Moto Tab G70: ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡ ಮೊಟೊರೊಲಾದ ಹೊಸ ಟ್ಯಾಬ್: ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ!
ಫ್ಲಿಪ್‌ಕಾರ್ಟ್ ಮೈಕ್ರೋಸೈಟ್‌ಲ್ಲಿ ಮೊಟೊರೊಲಾದ Moto Tab G70 ಬಿಡುಗಡೆ ದಿನಾಂಕವನ್ನು ಮತ್ತು ಬೆಲೆಯನ್ನು ಉಲ್ಲೇಖಿಸಿಲ್ಲ, ಆದರೆ ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ
Tech Desk: ಮೊಟೊರೊಲಾದ ಮುಂಬರುವ ಟ್ಯಾಬ್ಲೆಟ್‌ಅನ್ನು (Motorola Tab) ಮೈಕ್ರೋಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಪಟ್ಟಿ ಮಾಡಲಾಗಿದ್ದು Moto Tab G70 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಬಹುದು. ಮೈಕ್ರೋಸೈಟ್ Moto Tab G70 ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲವಾದರೂ ಅದರ ಎಲ್ಲಾ ಪ್ರಮುಖ ಫೀಚರ್ ಬಹಿರಂಗಗೊಂಡಿದೆ. ಮುಂಬರುವ ಟ್ಯಾಬ್ಲೆಟ್‌ನ ವಿನ್ಯಾಸವನ್ನು (Design) ಮೈಕ್ರೋಸೈಟ್‌ನಲ್ಲಿರುವ ಚಿತ್ರಗಳಲ್ಲಿ ನಾವು ಕಾಣಬಹುದು. Moto Tab G70, MediaTek Helio G90T SoC ಚಾಲಿತವಾಗಿದ್ದು ಮತ್ತು ಇದು 11-ಇಂಚಿನ 2K ಡಿಸ್ಪ್ಲೇ ಜೊತೆಗೆ 400 nits peak brightness ಹೊಂದಿದೆ. ಮೊಟೊರೊಲಾದ ಟ್ಯಾಬ್ಲೆಟ್ Dolby Atmos ಬೆಂಬಲವನ್ನು ಸಹ ಹೊಂದಿದೆ.
Moto Tab G70 ಗಾಗಿ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಮೊಟೊರೊಲಾ ಟ್ಯಾಬ್ಲೆಟ್‌ನ ಬಿಡುಗಡೆ ದಿನಾಂಕವನ್ನು ಮತ್ತು ಬೆಲೆಯನ್ನು ಉಲ್ಲೇಖಿಸಿಲ್ಲ, ಆದರೆ ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. Moto Tab G70 ಅನ್ನು Wi-Fi ಮತ್ತು Wi-Fi + ಸೆಲ್ಯುಲಾರ್ ರೂಪಾಂತರಗಳಲ್ಲಿ ನೀಡಲಾಗುವುದು. ಇದನ್ನು ಮಾಡರ್ನಿಸ್ಟ್ ಟೀಲ್ ಕಲರ್‌ವೇಯಲ್ಲಿ ( Teal colourway) ನೀಡಲಾಗುವುದು. ಚಿತ್ರಗಳ ಪ್ರಕಾರ, ಹಿಂಭಾಗವು ಒಂದೇ ಕ್ಯಾಮೆರಾ ಸೆನ್ಸರ್‌ನೊಂದಿಗೆ ಎರಡು-ಟೋನ್ ವಿನ್ಯಾಸವನ್ನು ಪಡೆಯಲಿದ್ದು ಮೂಲೆಯಲ್ಲಿ ಫ್ಲ್ಯಾಷ್ ಅನ್ನು ಇರಿಸಲಾಗಿದೆ.
ಇದನ್ನೂ ಓದಿ: Moto G71 Launch: ಉತ್ತಮ ಫೀಚರ್ಸ್‌ಗಳೊಂದಿಗೆ ಮೊಟೊರೊಲಾ ಹೊಸ ಬಜೆಟ್ ಸ್ಮಾರ್ಟ್‌ಫೋನ್!
Moto Tab G70 ಅನ್ನು ಡಿಸ್ಪ್ಲೇಯ ಸುತ್ತಲೂ ದಪ್ಪ ಬೆಜೆಲ್‌ಗಳೊಂದಿಗೆ ತೋರಿಸಲಾಗಿದೆ. ವಾಲ್ಯೂಮ್ ಬಟನ್‌ಗಳನ್ನು ಬಲ ಭಾಗದಲ್ಲಿ ನೀಡಲಾಗಿದೆ. ಆದರೆ ಪವರ್ ಬಟನ್ ಎರಡು ಸ್ಪೀಕರ್ ಗ್ರಿಲ್‌ಗಳ ಜೊತೆಗೆ ಮೇಲ್ಭಾಗದಲ್ಲಿದೆ. ಕೆಳಭಾಗದಲ್ಲಿ ಉಳಿದ ಎರಡು ಸ್ಪೀಕರ್ ಗ್ರಿಲ್‌ಗಳು ಮತ್ತು USB ಟೈಪ್-ಸಿ ಪೋರ್ಟ್ ಇದೆ.
Moto Tab G70 specifications
ಮುಂಬರುವ Moto Tab G70 ಆಂಡ್ರಾಯ್ಡ್ 11 ಮೇಲೆ ರನ್ ಮಾಡುತ್ತದೆ. ಇದು 11-ಇಂಚಿನ 2K (2,000x1,200 ಪಿಕ್ಸೆಲ್‌ಗಳು) LCD ಡಿಸ್ಪ್ಲೇ ಜೊತೆಗೆ 400 nits peak brightness ಮತ್ತು ಕಣ್ಣಿನ ಕಂಫರ್ಟ್‌ಗಾಗಿ TUV ಪ್ರಮಾಣೀಕರಣವನ್ನು ಹೊಂದಿದೆ. ಇದು 4GB RAM ನೊಂದಿಗೆ MediaTek Helio G90T SoC ನಿಂದ ಚಾಲಿತವಾಗುತ್ತದೆ. 64GB ಆನ್‌ಬೋರ್ಡ್ ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ ವಿಸ್ತರಿಸಬಹುದು (1TB ವರೆಗೆ).
ಇದನ್ನೂ ಓದಿ: Moto Edge X30: ಮೊಟೊರೊಲಾ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆ
ಕ್ಯಾಮೆರಾ ಗಮನಿಸುವುದಾದರೆ, ಇದು 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಜತೆಗೆ ಬರಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, 802.11 a/b/g/n/ac ಜೊತೆಗೆ ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ v5.1 ಸೇರಿವೆ. Moto Tab G70 ಅದರ ಕ್ವಾಡ್ ಸ್ಪೀಕರ್ ಸೆಟಪ್‌ಗಾಗಿ Dolby Audio ಬೆಂಬಲದೊಂದಿಗೆ ಬರುತ್ತದೆ.ಇವೆಲ್ಲವೂ 20W ಕ್ಷಿಪ್ರ ವೇಗದ ಬೆಂಬಲದೊಂದಿಗೆ 7,700mAH ಬ್ಯಾಟರಿಯಿಂದ ಬೆಂಬಲಿತವಾಗಿದೆ. IP52-ರೇಟೆಡ್ Moto Tab G70 ಅಳತೆ 258.4x163x7.5mm ಮತ್ತು 490 ಗ್ರಾಂ ತೂಗುತ್ತದೆ.
Moto Tab G70 ಗೂಗಲ್ ಎಂಟರ್‌ಟೈನ್‌ಮೆಂಟ್ ಸ್ಪೇಸ್ ಮತ್ತು ಗೂಗಲ್ ಕಿಡ್ಸ್ ಸ್ಪೇಸ್‌ನಂತಹ ಸಾಫ್ಟ್‌ವೇರ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. IP52 ವಾಟರ್ ರಿಪೆಲ್ಲಂಟ್ ವಿನ್ಯಾಸ, ಡ್ಯುಯಲ್ ಮೈಕ್ರೊಫೋನ್‌ಗಳು, ಕೀಬೋರ್ಡ್ ಸಂಪರ್ಕಕ್ಕಾಗಿ ಪೋಗೊ ಪಿನ್‌ಗಳು ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಸಹ ಪಡೆಯುತ್ತದೆ.