ನೀವು ಗಮನಿಸಬಹುದಾದ ಟಾಪ್ 5 ವೈರ್‌ಲೆಸ್ ಚಾರ್ಜರ್‌ಗಳು
ಚಾರ್ಜರ್ ನೋಡಿ ಮೊಬೈಲ್ ಖರೀದಿಸಿ. ಸ್ಮಾರ್ಟ್‌ಫೋನ್‌ಗಳಿಗೆ ವೈರ್‌ಲೈಸ್ ಚಾರ್ಜರ್‌ಗಳು ಬಂದು ಆಗ್ಲೇ ಏಳೆಂಟು ವರ್ಷ ಕಳೆದಿವೆ. ಆದರೆ ಈ ವೈರ್‌ಲೆಸ್ ಚಾರ್ಜರ್‌ಗಳ ಹವಾ ಜೋರಾಗಿದ್ದು ಕಳೆದೆರಡು ವರ್ಷಗಳಲ್ಲಿ.
ಆರಂಭದಲ್ಲಿ ಹೈ ಎಂಡ್ ಮೊಬೈಲ್‌ಗಳಲ್ಲಿ ಮಾತ್ರ ಇದ್ದ ಈ ವೈರ್‌ಲೆಸ್ ಚಾರ್ಜರ್‌ಗಳು ಈಗ ಆ್ಯಂಡ್ರಾಯ್ಡ್ ಫೋನ್‌ಗಳೂ ಸೇರಿದಂತೆ ಕೆಲವೊಂದಿಷ್ಟುಫೋನ್‌ಗಳಿಗೆ ಕನೆಕ್ಟ್ ಆಗುತ್ತಿವೆ. ಒಂದು ಚಿಕ್ಕ ಅಲೆಕ್ಸಾದಂತಿರುವ ಫ್ಲ್ಯಾಟ್ ಸಾಧನದ ಮೇಲೆ ಮೊಬೈಲ್ ಇಟ್ಟು ಅದನ್ನು ಕರೆಂಟ್‌ಗೆ ಪ್ಲಗ್ ಇನ್ ಮಾಡಿಕೊಂಡರೆ ಮುಗೀತು. ನಿಮ್ಮ ಫೋನ್ ಚಾರ್ಜ್ ಆಗುತ್ತೆ. ಕೆಲವು ಚಾರ್ಜರ್‌ಗಳಲ್ಲಿ ಫೋನ್‌ಅನ್ನು ಸ್ಟಾಂಡ್‌ನಂತೆ ಬಳಸಿ ಚಾರ್ಜ್ ಮಾಡಬಹುದು. ಉಳಿದ ಚಾರ್ಜರ್‌ಗಳಂತೆ ಕೇಬಲ್ ಕಾಟ ಇರಲ್ಲ. ಕೆಲವೊಂದು ವೈರ್‌ಲೆಸ್ ಚಾರ್ಜರ್‌ಗಳನ್ನು ಪವರ್ ಬ್ಯಾಂಕ್‌ನಂತೆಯೂ ಬಳಸಬಹುದು. ಫಾಸ್ಟ್ ಚಾರ್ಜಿಂಗ್ ಅಲ್ಲದಿದ್ದರೂ ಒಂದು ಲೆವೆಲ್‌ಗೆ ನಿಮ್ಮ ಫೋನ್ ಜಾರ್ಜ್ ಆಗಿಯೇ ಆಗುತ್ತೆ.
