Asianet Suvarna News Asianet Suvarna News

ಭಾರತದಲ್ಲಿ ಶಾಓಮಿಯ ಕೈಗೆಟುಕುವ ಬೆಲೆಯ ಮೊದಲ ಟ್ಯಾಬ್ಲೆಟ್ ಶೀಘ್ರದಲ್ಲೇ ಬಿಡುಗಡೆ?

ಶಾಓಮಿ ಕಳೆದ ವರ್ಷ ಆಗಸ್ಟ್‌ನಲ್ಲಿ ಚೀನಾದಲ್ಲಿ Mi Pad 5 ಮತ್ತು Mi Pad 5 Pro ಬಿಡುಗಡೆ ಮಾಡಿತ್ತು

Xiaomi  Mi Pad 5 tablet India launch likely at an affordable price mnj
Author
Bengaluru, First Published Mar 30, 2022, 11:09 AM IST

Xiaomi Tablet: ಶಾಓಮಿ ಮಂಗಳವಾರ ಅಧಿಕೃತ ಟ್ವೀಟ್ ಮೂಲಕ ಭಾರತದಲ್ಲಿ ಹೊಸ ಟ್ಯಾಬ್ಲೆಟನ್ನು ಬಿಡುಗಡೆ ಮಾಡುವ ಸೂಚನೆ ನೀಡಿದೆ. ಟೆಕ್ ದೈತ್ಯ ಯಾವ ಟ್ಯಾಬ್ಲೆಟ್ ಮಾದರಿಯು ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂಬುದನ್ನು ಬಹಿರಂಗಪಡಿಸದಿದ್ದರೂ, ಕಳೆದ ವರ್ಷದಿಂದ ಚೀನಾದಲ್ಲಿ ಲಭ್ಯವಿರುವ Mi Pad 5 ಆಗಿರಬಹುದು ಎಂದು ವರದಿಗಳು ತಿಳಿಸಿವೆ.  ಮುಂಬರುವ ಟ್ಯಾಬ್ಲೆಟ್‌ನ ಲ್ಯಾಂಡಿಂಗ್ ಪುಟವು ಎರಡು ದಿನಗಳ ಟೈಮರನ್ನು ತೋರಿಸುತ್ತಿದೆ. ಹೀಗಾಗಿ ಶೀಘ್ರದಲ್ಲೇ ಟ್ಯಾಬ್ಲೆಟ್ ಕುರಿತು ಹೆಚ್ಚಿನ ವಿವರಗಳನ್ನು ಕಂಪನಿಯು ಪ್ರಕಟಿಸಿಬಹುದು  ಅಥವಾ ಅದನ್ನು ಸರಳವಾಗಿ ಲಾಂಚ್‌ ಮಾಡಬಹುದು. ಕಂಪನಿಯು ಮುಂಬರುವ ಶಾಓಮಿ ಟ್ಯಾಬ್ಲೆಟ್‌ಗಾಗಿ "notify me" ಬಟನ್‌ನೊಂದಿಗೆ ಮೀಸಲಾದ ಪುಟವನ್ನು ರಚಿಸಿದೆ.

Mi Pad 5 ಭಾರತದಲ್ಲಿ ಬಿಡುಗಡೆ?: ಶಾಓಮಿ ಕಳೆದ ವರ್ಷ ಆಗಸ್ಟ್‌ನಲ್ಲಿ ಚೀನಾದಲ್ಲಿ Mi Pad 5 ಮತ್ತು Mi Pad 5 Pro ಬಿಡುಗಡೆ ಮಾಡಿತ್ತು. ಶಾಓಮಿಯು ಭಾರತದಲ್ಲಿ ಕಂಪನಿಯಿಂದ ಮೊದಲ ಟ್ಯಾಬ್ಲೆಟ್ ಆಗಿ Mi Pad 5 ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮೊದಲ ಪ್ಯಾಡ್‌ಗೆ ಪ್ರತಿಕ್ರಿಯೆಯು ಸಕಾರಾತ್ಮಕವಾಗಿದ್ದರೆ,  ಬಹುಶಃ,  ಪ್ರೊ ಮಾದರಿಯು ನಂತರ ಬಿಡುಗಡೆಯಾಗಬಹುದು.

ಇದನ್ನೂ ಓದಿ: ಅತೀ ಕಡಿಮೆ ಬೆಲೆಯ Redmi 10A ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ಎಷ್ಟು?

