MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • ಚಲಿಸುವ ಕಾರಲ್ಲಿ ಕೋಬ್ರಾ! ಈ ಕಾರಣಕ್ಕಾಗಿ ಕಾರೊಳಗೆ ಸೇರಿಕೊಳ್ಳುತ್ತೆ ಹಾವು

ಚಲಿಸುವ ಕಾರಲ್ಲಿ ಕೋಬ್ರಾ! ಈ ಕಾರಣಕ್ಕಾಗಿ ಕಾರೊಳಗೆ ಸೇರಿಕೊಳ್ಳುತ್ತೆ ಹಾವು

Snake Inside Car: ಮಳೆಗಾಲದಲ್ಲಿ ಹೆಚ್ಚಾಗಿ ಚಲಿಸುತ್ತಿರುವ ಕಾರು, ಬೈಕ್ ನಲ್ಲಿ ಹಾವುಗಳು ಇರುವುದನ್ನು ನಾವು ಕಾಣಬಹುದು. ಆದರೆ ಯಾಕೆ ಹಾವುಗಳು ಹೆಚ್ಚಾಗಿ ಕಾರು, ಗಾಡಿಯೊಳಗೆ ಸೇರಿಕೊಳ್ಳುತ್ತದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ಇದೆಯೇ? ಇಲ್ಲಿದೆ ಅದಕ್ಕೆ ಕಾರಣ. ನೀವೂ ತಿಳಿಯಿರಿ.

2 Min read
Author : Pavna Das
Published : Jul 07 2026, 01:37 PM IST
Share this Photo Gallery
  • FB
  • TW
  • Linkdin
  • Whatsapp
16
ಮಳೆಗಾಲದಲ್ಲಿ ಹಾವುಗಳ ಕಾಟ
Image Credit : AI

ಮಳೆಗಾಲದಲ್ಲಿ ಹಾವುಗಳ ಕಾಟ

ಈಗಾಗಲೇ ಮಳೆಗಾಲ ಶುರುವಾಗಿದೆ. ಮಳೆ ಬರುತ್ತಿದ್ದಂತೆ ಮನೆಯೊಳಗೆ, ಹೊರಗಡೆ, ಕಾರು, ಬೈಕು ಹೀಗೆ ಎಲ್ಲ ಜಾಗಗಳಲ್ಲೂ ಹಾವುಗಳು ಕಾಣೋದಕ್ಕೆ ಸಿಗುತ್ತವೆ. ಹೆಚ್ಚಿನ ಜನರಿಗೆ ಅಚ್ಚರಿಯ ವಿಷಯ ಏನೆಂದರೆ ಯಾಕೆ ಹೆಚ್ಚಾಗಿ ಹಾವುಗಳು ಕಾರು ಅಥವಾ ಬೈಕಿನ ಒಳಗೆ ಸೇರಿಕೊಳ್ಳುತ್ತವೆ ಎನ್ನುವುದ್ಯ್. ನಾವು ನೋಡಿದ ಹಾಗೆ ಹಾವು ಹೆಚ್ಚಾಗಿ ಇಂಜಿನ್ ಕಂಪಾರ್ಟ್ಮೆಂಟ್ ಅಥವಾ ಬೋನೆಟ್ ನ ಕೆಳಗೆ ಸೇರಿಕೊಂಡಿರುತ್ತವೆ, ಇದಕ್ಕೆ ಕಾರಣ ಏನು ಗೊತ್ತಾ?.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕಾರಿನ ಒಳಗೆ ಹಾವು
Image Credit : X/Gzbtrafficpol

ಕಾರಿನ ಒಳಗೆ ಹಾವು

ಇತ್ತೀಚೆಗೆ ಗಾಜಿಯಾಬಾದ್ ನಲ್ಲಿ ಚಲಿಸುತ್ತಿರುವ ಗಾಡಿಯ ಒಳಗೆ , ಅಂದರೆ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇದ್ದಕ್ಕಿದ್ದಂತೆ ಹಾವು ಕಾಣಿಸಿಕೊಂಡಿದೆ. ಇದನ್ನ ನೋಡಿ ಕಾರಿನಲ್ಲಿ ಇದ್ದವರು ಭಯಭೀತರಾಗಿದ್ದಾರೆ. ಅಲ್ಲಿ ಇದ್ದಿದ್ದು ನಾಗರಹಾವು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಹಾಗೂ ಪೊಲೀಸರ ನೆರವಿನಿಂದ ಹಾವನ್ನೇನೋ ಸುರಕ್ಷಿತವಾಗಿ ಹೊರಕ್ಕೆ ಬಿಟ್ಟಿದ್ದಾರೆ. ಆದರೆ ಇದನ್ನ ನೋಡಿ ಜನರಲ್ಲಿ ಭಯ ಮೂಡಿದೆ.

