MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Mahindra: SUV ಮಾರುಕಟ್ಟೆಯಲ್ಲಿ ಮಹೀಂದ್ರಾ ಸುನಾಮಿ! ಥಾರ್ ನ್ಯೂ ವರ್ಷನ್ ಸೇರಿ 8 ಹೊಸ ಕಾರುಗಳ ಎಂಟ್ರಿ

Mahindra: SUV ಮಾರುಕಟ್ಟೆಯಲ್ಲಿ ಮಹೀಂದ್ರಾ ಸುನಾಮಿ! ಥಾರ್ ನ್ಯೂ ವರ್ಷನ್ ಸೇರಿ 8 ಹೊಸ ಕಾರುಗಳ ಎಂಟ್ರಿ

Mahindra New Cars 2026 List Photo: ಮಹೀಂದ್ರಾ ಪ್ರಿಯರಿಗೆ ಭರ್ಜರಿ ಸುದ್ದಿ ಇಲ್ಲಿದೆ! ಮುಂಬರುವ ದಿನಗಳಲ್ಲಿ ಮಹೀಂದ್ರಾ ಆಟೋಮೋಟಿವ್ ಸಂಸ್ಥೆಯು ಸದ್ದಿಲ್ಲದೆ ಬರೋಬ್ಬರಿ 15ಕ್ಕೂ ಹೆಚ್ಚು ಹೊಸ ಎಸ್‌ಯುವಿಗಳನ್ನು (SUV) ಸಿದ್ಧಪಡಿಸುತ್ತಿದೆ. 

2 Min read
Author : Padmashree Bhat
Published : Jun 22 2026, 12:44 PM IST
Share this Photo Gallery
  • FB
  • TW
  • Linkdin
  • Whatsapp
16
ಏನೇನು ವಿಶೇಷತೆಗಳಿವೆ?
Image Credit : Google

ಏನೇನು ವಿಶೇಷತೆಗಳಿವೆ?

ಇದರಲ್ಲಿ ಇಂಟರ್ನಲ್ ಕಂಬಶ್ಚನ್ ಇಂಜಿನ್ (ICE), ಸಂಪೂರ್ಣ ಎಲೆಕ್ಟ್ರಿಕ್ (EV) ಮತ್ತು ಹೈಬ್ರಿಡ್ ತಂತ್ರಜ್ಞಾನದ ಕಾರುಗಳು ಇವೆಯಂತೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ತನ್ನ ಹಳೆಯ ಮಾಡೆಲ್‌ಗಳಿಗೆ ಮಹೀಂದ್ರಾ ಹೊಸ ಲುಕ್ ಮತ್ತು ಹೈಟೆಕ್ ಫೀಚರ್‌ಗಳನ್ನು ನೀಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ (Scorpio-N Facelift)
Image Credit : instagram

ಮಹೀಂದ್ರಾ ಸ್ಕಾರ್ಪಿಯೋ-ಎನ್ ಫೇಸ್‌ಲಿಫ್ಟ್ (Scorpio-N Facelift)

ಭಾರತದಲ್ಲಿ ಭಾರೀ ಕ್ರೇಜ್ ಹೊಂದಿರುವ ಈ 7-ಸೀಟರ್ ಎಸ್‌ಯುವಿ ಈಗ ಮತ್ತಷ್ಟು ಬಲಿಷ್ಠವಾಗಿ ಬರಲಿದೆ. ಹೊಸ ಮುಂಭಾಗದ ಗ್ರಿಲ್, ಎಲ್‌ಇಡಿ ಹೆಡ್‌ಲ್ಯಾಂಪ್, ಹೊಸ ಅಲಾಯ್ ವೀಲ್‌ಗಳು ಇದರ ಹೊರಭಾಗದ ಉತ್ತಮ ಆಕರ್ಷಣೆ ಆಗಿರಲಿದೆ. ಒಳಾಂಗಣದಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್, ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಲೆವೆಲ್ 2 ADAS ಸುರಕ್ಷತೆ ಇರಲಿದೆ. 2.0L ಪೆಟ್ರೋಲ್ ಮತ್ತು 2.2L ಡೀಸೆಲ್ ಇಂಜಿನ್ ಹೊಂದಿರುವ ಈ ಕಾರು ಆಗಸ್ಟ್ ಆಸುಪಾಸಿನಲ್ಲಿ ಬಿಡುಗಡೆಯಾಗಲಿದೆ.

