ಒನ್‌ಪ್ಲಸ್ ನಾರ್ಡ್ 5 ಮತ್ತು ನಾರ್ಡ್ CE 5 ಫೋನುಗಳು ಮಾರುಕಟ್ಟೆಗೆ ಬಂದಿವೆ. ಫ್ಲ್ಯಾಗ್‌ಶಿಪ್ ದರ್ಜೆಯ ಕಾರ್ಯಕ್ಷಮತೆಯನ್ನು ಆಕರ್ಷಕ ಬೆಲೆಯಲ್ಲಿ ನೀಡುತ್ತಿವೆ.

OnePlus Nord 5, Nord CE 5: ಫೋಟೋಗ್ರಫಿ, ಕಂಟೆಂಟ್ ಕ್ರಿಯೇಷನ್‌ಗಳಿಗೆ ಒಳ್ಳೆಯ ಆಯ್ಕೆ ಒನ್‌ಪ್ಲಸ್ ನಾರ್ಡ್ 5 ಮತ್ತು ನಾರ್ಡ್ CE 5 ಇಂದು ಮಾರುಕಟ್ಟೆಗೆ ಬಂದಿವೆ. ಮೊಬೈಲು ಮಾರುಕಟ್ಟೆಯ ಗಮನ ಈಗ ಮಿಡ್ ರೇಂಜ್ ಫೋನುಗಳತ್ತ ಹರಿಯುತ್ತಿದೆ. ಒನ್ ಪ್ಲಸ್ ನಂಥ ಸಂಸ್ಥೆಗಳು ಹೈರೇಂಜ್ ಮತ್ತು ಲೋ ರೇಂಜ್ ಫೋನುಗಳಿಗಿಂತ ಹೆಚ್ಚಾಗಿ ಮಧ್ಯಮ ಶ್ರೇಣಿಯ ಫೋನುಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ನಾರ್ಡ್ ಸರಣಿಯ ಫೋನುಗಳನ್ನು ಒನ್ ಪ್ಲಸ್ ಹೊರತಂದಿರುವುದು ಇದೇ ಕಾರಣಕ್ಕೆ.

ತಾನು ಈ ಹಿಂದೆ ಹೊರತಂದ ಮಿಡ್ ರೇಂಜ್ ಫೋನುಗಳ ಮಾನದಂಡವನ್ನು ಮತ್ತಷ್ಟು ಎತ್ತರಿಸುವ ಸಲುವಾಗಿ ಅದೀಗ ಒನ್‌ಪ್ಲಸ್ ತನ್ನ ನಾರ್ಡ್ 5 ಮತ್ತು ನಾರ್ಡ್ CE 5 ಸ್ಮಾರ್ಟ್‌ಫೋನ್‌ಗಳನ್ನು ಇಂದು ಮಾರುಕಟ್ಟೆಗೆ ತಂದಿದೆ. ಆಕರ್ಷಕ ಬೆಲೆಯಲ್ಲಿ ಫ್ಲಾಗ್‌ಶಿಪ್ ದರ್ಜೆಯ ಕಾರ್ಯಕ್ಷಮತೆಯನ್ನು ಈ ಮೂಲಕ ಒದಗಿಸಿದೆ. ರೈಸಿಂಗ್ ದಿ ಬಾರ್ ಅನ್ನುತ್ತಾರಲ್ಲ, ಅದನ್ನು ಹೀಗೆ ಮಾಡಿ ತೋರಿಸಿದೆ.

ಒನ್‌ಪ್ಲಸ್ ನಾರ್ಡ್ 5 ಈ ಸರಣಿಯ ಪ್ರಮುಖ ಆಕರ್ಷಣೆ.

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8s ಜನರೇಷನ್ 3 ಪ್ರೊಸೆಸರ್‌ನಿಂದ ಚಾಲಿತವಾಗಿರುವ ಇದು, 12GB LPDDR5X RAM ಮತ್ತು UFS 4.0 ಸ್ಟೋರೇಜ್ ಹೊಂದಿದೆ. ಗೇಮರ್‌ಗಳು, ಮಲ್ಟಿಟಾಸ್ಕಿಂಗ್ ಮಾಡುವವರು ಮತ್ತು ನಿರಂತರ ಬಳಕೆದಾರರಿಗೆ ಸೂಕ್ತವಾದ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ.

6.74-ಇಂಚಿನ 1.5K AMOLED ಡಿಸ್‌ಪ್ಲೇ 144Hz ರಿಫ್ರೆಶ್ ರೇಟ್ ಮತ್ತು 1,800 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಈ ಫೋನಿನ ಸ್ಕ್ರೀನು ತೀಕ್ಷ್ಣವಾದ ಸೂರ್ಯನ ಬೆಳಕಿನಲ್ಲೂ ಕಣ್ಣಿಗೆ ಸ್ಪಷ್ಟವಾಗಿಯೇ ಕಾಣುತ್ತದೆ. ಫೋನ್ ಅಂದರೆ ಕ್ಯಾಮರಾ ಅಂತ ನಂಬಿರುವ ಯುಗ ಇದು.

ನಾರ್ಡ್ 5 ಸೋನಿಯ LYT-700 50MP ಸೆನ್ಸರ್ OIS ಜೊತೆಗೆ ಹೊಂದಿದ್ದು, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳು 4K ವೀಡಿಯೊವನ್ನು 60fpsನಲ್ಲಿ ಬೆಂಬಲಿಸುತ್ತವೆ, HDR ಮತ್ತು LivePhotoನಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ. ಸುಧಾರಿತ ಕ್ರಯೋ-ವೆಲಾಸಿಟಿ ತಂಪಾಗಿಸುವ ವ್ಯವಸ್ಥೆಯಿಂದಾಗಿ ಫೋನು ಬೇಗ ಬಿಸಿಯಾಗುವುದಿಲ್ಲ. ಇದರ ಜತೆಗೇ ಬಂದಿರುವ, ವನ್‌ಪ್ಲಸ್ ನಾರ್ಡ್ CE 5 ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತದೆ.

ಇದು ಮೀಡಿಯಾಟೆಕ್ ಡೈಮೆನ್ಸಿಟಿ 8350-AI ಚಿಪ್‌ಸೆಟ್‌ನಿಂದ ಸಜ್ಜುಗೊಂಡಿದ್ದು, AnTuTuನಲ್ಲಿ 1.47 ಮಿಲಿಯನ್‌ಗಿಂತಲೂ ಹೆಚ್ಚಿನ ಸ್ಕೋರ್‌ನೊಂದಿಗೆ ಈ ರೇಂಜಿನ ಫೋನುಗಳಲ್ಲೇ ಅಸಾಧಾರಣ ಅನ್ನಿಸಿಕೊಂಡಿದೆ.

6.77-ಇಂಚಿನ 120Hz AMOLED ಡಿಸ್‌ಪ್ಲೇ, ದೊಡ್ಡ 5500mAh ಬ್ಯಾಟರಿ 100W SUPERVOOC ವೇಗದ ಚಾರ್ಜಿಂಗ್‌ನೊಂದಿಗೆ, ಮತ್ತು OIS ಜೊತೆಗಿನ ಕ್ಯಾಮೆರಾ ಸೆಟಪ್ ಇದನ್ನು ದಿನಬಳಕೆಯ ಆಪ್ತಮಿತ್ರನನ್ನಾಗಿ ಮಾಡಿದೆ. ಇವೆಲ್ಲದರ ಜತೆಗೆ, ವನ್‌ಪ್ಲಸ್‌ನ AI ವೈಶಿಷ್ಟ್ಯಗಳು, ವೇಗದ ಚಾರ್ಜಿಂಗ್ ಮತ್ತು ಅತ್ಯುತ್ತಮ ಫೋನುಗಳಲ್ಲಿ ಕಂಡುಬರುವ ಬ್ಯಾಟರಿ ಸುರಕ್ಷತೆಯೂ ಇದರಲ್ಲಿದೆ.

ನಾರ್ಡ್ 5 ಮತ್ತು ನಾರ್ಡ್ CE 5ರೊಂದಿಗೆ, ವನ್‌ಪ್ಲಸ್ ಮಧ್ಯಮ ಶ್ರೇಣಿ ಮತ್ತು ಫ್ಲಾಗ್‌ಶಿಪ್ ನಡುವಿನ ಗೆರೆಯನ್ನು ಪರಿಣಾಮಕಾರಿಯಾಗಿ ಮಸುಕುಗೊಳಿಸಿದೆ. ನೀವು ಗೇಮಿಂಗ್ ಉತ್ಸಾಹಿಯಾಗಿರಲಿ, ಕಂಟೆಂಟ್ ಕ್ರಿಯೇಟರ್ ಆಗಿರಲಿ ಅಥವಾ ಕೇವಲ ವಿಶ್ವಾಸಾರ್ಹ, ಉನ್ನತ ಕಾರ್ಯಕ್ಷಮತೆಯ ಸ್ಮಾರ್ಟ್‌ಫೋನ್‌ಗಳನ್ನು ಬಯಸುವವರಾಗಿರಲಿ, ಈ ಎರಡು ಫೋನುಗಳನ್ನು ಗಮನಿಸಬಹುದು. ಈ ಫೋನುಗಳ ಬೆಲೆ ಹೀಗಿದೆ.

Product Variant

  • 8+128GB
  • 8+256GB
  • 12+256GB

Net Effective Price

  • INR 22,999
  • INR 24,999
  • INR 26,999