Related Articles

Related image1
Snake Free Countries: ಈ ದೇಶಗಳಲ್ಲಿ ಒಂದೂ ಹಾವಿಲ್ಲ; ಇದು ಪ್ರಕೃತಿಯ ಪವಾಡವೋ ಅಥವಾ ವಿಜ್ಞಾನವೋ?
Related image2
Snake Droppings: ಪಕ್ಷಿ ಹಿಕ್ಕೆ ಎಂದು ಮೋಸ ಹೋಗ್ಬೇಡಿ! ಆ ರೀತಿ ಇದ್ರೆ ಪಕ್ಕಾ ಹಾವಿನ ಮಲ! ಮುಟ್ಟಿದ್ರೂ ಡೇಂಜರ್‌
36
 ಹಾವುಗಳು ಕಾರಿನ ಒಳಗೆ ಯಾಕೆ ಸೇರಿಕೊಳ್ಳುತ್ತವೆ?
Image Credit : Canva

ಹಾವುಗಳು ಕಾರಿನ ಒಳಗೆ ಯಾಕೆ ಸೇರಿಕೊಳ್ಳುತ್ತವೆ?

ಪದೇ ಪದೇ ಕಾರು ಅಥವಾ ಬೈಕಿನ ಇಂಜಿನ್ ಒಳಗೆ ಹಾವುಗಳನ್ನು ನೋಡಿದ ಮೇಲೆ ಜನರಲ್ಲಿ ಕಾರಿನ ಒಳಗೆ ಹಾವುಗಳು ಯಾಕೆ ಸೇರಿಕೊಳ್ಳುತ್ತವೆ ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೆ ಕಾರಣವೂ ಇದೆ. ಇದಕ್ಕೆ ಕಾರಣ ಏನು? ಇಂಥ ಸಂದರ್ಭದಲ್ಲಿ ಹೇಗೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು? ಹಾವುಗಳು ಬರದಂತೆ ಹೇಗೆ ನೋಡಿಕೊಳ್ಳಬಹುದು? ಎನ್ನುವುದನ್ನು ನೋಡೋಣ.

46
 ಹಾವು ಬರೋದಕ್ಕೆ ಇದೇ ಕಾರಣ
Image Credit : Chat GPT

ಹಾವು ಬರೋದಕ್ಕೆ ಇದೇ ಕಾರಣ

ಈಗಂತೂ ಮಳೆಗಾಲ ಮಳೆಗಾಲದಲ್ಲಿ ಹಾವಿನ ಬಿಲದೊಳಗೆ ನೀರು ನುಗ್ಗುವುದರಿಂದ ಅವುಗಳಿಗೆ ಅಲ್ಲಿ ಉಳಿಯಲು ಸಾಧ್ಯವಾಗದೆ ಸುರಕ್ಷಿತ ಹಾಗೂ ಒಣಗಿದ ಜಾಗಕ್ಕಾಗಿ ಹುಡುಕಾಟ ನಡೆಸುತ್ತವೆ . ಕಾರಿನ ಅಥವಾ ಬೈಕಿನ ಇಂಜಿನ್ ಬಂದ್ ಆದ ಬಳಿಕ ಸ್ವಲ್ಪ ಸಮಯದವರೆಗೆ ಬೆಚ್ಚಗೆ ಇರುತ್ತದೆ. ಇದು ಹಾವುಗಳನ್ನು ಅವುಗಳತ್ತ ಆಕರ್ಷಿಸುತ್ತದೆ. ಹಾಗಾಗಿ ಅಲ್ಲಿ ಬಂದು ಸೇರಿಕೊಳ್ಳುತ್ತವೆ. ಇದಲ್ಲದೆ ಕಾರಿನ ಬಳಿ ಬರುವಂತಹ ಇಲಿ ಅಥವಾ ಇನ್ನಿತರ ಸಣ್ಣ ಜೀವಿಗಳನ್ನು ತಿನ್ನೋದಕ್ಕಾಗಿ ಹಾವು ಆ ಜಾಗವನ್ನು ಸೇರಿಕೊಳ್ಳುತ್ತದೆ.

56
ಹಾವು ಎಲ್ಲೆಲ್ಲಿ ಸೇರಿಕೊಳ್ಳುತ್ತವೆ?
Image Credit : AI

ಹಾವು ಎಲ್ಲೆಲ್ಲಿ ಸೇರಿಕೊಳ್ಳುತ್ತವೆ?

ಕಾರಿನ ಇಂಜಿನ್, ಬೋನೆಟ್ ನ ಕೆಳಗೆ, ಅಲ್ಲದೆ ಹಲವಾರು ಜಾಗಗಳಲ್ಲಿ ಹಾವು ಬಂದು ಸೇರಿಕೊಳ್ಳುತ್ತದೆ. ಒಂದು ವೇಳೆ ಕಾರು ತುಂಬಾ ಸಮಯದವರೆಗೆ ಒಂದೇ ಜಾಗದಲ್ಲಿದ್ದರೆ ಅಂದರೆ ಗದ್ದೆ, ತೋಟ, ಪಾರ್ಕಿಂಗ್, ಖಾಲಿ ಜಾಗ, ಇತರ ಹಸಿರು ತುಂಬಿರುವ ಜಾಗದಲ್ಲಿ ತುಂಬಾ ಸಮಯದ ವರೆಗೆ ಇದ್ದಾಗ ಹಾವು ಕಾರಿನ ಒಳಗೆ ಸೇರಿಕೊಳ್ಳುತ್ತವೆ.

66
 ಈ ರೀತಿಯಾಗಿ ಎಚ್ಚರವಹಿಸಿ
Image Credit : Asianet News

ಈ ರೀತಿಯಾಗಿ ಎಚ್ಚರವಹಿಸಿ

ಕಾರನ್ನು ಯಾವಾಗಲೂ ಸುರಕ್ಷಿತವಾದ ಹಾಗೂ ಖಾಲಿಯಾಗಿರುವ ಜಾಗದಲ್ಲಿ ಪಾರ್ಕ್ ಮಾಡಿ. ಸಾಧ್ಯವಾದರೆ ಮುಚ್ಚಿರುವ ಗ್ಯಾರೇಜ್ ಬಳಕೆ ಮಾಡಿ. ಕಾರಿನ ಅಕ್ಕಪಕ್ಕ ಕಸ, ಒಣಗಿದ ಹುಲ್ಲು, ಅಥವಾ ಬೇಡವಾದ ವಸ್ತುಗಳನ್ನು ರಾಶಿ ಹಾಕಬೇಡಿ. ತುಂಬಾ ಸಮಯದವರೆಗೆ ಒಂದೇ ಕಡೆ ನಿಂತಿರುವ ಕಾರನ್ನು ಮಧ್ಯದಲ್ಲಿ ಒಮ್ಮೊಮ್ಮೆ ಸ್ಟಾರ್ಟ್ ಮಾಡಿ, ಸ್ವಲ್ಪ ಹೊತ್ತು ಚಲಾಯಿಸಿ. ಅಲ್ಲದೆ ಇಂಜಿನ್ ಕಾಂಪಾಟ್ಮೆಂಟನ್ನು ಪರೀಕ್ಷೆ ಮಾಡುತ್ತಿರಿ. ಇದಲ್ಲದೆ ಕಾರು ತುಂಬಾ ಸಮಯ ಒಂದೇ ಕಡೆ ನಿಂತಿದ್ದರೆ ನೀವು ಡ್ರೈವಿಂಗ್ ಮಾಡುವ ಮೊದಲು ಬೋನಟ್ ತೆಗೆದು ಒಮ್ಮೆ ಸರಿಯಾಗಿ ನೋಡಿ. ಜೊತೆಗೆ ಇಂಜಿನ್ನ ಬಳಿ ಕೂಡ ಪರೀಕ್ಷೆ ಮಾಡಿ. ಒಂದು ವೇಳೆ ಕಾರಿನೊಳಗೆ ಯಾವುದೇ ಶಬ್ದ ಕೇಳಿದರೆ ತಕ್ಷಣ ಅಲರ್ಟ್ ಆಗಿ. ಹಾವಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಾವು
ಹಾವಿನ ವಿಷ
ಜೀವನಶೈಲಿ
ಆಟೋಮೊಬೈಲ್

Latest Videos
Recommended Stories
Recommended image1
ಚಾರ್ಜಿಂಗ್ ಪೋರ್ಟ್‌ನಿಂದ ಟೈರ್‌ವರೆಗೆ... ಮಳೆಗಾಲದಲ್ಲಿ EV ಕಾಪಾಡಿಕೊಳ್ಳುವ ಸಂಪೂರ್ಣ ಗೈಡ್
Recommended image2
Kia Syros EV ನಿರೀಕ್ಷೆ ಅಂತ್ಯ!; ಆಗಸ್ಟ್‌ನಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿರುವ ಕಿಯಾದ ಬಜೆಟ್ ಎಲೆಕ್ಟ್ರಿಕ್ SUV
Recommended image3
ಹೀರೋ-ಹೋಂಡಾಗೆ TVS ಶಾಕ್!; ಜಾಗತಿಕ ಮಾರಾಟದಲ್ಲಿ ದೇಶದ ನಂ.1 ದ್ವಿಚಕ್ರ ಕಂಪನಿಯಾಗಿ ಹೊಸ ಇತಿಹಾಸ!
Related Stories
Recommended image1
Snake Free Countries: ಈ ದೇಶಗಳಲ್ಲಿ ಒಂದೂ ಹಾವಿಲ್ಲ; ಇದು ಪ್ರಕೃತಿಯ ಪವಾಡವೋ ಅಥವಾ ವಿಜ್ಞಾನವೋ?
Recommended image2
Snake Droppings: ಪಕ್ಷಿ ಹಿಕ್ಕೆ ಎಂದು ಮೋಸ ಹೋಗ್ಬೇಡಿ! ಆ ರೀತಿ ಇದ್ರೆ ಪಕ್ಕಾ ಹಾವಿನ ಮಲ! ಮುಟ್ಟಿದ್ರೂ ಡೇಂಜರ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved