Asianet Suvarna News Asianet Suvarna News

Honor Magic V: ಹೊಸ ವರ್ಷದಲ್ಲಿ ಹಾನರ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ!

*ಒಪ್ಪೋ ಬಳಿಕ ಮತ್ತೊಂದು ಚೀನಾ ಕಂಪನಿ ಹಾನರ್‌ನಿಂದ ಫೋಲ್ಡಬಲ್ ಫೋನ್
*ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ ಪ್ರೊಸೆಸರ್ ಹೊಂದಿದ ಮೊದಲ ಮಡಚಬಹುದಾದ ಮೊಬೈಲ್
*ಸ್ಯಾಮ್ಸಂಗ್ ಜೆಡ್ ರೀತಿಯ ಕೆಲವು ಫೀಚರ್‌ಗಳನ್ನೂ ಮ್ಯಾಜಿಕ್ ಕೂಡ ಹೊಂದಿರಬಹುದು

Honor Magic V foldable phone may launch in next year
Author
Bengaluru, First Published Dec 24, 2021, 12:35 PM IST

Tech Desk: ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದಾಗಿಯೇ ಪ್ರತಿಯೊಂದು ಕಂಪನಿಯು ಈಗ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿವೆ. ಸ್ಯಾಮ್ಸಂಗ್ (Samsung), ಒಪ್ಪೋ (Oppo) ನಂತರ ಈಗ ಹಾನರ್ (Honor) ಕೂಡ ಅದೇ ಹಾದಿಯನ್ನು ತುಳಿದಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರಾದ ಹಾನರ್ ತನ್ನ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್, ಹಾನರ್ ಮ್ಯಾಜಿಕ್‌ ವಿ (Honor Magic V) ಬಿಡುಗಡೆಯನ್ನು ಮಾಹಿತಿಯನ್ನು ಹಂಚಿಕೊಂಡಿದೆ. ಹಾಗಂತ ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ದಿನಾಂಕದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ ಹಾಗೂ ಕೆಲವು ವರದಿಗಳ ಪ್ರಕಾರ ಕಂಪನಿಯು ತನ್ನ ಈ ಪೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಮುಂದಿನ ವರ್ಷದ ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ಕಂಪನಿಯು ಫೋಲ್ಡಬಲ್ ಸ್ಮಾರ್ಟ್‌ ಸಂಬಂಧ ಒಂದಿಷ್ಟು ಭಾವಚಿತ್ರಗಳನ್ನು ಹಾಗೂ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸ್ಮಾರ್ಟ್‌ಫೋನ್ ಖರೀದಿದಾರರಲ್ಲಿ ಕುತೂಹಲವನ್ನ ಹೆಚ್ಚಿಸುವ ಕೆಲಸವನ್ನು ಮಾಡಿದೆ.

OnePlus 10Pro ಜನವರಿಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತ

ಸೋಷಿಯಲ್ ಮೀಡಿಯಾಗಳಾದ Weibo ಮತ್ತು Twitter ನಲ್ಲಿ ಕಂಪನಿಯು ಮ್ಯಾಜಿಕ್ ವಿ ಪೋಲ್ಡಬಲ್  (Magic V) ಸ್ಮಾರ್ಟ್‌ಫೋನ್ ಭಾವಚಿತ್ರವನ್ನು ಹಂಚಿಕೊಂಡಿದ್ದು, ವ್ಯಾಪಕ ಪ್ರತಿಕ್ರಿಯೆವ್ಯಕ್ತವಾಗಿದೆ. "ನಿಮ್ಮ ಎಲ್ಲಾ ಸಾಮರ್ಥ್ಯವನ್ನು ಬಹಿರಂಗಪಡಿಸಿ. #HONORMagicV HONOR ನ ಮೊದಲ ಫೋಲ್ಡಬಲ್ ಫ್ಲ್ಯಾಗ್‌ಶಿಪ್ ಫೋನ್ ಆಗಿದೆ" ಎಂದು ಕಂಪನಿಯು ಟ್ವಿಟರ್‌ನ ತನ್ನ ಖಾತೆಯಲ್ಲಿ ಹೇಳಿಕೊಂಡಿದೆ.  ಅದೇ ರೀತಿ,  Weiboನಲ್ಲೂ, "ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಅನ್ನು ಶೀಘ್ರವೇ ಪರಿಚಯಿಸಲಾಗುವುದು." ಈ ರೀತಿಯ ಸಂದೇಶಗಳನ್ನು ಹಂಚಿಕೊಳ್ಳಲಾಗಿದೆ. 

ಮಡಚಬಹುದಾದ ಸ್ಮಾರ್ಟ್‌ಫೋನ್‌ನ ಹಿಂಜ್ ಅನ್ನು ತೋರಿಸುವ ಟೀಸರ್ ಅನ್ನು ಕಂಪನಿಯು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದೆ. ಹಿಂಜ್ ಪುಸ್ತಕದಂತಹ ಹಿಂಜ್ ಅಥವಾ ಕ್ಲಾಮ್‌ಶೆಲ್ ಫೋಲ್ಡ್ ವಿನ್ಯಾಸವಾಗಿದೆಯೇ ಎಂದು ವಿವರಣೆಯಲ್ಲಿ ಯಾವುದೇ ರೀತಿಯಲ್ಲಿ ನಿರ್ದಿಷ್ಟಪಡಿಸಿಲ್ಲ. ಕಂಪನಿ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಹಾನರ್ ಮ್ಯಾಜಿಕ್ ವಿ (Honor Magic V) ಸಹ ಸಮತಟ್ಟಾದ ಅಂಚುಗಳೊಂದಿಗೆ ಕಂಡುಬರುತ್ತದೆ. ಇಷ್ಟಾಗಿಯೂ ಪೋಲ್ಡಬಲ್ ಸ್ಮಾರ್ಟ್‌ಪೋನ್ ಬಗ್ಗೆ ಕಂಪನಿಯೂ ಹೆಚ್ಚಿನ ಮಾಹಿತಿಯನ್ನೇನೂ ಬಹಿರಂಗಪಡಿಸಿಲ್ಲ.

 

 

ದಿ ಎಲೆಕ್ ಪ್ರಕಾರ, ಇದು ಸ್ಯಾಮ್ಸಂಗ್ನ Z ಫೋಲ್ಡ್ ಸ್ಮಾರ್ಟ್ಫೋನ್ಗಳಂತೆಯೇ 8.03-ಇಂಚಿನ ಫೋಲ್ಡಿಂಗ್ ಆಂತರಿಕ ಡಿಸ್ಪ್ಲೇ ಮತ್ತು 6.45-ಇಂಚಿನ ಹೊರಗಿನ ಪ್ರದರ್ಶಕ ಒಳಗೊಂಡಿರಬಹುದು. ವರದಿಗಳ ಪ್ರಕಾರ, ಹಾನರ್ ಮ್ಯಾಜಿಕ್ ವಿ (Honor Magic V) ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ ಮತ್ತು ಇದು  ಕ್ವಾಲಕಾಮ್ ಸ್ನ್ಯಾಪ್ ಡ್ರಾಗನ್ 8 ಜೆನ್ ಪ್ರೊಸೆಸರ್ (Qualcomm Snapdragon 8 Gen 1 SoC) ನಿಂದ ನಡೆಸಲ್ಪಡುವ ಮೊದಲ ಮಡಚಬಹುದಾದ ಸ್ಮಾರ್ಟ್ಫೋನ್ ಆಗಿರುತ್ತದೆ. ಈ ಫೋಲ್ಡಬಲ್ ಫೋನ್ನ ಬೆಲೆ ಬಿಡುಗಡೆಯಾದ ನಂತರ CNY 10,000  ಇರುವ ನಿರೀಕ್ಷೆಯಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಸರಿಸುಮಾರು 1.18 ಲಕ್ಷ ರೂಪಾಯಿಯಾಗಬಹುದು.

ಡಿ.26ರಿಂದ ಭಾರತದಲ್ಲಿ Asus ROG phone 5 Ultimate ಮಾರಾಟ, ಇಲ್ಲಿದೆ ಫೋನ್ ಬೆಲೆ ಹಾಗೂ ವಿಶೇಷತೆ!

ಮಡಚಬಹುದಾದ ಫೋನ್ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಟೆಕ್ಎಆರ್ಸಿ ಪ್ರಕಾರ, ಫೋಲ್ಡಬಲ್ ಸ್ಮಾರ್ಟ್ಫೋನ್ಗಳು 2021 ರಲ್ಲಿ ಭಾರತದಲ್ಲಿ ಮಾರಾಟದಲ್ಲಿ 638 ಶೇಕಡಾ ಹೆಚ್ಚಳವನ್ನು ಹೊಂದಿದ್ದು, 2022 ರಲ್ಲಿ ಮಾರಾಟವು ದಾಖಲೆಯ 3 ಲಕ್ಷ ಯುನಿಟ್ ತಲುಪಬಹುದು ಎಂದು ಅಂದಾಜಿಸಲಾಗುತ್ತಿದೆ. ಸ್ಯಾಮ್ಸಂಗ್ ನಂತರದಲ್ಲಿ ಚೀನಾದ ಸಂಸ್ಥೆಯಾದ OPPO ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್ಫೋನ್, 'Find N' ಅನ್ನು ಪರಿಚಯಿಸಿದೆ, ಇದು ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ, ಒಳ ಮತ್ತು ಹೊರ ಪರದೆಗಳಲ್ಲಿ ಸೆಲ್ಫಿ ಕ್ಯಾಮ್ಗಳು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 CPU ಮತ್ತು 12GB RAM ಅನ್ನು ಒಳಗೊಂಡಿದೆ. ಈಗಾಗಲೇ ಸ್ಯಾಮ್ಸಂಗ್ ಕೂಡ ತನ್ನ ಫೋಲ್ಡಬಲ್ ಸ್ಮಾರ್ಟ್‌ಫೋನುಗಳ ಮೂಲಕ ಹೆಚ್ಚು ಗಮನ ಸೆಳೆದಿದ್ದು, ಮುಂಬರುವ ದಿನಗಳಲ್ಲಿ ಈ ಫೋನುಗಳಿಗೆ ಬೇಡಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios