ತೀವ್ರ ಪೈಪೋಟಿ ನಡುವೆ ಮೈಕೊಡವಿ ನಿಂತ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್!
ಚೆನ್ನೈ(ಮಾ.02): ಹೊಸ ವರ್ಷ ಭಾರತೀಯ ಆಟೋಮೇಕರ್‌ಗಳಿಗೆ ಸಂತಸ ತರಲಿಲ್ಲ. ಕುಸಿದ ಮಾರುಕಟ್ಟೆಯಿಂದ ಚೇತರಿಕೆ ಕಾಣುವಷ್ಟರಲ್ಲೇ ಕೊರೊನಾ ವೈರಸ್ ವಾಹನ ಮಾರುಕಟ್ಟೆಗೆ ತೀವ್ರ ಹೊಡೆತ ನೀಡಿದೆ. ಕಳದೆ ಫೆಬ್ರವರಿಯಲ್ಲಿ ಭಾರತದ ಬೈಕ್ ಕಂಪನಿಗಳು ಮಾರಾಟ ಕುಸಿತ ಕಂಡಿದೆ. ಆದರೆ ತೀವ್ರ ಪೈಪೋಟಿ ನೀಡುವೆಯೂ ರಾಯಲ್ ಎನ್‌ಫೀಲ್ಡ್ ಮೈಕೊಡವಿ ನಿಂತಿದೆ.
ಫೆಬ್ರವರಿಯಲ್ಲಿ ಭಾರತದ ಬಹುತೇಕ ಎಲ್ಲಾ ದ್ವಿಚಕ್ರ ವಾಹನಗಳ ಮಾರಾಟ ಕುಸಿತ
ಮಾರಾಟ ಕುಸಿತ, ಪೈಪೋಟಿ ನಡುವೆ ರಾಯಲ್ ಎನ್‌ಫೀಲ್ಡ್ ಮಾರಾಟದಲ್ಲಿ ಶೇಕಡಾ 1 ರಷ್ಟು ಏರಿಕೆ
2020ರ ಫೆಬ್ರವರಿಯಲ್ಲಿ ರಾಯಲ್ ಎನ್‌ಫೀಲ್ಡ್ 61,188 ಬೈಕ್ ಮಾರಾಟವಾಗಿದೆ
2020ರ ಜನವರಿಯಲ್ಲಿ 60,066 ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟವಾಗಿತ್ತು
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಬೈಕ್‌ಗೆ ಭಾರಿ ಬೇಡಿಕೆ
ಜಾವಾ ಸೇರಿದಂತೆ ಹಲವು ಬೈಕ್‌ಗಳ ಪೈಪೋಟಿ ನಡುವೆ ಬೇಡಿಕೆ ಉಳಿಸಿಕೊಂಡ ಕ್ಲಾಸಿಕ್
ಫೆಬ್ರವರಿಯಲ್ಲಿ ಕೊರೊನಾ ವೈರಸ್‌ನಿಂದ ಉತ್ಪಾದನೆ ಹಾಗೂ ಮಾರಾಟ ಕುಸಿತ
ವಿದೇಶಗಳಿಗೆ ರಫ್ತು ಮಾಡಿದ ಪ್ರಮಾಣದಲ್ಲಿ ರಾಯಲ್ ಎನ್‌ಫೀಲ್ಡ್ ಇಳಿಕೆ
ಫೆಬ್ರವರಿಯಲ್ಲಿ ವಿದೇಶಗಳಿಗೆ 2,348 ರಾಯಲ್ ಎನ್‌ಫೀಲ್ಡ್ ಬೈಕ್ ರಫ್ತಾಗಿದೆ
ಥಾಯ್ಲೆಂಡ್, ಬ್ರೆಜಿಲ್, ಅರ್ಜಂಟೈನಾ, ಫ್ರಾನ್ಸ್ ಹಾಗೂ ಯುಕೆಗಳಲ್ಲಿ ಹೊಸ ಶಾಕೆ ತೆರೆದ ರಾಯಲ್ ಎನ್‌ಫೀಲ್ಡ್