ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 10 ಕಾರು!
ಭಾರತದಲ್ಲಿ ಕಾರು ಖರೀದಿಸುವಾಗ ಕೇಳುವ ಮೊದಲ ಪ್ರಶ್ನೆ, ಎಷ್ಟು ಕೊಡುತ್ತೆ? ಹೆಚ್ಚು ಮೈಲೇಜ್ ನೀಡಬಲ್ಲ ಕಾರುಗಳು ಅಧಿಕ ಮಾರಾಟವಾಗುತ್ತವೆ. ಇತ್ತೀಚೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೂ ಮೈಲೇಜ್ ವಿಚಾರದಲ್ಲಿ ರಾಜಿ ಇಲ್ಲ. ಭಾರತದ ಹಲವು ಕಾರುಗಳು ಕಡಿಮೆ ಬೆಲೆ ಹಾಗೂ ಗರಿಷ್ಠ ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಗರಿಷ್ಠ ಮೈಲೇಜ್ ನೀಡುವ ಟಾಪ್ 10 ಕಾರು ವಿವರ ಇಲ್ಲಿದೆ.
ಮಾರುತಿ ಸುಜುಕಿ ಡಿಸೈರ್; ಡೀಸೆಲ್ ವೇರಿಯೆಂಟ್ ಆಟೋಮ್ಯಾಟಿಕ್, ಮಾನ್ಯುಯೆಲ್ ಕಾರಿನ ಮೈಲೇಜ್ 28.4 kmpl
ಮಾರುತಿ ಸುಜುಕಿ ಸ್ವಿಫ್ಟ್: ಡೀಸೆಲ್ ವೇರಿಯೆಂಟ್ ಆಟೋಮ್ಯಾಟಿಕ್, ಮಾನ್ಯುಯೆಲ್ ಕಾರಿನ ಮೈಲೇಜ್ 28.4 kmpl
ಮಾರುತಿ ಸುಜುಕಿ ಸಿಯಾಝ್; ಪೆಟ್ರೋಲ್ ವೇರಿಯೆಂಟ್ ಆಟೋಮ್ಯಾಟಿಕ್ ಕಾ ರಿನ ಮೈಲೇಜ್ 28.09 kmpl
ಮಾರುತಿ ಸುಜುಕಿ ಬಲೆನೋ: ಡೀಸೆಲ್ ವೇರಿಯೆಂಟ್ ಮಾನ್ಯುಯೆಲ್ ಕಾರಿನ ಮೈಲೇಜ್ 27.39 kmpl
ಹೊಂಜಾ ಅಮೇಜ್: ಡೀಸೆಲ್ ವೇರಿಯೆಂಟ್ ಕಾರಿನ ಮೈಲೇಜ್ 27.4 kmpl
ಹೊಂಡಾ ಜಾಝ್: ಡೀಸೆಲ್ ವೇರಿಯೆಂಟ್ ಕಾರಿನ ಮೈಲೇಜ್ 27.3 kmpl
ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್: ಡೀಸೆಲ್ ವೇರಿಯೆಂಟ್ ಮಾನ್ಯುಯೆಲ್, ಆಟೋಮ್ಯಾಟಿಕ್ ಕಾರಿನ ಮೈಲೇಜ್ 26.2 kmpl
ಫೋರ್ಡ್ ಆಸ್ಪೈರ್: ಡೀಸೆಲ್ ವೇರಿಯೆಂಟ್ ಮಾನ್ಯುಯೆಲ್ ಕಾರಿನ ಮೈಲೇಜ್ 26.1 kmpl
ಹೊಂಡಾ ಸಿಟಿ: ನೂತನ ಡಿಸೆಲ್ ವೇರಿಯೆಂಟ್ ಮಾನ್ಯುಯೆಲ್ ಕಾರಿನ ಮೈಲೇಜ್ 25.6 kmpl
ಫೋರ್ಡ್ ಫಿಗೋ: ಡೀಸೆಲ್ ವೇರಿಯೆಂಟ್ ಮಾನ್ಯುಯೆಲ್ ಕಾರಿನ ಮೈಲೇಜ್ 25.5 kmpl