Rakhi 2026: 2026ರ ರಕ್ಷಾ ಬಂಧನ ಯಾವಾಗ? ಈ ಬಾರಿ ರಾಖಿ ಹಬ್ಬದ ಮೇಲೆ ಭದ್ರಾ ಕಾಲದ ಪ್ರಭಾವ?
ಅಣ್ಣ-ತಂಗಿಯರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಆಚರಣೆಯಾಗಿದೆ. 2026ರಲ್ಲಿ ರಕ್ಷಾ ಬಂಧನ ಯಾವ ದಿನಾಂಕದಂದು ಬರಲಿದೆ. ರಾಖಿ ಕಟ್ಟುವ ಸರಿಯಾದ ಮುಹೂರ್ತ ಯಾವುದು? ಭದ್ರಾ ಕಾಲದ ಅಡ್ಡಿ ಇರಲಿದೆಯೇ?

Raksha Bandhan 2026 Date and Bhadra Timings
ಅಣ್ಣ-ತಂಗಿಯರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಆಚರಣೆಯಾಗಿದೆ. ರಕ್ಷಾ ಬಂಧನ ದಿನದಂದು ದೇಶಾದ್ಯಂತ ಹಿಂದೂಗಳು ಸಡಗರದಿಂದ ಆಚರಿಸಲಾಗುತ್ತದೆ. 2026ರಲ್ಲಿ ರಕ್ಷಾ ಬಂಧನ ಯಾವ ದಿನಾಂಕದಂದು ಬರಲಿದೆ. ರಾಖಿ ಕಟ್ಟುವ ಸರಿಯಾದ ಮುಹೂರ್ತ ಯಾವುದು? ಈ ಬಾರಿ ರಕ್ಷಾ ಬಂಧನದಂದು ಭದ್ರಾ ಕಾಲದ ಅಡ್ಡಿ ಇರಲಿದೆಯೇ ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ.
Raksha bandhan: ರಾಖಿ ಹಬ್ಬದ ಮಹತ್ವ
ತಣ್ಣ-ತಂಗಿಯರ ನಡುವಿನ ಪ್ರೀತಿ ಮತ್ತು ವಿಶ್ವಾಸದ ಸಂಕೇತವಾಗಿರುವ ರಕ್ಷಾ ಬಂಧನ ಹಬ್ಬಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಈ ಹಬ್ಬ ಆಚರಿಸಲಾಗುತ್ತದೆ. ಅಂದು ಅಕ್ಕ-ತಂಗಿಯರು ಸಹೋದರನ ಮುಂಗೈಗೆ ರಾಖಿ ಕಟ್ಟಿ, ಅವರ ಒಳತಿಗಾಗಿ ಪ್ರಾರ್ಥಿಸಿದರೆ, ಸಹೋದರರು ಕೂಡ ತಮ್ಮ ಅಕ್ಕ-ತಂಗಿಯವರ ರಕ್ಷಣೆಯ ಭರವಸೆ ನೀಡುತ್ತಾರೆ. ಪ್ರತಿ ವರ್ಷದಂತೆ 2026ರ ರಕ್ಷಾ ಬಂಧನದ ದಿನಾಂಕ ಮತ್ತು ಶುಭ ಮುಹೂರ್ತದ ಬಗ್ಗೆ ಈಗಲೇ ಚರ್ಚೆಗಳು ಶುರುವಾಗಿವೆ. ಅದರಲ್ಲೂ ರಾಖಿ ಕಟ್ಟುವಾಗ ಭದ್ರಾ ಕಾಲದ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ 2026ರ ರಾಖಿ ಹಬ್ಬದ ಮೇಲೆ ಭದ್ರಾ ಕಾಲದ ಪ್ರಭಾವ ಇರಲಿದೆಯೇ ಎಂಬ ಪ್ರಶ್ನೆ ಎದ್ದಿದೆ.
Raksha bandhan 2026: ಯಾರು ಈ ಭದ್ರ ಕಾಲ?
ಪೌರಾಣಿಕ ನಂಬಿಕೆಯ ಪ್ರಕಾರ, ಭದ್ರಳು ಕನ್ಯೆಯಾಗಿದ್ದು, ಸೂರ್ಯದೇವ ಮತ್ತು ಛಾಯ ದೇವಿಯ ಮಗಳಾಗಿದ್ದಾಳೆ, ಶನಿದೇವರ ಸಹೋದರಿಯೂ ಆಗಿದ್ದಾಳೆ ಎಂದು ಹಿಂದೂಗಳು ನಂಬುತ್ತಾರೆ. ಹೀಗಾಗಿ ಶನಿದೇವರಂತೆ ಭದ್ರಳು ಕೂಡ ಅತ್ಯಂತ ಕೋಪಿಷ್ಟ. ಯಾವುದೇ ಕೆಲಸ ಆರಂಭಿಸುವಾಗಲೂ ಕೋಪ ತೋರಿಸುತ್ತಿದ್ದಳು, ಮುಖ್ಯವಾಗಿ ಈ ಭದ್ರಳು ರಾಕ್ಷಸರ ಸಂಹಾರಕ್ಕಾಗಿ ಜನ್ಮತಾಳಿದಳೆಂದು ಹೇಳಲಾಗುತ್ತದೆ. ಆದರೆ ಭದ್ರಳು ಇದಕ್ಕೆ ವಿರುದ್ಧವಾಗಿ ರಾಕ್ಷಸರ ಬದಲಿಗೆ ದೇವತೆಗಳಿಗೆ ಶುಭ ಕಾರ್ಯದಲ್ಲಿ ತೊಂದರೆಯನ್ನುಂಟು ಮಾಡಲು ಪ್ರಾರಂಭಿಸಿದಳಂತೆ
ಏನಿದು ಭದ್ರಾ ಕಾಲದ ಆತಂಕ?
ಹಿಂದೂ ಪಂಚಾಂಗದ ಪ್ರಕಾರ, ಭದ್ರಾ ಕಾಲವನ್ನು ಯಾವುದೇ ಶುಭ ಕಾರ್ಯಗಳಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಭದ್ರಾ ಕಾಲದ ಸಮಯದಲ್ಲಿ ದೀಪಾವಳಿ, ಯುಗಾದಿ ರಕ್ಷಾ ಬಂದನ ಸೇರಿದಂತೆ ಯಾವುದೇ ಹಬ್ಬ, ಶುಭಕಾರ್ಯ ನಿಷಿದ್ಧವಾಗಿದೆ. ಈ ಸಮಯದಲ್ಲಿ ರಾಖಿ ಕಟ್ಟಬಾರದು ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೀಗಾಗಿಯೇ, ಪ್ರತಿ ವರ್ಷ ರಕ್ಷಾ ಬಂಧನದ ದಿನ ಭದ್ರಾ ಕಾಲ ಯಾವಾಗ ಆರಂಭವಾಗಿ, ಯಾವಾಗ ಮುಗಿಯುತ್ತದೆ ಎಂಬುದನ್ನು ನೋಡಿಕೊಂಡೇ ರಾಖಿ ಕಟ್ಟುವ ಸಮಯ ನಿಗದಿ ಮಾಡಲಾಗುತ್ತದೆ. ಭದ್ರಾ ಕಾಲ ಮುಗಿದ ನಂತರವೇ ರಾಖಿ ಕಟ್ಟಲು ಶುಭ ಮುಹೂರ್ತ ಆರಂಭವಾಗುತ್ತದೆ. ಒಂದು ವೇಳೆ ದಿನವಿಡೀ ಭದ್ರಾ ಕಾಲವಿದ್ದರೆ, ಪ್ರದೋಷ ಕಾಲದಲ್ಲಿ (ಸೂರ್ಯಾಸ್ತದ ನಂತರದ ಸಮಯ) ರಾಖಿ ಕಟ್ಟಲು ಅವಕಾಶವಿರುತ್ತದೆ. ಈ ಕಾರಣಕ್ಕಾಗಿಯೇ 2026ರ ರಕ್ಷಾ ಬಂಧನದ ದಿನ ಭದ್ರಾ ಇದೆಯೇ, ಇಲ್ಲವೇ ಎಂಬುದು ಪ್ರಮುಖವಾಗುತ್ತದೆ.
Raksha bandhan Timing: 2026ರ ದಿನಾಂಕ ಮತ್ತು ಮುಹೂರ್ತ
ಸದ್ಯಕ್ಕೆ 2026ರ ರಕ್ಷಾ ಬಂಧನ ಹಬ್ಬದ ನಿಖರವಾದ ದಿನಾಂಕ ಮತ್ತು ಶುಭ ಮುಹೂರ್ತದ ಬಗ್ಗೆ ಪಂಚಾಂಗಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹಬ್ಬ ಸಮೀಪಿಸುತ್ತಿದ್ದಂತೆ ಜ್ಯೋತಿಷಿಗಳು ಮತ್ತು ಪಂಚಾಂಗ ವಿದ್ವಾಂಸರು ಈ ಬಗ್ಗೆ ಖಚಿತ ವಿವರಗಳನ್ನು ನೀಡಲಿದ್ದಾರೆ. ಅಲ್ಲಿಯವರೆಗೂ, ಈ ಹಬ್ಬದ ಮಹತ್ವ ಮತ್ತು ಆಚರಣೆಯ ಹಿಂದಿನ ಭಾವನಾತ್ಮಕ ಮೌಲ್ಯವನ್ನು ಸ್ಮರಿಸಿಕೊಳ್ಳುವುದು ಮುಖ್ಯ. ಅಣ್ಣ-ತಂಗಿಯರ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಈ ಹಬ್ಬ ಕೇವಲ ಒಂದು ದಾರಕ್ಕೆ ಸೀಮಿತವಾಗಿಲ್ಲ. ಇದು ಪ್ರೀತಿ, ರಕ್ಷಣೆ ಮತ್ತು ಪರಸ್ಪರ ಕಾಳಜಿಯ ಪ್ರತೀಕವಾಗಿದೆ. ಹೀಗಾಗಿ, ಶುಭ ಮುಹೂರ್ತದ ಜೊತೆಗೆ ಶುದ್ಧ ಮನಸ್ಸಿನಿಂದ ಆಚರಿಸುವುದೂ ಅಷ್ಟೇ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ.