Related Articles

Related image1
ಮುಂಬೈ ಮನೆ ಸಾಲ ಇರೋವಾಗಲೇ ಹೊಸ ಕಾರ್‌ ತಗೊಂಡ Bigg Boss ರಕ್ಷಿತಾ ಶೆಟ್ಟಿ; ಎಷ್ಟು ರೂಪಾಯಿ?
Related image2
ಮಾಜಿ ಶಾಸಕ ಸುರೇಶ್ ಗೌಡರ ಕಾರ್‌ ಅಪಘಾತ; ಮದುವೆಗೆ ತೆರಳುತ್ತಿದ್ದಾಗ ಪಲ್ಟಿಯಾದ ಕಾರ್
36
ಸ್ಕಾರ್ಪಿಯೋ ಕ್ಲಾಸಿಕ್ ಫೇಸ್‌ಲಿಫ್ಟ್ (Scorpio Classic Facelift)
Image Credit : instagram

ಸ್ಕಾರ್ಪಿಯೋ ಕ್ಲಾಸಿಕ್ ಫೇಸ್‌ಲಿಫ್ಟ್ (Scorpio Classic Facelift)

ಸ್ಕಾರ್ಪಿಯೋ ಕ್ಲಾಸಿಕ್ ಅನ್ನು ನವೀಕರಿಸಲಾಗುತ್ತಿದೆ. ಹೊಸ ಗ್ರಿಲ್, ಬಂಪರ್, ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರಲಿದ್ದು, 2.2-ಲೀಟರ್ mHawk ಡೀಸೆಲ್ ಇಂಜಿನ್, ಮ್ಯಾನುವಲ್ ಗೇರ್‌ಬಾಕ್ ಇರಲಿದೆ.

46
ಥಾರ್ 3-ಡೋರ್ ಫೇಸ್‌ಲಿಫ್ಟ್ (Thar 3-Door Facelift)
Image Credit : instagram

ಥಾರ್ 3-ಡೋರ್ ಫೇಸ್‌ಲಿಫ್ಟ್ (Thar 3-Door Facelift)

ಆಫ್-ರೋಡ್ ಪ್ರೇಮಿಗಳ ನೆಚ್ಚಿನ ಥಾರ್ 3-ಡೋರ್ ಆವೃತ್ತಿ ಈಗ ಥಾರ್ ರಾಕ್ಸ್ (Thar ROXX) ಮಾದರಿಯಿಂದ ಪ್ರೇರಿತವಾದ ಸಿ-ಆಕಾರದ (C-shaped) ಎಲ್‌ಇಡಿ ಹೆಡ್‌ಲೈಟ್‌ಗಳು, LED ಡಿಆರ್‌ಎಲ್‌ಗಳು, ಹೊಸ ಬಂಪರ್ ಪಡೆಯಲಿದೆ. ತಾಂತ್ರಿಕವಾಗಿಯೂ ಇದು ಅಪ್‌ಗ್ರೇಡ್ ಆಗಲಿದೆ.

'ಥಾರ್ ರಾಕ್ಸ್'

5-ಡೋರ್ ಥಾರ್ ರಾಕ್ಸ್ ಕಾರ್‌ ಕಡಿಮೆ ಬೆಲೆಗೆ ಸಿಗಲು ಮಹೀಂದ್ರಾ ಮಾಸ್ಟರ್ ಪ್ಲಾನ್ ಮಾಡಿದೆ. ಇದರಲ್ಲಿ 3-ಡೋರ್ ಥಾರ್‌ನಲ್ಲಿರುವ ಸಣ್ಣದಾದ 1.5-ಲೀಟರ್ ಡೀಸೆಲ್ ಇಂಜಿನ್ ಅಳವಡಿಸಲಾಗುತ್ತಿದೆ. ಇದರಿಂದ ಕಾರಿನ ಆರಂಭಿಕ ಬೆಲೆ ಗಣನೀಯವಾಗಿ ಕಡಿಮೆಯಾಗಲಿದ್ದು, ಬಜೆಟ್‌ನಲ್ಲಿ ಕೊಳ್ಳುವವರಿಗೆ ಇದು ಬೆಸ್ಟ್ ಆಪ್ಷನ್.

56
ಮಹೀಂದ್ರಾ ವಿಷನ್ ಎಸ್ (Vision S)
Image Credit : instagram

ಮಹೀಂದ್ರಾ ವಿಷನ್ ಎಸ್ (Vision S)

ಇದು ಸ್ಕಾರ್ಪಿಯೋ-ಎನ್‌ಗಿಂತ ಕೆಳಗಿನ ಶ್ರೇಣಿಯಲ್ಲಿರಲಿದ್ದು, ಫೋರ್ಡ್ ಬ್ರಾಂಕೋ, ಲ್ಯಾಂಡ್ ರೋವರ್ ಡಿಫೆಂಡರ್ ಕಾರುಗಳಂತೆ ಕಠಿಣವಾದ, ಬಾಕ್ಸಿ (ಬಾಕ್ಸ್ ಆಕಾರದ) ವಿನ್ಯಾಸ ಇರಲಿದೆ. ಪೆಟ್ರೋಲ್, ಡೀಸೆಲ್, ಹೈಬ್ರಿಡ್, ಎಲೆಕ್ಟ್ರಿಕ್ ಆಯ್ಕೆಗಳಲ್ಲಿ ಬರಲಿರುವ ಇದು ಟಾಟಾ ಸಿಯೆರಾ ಹಾಗೂ ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲಿದೆ.

ಮಹೀಂದ್ರಾ ವಿಷನ್ ಎಕ್ಸ್ (Vision X)

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ 3ಎಕ್ಸ್‌ಒ (XUV 3XO) ಬದಲಾಗಿ ಈ ಅತ್ಯಂತ ಸುಧಾರಿತ, ಫ್ಯೂಚರಿಸ್ಟಿಕ್ ವಿನ್ಯಾಸದ ಕಾರು ರೆಡಿಯಾಗುತ್ತಿದೆ.

ಮಹೀಂದ್ರಾ ವಿಷನ್ ಟಿ (Vision T)

ಪ್ರಬಲವಾದ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿರುವ ಲೈಫ್‌ಸ್ಟೈಲ್ ಎಸ್‌ಯುವಿ ಇದಾಗಿದ್ದು, 2027-28ರ ವೇಳೆಗೆ ಸಿಇ, ಎಲೆಕ್ಟ್ರಿಕ್ ಎರಡೂ ಸಿಗಲಿದೆ.

ಮಹೀಂದ್ರಾ ವಿಷನ್ ಎಸ್‌ಎಕ್ಸ್‌ಟಿ (Vision SXT)

ಲೈಫ್‌ಸ್ಟೈಲ್ ಪಿಕಪ್ ಟ್ರಕ್ ಮಾರುಕಟ್ಟೆಯಲ್ಲಿ ಟೊಯೋಟಾ ಹಿಲಕ್ಸ್, ಇಸುಜು ವಿ-ಕ್ರಾಸ್ ಕಾರುಗಳಿಗೆ ಟಕ್ಕರ್ ಕೊಡಲು ಇದು ಸಿದ್ಧವಾಗುತ್ತಿದೆ. ಆಧುನಿಕ ವಿನ್ಯಾಸ, ಆಲ್-ವೀಲ್ ಡ್ರೈವ್ (AWD) ಸಿಸ್ಟಮ್ ಹಾಗೂ ಮಲ್ಟಿಪಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಇದು 2027-28 ರ ವೇಳೆಗೆ ಬರಬಹುದು.

66
ಎಲೆಕ್ಟ್ರಿಕ್‌ ಕಾರ್‌ಗಳು
Image Credit : instagram

ಎಲೆಕ್ಟ್ರಿಕ್‌ ಕಾರ್‌ಗಳು

ಮಹೀಂದ್ರಾ ಬಿಇ 07 (BE 07)

