ಗುರುವಿನ ಹಿಮ್ಮುಖ ಚಲನೆ: ಈ ರಾಶಿಯವರ ಜೀವನದಲ್ಲಿ ಬರೀ ಕಷ್ಟ, ನೆಮ್ಮದಿ ಹಾಳು
ಗುರುಗ್ರಹದ ಚಲನೆಯು 12 ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ದೇವಗುರು ಬೃಹಸ್ಪತಿ ಇಂದು ಸಂಜೆ 4.58ಕ್ಕೆ ಮೇಷ ರಾಶಿಯಲ್ಲಿ ಹಿಮ್ಮೆಟ್ಟಲಿದ್ದಾನೆ. ಗುರುಗ್ರಹದ ಹಿಮ್ಮುಖ ಚಲನೆಯಿಂದಾಗಿ, ಕೆಲವು ರಾಶಿಯವರು ಅನೀರಿಕ್ಷಿತ ಸಮಸ್ಯೆ ಎದುರಿಸಬೇಕಾಗಬಹುದು.
ಮೇಷ ರಾಶಿಯವರು ಈ ಅವಧಿಯಲ್ಲಿ ತಾಳ್ಮೆಯಿಂದಿರಬೇಕು. ಗುರುಗ್ರಹದ ಹಿಮ್ಮುಖ ಚಲನೆಯು ನಿಮ್ಮನ್ನು ಗೊಂದಲಕ್ಕೆ ತಳ್ಳ ಬಹುದು. ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಸ್ಯೆಗಳು ಬರಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಇರಲಿ ಗಮನ. ಹಾಗೇ ಹಣಕಾಸಿನ ವಿಷಯಗಳಲ್ಲಿ ಎರಿಳಿತಗಳನ್ನು ಕಾಣಬಹುದು. .
ಗುರುಗ್ರಹದ ಹಿಮ್ಮುಖ ಚಲನೆಯಿಂದಾಗಿ ಈ ರಾಶಿಯವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಹಿಳೆಯರು ಹೆಚ್ಚು ಜಾಗೃತಿಯಿಂದರಬೇಕು . ಈ ಸಮಯದಲ್ಲಿ ಕಚೇರಿಯಲ್ಲಿ ಕೆಲಸದಲ್ಲಿ ಕೆಲವು ಅಡೆ ತಡೆಗಳು ಬರಬಹುದು., ಸಹೋದ್ಯೋಗಿಗಳೊಂದೊಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಅದಲ್ಲದೇ ಕುಟುಂಬದಲ್ಲಿ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.
ಕರ್ಕ ರಾಶಿಯವರಿಗೆ ಗುರುಗ್ರಹದ ಹಿಮ್ಮುಖ ಚಲನೆಯು ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಕೆಲಸವನ್ನು ಬದಲಾಯಿಸುವ ಯೋಚನೆ ಇದ್ದಲ್ಲಿ ಸದ್ಯಕ್ಕೆ ಮುಂದೂಡಿ. ಹೊಸ ಸವಾಲುಗಳು ನಿಮಗೆ ಕಾದಿರಬಹುದು. ಹಾಗೇ ತಂದೆಯೊಂದಿಗಿನ ಸಂಬಂಧದಲ್ಲಿ ಏರಿಳಿತಗಳು ಉಂಟಾಗಬಹುದು.
ಗುರುಗ್ರಹದ ಹಿಮ್ಮುಖ ಚಲನೆತಿಂದ ಈ ರಾಶಿಯವರಿಗೆ ಜವಾಬ್ದಾರಿ ಹೊರೆ ಹೆಚ್ಚಾಗಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೃದಯ ಕಾಯಿಲೆಗಳಿಗೆ ಸಂಬಂಧಿಸಿದಂತೆ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು.