ಜೇಬಿನಿಂದ ಮೆಲ್ಲನೆ ನೀಲಮಣಿ ತೆಗೆದು ಧರಿಸಿದ Salman Khan: ಇದಕ್ಕಿದೆ ಮಕರ-ಕುಂಭದ ರೋಚಕ ನಂಟು
ನಟ ಸಲ್ಮಾನ್ ಖಾನ್ ವೇದಿಕೆಯೊಂದರಲ್ಲಿ ನೀಲಮಣಿ ಧರಿಸುವ ವಿಡಿಯೋ ವೈರಲ್ ಆಗಿದೆ. ಜ್ಯೋತಿಷ್ಯದ ಪ್ರಕಾರ, ಶನಿ ಗ್ರಹದೊಂದಿಗೆ ಸಂಬಂಧ ಹೊಂದಿರುವ ಈ ಹರಳನ್ನು, ಮಕರ ಮತ್ತು ಕುಂಭ ರಾಶಿಯವರಾದ ಸಲ್ಲು, ಸಾಡೇಸಾಥಿಯ ಪ್ರಭಾವವನ್ನು ಕಡಿಮೆ ಮಾಡಲು ಧರಿಸುತ್ತಾರೆ ಎಂದು ನಂಬಲಾಗಿದೆ.

ಜ್ಯೋತಿಷ ಶಾಸ್ತ್ರದ ಮಹತ್ವ
ಜ್ಯೋತಿಷ, ಸಂಖ್ಯಾಶಾಸ್ತ್ರ, ವಾಸ್ತು ನಂಬಲ್ಲ ನಂಬಲ್ಲ ಎಂದು ಹೇಳುವ ಹಲವರು ಅದ್ಯಾವುದೋ ಒಂದು ಹಂತದಲ್ಲಿ ಧರ್ಮಭೇದವನ್ನೂ ಮರೆತು ಇದನ್ನು ನಂಬುವವರು ಇದ್ದಾರೆ. ಇವುಗಳ ಹೆಸರಿನಲ್ಲಿ ನಕಲಿ ಜ್ಯೋತಿಷಿಗಳು ಹುಟ್ಟಿಕೊಂಡಿರುವುದು ದುರಂತವಾದರೂ, ಭಾರತೀಯ ಸನಾತನ ಧರ್ಮದ ಈ ಶಾಸ್ತ್ರಗಳಿಗೂ, ವಿಜ್ಞಾನಕ್ಕೂ ಭಾರಿ ನಂಟಿದೆ. ಅದರಲ್ಲಿಯೂ ಹೆಚ್ಚಾಗಿ ಸಿನಿ ತಾರೆಯರು ಮತ್ತು ರಾಜಕಾರಣಿಗಳು ಇದನ್ನು ನಂಬುತ್ತಾರೆ. ಇದನ್ನೆಲ್ಲಾ ನಂಬಲ್ಲ ಎಂದು ಮತ ಓಲೈಕೆಗಾಗಿ ಭಾಷಣ ಮಾಡುವ ರಾಜಕಾರಣಿಗಳೂ ಗುಟ್ಟಾಗಿ ಪೂಜೆ, ಪುನಸ್ಕಾರ ಮಾಡುವುದು, ಜ್ಯೋತಿಷ, ಸಂಖ್ಯಾಶಾಸ್ತ್ರ, ವಾಸ್ತು ನಂಬುವುದು ಎಲ್ಲವೂ ನಡೆದೇ ಇರುವುದು ಗುಟ್ಟಾಗೇನೂ ಉಳಿದಿಲ್ಲ.
