ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. 250MP ಕ್ಯಾಮೆರಾ, 6500mAh ಬ್ಯಾಟರಿ, AMOLED ಡಿಸ್‌ಪ್ಲೇಯಂತಹ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಫೋನ್ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Vivo New Look Smartphone: ವಿವೋ ತನ್ನ ಹೊಸ 5G ಸ್ಮಾರ್ಟ್‌ಫೋನ್ ಬಿಡುಗಡೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹೊಸ 5G ಸ್ಮಾರ್ಟ್‌ಫೋನ್ ಅತ್ಯಧಿಕ ಫೀಚರ್ಸ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅಮಲೋಡ್ ಡಿಸ್‌ಪ್ಲೇ ಸ್ಕ್ರೀನ್ ಜೊತೆಯಲ್ಲಿ , 6500mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಒಳಗೊಂಡಿರಲಿದೆ. ಫಾಸ್ಟ್ ಚಾರ್ಜಿಂಗ್‌ ಸಪೋರ್ಟ್ ಮಾಡಲಿದ್ದು, ಇದು ಬ್ಯಾಟರಿ ದೀರ್ಘ ಸಮಯದವರೆಗೆ ಬಾಳಿಕೆ ಬರಲಿದೆ. ಪದೇ ಪದೇ ಬ್ಯಾಟರಿ ಚಾರ್ಜ್ ಖಾಲಿಯಾಗುತ್ತೆ ಅನ್ನೋರಿಗೆ ಈ ಸ್ಮಾರ್ಟ್‌ಫೋನ್ ಒಳ್ಳೆಯ ಆಯ್ಕೆಯಾಗಲಿದೆ. ಕೆಲ ವರದಿಗಳ ಪ್ರಕಾರ ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ 250MP ಸಾಮರ್ಥ್ಯದ ಕ್ಯಾಮೆರಾ ಹೊಂದಿರಲಿದೆ. 

Display: Vivo T4x 5G ಸ್ಮಾರ್ಟ್‌ಫೋನ್ 6.67 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆಯಂತೆ ಹಾಗೂ ಅತ್ಯಂತ ಸ್ಟ್ರಾಂಗ್ ಸ್ಕ್ರೀನ್‌ನೊಂದಿಗೆ ಗ್ರಾಹಕರಿಗೆ ಸಿಗಲಿದೆ. Amoled ಡಿಸ್‌ಪ್ಲೇ ಸ್ಕ್ರೀನ್ 1080×2400 ಪಿಕ್ಸೆಲ್ ಇರಲಿದ್ದು, 120Hz ರಿಫ್ರೆಶ್ ರೇಟ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. 

Camera: ಮಾರುಕಟ್ಟೆಯಲ್ಲಿ ವಿವೋ ಗುಣಮಟ್ಟದ ಕ್ಯಾಮೆರಾಗೆ ಫೇಮಸ್. ಮೇನ್ ಕ್ಯಾಮೆರಾ 250MP,ಸೆಕೆಂಡರಿ ಕ್ಯಾಮೆರಾ 28MP, ಅಲ್ಟ್ರಾ ವೈಡ್ 13MP ಇರಲಿದೆ ಎನ್ನಲಾಗಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 43MP ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ.

Battery: ಇನ್ನು ಬ್ಯಾಟರಿ ವಿಷಯಕ್ಕೆ ಬಂದ್ರೆ Vivo T4x 5G ಸ್ಮಾರ್ಟ್‌ಫೋನ್ 6500mAh ಹೊಂದಿರಲಿದೆ. ಆದ್ರೆ ಇದಕ್ಕೆ ಸಪೋರ್ಟ್ ಮಾಡುವ ಚಾರ್ಜ್ ಎಷ್ಟು ಸಾಮರ್ಥ್ಯದ್ದು ಎಂದು ತಿಳಿದು ಬಂದಿಲ್ಲ. 

Memory: ಕೆಲ ವರದಿಗಳ ಪ್ರಕಾರ ವಿವೋ ಕಂಪನಿಯ ಹೊರ ಅವತರಣಿಕೆ ಸ್ಮಾರ್ಟ್‌ಫೋನ್ 256GB ಸ್ಟೋರೇಜ್ ಹೊಂದಿರಲಿದೆ. ಹೊಸ ಸ್ಮಾರ್ಟ್‌ಫೋನ್ 8GBನಲ್ಲಿ ಲಭ್ಯವಿರಲಿದೆ. Vivo T4x ಮಾಡೆಲ್ ಬೇರೆ ಬೇರೆ ವೇರಿಯಂಟ್‌ಗಳಲ್ಲಿ ಲಭ್ಯವಿರೊ ಸಾಧ್ಯತೆಗಳಿವೆ. ಈ ವೇರಿಯಂಟ್ ಆಧಾರದ ಮೇಲೆ ಬೆಲೆಗಳು ಭಿನ್ನವಾಗಿರುತ್ತವೆ.

ಇದನ್ನೂ ಓದಿ: 50MP+32MP ಕ್ಯಾಮೆರಾ, 128GB ಸ್ಟೋರೇಜ್, 5000mAh ಬ್ಯಾಟರಿ ಸ್ಮಾರ್ಟ್‌ಫೋನ್ ಮೇಲೆ ₹7,000 ಡಿಸ್ಕೌಂಟ್

ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ಈ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈವರೆಗೂ ವಿವೋ ಕಂಪನಿ Vivo T4x 5G ಸ್ಮಾರ್ಟ್‌ಫೋನ್ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.

Disclaimer: ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ Vivo ನಿಂದ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.

ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಬರುತ್ತೆ 108MP ಕ್ಯಾಮೆರಾ, 24GB RAM ಹೊಂದಿರುವ 5G ಸ್ಮಾರ್ಟ್‌ಫೋನ್