1. ಹುವೈ ಸಿಪಿ60 ವೈರ್‌ಲೆಸ್ ಚಾರ್ಜರ್
ಸದ್ಯ ಇರುವ ವೈರ್‌ಲೈಸ್ ಚಾರ್ಜರ್‌ಗಳಲ್ಲಿ ಇದು ವೇಗವಾಗಿ ಚಾರ್ಜ್ ಆಗುವ ವೈರ್‌ಲೆಸ್ ಚಾರ್ಜರ್. 15 ವ್ಯಾಟ್‌ಗಳ ಸಾಮರ್ಥ್ಯವಿದೆ. ಇದರಲ್ಲಿ ಹುವೈ ಮೇಟ್ 20 ಪ್ರೋ ದಂಥಾ ಫೋನ್‌ಗಳನ್ನು ವೇಗವಾಗಿ ಸುಲಭವಾಗಿ ಚಾರ್ಜ್ ಮಾಡಬಹುದು. ಆದರೆ ಒಂದು ವಿಷಯ ಗಮನದಲ್ಲಿರಲಿ. ಫಾಸ್ಟ್ ಚಾರ್ಜರ್‌ನಂತೆ ಇದು ಚಾರ್ಜ್ ಆಗುತ್ತೆ ಅನ್ನೋ ನಿರೀಕ್ಷೆ ಬೇಡ. ಚಿಕ್ಕ ಪಿಂಗಾಣಿ ಸಾಸರ್ ಶೇಪ್‌ನಲ್ಲಿರುವ ಈ ವೈರ್‌ಲೆಸ್ ಚಾರ್ಜರ್‌ನ ತಳ ಅಷ್ಟು ಸ್ಥಿರವಾಗಿಲ್ಲ ಅನ್ನೋದು ಬಿಟ್ಟರೆ ಈ ಚಾರ್ಜ್ ವಿಷಯದಲ್ಲಿ ಹೆಚ್ಚಿನ ಕಂಪ್ಲೇಂಟ್‌ಗಳಿಲ್ಲ. ಬಜೆಟ್‌ಗೆ ತಕ್ಕಂಥ ಸೇವೆಯನ್ನು ನಿರೀಕ್ಷಿಸಬಹುದು. ಟೈಪ್ ಸಿ ಮಾಡೆಲ್‌ನ ಈ ಚಾರ್ಜರ್‌ಗೆ 6 ತಿಂಗಳ ವಾರೆಂಟಿ ಇದೆ.
ಬೆಲೆ: 3999
ಇದನ್ನೂ ಓದಿ | ಗೂಗಲ್ ಪೇಯಿಂದ ಬಳಕೆದಾರರಿಗೆ ಇಂಪಾರ್ಟೆಂಟ್ ನೋಟ್! ಮಾಡ್ಬೇಡಿ ಇಗ್ನೋರ್...
2. ರಿಗರ್ ಆರ್ಕ್ 200 ಆರ್‌ಜಿ 10049
ಈ ಕಂಪೆನಿಯ ಹೆಸರು ಸ್ಮಾರ್ಟ್ ಜಗತ್ತಿಗೆ ಅಪರಿಚಿತ. ಆದರೆ ಈ ಕಂಪೆನಿಯಿಂದ ಬಂದ ವೈರ್‌ಲೆಸ್ ಚಾರ್ಜರ್‌ಗೆ ಉತ್ತಮ ಪ್ರತಿಕ್ರಿಯೆ ಇದೆ. ಗ್ಯಾಜೆಟ್ 360 ಡಿಗ್ರಿಯಂಥಾ ವೆಬ್‌ಸೈಟ್‌ಗಳು ಇದನ್ನು ‘ಬಿಗ್ಗೆಸ್ಟ್ ಸರ್ಪೈಸ್’ ಎಂದೇ ಬಣ್ಣಿಸಿವೆ. ಇದರಲ್ಲಿ 2 ಮಾದರಿಗಳಿವೆ. Raegr Arc 200 RG10049 ಒಂದು ಮಾದರಿಯಾದರೆ Raegr Arc 500 RG10048 ಇನ್ನೊಂದು ಮಾಡೆಲ್. ಇದರಲ್ಲಿ ಆರ್ಕ್ 500 ಬೆಲೆ ತುಸು ದುಬಾರಿ, ಎಬಿಎಸ್‌ನಿಂದ ಪ್ರಮಾಣೀಕೃತಗೊಂಡಿದ್ದು. ಅದು ಬಿಟ್ಟರೆ ಹೆಚ್ಚಿನ ವ್ಯತ್ಯಾಸ ಏನಿಲ್ಲ. 10 ವ್ಯಾಟ್ ಸಾಮರ್ಥ್ಯವಿದೆ. ವೈರ್‌ಲೆಸ್ ಚಾರ್ಜರ್ ಜೊತೆಗೆ ಮೈಕ್ರೋ ಯುಎಸ್‌ಬಿ ಕೇಬಲ್ ಇರುತ್ತೆ. 2+1 ವರ್ಷಗಳ ವಾರೆಂಟಿ ಇರೋದು ಪ್ಲಸ್ ಪಾಯಿಂಟ್. ಕಾರ್ಯನಿರ್ವಹಣೆ ಅತ್ಯುತ್ತಮ ಎನ್ನಲಾಗುತ್ತೆ. ಕ್ವಾಲಿಟಿ ಚೆನ್ನಾಗಿದೆ ಎಂದು ಇದನ್ನು ಪರೀಕ್ಷಿಸಿದವರು ಹೇಳ್ತಾರೆ.
