ನಿಮ್ಮ ಬಜೆಟ್‌ನಲ್ಲಿ ಬರುತ್ತೆ 108MP ಕ್ಯಾಮೆರಾ, 24GB RAM ಹೊಂದಿರುವ 5G ಸ್ಮಾರ್ಟ್‌ಫೋನ್
5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. 12GB RAM, 108MP ಕ್ಯಾಮೆರಾ ಮತ್ತು ಇತರ ಆಕರ್ಷಕ ಫೀಚರ್‌ಗಳೊಂದಿಗೆ ಬರುತ್ತಿರುವ ಈ ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

ಹೆವಿ RAM ಮತ್ತು ಪವರ್‌ಫುಲ್ ಕ್ಯಾಮೆರಾ ಹೊಂದಿರುವ 5G ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ರೆ ನಿಮಗೊಂದು ಶುಭ ಸಮಾಚಾರ ಬಂದಿದೆ. ಇ-ಕಾಮರ್ಸ್ ಪ್ಲಾಟ್‌ಫಾರಂನಲ್ಲಿ ಅದ್ಭುತವಾದ ಆಫರ್ ಬಿಡುಗಡೆಯಾಗಿದ್ದು, ಮಧ್ಯಮ ವರ್ಗದ ಬಜೆಟ್‌ನಲ್ಲಿಈ ಸ್ಮಾರ್ಟ್‌ಫೋನ್ ಬರಲಿದೆ. ಈ 5G ಸ್ಮಾರ್ಟ್‌ಫೋನ್ 12GB RAM ಮತ್ತು 108MP ಸಾಮರ್ಥ್ಯವುಳ್ಳ ಉತ್ತಮ ಗುಣಮಟ್ಟವುಳ್ಳ ಕ್ಯಾಮೆರಾ ಸಿಗಲಿದೆ. ವರ್ಚುವಲ್ RAM ಫೀಚರ್ ಸಹಾಯದಿಂದ ಸ್ಟೋರೇಜ್ ಸಾಮರ್ಥ್ಯವನ್ನು 24GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಕಡಿಮೆ ಬೆಲೆಯಲ್ಲಿ ಒಂದು ಒಳ್ಳೆಯ ಸ್ಮಾರ್ಟ್‌ಫೋನ್ ಖರೀದಿಸಬೇಕು ಅನ್ನೋ ಹುಡುಕಾಟದಲ್ಲಿರೋರಿಗೆ ಇದು ಉತ್ತಮ ಆಯ್ಕೆಯಾಗಲಿದೆ.
Infinix Note 40X 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಲಾಂಚ್ ಆಗುವ ವೇಳೆ 8GB+256GB ವೇರಿಯಂಟ್ ಬೆಲೆ 14,999 ರೂಪಾಯಿ ಮತ್ತು 12GB+256GB ವೇರಿಯಂಟ್ ಬೆಲೆ 15,999 ರೂಪಾಯಿ ಆಗಿತ್ತು. ಆದ್ರೆ ಇದೀಗ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಸೂಚಿಸಿದ ಬ್ಯಾಂಕ್ ಕಾರ್ಡ್ ಬಳಕೆಯಿಂದ ಹೆಚ್ಚುವರಿ ರಿಯಾಯ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದು. Infinix Note 40X 5G ಸ್ಮಾರ್ಟ್‌ಫೋನಿನ ಫೀಚರ್ಸ್ ಮಾಹಿತಿ ಇಲ್ಲಿದೆ.
Display: ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ (1080*2436) ಹೊಂದಿದೆ. ಇದರಲ್ಲಿ 120 ಹಟ್ಜ್ ಡೈನಾಮಿಕ್ ರಿಫ್ರೆಶ್ ರೇಟ್ ಮತ್ತು 500 ನಿಟ್ಸ್ ಪೀಕ್ ಬ್ರೈಟ್‌ನೆಸ್ ನಲ್ಲಿ ಸಿಗಲಿದೆ.
ಇದನ್ನೂ ಓದಿ: 50MP+32MP ಕ್ಯಾಮೆರಾ, 128GB ಸ್ಟೋರೇಜ್, 5000mAh ಬ್ಯಾಟರಿ ಸ್ಮಾರ್ಟ್‌ಫೋನ್ ಮೇಲೆ ₹7,000 ಡಿಸ್ಕೌಂಟ್
Camera: ಈ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ನಲ್ಲಿ ಬರಲಿದೆ. ಪ್ರೈಮರಿ ಕ್ಯಾಮೆರಾ 108MP ಆಗಿದೆ. ಸೆಲ್ಫಿ ಪ್ರಿಯರಿಗಾಗಿ ಮತ್ತು ವಿಡಿಯೋ ಕಾಲ್‌ಗಾಗಿ ಫ್ರಂಟ್‌ನಲ್ಲಿ 8MP ಕ್ಯಾಮೆರಾ ನೀಡಲಾಗಿದೆ.
Battery: Infinix Note 40X 5G ಸ್ಮಾರ್ಟ್‌ಫೋನ್ 5000 mAh ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದ್ದು, ಇದು 18W ಸಪೋರ್ಟಿಂಗ್ ಚಾರ್ಜಿಂಗ್ ಹೊಂದಿದೆ.
Price: ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ 12GB+256GB ವೇರಿಯಂಟ್ ಬೆಲೆ 13,999 ರೂಪಾಯಿ ಆಗಿದೆ. ಫ್ಲಿಪ್‌ಕಾರ್ಟ್ ಆಪ್ ಪ್ರಕಾರ, ಬ್ಯಾಂಕ್ ಆಫರ್ ಪಡೆದುಕೊಂಡರೆ ಗ್ರಾಹಕರಿಗೆ 2,000 ರೂ.ಗಳವರೆಗೆ ಡಿಸ್ಕೌಂಟ್ ಸಿಗಲಿದೆ. ಈ ಡಿಸ್ಕೌಂಟ್ ಕೇವಲ ICICI ಬ್ಯಾಂಕ್ ಕಾರ್ಡ್ ಮೇಲೆ ಸಿಗಲಿದೆ. ಡಿಸ್ಕೌಂಟ್ ಬಳಿಕ ನಿಮಗೆ Infinix Note 40X 5G ಸ್ಮಾರ್ಟ್‌ಫೋನ್ ಕೇವಲ 11,999 ರೂ.ಗಳಿಗೆ ಸಿಗಲಿದೆ.
ಇದನ್ನೂ ಓದಿ: ಇದುವರೆಗಿನ ಜಬರ್ದಸ್ತ್ ಆಫರ್; ಕಡಿಮೆ ಬೆಲೆಗೆ 330MP ಕ್ಯಾಮೆರಾ, 16GB RAM, 6700mAh ಬ್ಯಾಟರಿಯ 5G ಸ್ಮಾರ್ಟ್‌ಪೋನ್