ಸಮೃದ್ಧಿ ತರುವ ನೀಲ
ಇದೀಗ ಅಂಥದ್ದೇ ಒಂದು ಕುತೂಹಲ ಎನ್ನುವಂಥ ವಿಡಿಯೋ ಒಂದು ನಟ ಸಲ್ಮಾನ್ ಖಾನ್ ಅವರದ್ದು ವೈರಲ್ ಆಗಿದೆ. ವೇದಿಕೆಯೊಂದರಲ್ಲಿ ನಟ, ಗುಟ್ಟಾಗಿ ಜೇಬಿನಿಂದ ನೀಲಮಣಿಯನ್ನು ತೆಗೆದು ಧರಿಸುತ್ತಿರುವ ವಿಡಿಯೋ ಸಕತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಇದಕ್ಕಿದೆ ಇದೇ ಜ್ಯೋತಿಷದ ನಂಟು. ಸಾಮಾನ್ಯವಾಗಿ ನೀಲಂ ಎಂದು ಕರೆಯಲ್ಪಡುವ ಈ ಮಣಿಯು ಶನಿಯೊಂದಿಗೆ ಆಳವಾಗಿ ಸಂಬಂಧ ಹೊಂದಿದೆ. ಸಂಸ್ಕೃತದಲ್ಲಿ "ಅಪರಾಜಿತ ನೀಲಂ" ಅಥವಾ "ನೀಲಮಣಿ" ಎಂದು ಕರೆಯಲ್ಪಡುವ ಈ ಕಲ್ಲು ಈ ಕರ್ಮ ಗ್ರಹದ ಸಾರವನ್ನು ಸಾಕಾರಗೊಳಿಸುತ್ತದೆ ಎಂದು ನಂಬಲಾಗಿದೆ. ನೀಲಮಣಿಗಳು ಸಮೃದ್ಧಿಯನ್ನು ತರುತ್ತವೆ ಅಥವಾ ಹಠಾತ್ ಅವನತಿಗೆ ಕಾರಣವಾಗುತ್ತವೆ ಎಂದು ಭಾವಿಸಲಾಗಿದೆ, ಎಲ್ಲವೂ ಧರಿಸುವವರ ಕರ್ಮ ಮತ್ತು ಶನಿಯ ಪ್ರಭಾವದೊಂದಿಗೆ ಹೊಂದಾಣಿಕೆಯನ್ನು ಅವಲಂಬಿಸಿರುತ್ತದೆ.
ಮಕರ- ಕುಂಭದ ಮಿಲನ
ಇನ್ನು ಸಲ್ಮಾನ್ ಖಾನ್ ವಿಷ್ಯಕ್ಕೆ ಬರುವುದಾದರೆ, ಸಲ್ಮಾನ್ ಖಾನ್ ಅವರದ್ದು ಮಕರ ರಾಶಿ ಹಾಗೂ ಲಗ್ನ ಕುಂಭ ರಾಶಿ. ಎರಡಕ್ಕೂ ಅಧಿಪತಿ ಶನಿ. 2025ರಲ್ಲಿ ಶನಿಯು ಮಕರ ರಾಶಿಯನ್ನು ಬಿಟ್ಟು ಹೋಗುತ್ತಿದ್ದಂತೆಯೇ, ಕುಂಭ ರಾಶಿಯ ಮೂರನೆಯ ಹಂತಕ್ಕೆ ಬಂದಿದೆ. ಇದರ ಅರ್ಥ ಸಾಡೇಸಾಥಿಯ ಪ್ರಭಾವ ಮಕರ ಮತ್ತು ಕುಂಭ ರಾಶಿಯಲ್ಲಿ ಶನಿ ಒಟ್ಟೊಟ್ಟಿಗೇ ಬಂದಿತ್ತು. ಇದರ ಪ್ರಭಾವವನ್ನು ಕಡಿಮೆ ಮಾಡುವುದಕ್ಕಾಗಿ ಸಲ್ಲುಭಾಯಿ ನೀಲಮಣಿಯನ್ನು ಧರಿಸುತ್ತಾರೆ ಎನ್ನಲಾಗಿದೆ.
ವೇದಿಕ ಜ್ಯೋತಿಷದಲ್ಲಿ ಏನಿದೆ?
ವೈದಿಕ ಜ್ಯೋತಿಷ್ಯದಲ್ಲಿ, ಶನಿಯು ಸಾಮಾನ್ಯ ಗ್ರಹವಲ್ಲ. ಇದು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಶಿಸ್ತು, ನ್ಯಾಯ ಮತ್ತು ವಿಳಂಬವನ್ನು ನಿಯಂತ್ರಿಸುತ್ತದೆ. ಇದರ ಪ್ರಸಿದ್ಧ ಸಾಡೇ-ಸಾಥಿ - ಏಳೂವರೆ ವರ್ಷಗಳ ಹಂತ - ಅನೇಕರಿಗೆ ಭಾವನಾತ್ಮಕವಾಗಿ ಮತ್ತು ಭೌತಿಕವಾಗಿ ಪ್ರಕ್ಷುಬ್ಧವಾಗಿರುತ್ತದೆ. ಶನಿಯ ಕಠಿಣ ನೋಟವನ್ನು ಶಾಂತಗೊಳಿಸಲು ಮತ್ತು ಜೀವನದ ಪಥವನ್ನು ಮರುಹೊಂದಿಸಲು ನೀಲಿ ನೀಲಮಣಿಯನ್ನು ಹೆಚ್ಚಾಗಿ ಧರಿಸಲಾಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಶನಿ ಶಾಂತಿ
ಕುತೂಹಲಕಾರಿಯಾಗಿ, ಶನಿ ದೃಷ್ಟಿ ಎಂದು ಕರೆಯಲ್ಪಡುವ ಶನಿಯ ನೋಟವು ಜನ್ಮ ಕುಂಡಲಿಯಲ್ಲಿನ ನಿರ್ದಿಷ್ಟ ಮನೆಗಳ ಮೇಲೆ, ವಿಶೇಷವಾಗಿ ಸಂವಹನ, ಪಾಲುದಾರಿಕೆ ಮತ್ತು ವೃತ್ತಿಜೀವನವನ್ನು ನಿಯಂತ್ರಿಸುವ 3 ನೇ, 7 ನೇ ಮತ್ತು 10 ನೇ ಮನೆಗಳ ಮೇಲೆ ಪರಿಣಾಮ ಬೀರುತ್ತದೆ. ಸಲ್ಮಾನ್ ಅವರಂತಹ ನಟನಿಗೆ ಶನಿಯನ್ನು ಶಾಂತಗೊಳಿಸುವುದು ಅತಿ ಮುಖ್ಯವಾಗುತ್ತದೆ.
ನೀಲಮಣಿಯ ಬಗ್ಗೆ ಎಚ್ಚರ
ಅಷ್ಟೇ ಅಲ್ಲದೇ ಸಲ್ಮಾನ್ ಖಾನ್ ಸದಾ ತಮ್ಮ ಕೈಯಲ್ಲಿ ದೊಡ್ಡ ಜೈನ್ ಧರಿಸುವುದು ನೋಡಬಹುದು. ಅದರಲ್ಲಿ ಕೂಡ ನೀಲಮಣಿಯೇ ಇರುವುದು. ಕೆಲವರು ಇದು ಗಿಫ್ಟ್ ಆಗಿ ಬಂದಿರುವುದು ಅಂತಲೂ ಹಾಗೆ ಸ್ಟೈಲ್‌ಗಾಗಿ ಧರಿಸುತ್ತಾರೆ ಎಂದುಕೊಂಡಿದ್ದಾರೆ, ಆದರೆ ನೀಲಿ ಬಣ್ಣದ ಸ್ಟೋನ್ ಕೆಟ್ಟ ದೃಷ್ಟಿಯ ವಿರುದ್ಧ ಹಾಗೆ ಯಶಸ್ಸಿಗೆ ಕಾರಣವಾಗುವ ಸ್ಟೋನ್ ಆಗಿದೆ. (ಹಾಗೆಯೇ ಒಂದು ಮಾತು. ನೀಲಮಣಿ ತುಂಬಾ ಸ್ಟ್ರಾಂಗ್. ಇದನ್ನು ಸೂಕ್ತ ತಜ್ಞರ ಮಾರ್ಗದರ್ಶನವಿಲ್ಲದೇ ಧರಿಸುವಂತಿಲ್ಲ. ಅದರ ಬಗ್ಗೆ ಕೆಳಗಿನ ಲಿಂಕ್ನಲ್ಲಿ ಮಾಹಿತಿ ಇದೆ ನೋಡಿ)

