ಅಟಲ್ ಸುರಂಗ: ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ಅಪಘಾತ
ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಟಲ್ ಸುರಂಗ ಮಾರ್ಗವನ್ನು ಇತ್ತೀಚೆಗೆ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದರು. ಮನಾಲಿ ಹಾಗೂ ಲೇಹ್ ನಡುವಿನ ಈ ಸುರಂಗದಿಂದ 46 ಕಿ.ಮೀ ಪ್ರಯಾಣ ಅಂತರ ಇಳಿಕೆಯಾಗಿದೆ. ಉದ್ಘಾಟನೆಗೊಂಡ ಮೂರೇ ದಿನಕ್ಕೆ 3 ರಸ್ತೆ ಅಪಘಾತಗಳು ಈ ಸುರಂಗ ಮಾರ್ಗದಲ್ಲಿ ಸಂಭವಿಸಿದೆ. ಇದಕ್ಕೆ ಕಾರಣವೇನು? ಇಲ್ಲಿದೆ.
ವಿಶ್ವದ ಅತೀ ಉದ್ದನೆಯ ಸುರಂಗ ಮಾರ್ಗ ಅಟಲ್ ಟನಲ್‌ನ್ನು ಪ್ರದಾನಿ ಮೋದಿ ಅಕ್ಟೋಬರ್ 3ರಂದು ಉದ್ಘಾಟನೆ ಮಾಡಿದ್ದಾರೆ. ಈ ಸುರಂಗ ಮಾರ್ಗ 9.02 ಕಿ.ಮೀ ಉದ್ದವಿದೆ.
ಉದ್ಘಾಟನೆ ಮಾಡಿದ 3 ದಿನದಲ್ಲಿ ಸುರಂಗ ಮಾರ್ಗದೊಳಗೆ 3 ಅಪಘಾತಗಳು ಸಂಭವಿಸಿದೆ. ಅಪಘಾತದಲ್ಲಿ ಗಂಭೀರ ಗಾಯಗಳಾಗಿದೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.
ಅಟಲ್ ಸುರಂಗ ಮಾರ್ಗದೊಳಗೆ ಅಳವಡಿಸಿರುವ ಸಿಸಿಟಿವಿಯಲ್ಲಿ ಅಪಘಾತಕ್ಕೆ ಕಾರಣಗಳು ಬಹಿರಂಗವಾಗಿದೆ. ದ್ವಿಚಕ್ರ ವಾಹನ ಸವಾರರು ಹಲವು ನಿಯಮ ಉಲ್ಲಂಘಿಸಿದ್ದೇ ಈ ಅಪಘಾತಕ್ಕೆ ಕಾರಣವಾಗಿದೆ.
ಸುರಂಗ ಮಾರ್ಗದೊಳಗೆ ಗರಿಷ್ಠ ವೇಗ 80 ಕಿ.ಮೀ. ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಬೈಕ್ ಸವಾರರು 120ಕೀ.ಮೀಗೂ ಹೆಚ್ಚುವೇಗದಲ್ಲಿ ಸಂಚರಿಸಿದ್ದಾರೆ
ಸುರಂಗ ಮಾರ್ಗದೊಳಗೆ ವಾಹನಗಳ ಓವರ್ ಟೇಕ್ ಮಾಡುವಂತಿಲ್ಲ. ಇದು ನಿಯಮ ಉಲ್ಲಂಘನೆಯಾಗಿದೆ. ಆದರೆ ಬೈಕ್ ಸವಾರರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಸುರಂಗ ಮಾರ್ಗದೊಳಗೆ ವಾಹನ ನಿಲ್ಲಿಸಿ ಸೆಲ್ಪಿ ತೆಗೆಯುವಂತಿಲ್ಲ. ಇಷ್ಟೇ ಅಲ್ಲ ರ್ಯಾಶ್ ಡ್ರೈವಿಂಗ್ ಮಾಡುವಂತಿಲ್ಲ. ಆದರೆ ಬೈಕ್ ಸವಾರರು ಸೆಲ್ಫಿ ಫೋಟೋಗಾಗಿ ಬೈಕ್ ನಿಲ್ಲಿಸಿದ್ದಾರೆ.
ಬೈಕ್ ಸವಾರರು ತಮ್ಮ ತಮ್ಮೊಳಗೆ ರೇಸಿಂಗ್ ಮಾಡುತ್ತಿದ್ದು, ಇದು ಕೂಡ ನಿಯಮ ಬಾಹಿರವಾಗಿದೆ. ರೇಸಿಂಗ್ ಅಪಘಾತಕ್ಕೆ ಪ್ರಮುಖ ಕಾರಣವಾಗಲಿದೆ.
ಅಟಲ್ ಸುರಂಗದೊಳಗೆ ನಿಯ ಉಲ್ಲಂಘಿಸುವವರಿಗೆ ಸಿಸಿಟಿವಿ ಆಧಾರದಲ್ಲಿ ದಂಡ ವಿಧಿಸಲಾಗುವುದು ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಇ ಚಲನ ಮೂಲಕ ದುಬಾರಿ ದಂಡ ಹಾಕಲಾಗುತ್ತದೆ ಎಂದಿದ್ದಾರೆ.
2002ರಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮನಾಲಿ-ಲೇಹ್ ಸುರಂಗ ಮಾರ್ಗಕ್ಕೆ ಶಂಕು ಸ್ಥಾಪನೆ ಮಾಡಿದ್ದರು. 2013ರ ವೇಳೆಗ ಕೇವಲ 1 ಕಿ.ಮೀ ಕಾಮಗಾರಿ ನಡೆದಿತ್ತು.
ಪ್ರಧಾನಿ ಮೋದಿ ಸರ್ಕಾರ ಸುರಂಗ ಮಾರ್ಗ ಕೆಲಸದ ವೇಗ ಹೆಚ್ಚಿಸಿದ್ದರು. 3,300 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದೆ. ಅಟಲ್ ಹೆಸರನ್ನೇ ಈ ಸುರಂಗ ಮಾರ್ಗಕ್ಕೆ ಇಡಲಾಗಿದೆ