗಾವಹಿಸುತ್ತಿದ್ದಾರೆ. ಈ ಭಾಗದಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ಪೊಲೀಸರು ಹೊಸ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗೂಡ್ಸ್ ವಾಹನಗಳ ಸಂಚಾರಕ್ಕೆ ಸಮಯ ನಿಗದಿ
ಪೀಕ್ ಅವರ್‌ಗಳಲ್ಲಿ ಗೂಡ್ಸ್ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿ, ರಾತ್ರಿ ವೇಳೆಯಲ್ಲಿ ಮಾತ್ರ ಸರಕು ಸಾಗಣೆಗೆ ಅವಕಾಶ ನೀಡುವ ಬಗ್ಗೆ ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಈ ಕುರಿತು ಸಂಚಾರ ಪೊಲೀಸರು, ಜಿಬಿಎ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ನಡುವೆ ಸಮಾಲೋಚನೆ ನಡೆದಿದೆ.
ಪಾದಚಾರಿಗಳಿಗೆ ಆದ್ಯತೆ, ಶೀಘ್ರದಲ್ಲಿಯೇ ಅಂತಿಮ ನಿರ್ಧಾರ
ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ನಿಯಮ ರೂಪಿಸಲು ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲು ಚರ್ಚಿಸಲಾಗಿದೆ. ಗೂಡ್ಸ್ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೇ ಅಥವಾ ಸಮಯ ನಿಗದಿಪಡಿಸಬೇಕೇ ಎಂಬುದರ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

