ಭಾರತದಲ್ಲಿ ನೋಕಿಯಾ ಲ್ಯಾಪ್‌ಟಾಪ್ ಬಿಡುಗಡೆ; ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ !
ಮೊಬೈಲ್ ಫೋನ್ ಮೂಲಕ ವಿಶ್ವದಲ್ಲೇ ಕ್ರಾಂತಿ ಮೂಡಿಸಿದ ನೋಕಿಯಾ ಇದೀಗ ಲ್ಯಾಪ್‌ಟಾಪ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬ್ರ್ಯಾಂಡ್ ಲ್ಯಾಪ್‌ಟಾಪ್ ಲಭ್ಯವಿದ್ದರೂ ಆಧುನಿಕ ತಂತ್ರಜ್ಞಾನದ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಇದಕ್ಕೆ ಫ್ಲಿಪ್‌ಕಾರ್ಟ್ ಸಾಥ್ ನೀಡಿದೆ.
ಬೆಂಗಳೂರು(ಡಿ.15): ಭಾರತದ ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಬಹು ನಿರೀಕ್ಷಿತ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ 1.1 ಕೆಜಿ ತೂಕವಿದ್ದು, 16.8 ಎಂಎಂ ಸ್ಲೀಕ್ ಆಗಿದೆ. 14 ಇಂಚುಗಳ ಪೂರ್ಣ ಎಚ್ ಡಿ ಸ್ಕ್ರೀನ್ ಅನ್ನು ಒಳಗೊಂಡಿರುವ ಈ ಲ್ಯಾಪ್ ಟಾಪ್ ಡಾಲ್ಬಿ ವಿಷನ್ ಅನ್ನು ಒಳಗೊಂಡಿದೆ. ಈ ಮೂಲಕ ಹೊಸ ಲ್ಯಾಪ್ ಟಾಪ್ ಅಲ್ಟ್ರಾ-ವಿವಿಡ್ ಚಿತ್ರದ ಗುಣಮಟ್ಟವನ್ನು ನೀಡುತ್ತದೆ. ಸ್ಲೀಕ್ ಮತ್ತು ಶಕ್ತಿಶಾಲಿ ಲ್ಯಾಟಪ್ ಟಾಪ್ ನ ಬೆಲೆ 59,990 ರೂಪಾಯಿಗಳಾಗಿದ್ದು, ಡಿಸೆಂಬರ್ 18, 2020 ರಿಂದ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಇದರ ಮೂಲಕ ಗ್ರಾಹಕರು/ಬಳಕೆದಾರರು ಅಲ್ಟ್ರಾ-ಲೈಟ್-ಆನ್-ದಿ-ಗೋ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
4G ಸಪೋರ್ಟ್ ನೊಕಿಯಾ 215, ನೊಕಿಯಾ 225 ಫೋನ್ ಬಿಡುಗಡೆ!.
ಗ್ರಾಹಕರ ಕೆಲಸಗಳು ಮತ್ತು ಮನೋರಂಜನೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ 4.2 GHz ಟರ್ಬೊ ಇಂಟೆಲ್ i5 10 ನೇ ತಲೆಮಾರಿನ ಕ್ವಾಡ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ ಹಾಗೂ ವಿಂಡೋಸ್ 10 ಹೋಂ ಅನ್ನು ಮೊದಲೇ ಸ್ಥಾಪಿಸಲಾಗಿದ್ದು, ಹೆಡ್ ಫೋನ್ ಗಳಿಗೆ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮೊಸ್ ನೊಂದಿಗೆ ಅತ್ಯುತ್ಕೃಷ್ಠವಾದ ಆಡಿಯೋ-ವಿಷ್ಯುವಲ್ ಅನುಭವವನ್ನು ನೀಡಲಿದೆ. 512ಜಿಬಿ ಎನ್ ವಿಎಂಇ ಎಸ್ಎಸ್ ಡಿಯೊಂದಿಗೆ ಇತ್ತೀಚಿನ ಪ್ರೊಸೆಸರ್ ಸೂಪರ್ ಫಾಸ್ಟ್ ಬೂಟ್ ಅಪ್, ಸಂಸ್ಕರಣೆ ಮತ್ತು ಸಿಮ್ಯುಲೇಷನ್ ಗಳು, ಡೇಟಾ ಕ್ರಂಚಿಂಗ್ ಮತ್ತು ವಿಷಯ ರಚನೆಯ ವೇಳೆಯಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದರಲ್ಲಿ ವಿಂಡೋಸ್ ಹೆಲೋ ಫೇಸ್ ಅನ್ಲಾಕ್ ನೊಂದಿಗೆ ಎಚ್ ಡಿ ಐಆರ್, ಬ್ರೈಟ್ ನೆಸ್ ಅನ್ನು ಹೊಂದಿಸಿಕೊಳ್ಳವುದರೊಂದಿಗೆ ಬ್ಯಾಕ್ ಲಿಟ್ ಕೀಬೋರ್ಡ್ ಮತ್ತು ಅತ್ಯುತ್ತಮ ಕಾರ್ಯನಿರ್ವಹಣೆಗೆ ಮಲ್ಟಿಪಲ್ ಗೆಸ್ಚರ್ ಆಯ್ಕೆಗಳು ಇರುವ ಪ್ರೆಸಿಶನ್ ಟಚ್ ಪ್ಯಾಡ್ ಹಾಗೂ ಮನೆಯಿಂದಲೇ ಕೆಲಸ ಮಾಡಲು ಸುಲಭ ಬಳಕೆಗೆ ಸೂಕ್ತವಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
5 ಕ್ಯಾಮೆರಾವುಳ್ಳ Nokia 9 PureView ಬಿಡುಗಡೆ; ಫೀಚರ್ಸ್ ಮತ್ತು ಬೆಲೆ...
