ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಬುಕಿಂಗ್ ಆರಂಭ, 8,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್!
ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ಸೀರಿಸ್‌ನ ಬುಕ್ ಪ್ರೀ ಬುಕಿಂಗ್ ಆರಂಭಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಒಳಗೊಂಡ ಬುಕ್4 ಬುಕ್ ಮಾಡುವ ಗ್ರಾಹಕರಿಗೆ ಬರೋಬ್ಬರಿ 8,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಕೂಡ ನೀಡಲಾಗಿದೆ.
ಬೆಂಗಳೂರು(ಫೆ.2) : ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ಸೀರಿಸ್ ಬುಕ್4 ಬುಕಿಂಗ್ ಆರಂಭಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್4 ಪ್ರೊ 360, ಗ್ಯಾಲಕ್ಸಿ ಬುಕ್4 ಪ್ರೊ ಮತ್ತು ಗ್ಯಾಲಕ್ಸಿ ಬುಕ್4 360 ಒಳಗೊಂಡ ಅತ್ಯಂತ ಸ್ಮಾರ್ಟ್ ಪಿಸಿ ಶ್ರೇಣಿಯಾಗಿರುವ ಗ್ಯಾಲಕ್ಸಿ ಬುಕ್4 ಸರಣಿಯ ಮುಂಗಡ ಬುಕಿಂಗ್ ಆರಂಭಿಸಿದೆ. ಗ್ಯಾಲಕ್ಸಿ ಬುಕ್4 ಸರಣಿಯು ಹೊಸತಾದ ಬುದ್ಧಿವಂತ ಪ್ರೊಸೆಸರ್ ಹೊಂದಿದೆ. ಅತ್ಯುತ್ತಮ ಸೆಕ್ಯುರಿಟಿ ವ್ಯವಸ್ಥೆ, ಉತ್ಪಾದಕತೆ, ಚಲನಶೀಲತೆ ಮತ್ತು ಸಂಪರ್ಕವನ್ನು ನೀಡುವ ಪಿಸಿಯಿಂದ ಹೊಸ ಎಐ ಯುಗ ಪ್ರಾರಂಭಿಸುತ್ತಿದೆ.
ಗ್ಯಾಲಕ್ಸಿ ಬುಕ್4 ಸರಣಿಯು ಬಳಕೆದಾರರು ತಮ್ಮ ಪಿಸಿಗಳು, ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಸಾಧನಗಳ ಬಳಕೆಯನ್ನು ಮರು ವ್ಯಾಖ್ಯಾನಿಸುತ್ತದೆ. ಬುದ್ಧಿವಂತ ಅನುಭವಗಳನ್ನು ನೀಡುತ್ತದೆ. ಇದು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಂತೆಯೇ ಆಪ್ಟಿಮೈಸ್ಡ್ ಮತ್ತು ಸ್ಪರ್ಶಾಧಾರಿತ ಯೂಸರ್ ಇಂಟರ್‌ಫೇಸ್ ಒದಗಿಸುತ್ತದೆ, ಆ ಮೂಲಕ ಸುಲಭವಾಗಿ ಬಳಸಬಹುದಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 24 ಸೀರಿಸ್ ಫೋನ್ ತಗೊಳ್ಭೇಕಾ? 10 ನಿಮಿಷದೊಳಗೆ ನಿಮ್ಮ ಮನೆಗೇ ಬರುತ್ತೆ ನೋಡಿ..!
ಗ್ಯಾಲಕ್ಸಿ ಬುಕ್ 4 ಸರಣಿಯು ಅತ್ಯಂತ ಬುದ್ಧಿವಂತ, ಅಪೂರ್ವ ಕಾರ್ಯಕ್ಷಮತೆಯ ಹೊಸ ಇಂಟೆಲ್®ಕೋರ್™ ಅಲ್ಟ್ರಾ7/ಅಲ್ಟ್ರಾ5 ಪ್ರೊಸೆಸರ್ ಅನ್ನು ಹೊಂದಿದೆ. ಇದು ಅತಿ ವೇಗದ ಸಾಮರ್ಥ್ಯದ ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್(ಸಿಪಿಯು), ಹೆಚ್ಚು ಶಕ್ತಿಶಾಲಿ ಗ್ರಾಫಿಕ್ಸ್ ಪ್ರೊಸೆಸಿಂಗ್ ಯುನಿಟ್(ಜಿಪಿಯು) ಮತ್ತು ಹೊಸತಾಗಿ ಸೇರಿಸಲಾದ ನ್ಯೂಟ್ರಲ್ ಪ್ರಾಸೆಸಿಂಗ್ ಯುನಿಟ್(ಎನ್ ಪಿ ಯು) ಹೊಂದಿದೆ.
ಎಐ ಸಾಮರ್ಥ್ಯಗಳ ಕಡೆಗೆ ನೋಡುವುದಾದರೆ, ಗ್ಯಾಲಕ್ಸಿ ಬುಕ್4 ಸರಣಿಯು ಇಂಟೆಲ್ ನ ಇಂಡಸ್ಟ್ರಿಯಲ್ಲೇ ಮೊದಲು ಅನ್ನಿಸುವ ಎಐ ಪಿಸಿ ಆಯಕ್ಸಲರೇಷ್ ಪ್ರೊಗ್ರಾಮ್ ಅನ್ನು ಹೊಂದಿದೆ. ಇದು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಗ್ಯಾಲಕ್ಸಿ ಬುಕ್ 4 ಸರಣಿಯುವ ಅತ್ಯಮೋಘವಾದ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಡಿಸ್ ಪ್ಲೇ ಇನ್ ಡೋರ್ ಮತ್ತು ಔಟ್ ಡೋರ್ ಎರಡರಲ್ಲೂ ತುಂಬಾ ಸ್ಪಷ್ಟವಾಗಿರುವ. ವೈವಿಧ್ಯಮಯ ಬಣ್ಣಗಳನ್ನು ತೋರಿಸುವ ಸಾಮರ್ಥ್ಯ ಹೊಂದಿದೆ. ಅದರಲ್ಲಿ ವಿಷನ್ ಬೂಸ್ಟರ್ ಸಾಮರ್ಥ್ಯದಿಂದಾಗಿ ಜಾಸ್ತಿ ಬೆಳಕು ಇರುವ ಹೊರಾಂಗಣ ಸನ್ನಿವೇಶಗಳಲ್ಲಿಯೂ ಗೋಚರತೆ ಮತ್ತು ಬಣ್ಣಗಳನ್ನು ತನ್ನಿಂತಾನೇ ಹೆಚ್ಚಿಸುತ್ತದೆ. ಅದರ ಆಂಟಿ ರಿಫ್ಲೆಕ್ಟಿವ್ ತಂತ್ರಜ್ಞಾನದಿಂದಾಗಿ ರಿಫ್ಲೆಕ್ಷನ್ ಗಳ ತೊಂದರೆ ಇರುವುದಿಲ್ಲ.
ಡಾಲ್ಬಿ ಅಟ್ಮಾಸ್ ® ಜೊತೆಗೆ ಎಕೆಡಿ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿರುವ ಈ ಸರಣಿಯುವ ಅಪೂರ್ವವಾದ ಧ್ವನಿ ಗುಣಮಟ್ಟವನ್ನು ಹೊಂದಿದೆ. ಎಲ್ಲಾ ಅಸಾಧಾರಣ ವೈಶಿಷ್ಟ್ಯಗಳನ್ನು ಈ ಮುಂದಿನ ಪೀಳಿಗೆಯ ಬುದ್ಧಿವಂತ ಪಿಸಿಯಲ್ಲಿ ಒದಗಿಸಲಾಗಿದೆ ಮತ್ತು ಇದು ಇದು ದೃಢವಾದ ಭದ್ರತಾ ವ್ಯವಸ್ಥೆಯನ್ನು ಸಹ ಹೊಂದಿದೆ. ಸ್ಯಾಮ್‌ಸಂಗ್‌ನ ಎಐ-ಚಾಲಿತ ನಾವೀನ್ಯತೆಗೆ ಈ ಉತ್ಪನ್ನ ಸಾಕ್ಷಿಯಾಗಿದೆ. ಗ್ಯಾಲಕ್ಸಿ ಬುಕ್4 ಸರಣಿಯು ಹೆಚ್ಚಿನ ಮಟ್ಟದ ಉತ್ಪಾದಕತೆಯನ್ನು ಬಯಸುವ ಜನರಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅವರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಹೊಸ ಮಾರ್ಗವನ್ನು ಒದಗಿಸುತ್ತದೆ.
ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಟೆಕ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸಿರೀಸ್ ಫೋನ್ ಲಾಂಚ್!
ಗ್ಯಾಲಕ್ಸಿ ಬುಕ್4 ಪ್ರೊ 360, ಗ್ಯಾಲಕ್ಸಿ ಬುಕ್4 ಪ್ರೊ ಮತ್ತು ಗ್ಯಾಲಕ್ಸಿ ಬುಕ್4 360 ಉತ್ಪನ್ನಗಳನ್ನು ಫೆಬ್ರವರಿ 20, 2024ರಿಂದ Samsung.com, ಪ್ರಮುಖ ಆನ್ ಲೈನ್ ಮಳಿಗೆಗಳು ಮತ್ತು ಆಯ್ದ ರಿಟೇಲ್ ಮಳಿಗೆಗಳಿಗೆ ಪ್ರೀ- ಬುಕ್ ಮಾಡಬಹುದಾಗಿದೆ. ಗ್ಯಾಲಕ್ಸಿ ಬುಕ್4 ಅನ್ನು ಪ್ರೀ-ಬುಕ್ ಮಾಡುವ ಗ್ರಾಹಕರು ರೂ.5000 ಮೌಲ್ಯದ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಗ್ಯಾಲಕ್ಸಿ ಬುಕ್4 ಪ್ರೊ ಮತ್ತು ಗ್ಯಾಲಕ್ಸಿ ಬುಕ್4 360ಯನ್ನು ಬುಕ್ ಮಾಡುವ ಗ್ರಾಹಕರು ರೂ.10000 ಮೌಲ್ಯದ ಬ್ಯಾಂಕ್ ಕ್ಯಾಶ್ ಬ್ಯಾಕ್ ಆಫರ್ ಅಥವಾ ರೂ.8000 ಮೌಲ್ಯದ ಅಪ್ ಗ್ರೇಡ್ ಬೋನಸ್ ಪಡೆಯಲಿದ್ದಾರೆ. ಗ್ರಾಹಕರು 24 ತಿಂಗಳುಗಳಿಗೆ ನೋ ಕಾಸ್ಟ್ ಇಎಂಐ ಅನ್ನು ಕೂಡ ಆರಿಸಬಹುದಾಗಿದೆ.
ಜೊತೆಗೆ, ಸ್ಯಾಮ್ ಸಂಗ್ ಫೆಬ್ರವರಿ 20 ರಿಂದ Samsung.comನಲ್ಲಿ ವಿಶೇಷ ಲೈವ್ ಕಾಮರ್ಸ್ ಈವೆಂಟ್ ಅನ್ನು ಸಹ ಆಯೋಜಿಸಿದೆ. ಲೈವ್ ಕಾಮರ್ಸ್ ಈವೆಂಟ್ ಮೂಲಕ ಗ್ಯಾಲಕ್ಸಿ ಬುಕ್4 ಸರಣಿಯನ್ನು ಮುಂಗಡ ಬುಕ್ ಮಾಡುವ ಗ್ರಾಹಕರು ರೂ.8000ದ ಹೆಚ್ಚುವರಿ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.