BS4 ವಾಹನ ಮಾರಾಟ ದಿನಾಂಕ ವಿಸ್ತರಣೆ ಇಲ್ಲ, ಸುಪ್ರೀಂ ಶಾಕ್ ಬೆನ್ನಲ್ಲೇ ಭರ್ಜರಿ ಡಿಸ್ಕೌಂಟ್!
ಭಾರತದಲ್ಲಿ BS4 ಎಮಿಶನ್ ಎಂಜಿನ್ ಮಾರಾಟಕ್ಕೆ ನೀಡಿರುವ ಗಡುವು ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶ ಭಾರತೀಯ ಆಟೋಮೊಬೈಲ್ ಕಂಪನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮಾರಾಟ ಕುಸಿತ, ಕೊರೋನಾ ವೈರಸ‌್‌ನಿಂದ ಹಿನ್ನಡೆ ಅನುಭವಿಸಿರುವ ಆಟೋಮೊಬೈಲ್ ಕಂಪನಿಗಳು ಇದೀಗ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಲು ಮುಂದಾಗಿದೆ. BS4 ಎಮಿಶನ್ ಎಂಜಿನ್, ಗಡುವು ವಿಸ್ತರಣೆ ಹಾಗೂ ಹೊಸ ನಿಯಮವೇನು? ಇಲ್ಲಿದೆ.
ಮಾಲಿನ್ಯ ತಗ್ಗಿಸಲು ಭಾರತದಲ್ಲಿನ ಎಲ್ಲಾ ವಾಹನ ತಯಾರಿಕಾ ಕಂಪನಿಗೆ ಸುಪ್ರೀಂ ಕೋರ್ಟ್ ಆದೇಶ
ಎಪ್ರಿಲ್ 1, 2020 ರಿಂದ ಮಾರಾಟವಾಗುವ ಎಲ್ಲಾ ನೂತನ ವಾಹನ BS6 ಎಮಿಶನ್ ಎಂಜಿನ್ ಹೊಂದಿರಬೇಕು
ಸದ್ಯ ಭಾರತದಲ್ಲಿ BS4 ಎಮಿಶನ್ ಎಂಜಿನ್ ನಿಯಮ ಜಾರಿಯಲ್ಲಿದೆ
ಈಗಾಗಲೇ ಹಲವು ಕಂಪನಿಗಳು ತಮ್ಮ ವಾಹನಗಳನ್ನು BS6 ಎಂಜಿನ್‌ಗೆ ಪರಿವರ್ತನೆ ಮಾಡಿದೆ
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ ಒಕ್ಕೂಟ(FADA) ಸುಪ್ರೀಂ ಕೋರ್ಟ್‌ಗೆ ಗಡುವು ವಿಸ್ತರಣೆಗೆ ಅರ್ಜಿ ಸಲ್ಲಿಸಿತ್ತು
ಮಾರ್ಚ್ 31ರವರೆಗೆ ಇರುವ BS4 ಎಮಿಶನ್ ವಾಹನ ಗಡುವನ್ನು ವಿಸ್ತರಿಸಲು ಮನವಿ ಮಾಡಿದ FADA
ವಾಹನ ಮಾರಾಟ ಕುಸಿತದಿಂದ BS4 ವಾಹನಗಳು ಉಳಿದುಕೊಂಡಿದೆ, ಹೀಗಾಗಿ ವಿಸ್ತರಣೆ ಅಗತ್ಯ ಎಂದಿತ್ತು
ಜಸ್ಟೀಸ್ ಅರುಣ್ ಮಿಶ್ರಾ ಹಾಗೂ ದೀಪಕ್ ಗುಪ್ತಾ ಪೀಠ ದಿನಾಂಕ ವಿಸ್ತರಿಸಲು ನಿರಾಕರಣೆ
2017, ಎಪ್ರಿಲ್ 1 ರಿಂದ BS4 ಎಮಿನಶ್ ಎಂಜಿನ್ ನಿಯಮ ಜಾರಿಯಾಗಿದೆ
BS5 ಬದಲು 2020ರಲ್ಲಿ ಭಾರತ ನೇರವಾಗಿ BS6 ಎಂಜಿನ್ ನಿಯಮ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು