- Home
- Karnataka Districts
- Bengaluru Urban
- Bengaluru: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಅತಿಥಿ ಇಲಿ; ವಿಡಿಯೋ
Bengaluru: ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಅತಿಥಿ ಇಲಿ; ವಿಡಿಯೋ
ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಇಲಿಯೊಂದು ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ವಿದ್ಯುತ್ ಚಾಲಿತ ರೈಲಿನಲ್ಲಿ ಇಲಿ ಕೇಬಲ್ ಕತ್ತರಿಸಿದರೆ ಅಪಾಯ ಎಂಬ ಭಯ ಶುರುವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಚರ್ಚೆಯಾಗುತ್ತಿದೆ.

ಬೆಂಗಳೂರಿನ ನಮ್ಮ ಮೆಟ್ರೋ
ರಾಜಧಾನಿ ಮೆಟ್ರೋದಲ್ಲಿ ಬಂದ ವಿಶೇಷ ಅತಿಥಿಯನ್ನು ಕಂಡು ಪ್ರಯಾಣಿಕರು ಒಂದು ಕ್ಷಣ ಗಲಿಬಿಲಿಗೊಂಡಿದ್ದಾರೆ. ಬೆಂಗಳೂರಿನ ಟ್ರಾಫಿಕ್‌ನನಿಂದ ತಪ್ಪಿಸಿಕೊಳ್ಳಲು ಜನರು ನಮ್ಮ ಮೆಟ್ರೋ ಬಳಕೆ ಮಾಡುತ್ತಾರೆ. ಇದೀಗ ಮೆಟ್ರೋದಲ್ಲಿ ಕಾಣಿಸಿಕೊಂಡ ಅತಿಥಿಯ ವಿಡಿಯೋ ವೈರಲ್ ಆಗುತ್ತಿದೆ.
ಮೆಟ್ರೋ ರೈಲಿನಲ್ಲಿ ಇಲಿ ಪ್ರಯಾಣ
ನಮ್ಮ ಮೆಟ್ರೋ ರೈಲು ಸ್ವಚ್ಛತೆಗೆ ಮತ್ತೊಂದು ಹೆಸರು. ರಾಜಧಾನಿಯ ಯಾವುದೇ ನಿಲ್ದಾಣಕ್ಕೂ ಹೋದರೂ ಅಲ್ಲಿಯ ಸ್ವಚ್ಛತೆ ನಿಮಗೆ ಫ್ರೆಶ್ ಅನುಭವ ನೀಡುತ್ತದೆ. ಹಾಗೆಯೇ ಪ್ರಯಾಣಿಕರು ಸಹ ಬಿಎಂಆರ್‌ಸಿಎಲ್ ಸೂಚಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ. ಇಷ್ಟೆಲ್ಲಾ ಸ್ವಚ್ಛತೆ ಇದ್ರೂ ಮೆಟ್ರೋ ರೈಲಿನಲ್ಲಿ ಇಲಿಯೊಂದು ಕಾಣಿಸಿಕೊಂಡಿದೆ.
ಚರ್ಚೆಗೆ ಗ್ರಾಸವಾದ ವಿಡಿಯೋ ?
ಹೌದು, ವೈರಲ್ ಆಗಿರುವ ವಿಡಿಯೋದಲ್ಲಿ ಇಲಿಯೊಂದು ಆಸನದ ಕೆಳಗಿನಿಂದ ಅತ್ತಿಂದಿತ್ತ ಓಡಾಡಿದೆ. ಇಲಿ ಓಡಾಟದ ದೃಶ್ಯಗಳನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಆತಂಕ ಏಕೆ?
ಮೆಟ್ರೋ ರೈಲುಗಳು ಸಂಪೂರ್ಣವಾಗಿ ವಿದ್ಯುತ್ ಚಾಲಿತವಾಗಿದ್ದು, ಹವಾನಿಯಂತ್ರಿತ ಕೋಚ್‌ಗಳನ್ನು ಒಳಗೊಂಡದೆ. ಇಲಿಯೊಂದು ಯಾವುದಾದ್ರೂ ಕೇಬಲ್ ಕತ್ತರಿಸಿದ್ರೆ ಹೇಗೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಅಧಿಕಾರಿಗಳು ಕೂಡಲೇ ಇಲಿ ಹುಡುಕಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಯಾವ ಮೆಟ್ರೋ?
ವೈರಲ್ ಆಗಿರುವ ವಿಡಿಯೋವನ್ನು mysurumoggu ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಆದ್ರೆ ಇದು ಯಾವ ಭಾಗದ ಮೆಟ್ರೋ ದೃಶ್ಯ ಎಂಬುವುದು ಸ್ಪಷ್ಟವಾಗಿಲ್ಲ. ಕೆಲವರು ಇದು ಬೆಂಗಳೂರಿನ ಮೆಟ್ರೋನಾ ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಕೆಲವರು ಇದು, ನಿರ್ವಹಣೆಯಲ್ಲಿನ ನಿರ್ಲಕ್ಷ್ಯತೆ ಎಂದು ಅಸಮಾಧಾನ ಹೊಂದಿದ್ದಾರೆ.
ವಿಡಿಯೋ ಲಿಂಕ್ ಕೆಳಗೆ ನೀಡಲಾಗಿದೆ