ಈ ಹೊಸ ಉತ್ಪನ್ನ ವಿಭಾಗಕ್ಕೆ ನೊಕಿಯಾ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡುವ ಮೂಲಕ ಫ್ಲಿಪ್ ಕಾರ್ಟ್ ನೊಂದಿಗಿನ ನಮ್ಮ ಯಶಸ್ವಿ ಸಹಯೋಗಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಭಾರತದಲ್ಲಿ ಗ್ರಾಹಕರಿಗೆ ನೊಕಿಯಾ ಬ್ರ್ಯಾಂಡೆಡ್ ಲ್ಯಾಪ್ ಟಾಪ್ ಅನ್ನು ನೀಡವಲು ನಾವು ಉತ್ಸುಕರಾಗಿದ್ದೇವೆ. ಈ ಹೊಸ ಲ್ಯಾಪ್ ಟಾಪ್ ಮಾರುಕಟ್ಟೆಯಲ್ಲಿನ ಬೇಡಿಕೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮುನ್ನಡಿ ಇಟ್ಟಿದೆ. ಇದರ ಜೊತೆಗೆ ನೊಕಿಯಾ ಬ್ರ್ಯಾಂಡ್ ಈಗಾಗಲೇ ಭಾರತದಲ್ಲಿ ಜನಪ್ರಿಯವಾಗಿದ್ದು, ಇದರ ಶೈಲಿ, ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಗ್ರಾಹಕರಿಗೆ ನೀಡಲಿದೆ ಎಂದು ನೊಕಿಯಾ ಬ್ರ್ಯಾಂಡ್ ಪಾರ್ಟರ್ ಶಿಪ್ಸ್ ನ ಉಪಾಧ್ಯಕ್ಷ ವಿಪುಲ್ ಮೆಹ್ರೋತ್ರ ಹೇಳಿದರು.
ಫ್ಲಿಪ್ ಕಾರ್ಟ್ ನಲ್ಲಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ನಾವು ನಿರಂತರವಾದ ಪ್ರಯತ್ನಗಳನ್ನು ನಡೆಸಿದ್ದೇವೆ. ಗ್ರಾಹಕರು ಮನೆಯಲ್ಲೇ ಇರುವುದನ್ನು ಹಾಗೂ ಮನೆಯ ಜೀವನ ಶೈಲಿಯಿಂದ ನಮ್ಮ ಕೆಲಸವನ್ನು ವಿನ್ಯಾಸಗೊಳಿಸುವುದರಿಂದ, ಉನ್ನತ-ಮೌಲ್ಯದ ಎಲೆಕ್ಟ್ರಾನಿಕ್ಸ್ ವಿಷಯಕ್ಕೆ ಬಂದಾಗ ಅವರ ಅಗತ್ಯತೆಗಳು ನಮಗೆ ಕೇಂದ್ರಬಿಂದುವಾಗಿದೆ. ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ ನೊಂದಿಗೆ ನಮ್ಮ ಗ್ರಾಹಕರಿಗೆ ಬಹು ವಿಧದ ಕ್ರಿಯಾತ್ಮಕ ಅಗತ್ಯತೆಗಳನ್ನು ಪೂರೈಸುವ ಉತ್ಪನ್ನವನ್ನು ಒದಗಿಸುವುದು ಮಾತ್ರವಲ್ಲದೇ ಅವರ ವೈಯಕ್ತಿಕ ಮತ್ತು ವೃತ್ತಿಪರ ಅಗತ್ಯತೆಗಳನ್ನು ಪೂರೈಸುವ ರೀತಿಯಲ್ಲಿ ದೃಶ್ಯ ಮತ್ತು ಸಂಸ್ಕರಣಾ ಗುಣಮಟ್ಟವನ್ನು ಖಾತ್ರಿಪಡಿಸುತ್ತದೆ. ಈ ದಿಸೆಯಲ್ಲಿ ಭಾರತೀಯ ಗ್ರಾಹಕರ ಅಗತ್ಯಗಳನ್ನು ಒದಗಿಸುವ ನಮ್ಮ ಹಂಚಿಕೆಯ ಗುರಿಯಲ್ಲಿ ನೊಕಿಯಾದೊಂದಿಗಿನ ನಮ್ಮ ಸಹಯೋಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಮಗೆ ಸಂತಸವೆನಿಸುತ್ತಿದೆ ಎಂದು ಫ್ಲಿಪ್ ಕಾರ್ಟ್ ಖಾಸಗಿ ಬ್ರ್ಯಾಂಡ್ ವಿಭಾಗದ ಉಪಾಧ್ಯಕ್ಷ ದೇವ್ ಅಯ್ಯರ್ ಹೇಳಿದರು.
ಆಧುನಿಕ ಡಿವೈಸ್ ಗಳು ನಾವು ಕೆಲಸ ಮಾಡುವ, ಕಲಿಯುವ ಮತ್ತು ಪ್ಲೇ ಮಾಡುವ ರೀತಿಯಲ್ಲಿ ನಮಗೆ ಅಧಿಕಾರ ನೀಡುತ್ತಿವೆ. ಆಧುನಿಕ ಡಿವೈಸ್ ಗಳಲ್ಲಿ ವಿಂಡೋಸ್ 10 ರ ಶಕ್ತಿಯೊಂದಿಗೆ, ಪ್ರತಿಯೊಬ್ಬ ಬಳಕೆದಾರರು ಸುಧಾರಿತ ಉತ್ಪಾದಕತೆ ವೈಶಿಷ್ಟ್ಯಗಳೊಂದಿಗೆ ಅಂತರ್ಗತವಾದ ಹಾಗೂ ಸುರಕ್ಷಿತವಾದ ಅನುಭವವನ್ನು ನಿರೀಕ್ಷಿಸಬಹುದು. ಅಲ್ಲದೇ, ಅದು ಸೃಜನಶೀಲವಾಗಿರಲು ಮತ್ತು ಹೆಚ್ಚಿನದನ್ನು ಮಾಡಲು ಸಹಾಯ ಮಾಡುತ್ತದೆ. ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ನೊಂದಿಗಿನ ಸಹಭಾಗಿತ್ವದಲ್ಲಿ ನೊಕಿಯಾ ಪ್ಯೂರ್ ಬುಕ್ X14 ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದೆ ಹಾಗೂ ಪ್ರತಿಯೊಬ್ಬರಿಗೂ ಅತ್ಯುತ್ಕೃಷ್ಠವಾದ ಉತ್ಪಾದಕತಾ ಪರಿಹಾರಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದು ಮೈಕ್ರೋಸಾಫ್ಟ್ ಇಂಡಿಯಾ ಡಿವೈಸಸ್ ವಿಭಾಗದ ಸಮೂಹ ನಿರ್ದೇಶಕರಾದ ಫರ್ಹಾ ಹಕ್ ಹೇಳಿದರು.
ಆನ್ ಲೈನ್ ಶಿಕ್ಷಣ ಮತ್ತು ಮನೆಯಿಂದಲೇ ಕೆಲಸ ಮಾಡುವುದು ಈಗ ಮಾಮೂಲಿಯಾಗಿದೆ. ಇದರ ಪರಿಣಾಮ ಲ್ಯಾಪ್ ಟಾಪ್ ಗಳಿಗೆ ಬೇಡಿಕೆ 2.3 ಪಟ್ಟು ಹೆಚ್ಚಾಗಿದೆ. ಫ್ಲಿಪ್ ಕಾರ್ಟ್ ಗ್ರಾಹಕರು ಲ್ಯಾಪ್ ಟಾಪ್ ಖರೀದಿಯ ನೆಚ್ಚಿನ ತಾಣವೆನಿಸಿದೆ. ಪ್ರೀಮಿಯಂ ಪಿಕ್ಚರ್ ಕ್ವಾಲಿಟಿ, ಬಹು ಕ್ರಿಯಾತ್ಮಕ, ಅಲ್ಟ್ರಾ ಲೈಟ್ ವೇಟ್ ಮತ್ತು ಸ್ಲೀಕ್ ಡಿಸೈನ್ ನಂತಹ ಲ್ಯಾಪ್ ಟಾಪ್ ಗಳಿಗೆ ಹೆಚ್ಚಿನ ಬೇಡಿಕೆ ಇರುವುದನ್ನು ಲಕ್ಷಾಂತರ ಗ್ರಾಹಕರಲ್ಲಿ ನಡೆಸಿದ ಅವಲೋಕನ ಮತ್ತು ಅಧ್ಯಯನದಿಂದ ಬಹಿರಂಗವಾಗಿದೆ. ಈ ಒಳನೋಟಗಳ ಮಾರ್ಗದರ್ಶನದೊಂದಿಗೆ ಫ್ಲಿಪ್ ಕಾರ್ಟ್ ನೊಕಿಯಾದೊಂದಿಗೆ ಸೇರಿ ಲ್ಯಾಪ್ ಟಾಪ್ ಬಳಕೆದಾರರ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.