Mi Pad 5 ಫೀಚರ್ಸ್:   Mi Pad 5 ಚೀನಾ ಮಾದರಿಯೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದು 11-ಇಂಚಿನ LCD ಡಿಸ್ಪ್ಲೇ ಜೊತೆಗೆ 2560x1600 ಸ್ಕ್ರೀನ್ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್, HDR 10 ಮತ್ತು TrueToneಗೆ ಬೆಂಬಲವನ್ನು ಒಳಗೊಂಡಿದೆ. ಇದು ಡಾಲ್ಬಿ ವಿಷನನ್ನು ಸಹ ಬೆಂಬಲಿಸುತ್ತದೆ ಮತ್ತು MIUI  ರನ್ ಮಾಡುತ್ತದೆ. Mi Pad 5 ಹೈ ರೆಸಲ್ಯೂಶನ್ ಆಡಿಯೊ ಮತ್ತು ಡಾಲ್ಬಿ ಅಟ್ಮಾಸ್‌ಗೆ ಬೆಂಬಲವನ್ನು ಪಡೆಯುತ್ತದೆ.

ಸಾಧನವು 8720mAh ಬ್ಯಾಟರಿಯೊಂದಿಗೆ 33W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಹಿಂಭಾಗದ ಪ್ಯಾನೆಲ್‌ನಲ್ಲಿ ಡ್ಯುಯಲ್-ಕ್ಯಾಮೆರಾ ಸೆಟಪ್ ಇದೆ, ಇದರಲ್ಲಿ 13-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಸೇರಿದೆ.

ಇದನ್ನೂ ಓದಿ: Redmi Note 11 Pro+ 5G Review: ಉತ್ತಮ ಕ್ಯಾಮೆರಾ, ಕಾರ್ಯಕ್ಷಮತೆ, ಆದರೆ ಬೆಲೆ ಕೊಂಚ ಜಾಸ್ತಿ?

Mi Pad 5 ಬೆಲೆ" ಬೆಲೆಗೆ ಸಂಬಂಧಿಸಿದಂತೆ, Mi Pad 5 CNY 1999 ಬೆಲೆಯಲ್ಲಿ ಪ್ರಾರಂಭವಾಗುತ್ತದೆ, ಇದು ಮೂಲ 6GB RAM ಮತ್ತು 128GB ಸ್ಟೋರೆಜ್‌ಗಾಗಿ ಸರಿಸುಮಾರು 23,000 ರೂ. 6GB RAM ಮತ್ತು 256GB ಸಂಗ್ರಹಣೆಯೊಂದಿಗೆ ಟಾಪ್-ಎಂಡ್ ಮಾಡೆಲ್ CNY 2299 ಬೆಲೆಯಲ್ಲಿ ಬರುತ್ತದೆ, ಇದರ ಬೆಲೆ ಸರಿಸುಮಾರು 26,300 ರೂ.

ಪ್ರಸ್ತುತ, ಮುಂಬರುವ ಶಾಓಮಿ ಟ್ಯಾಬ್ಲೆಟ್‌ನ ಭಾರತದ ಬೆಲೆಯ ಕುರಿತು ಯಾವುದೇ ವಿವರಗಳಿಲ್ಲ, ಆದರೆ ಇದು ಕೈಗೆಟುಕುವ ಮತ್ತು ಪ್ರಾಥಮಿಕವಾಗಿ ವಿದ್ಯಾರ್ಥಿಗಳನ್ನು ಗುರಿಯಾಗಿಸುವ ಸಾಧ್ಯತೆಯಿದೆ. ಮುಂಬರುವ ಟ್ಯಾಬ್ಲೆಟ್‌ನೊಂದಿಗೆ, ಶಾಓಮಿ 3GB RAM + 32GB ಸಂಗ್ರಹಣೆಯೊಂದಿಗೆ ವೈಫೈ ಮಾದರಿಗೆ 13,899 ರೂ.ಗಳಿಂದ ಪ್ರಾರಂಭವಾಗುವ ರಿಯಲ್‌ಮಿ ಪ್ಯಾಡ್‌ನಂತಹ ಸಾಧನಗಳೊಂದಿಗೆ ಸ್ಪರ್ಧಿಸುವ ಸಾಧ್ಯತೆ ಇದೆ. 

 

 

Follow Us:
Download App:
  • android
  • ios