ಬೆಲೆ: ರಿಗರ್‌ಆರ್ಕ್ 200 : 1199 ರು., ರಿಗರ್ ಆರ್ಕ್ 500: 1,499 ರು
3. ಸ್ಟಫ್ ಕೂಲ್
ಇದು ವರ್ಟಿಕಲ್ ಚಾರ್ಜರ್. ಅಂದರೆ ನಿಮ್ಮ ಫೋನ್‌ಗೆ ಸ್ಟಾಂಡ್‌ನಂತೆ ಸಪೋರ್ಟ್ ಕೊಡುತ್ತಾ ಚಾರ್ಜ್ ಮಾಡುತ್ತೆ. ವೈರ್‌ಲೆಸ್ ಚಾರ್ಜರ್‌ಗಳನ್ನು ಮೌಲ್ಯಮಾಪನ ಮಾಡುವ ಚೀ (ಕಿಜಿ )ನಿಂದ ಪ್ರಮಾಣಿತ. 10 ವ್ಯಾಟ್‌ಗಳಷ್ಟುಸಾಮರ್ಥ್ಯವಿದೆ. ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ಸಿಗುತ್ತೆ. 6 ಎಂಎಂನಷ್ಟು ದಪ್ಪಗಿರುವ ಈ ಚಾರ್ಜರ್‌ನಲ್ಲಿ ಕೇಸ್‌ಅನ್ನು ತೆಗೆಯದೇ ವೈರ್‌ಲೆಸ್ ಆಗಿ ಚಾರ್ಜ್ ಮಾಡುವ ಅವಕಾಶವಿದೆ. ಅಂದರೆ ಇದನ್ನು ಪವರ್‌ಬ್ಯಾಂಕ್‌ನಂತೆಯೂ ಬಳಸಬಹುದು. ವರ್ಟಿಕಲ್ ಆಗಿ ಚಾಜ್‌ರ್ ಮಾಡಬಹುದು ಅನ್ನೋದು ಪ್ಲಸ್ ಪಾಯಿಂಟ್. ಸುಲಭವಾಗಿ ಚಾರ್ಜ್ ಮಾಡಬಹುದು. ನೀವು ಫೋನ್ ಚಾರ್ಜ್‌ಗೆ ಹಾಕಿಯೂ ಫೋನ್‌ನಲ್ಲಿ ವರ್ಕ್ ಮಾಡಬಹುದು. ಐಫೋನ್ ಎಕ್ಸ್‌ಆರ್‌ನ ಸಾಮ್ಯತೆ ಇದರಲ್ಲಿ ಕಾಣಬಹುದು. ಚಾರ್ಜಿಂಗ್ ಸ್ಪೀಡ್ ಚೆನ್ನಾಗಿದೆ. 6 ತಿಂಗಳ ವಾರೆಂಟಿ ಇದೆ.
ಬೆಲೆ: 2,999 ರು.
ಇದನ್ನೂ ನೋಡಿ | ಟಿಕ್ ಟಾಕ್ ಸ್ಟಾರ್ ಆದ್ರೆ..ಲಕ್ಷ ಲಕ್ಷ ಸಿಗುತ್ತಾ..? ಸಂಪಾದನೆ ಸೀಕ್ರೆಟ್ ಬಹಿರಂಗ!...
4. ಬ್ಲ್ಯಾಕ್ ಬೆರ್ರಿ ಚಾರ್ಜರ್
ಇದರ ಚಾರ್ಜಿಂಗ್ ಸ್ಪೀಡ್ 5 ವ್ಯಾಟ್‌ಗಳಷ್ಟಿರುತ್ತದೆ. ಹಾಗಂತ ಈ ಲೆಕ್ಕದಲ್ಲಿ ಇದನ್ನು ಅಳೆಯಲಾಗುವುದಿಲ್ಲ. ಹಾಗೆ ನೋಡಿದರೆ 10 ವ್ಯಾಟ್ ಸಾಮರ್ಥ್ಯದ ಚಾರ್ಜರ್‌ಗಿಂತಲೂ ವೇಗವಾಗಿ ಇದರಲ್ಲಿ ಫೋನ್ ಚಾರ್ಜ್ ಮಾಡಬಹುದು. ಆದರೆ ಇದನ್ನು ಕರೆಂಟ್‌ಗೆ ಫ್ಲಗ್ ಇನ್ ಮಾಡುವ ಟೈಪ್ ಸಿ ಕೇಬಲ್ ಇದರ ಬಾಕ್ಸ್‌ನಲ್ಲಿ ಇರಲ್ಲ. ಅದನ್ನು ಸಪರೇಟ್ ಆಗಿ ನೀವು ಖರೀದಿಸಬೇಕು. ಆರು ತಿಂಗಳ ವಾರೆಂಟಿ ಇದೆ.
ಬೆಲೆ: 2,499 ರು.
ಇದನ್ನೂ ಓದಿ | ಓಲ್ಡ್ ಈಸ್ ಗೋಲ್ಡ್! ಹಳೆ ಪ್ಲಾನ್ ಮರುಪರಿಚಯಿಸಿದ ಜಿಯೋ...
5. ಟೊರೆಟೊ ಮ್ಯಾಜಿಕ್
ಈ ವೈರ್‌ಲೆಸ್ ಚಾರ್ಜರ್‌ನ ಡಿಸೈನ್ ಭಲೇ ಚೆಂದ. ನೋಡೋದಕ್ಕೆ ಥೇಟ್ ಜೆಲ್ಲಿ ಫಿಶ್ ರೀತಿ ಕಾಣುತ್ತೆ. ಇದರಲ್ಲಿರುವ ಸಿಲಿಕಾನ್ ಕವರ್ ನಿಮ್ಮ ಮೊಬೈಲ್ ಸ್ಕ್ರಾಚ್ ಆಗೋದನ್ನ ತಡೆಯುತ್ತೆ. ಏಳುಬಣ್ಣಗಳಲ್ಲಿ ಮಿನುಗುವ ಲೈಟ್ ಇದರಲ್ಲಿದೆ. ಫೋನ್ ಚಾರ್ಜ್ ಆಗುವಾಗ ಕಾಮನಬಿಲ್ಲಿನ ಬಣ್ಣದ ಲೈಟ್‌ಗಳು ಉರಿಯುತ್ತವೆ. ಮೈಕ್ರೋ ಯುಎಸ್‌ಬಿ ಕೇಬಲ್ ಹಾಗೂ ಚಾರ್ಜರ್ ಜೊತೆಗಿರುತ್ತೆ. ಎಷ್ಟು ಚಾರ್ಜ್ ಆಗ್ತಿದೆ ಅನ್ನೋದು ಗೊತ್ತಾಗುತ್ತೆ. 1 ವರ್ಷದ ವಾರೆಂಟಿ ಇದೆ.
ಬೆಲೆ: 1599 ರು.