ಭಾರತದಲ್ಲಿ ಮೊಟ್ಟ ಮೊದಲ AI ಟಿವಿ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್, ವಿಸ್ಮಯಕಾರಿ ಫೀಚರ್ಸ್!
ಊಹೆಗೂ ನಿಲುಕದ ತಂತ್ರಜ್ಞಾನ, ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಸಪೋರ್ಟ್, ಪಿಕ್ಚರ್, ಸೌಂಡ್ ಕ್ವಾಲಿಟಿ ಬಗ್ಗೆ ಮರುಮಾತಿಲ್ಲ. ಇಷ್ಟೇ ಯಾಕೆ ನೀವು ಈ ಎಐ ತಂತ್ರಜ್ಞಾನದ ಟಿವಿಯಲ್ಲಿ ಯೋಗ ವಿಡಿಯೋ ಹಾಕಿ ಯೋಗ ಮಾಡಿದರೆ ನಿಮ್ಮ ಆಸನಗಳು ತಪ್ಪಿದ್ದರೆ ತಕ್ಷಣವೇ ಸೂಚನೆ ನೀಡಲಿದೆ. ಹತ್ತು ಹಲವು ವಿಸ್ಮಯಕಾರಿ ಸ್ಯಾಮ್‌ಸಂಗ್ ಎಐ ಟಿವಿ ವಿಶೇಷತೆ ಬೆಲೆ ಇಲ್ಲಿದೆ.
ಬೆಂಗಳೂರು(ಏ.17) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳನ್ನು ಹಾಸು ಹೊಕ್ಕಿದೆ. ಇದೀಗ ಭಾರತದಲ್ಲಿ ಮೊಟ್ಟ ಮೊದಲ ಎಐ ತಂತ್ರಜ್ಞಾನದ ಟಿವಿಯನ್ನು ಸ್ಯಾಮ್ಸ್‌ಸಂಗ್ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಟಿವಿ ಬಿಡುಗಡೆ ಮಾಡಲಾಗಿದೆ. ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಎಐ ಟಿವಿಗಳ ಹೊಸ ಯುಗವನ್ನು ಪ್ರಾರಂಭಿಸಿದೆ.
ಸ್ಪಷ್ಟತೆ, ಅದ್ಭುತ ಧ್ವನಿ ಮತ್ತು ಅಪೂರ್ವ ಅನುಭವ ಒದಗಿಸುವ ಹೊಸ ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್ ಇರುವ ನಿಯೋ ಕ್ಯೂಎಲ್ಇಡಿ 8ಕೆ ಸ್ಯಾಮ್‌ಸಂಗ್‌ನ ಪ್ರಮುಖ ಟಿವಿ ಆಗಿರುವ ನಿಯೋ ಕ್ಯೂಎಲ್ಇಡಿ 8ಕೆ ಟಿವಿಯು ಅತ್ಯಾಧುನಿಕ ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್ ಹೊಂದಿದೆ. ಇದು ಎಐ ಟಿವಿ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಎನ್‌ಕ್ಯೂ8 ಎಐ ಜೆನ್3 ಪ್ರೊಸೆಸರ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (ಎನ್‌ಪಿಯು) ಅನ್ನು ಹೊಂದಿದೆ, ಅದು ಅದರ ಹಿಂದಿನ ಪ್ರೊಸೆಸರ್ ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ, ಜೊತೆಗೆ ನ್ಯೂರಲ್ ನೆಟ್‌ವರ್ಕ್‌ಗಳಲ್ಲಿ 64 ರಿಂದ 512 ವರೆಗೆ ಎಂಟು ಪಟ್ಟು ಹೆಚ್ಚಳವಾಗಿದ್ದು ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಕಾಣಿಸುವ ಮೂಲಕ ಗ್ರಾಹಕರಿಗೆ ಅಸಾಧಾರಣ ವೀಕ್ಷಣಾ ಅನುಭವ ಒದಗಿಸಲಿದೆ.
ನೀರಿಗೆ ಬಿದ್ದರೂ, ಕೈಜಾರಿ ನೆಲಕ್ಕಪಳಿಸಿದರೂ ಏನೂ ಆಗಲ್ಲ ಈ ಫೋನ್, ಸ್ಯಾಮ್‌ಸಂಗ್ A55,A35 ಲಾಂಚ್!
2024ರ ನಿಯೋ ಕ್ಯೂಎಲ್ಇಡಿ 8ಕೆಯಲ್ಲಿ ಲಭ್ಯವಿರುವ ಹಲವು ಎಐ ಫೀಚರ್ ಗಳು ಈ ಕೆಳಗಿನಂತಿವೆ:
ಎಐ ಪಿಚ್ಚರ್ ಟೆಕ್ನಾಲಜಿ – ಮುಖಭಾವ ಮತ್ತು ಇತರ ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಅತ್ಯುತ್ತಮವಾದ ಸ್ಪಷ್ಟತೆ ಮತ್ತು ಸಹಜತೆಯೊಂದಿಗೆ ಇದು ನೋಡುಗರಿಗೆ ದಾಟಿಸುವಂತೆ ಮಾಡುತ್ತದೆ.
ಎಐ ಅಪ್‌ಸ್ಕೇಲಿಂಗ್ ಪ್ರೊ – ಈ ವೈಶಿಷ್ಯ್ಟವು ಎಲ್ಲಾ ಕಂಟೆಂಟ್ ಅನ್ನು 8ಕೆ ಡಿಸ್‌ಪ್ಲೇಗೆ ಸರಿ ಹೊಂದಿಸುತ್ತದೆ.
ಎಐ ಮೋಷನ್ ಎನ್ ಹ್ಯಾನ್ಸರ್ ಪ್ರೊ- ಕ್ರೀಡೆಯಂತಹ ತೀವ್ರ ಭಾವನೆ ಉದ್ದೀಪಿಸುವ ಕಂಟೆಂಟ್ ಗಳನ್ನು ತುಂಬಾ ಸ್ಪಷ್ಟವಾಗಿ ಕಾಣಿಸಲು ಅತ್ಯಾಧುನಿಕ ಮೋಷನ್ ಡಿಟೆಕ್ಷನ್ ಅಲ್ಗಾರಿದಮ್ ಅನ್ನು ಈ ಫೀಚರ್ ಬಳಸುತ್ತದೆ. ಈ ಮೂಲಕ ಬಳಕೆದಾರರಿಗೆ ಪ್ರತಿ ಕ್ಷಣವನ್ನು ಆನಂದಿಸಲು ಸಹಾಯ ಮಾಡುತ್ತದೆ. ಪಂದ್ಯದ ಸಮಯದಲ್ಲಿ, ಯಾವುದೇ ಅಸ್ಪಷ್ಟತೆ ಇಲ್ಲದೆ ಚೆಂಡನ್ನು ನೋಡಲು ಇದು ಸಹಾಯ ಮಾಡುತ್ತದೆ. ಬಳಕೆದಾರರು ಕ್ರೀಡಾಂಗಣದಲ್ಲಿ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವ ಅನುಭವವನ್ನು ಹೊಂದಲಿದ್ದಾರೆ.
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಬುಕಿಂಗ್ ಆರಂಭ, 8,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್!
ರಿಯಲ್ ಡೆಪ್ತ್ ಎನ್‌ಹಾನ್ಸರ್ ಪ್ರೊ ವೈಶಿಷ್ಟ್ಯವು ಚಿತ್ರಗಳಿಗೆ ತೀವ್ರತೆಯನ್ನು ಒದಗಿಸುತ್ತದೆ ಮತ್ತು ವೀಕ್ಷಕರು ದೃಶ್ಯದಲ್ಲಿ ಮುಳುಗಿಹೋಗುವಂತೆ ಮಾಡುತ್ತದೆ.
ಎಐ ಸೌಂಡ್ ಟೆಕ್ನಾಲಜಿ – ಇದು ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಪ್ರೊ ಮೂಲಕ ನಿಖರವಾದ ಆಡಿಯೊವನ್ನು ಒದಗಿಸಲು ಸಹಾಯ ಮಾಡುತ್ತದೆ. ಹಿನ್ನೆಲೆ ಶಬ್ದಗಳನ್ನು ಗ್ರಹಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ವಾಲ್ಯೂಮ್ ಅನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸುತ್ತದೆ. ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಪ್ರೊ ತೆರೆಯ ಮೇಲಿನ ದೃಶ್ಯಕ್ಕೆ ಸೂಕ್ತವಾಗಿ ಧ್ವನಿಯನ್ನು ಸಿಂಕ್ ಮಾಡುವ ಮೂಲಕ ಆಡಿಯೊ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ. ಜೊತೆಗೆ ಹೆಚ್ಚು ಆಕರ್ಷಕ ಮತ್ತು ಆಹ್ಲಾದಕರ ವೀಕ್ಷಣೆಯ ಅನುಭವವನ್ನು ಉಂಟು ಮಾಡುತ್ತದೆ. ಅಡಾಪ್ಟಿವ್ ಸೌಂಡ್ ಪ್ರೊ ಆಡಿಯೊವನ್ನು ಕಂಟೆಂಟ್ ಮತ್ತು ಕೋಣೆಗೆ ತಕ್ಕಂತೆ ಅತಿ ಬುದ್ಧಿವಂತಿಕೆಯಿಂದ ಹೊಂದಿಸುವ ಮೂಲಕ ಆಡಿಯೊ ಅನುಭವವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ ಮತ್ತು ಶ್ರೀಮಂತಗೊಳಿಸುತ್ತದೆ. ಎಐ ಆಟೋ ಗೇಮ್ ಮೋಡ್- ಇದು ಆಟ ಮತ್ತು ಆಟದ ಪ್ರಕಾರ ಎರಡನ್ನೂ ಗುರುತಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ದೃಶ್ಯದ ಗುಣಮಟ್ಟ ಮತ್ತು ಧ್ವನಿ ಗುಣಮಟ್ಟದ ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.
ಎಐ ಕಸ್ಟಮೈಸೇಷನ್ ಮೋಡ್- ಇದು ಬಳಕೆದಾರರ ಆದ್ಯತೆಯ ಆಧಾರದ ಮೇಲೆ ಕಂಟೆಂಟ್ ಅನ್ನು ಆಧರಿಸಿ ಪ್ರತಿ ದೃಶ್ಯಕ್ಕೆ ಅನುಗುಣವಾಗಿ ಚಿತ್ರವನ್ನು ಸರಿಹೊಂದಿಸುತ್ತದೆ.
ಎಐ ಎನರ್ಜಿ ಮೋಡ್ – ಇದು ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿದ್ಯುತ್ ಉಳಿಸುತ್ತದೆ.
ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಕ್ಯೂಎನ್900ಡಿ ಮತ್ತು ಕ್ಯೂಎನ್800ಡಿ ಎರಡು ಮಾದರಿಗಳಲ್ಲಿ ಲಭ್ಯವಿದೆ. 65, 75 ಮತ್ತು 85 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.
ಸ್ಯಾಮ್‌ಸಂಗ್ ಭಾರತೀಯ ಗ್ರಾಹಕರಿಗೆ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್‌ನೆಸ್‌ನಂತಹ ಹಲವಾರು ಸೇವೆಗಳನ್ನು ಒದಗಿಸಲು ಪ್ರಾದೇಶಿಕಗೊಳಿಸಿದ ಸ್ಮಾರ್ಟ್ ಸೌಲಭ್ಯಗಳನ್ನು ನೀಡುತ್ತದೆ. ಅವುಗಳನ್ನು ಈ ಕೆಳಗೆ ನೋಡಬಹುದು.
ಕ್ಲೌಡ್ ಗೇಮಿಂಗ್ ಸರ್ವೀಸ್ ಬಳಕೆದಾರರಿಗೆ ಎಎಎ ಆಟಗಳನ್ನು ಪ್ಲಗ್ ಆಂಡ್ ಪ್ಲೇ ಮೂಲಕ ಅನುಭವಿಸಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕನ್ಸೋಲ್ ಅಥವಾ ಪಿಸಿಯ ಅಗತ್ಯ ಇರುವುದಿಲ್ಲ.
ಬೆಲೆ ಮತ್ತು ಪ್ರೀ ಆರ್ಡರ್ ಆಫರ್
ಪ್ರೀ-ಆರ್ಡರ್ ಕೊಡುಗೆಯ ಭಾಗವಾಗಿ, ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಗ್ಲೇರ್ ಫ್ರೀ ಓಎಲ್ಇಡಿ ಶ್ರೇಣಿಯನ್ನು ಖರೀದಿಸುವ ಗ್ರಾಹಕರು ರೂ. 79990 ಮೌಲ್ಯದ ಉಚಿತ ಸೌಂಡ್‌ಬಾರ್, ರೂ. 59990 ಮೌಲ್ಯದ ಫ್ರೀಸ್ಟೈಲ್, ರೂ.29990 ಮೌಲ್ಯದ ಮ್ಯೂಸಿಕ್ ಫ್ರೇಮ್ ಪಡೆಯಲಿದ್ದಾರೆ. ಈ ಆಫರ್ ಖರೀದಿಸುವ ಮಾಡೆಲ್ ಅನ್ನು ಅವಲಂಬಿಸಿರುತ್ತದೆ ಮತ್ತು ಏಪ್ರಿಲ್ 30, 2024ರವರೆಗೆ ಲಭ್ಯವಿರುತ್ತದೆ. ಗ್ರಾಹಕರು ಮಾಡೆಲ್ ಅನ್ನು ಅವಲಂಬಿಸಿ 20% ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.
* ಸ್ಯಾಮ್‌ಸಂಗ್ ನ ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಬೆಲೆ ರೂ.319990ರಿಂದ ಪ್ರಾರಂಭವಾಗುತ್ತದೆ
* ಸ್ಯಾಮ್‌ಸಂಗ್ ನ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯು ಬೆಲೆ ರೂ.139990 ರಿಂದ ಪ್ರಾರಂಭವಾಗುತ್ತದೆ
* ಸ್ಯಾಮ್‌ಸಂಗ್ ನ ಓಎಲ್ಇಡಿ ಶ್ರೇಣಿಯು ಬೆಲೆ ರೂ.164990 ರಿಂದ ಪ್ರಾರಂಭವಾಗುತ್ತದೆ