ಕಂಪನಿಯ 'ಬಾರ್ನ್ ಎಲೆಕ್ಟ್ರಿಕ್' ಸರಣಿಯ ಈ ಕಾರಿನ ರಸ್ತೆ ಪರೀಕ್ಷೆ ಈಗಾಗಲೇ ನಡೆಯುತ್ತಿದೆ. INGLO ಆರ್ಕಿಟೆಕ್ಚರ್ ಆಧಾರಿತ ಈ ಕಾರಿನಲ್ಲಿ 59 kWh ನಿಂದ 79 kWh ವರೆಗಿನ ಬ್ಯಾಟರಿ ಪ್ಯಾಕ್ ಇರಲಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಬರೋಬ್ಬರಿ 500 ಕಿಮೀ ಮೈಲೇಜ್ (ರೇಂಜ್) ನೀಡುವ ನಿರೀಕ್ಷೆಯಿದೆ. ಇದು ಹ್ಯುಂಡೈ ಕ್ರೆಟಾ ಇವಿ ಮತ್ತು ಟಾಟಾ ಹ್ಯಾರಿಯರ್ ಇವಿಗೆ ಸ್ಪರ್ಧೆ ಒಡ್ಡಲಿದೆ.

ಮಹೀಂದ್ರಾ ಥಾರ್ ಇ (Thar.e)

ಆಫ್-ರೋಡ್ ಪ್ರಿಯರು ಕಾತರದಿಂದ ಕಾಯುತ್ತಿರುವ ಸಂಪೂರ್ಣ ಎಲೆಕ್ಟ್ರಿಕ್ ಥಾರ್ ಇದಾಗಿದೆ. INGLO P1 ಪ್ಲಾಟ್‌ಫಾರ್ಮ್ ಆಧಾರಿತ ಈ 5-ಡೋರ್ ಎಲೆಕ್ಟ್ರಿಕ್ ಎಸ್‌ಯುವಿ 2028ರ ವೇಳೆಗೆ ಭಾರತೀಯ ರಸ್ತೆಗಿಳಿಯುವ ನಿರೀಕ್ಷೆಯಿದೆ.

ಬೊಲೆರೊ (Bolero)ವನ್ನು ಮಾತ್ರ ಮಹೀಂದ್ರಾ ಕೈಬಿಡುತ್ತಿಲ್ಲ. ಮುಂದಿನ ಪೀಳಿಗೆಯ (Next-Gen) ಬೊಲೆರೊ, ನವೀಕರಿಸಿದ ಬೊಲೆರೊ ನಿಯೋ (Bolero Neo) ಕಾರುಗಳು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಬರಲಿವೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮಹೀಂದ್ರಾ ಥಾರ್
ಕಾರುಗಳು
ಆಟೋಮೊಬೈಲ್
ಸುದ್ದಿ

Latest Videos
Recommended Stories
Recommended image1
Aprilia SR 175: ಇಂಡಿಯನ್‌ ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ SR 175 ಲಾಂಚ್; ಕಡಿಮೆ ಬೆಲೆಗೆ ಸ್ಕೂಟಿ!
Recommended image2
Honda new Cars: ಹೋಂಡಾದಿಂದ ಮಿಡ್ಲ್‌ಕ್ಲಾಸ್ ಜನರಿಗೆ ಗುಡ್ ನ್ಯೂಸ್! ಶೀಘ್ರದಲ್ಲೇ 3 ಹೊಸ ಕಾರುಗಳು ಎಂಟ್ರಿ
Recommended image3
Bike Headlights: ಹಗಲು ಹೊತ್ತಿನಲ್ಲೂ ಬೈಕ್ ಲೈಟ್ ಆನ್ ಆಗಿರುತ್ತೆ ಯಾಕೆ? ಇದರ ಹಿಂದಿನ ಅಸಲಿ ಕಾರಣವೇನು ಗೊತ್ತಾ?
Related Stories
Recommended image1
ಮುಂಬೈ ಮನೆ ಸಾಲ ಇರೋವಾಗಲೇ ಹೊಸ ಕಾರ್‌ ತಗೊಂಡ Bigg Boss ರಕ್ಷಿತಾ ಶೆಟ್ಟಿ; ಎಷ್ಟು ರೂಪಾಯಿ?
Recommended image2
ಮಾಜಿ ಶಾಸಕ ಸುರೇಶ್ ಗೌಡರ ಕಾರ್‌ ಅಪಘಾತ; ಮದುವೆಗೆ ತೆರಳುತ್ತಿದ್ದಾಗ ಪಲ್ಟಿಯಾದ ಕಾರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved