Cheapest 5G Smartphone: ಫ್ಲಿಪ್‌ಕಾರ್ಟ್‌ನಲ್ಲಿ G35 5G ಸ್ಮಾರ್ಟ್‌ಫೋನ್ ಕೇವಲ 999 ರೂ.ಗೆ ಲಭ್ಯ. 50MP ಕ್ಯಾಮೆರಾ, 5000mAh ಬ್ಯಾಟರಿ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
5G Smartphone: ನೀವು 5G ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡಿಕೊಂಡಿದ್ದೀರಾ? 4G ಸ್ಮಾರ್ಟ್‌ಫೋನ್‌ನ್ನು 5Gಗೆ ಅಪ್‌ಗ್ರೇಡ್ ಮಾಡಿಕೊಳ್ಳಲು ಮುಂದಾಗುತ್ತಿರುವ ಜನತೆಗೆ ಗುಡ್‌ನ್ಯೂಸ್ ಸಿಕ್ಕಿದೆ. ಈ ಲೇಖನ ಅತ್ಯಧಿಕ ಫೀಚರ್ಸ್ ಹೊಂದಿರುವ 5G ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ಸಿಗುತ್ತಿರುವ ಮಾಹಿತಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಬೆಲೆ ಕೈಗೆಟುಕುತ್ತಿದ್ದು, ನಿಮ್ಮ ಬಜೆಟ್ ಕಡಿಮೆಯಾಗಿದ್ರೆ ಇದು ನಿಮಗೆ ಒಳ್ಳೆಯ ಆಯ್ಕೆಯಾಗುವ ಸಾಧ್ಯತೆಗಳಿವೆ. ಕಡಿಮೆ ಬೆಲೆ ಹೊಂದಿರುವ ಈ ಫೋನ್ 50MP ಸಾಮರ್ಥ್ಯದ ಕ್ಯಾಮೆರಾ ಹೊಂದಿದೆ. ಯಾವುದು ಈ ಫೋನ್ ಎಂಬುದನ್ನು ನೋಡೋಣ ಬನ್ನಿ.
ಆನ್‌ಲೈನ್ ಮಾರುಕಟ್ಟೆಯ ದೈತ್ಯ ವೇದಿಕೆಯಾಗಿರುವ ಫ್ಲಿಪ್‌ಕಾರ್ಟ್ ನಲ್ಲಿ ಆರಂಭವಾಗಿರುವ ಸೇಲ್ ಇನ್ನೂ ಮುಕ್ತಾಯವಾಗಿಲ್ಲ. ಈ ಸೇಲ್ ನಡಿಯಲ್ಲಿಯೇ ಗ್ರಾಹಕರಿಗೆ 50MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಕೇವಲ 999 ರೂಪಾಯಿಗೆ ಸಿಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊರೊಲಾ ಕಂಪನಿಯ G35 5G ಸ್ಮಾರ್ಟ್‌ಫೋನ್ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಮೊಟೊರೊಲಾ G35 5G ಸ್ಮಾರ್ಟ್‌ಫೋನ್ ಮೂಲಬೆಲೆ 12,499 ರೂಪಾಯಿ ಆಗಿದೆ. ಇದೀಗ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರಂನಲ್ಲಿ ಈ ಸ್ಮಾರ್ಟ್‌ಫೋನ್‌ನ್ನು 9,999 ರೂಪಾಯಿಗೆ ಲಿಸ್ಟ್ ಮಾಡಲಾಗತಿದೆ. ಮೊಟೊರೊಲಾ G35 5G ಸ್ಮಾರ್ಟ್‌ಫೋನ್ 4GB RAM ಮತ್ತು 128GB ಇಂಟರನಲ್ ಸ್ಟೋರೇಜ್ ಜೊತೆಯಲ್ಲಿ ಸಿಗುತ್ತಿದೆ.
ಮೊಟೊರೊಲಾ G35 5G ಸ್ಮಾರ್ಟ್‌ಫೋನ್ ಫೀಚರ್ಸ್
Camera And Processor: ಮೊಟೊರೊಲಾ G35 5G ಸ್ಮಾರ್ಟ್‌ಫೋನ್ ಕಾರ್ಯಕ್ಷಮತೆ ಬೂಸ್ಟ್ ಮಾಡಲು ಕಂಪನಿ T760 ಆಕ್ಟಾ ಕೋರ್ ಪ್ರೊಸೆಸರ್ ಬಳಕೆ ಮಾಡಿದೆ. ಫೋಟೋಗ್ರಾಫಿಗಾಗಿ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50MP ಸೆಕೆಂಡರಿ ಕ್ಯಾಮೆರಾ 8MP ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಾಗಿ 16MP ಸಾಮರ್ಥ್ಯದ ಕ್ಯಾಮೆರಾ ನೀಡಲಾಗಿದೆ.
ಇದನ್ನೂ ಓದಿ: 5160mAh ಸಾಮರ್ಥ್ಯದ 64GB ಸ್ಟೋರೇಜ್ 5G ಸ್ಮಾರ್ಟ್‌ಫೋನ್ ಮೇಲೆ 23% ಡಿಸ್ಕೌಂಟ್
Battery And Display: ಮೊಟೊರೊಲಾ G35 5G ಸ್ಮಾರ್ಟ್‌ಫೋನ್ 20W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಈ ಪೋನ್ 5000 ಎಂಎಹೆಚ್ ಪವರ್‌ಫುಲ್ ಬ್ಯಾಟರಿಯನ್ನು ಹೊಂದಿದೆ. ಈ ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್ 6.72 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಗ್ರಾಹಕರು ಕೆಲವು ವಿಧಾನಗಳನ್ನು ಬಳಸುವ ಮೂಲಕ 1,000 ರೂ.ಗೂ ಕಡಿಮೆ ದರದಲ್ಲಿ ಖರೀದಿಸುವ ಸುವರ್ಣವಕಾಶವನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ.
ಕಡಿಮೆ ಬೆಲೆಯಲ್ಲಿ ಖರೀದಿಸುವ ವಿಧಾನ
ಫ್ಲಿಪ್‌ಕಾರ್ಟ್‌ನಲ್ಲಿ ಮೊಟೊರೊಲಾ G35 5G ಸ್ಮಾರ್ಟ್‌ಫೋನ್‌ನ್ನು 9,999 ರೂ.ಗಳಿಗೆ ಲಿಸ್ಟ್ ಮಾಡಲಾಗಿದೆ. ಈ ಫೋನ್ ಮೇಲೆ 9,000 ರೂ.ವರೆಗೆ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಮೂಲಕ 999 ರೂ.ಗೆ ಹೊಸ ಫೋನ್ ಖರೀದಿಸಬಹುದು. ನಿಮ್ಮ ಹಳೆಯ ಸ್ಮಾರ್ಟ್ಫಫೋನ್ ಕಾರ್ಯನಿರ್ವಹಿಸುವ ಕಂಡೀಷನ್ ಮೇಲೆ ಎಕ್ಸ್‌ಚೇಂಜ್ ಬೆಲೆ ನಿರ್ಧರಿಸಲಾಗುತ್ತದೆ .
ಇದನ್ನೂ ಓದಿ: ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ 8GB RAM, 256GB ಸ್ಟೋರೇಜ್ ಹೊಂದಿರೋ 5G ಸ್ಮಾರ್ಟ್‌ಫೋನ್
