Asianet Suvarna News Asianet Suvarna News

Smartphone Release: ಮೋಟೋರೋಲಾ ಎಡ್ಜ್ ಎಕ್ಸ್ ಬಿಡುಗಡೆಗೆ ಸಿದ್ಥತೆ

ಲೆನೋವೋ (Lenovo) ಒಡೆತನದ ಮೋಟೋರೋಲಾ (Motorola) ಕಂಪನಿಯು ಎಡ್ಜ್ ಸೀರೀಸ್‌ನಲ್ಲಿ ಎಡ್ಜ್ ಎಕ್ಸ್ ಎಂಬ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದೆ. ಲೆನೋವೋ ಕಂಪನಿಯ ಅಧಿಕಾರಿಯೊಬ್ಬರು ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಸರ್‌ವೊಂದನ್ನು ಷೇರ್ ಮಾಡಿಕೊಂಡಿದ್ದಾರೆ. ಮೋಟೋರೋಲಾ ಎಡ್ಜ್ ಎಕ್ಸ್ ಗೇಮಿಂಗ್ ಸ್ಮಾರ್ಟ್‌ಫೋನ್ ಆಗಿರಬಹುದು ಎಂದು ಹೇಳಲಾಗುತ್ತಿದೆ.

Motorola Edge X may launch very soon specialty of new smartphone here
Author
Bengaluru, First Published Nov 8, 2021, 4:18 PM IST

ಎಡ್ಜ್ ಸೀರೀಸ್‌ ಸ್ಮಾರ್ಟ್‌ಫೋನುಗಳ ಮೂಲಕ ಸಂಚಲನ ಸೃಷ್ಟಿಸಿರುವ ಮೋಟೋರೋಲಾ ಇದೀಗ ಇದೇ ಸೀರೀಸಿನಲ್ಲಿ ಮತ್ತೊಂದು ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದೆ. ಮೋಟೋರೋಲಾ ಎಡ್ಜ್ ಎಕ್ಸ್ (Motorola Edge X) ಸ್ಮಾರ್ಟ್‌ಫೋನ್ ಲಾಂಚ್ ಬಗ್ಗೆ ಕಂಪನಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಏತನ್ಮಧ್ಯೆ, ಮೋಟೋರೋಲಾ ಕಂಪನಿಯು ಮೋಟೋ ಎ10 (Moto A10), ಮೋಟೋ ಎ50 (Moto A50) ಮತ್ತು ಮೋಟೋ ಎ70 (Moto A70) ಫೀಚರ್ ಫೋನುಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಫೋನುಗಳು ಅಗತ್ಯವಿರುವ ಸಾಕಷ್ಟು ಫೀಚರ್‌ಗಳನ್ನು ಒಳಗೊಂಡಿವೆ. ಈ ಮೂರೂ ಮಾದರಿಯ ಫೋನುಗಳು 1,750 ಎಂಎಎಚ್ ಸಾಮರ್ಥ್ಯದ ಬ್ಯಾಟರಿ, ಎರಡು ಸಿಮ್‌ಗಳಿಗೆ ಸಪೋರ್ಟ್ ಮಾಡುತ್ತವೆ ಮತ್ತು ಕಂಪನಿಯು ಎರಡು ವರ್ಷ ಮರು ಸ್ವೀಕರಿಸುವ ಗ್ಯಾರಂಟಿಯ ಯೋಜನೆಯನ್ನು ಪ್ರಕಟಿಸುತ್ತಿದೆ. ಈ ಫೋನುಗಳು ಬೆಲೆ 2000 ರೂ.ನೊಳಗೇ ಇರಲಿದೆ ಎನ್ನಲಾಗುತ್ತಿದೆ. 

ಮೋಟೋರೋಲಾ ಬ್ರ್ಯಾಂಡ್ ಒಡೆತನ ಚೀನಾ ಮೂಲದ ಲೆನೋವೋ ಕಂಪನಿಯಲ್ಲಿದೆ. ಲೆನೋವೋ ಅಧಿಕಾರಿಯೊಬ್ಬರು ಮುಂಬರುವ ಮೋಟೋರೋಲಾ ಎಡ್ಜ್ ಎಕ್ಸ್ (Motorola Edge X) ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ,  ಫೋನ್‌ ಬಗೆಗಿನ ಹೆಚ್ಚಿನ ಮಾಹಿತಿಯನ್ನೇನೂ ಅವರು ನೀಡಿಲ್ಲ.

ಶೀಘ್ರ ಮೋಟೋರೋಲಾದಿಂದ 3 ಫೀಚರ್ ಫೋನ್; 2000 ರೂ.ಗಿಂತ ಕಡಿಮೆ?

ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಬಹುದೊಡ್ಡ ಕಂಪನಿ ಎನಿಸಿಕೊಂಡಿರುವ ಮೋಟೋರೋಲಾ, ಕಳೆದ ಆಗಸ್ಟ್‌ನಲ್ಲಿ ಮೋಟೋರೋಲಾ ಎಡ್ಜ್ ಎಸ್ ಪ್ರೊ (Edge S Pro) ಮತ್ತು ಮೊಟೊರೊಲಾ ಎಡ್ಜ್ ಲೈಟ್ (Edge Lite) ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಈ ಎರಡೂ ಸ್ಮಾರ್ಟ್‌ಫೋನುಗಳು ಕ್ರಮವಾಗಿ ಮೊಟೊರೊಲಾ ಎಡ್ಜ್ 20 ಪ್ರೊ (Edge 20 Pro) ಮತ್ತು ಮೊಟೊರೊಲಾ ಎಡ್ಜ್ 20 (Edge 20)ರ ಮರುಬ್ರಾಂಡ್ ಆವೃತ್ತಿಗಳಾಗಿವೆ ಎನ್ನಲಾಗುತ್ತಿದೆ. ಇದೀಗ ಇದೇ ಎಡ್ಜ್ ಸರಣಿಯಲ್ಲಿ ಕಂಪನಿಯು ಮೋಟೋರೋಲಾ ಎಡ್ಜ್ ಎಕ್ಸ್ ಸ್ಮಾರ್ಟ್‌ಫೋನು ಬಿಡುಗಡೆ ಮಾಡುತ್ತಿದೆ.

ಲೆನೋವೋ ಮೊಬೈಲ್ ಬಿಸಿನೆಸ್ ಗ್ರೂಪ್ ಜನರಲ್ ಮ್ಯಾನೇಜರ್ ಚೆನ್ ಜಿನ್ (Chen Jin) ಅವರು Weiboದಲ್ಲಿ ಮಾಡಿರುವ ಪೋಸ್ಟ್ ಪ್ರಕಾರ, ಮೋಟೋರೋಲಾ ಎಡ್ಜ್ ಎಕ್ಸ್ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಬಗ್ಗೆ ಕಂಪನಿಯು ಯೋಜನೆಯನ್ನು ರೂಪಿಸುತ್ತಿದೆ. ಕೆಲವು ಮೂಲಗಳು ಪ್ರಕಾರ, ಈ ಎಡ್ಜ್ ಎಕ್ಸ್ ಸ್ಮಾರ್ಟ್‌ಫೋನ್ ಗೇಮಿಂಗ್ ಫೋನ್ ಆಗಿದೆ. ಜಿನ್ ಅವರು, Moto Edge X is infinitely powerful and full of expectations ಎಂಬ ಟ್ಯಾಗ್‌ಲೈನ್ ಇರುವ ಎಡ್ಜ್ ಎಕ್ಸ್ ಸ್ಮಾರ್ಟ್‌ಫೋನಿನ ಟೀಸರ್ ಕೂಡ ಷೇರ್ ಮಾಡಿಕೊಂಡಿದ್ದಾರೆ. ಹಾಗಾಗಿ, ಶೀಘ್ರವೇ ಮೋಟೋರೋಲಾ ಎಡ್ಜ್ ಎಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ನಿರೀಕ್ಷಿಸಬಹುದಾಗಿದೆ.

ಮೋಟೋ ಇ30 ಲಾಂಚ್
ಲೆನೋವೋ ಒಡೆತನದ ಈ ಮೋಟೋರೋಲಾ ಇದೀಗ ಮೋಟೋ ಇ30 ಎಂಬ ಬಜೆಟ್ ಫೋನ್ ಅನ್ನು ಯುರೋಪಿಯನ್ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಮೋಟೋರೋಲಾ ಮೋಟೋ ಇ30 (Moto E30) ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆ ಸೇರಿದಂತೆ ಇತರೆ ಮಾರುಕಟ್ಟೆಗಳಿಗೆ ಯಾವಾಗ ಲಾಂಚ್ ಆಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಮೋಟೋ ಇ40 ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು.

Deepavali Gift: ಈ 7 ಗ್ಯಾಜೆಟ್ ಕೊಡಬಹುದು, ಜೇಬಿಗೂ ಹೊರೆಯಿಲ್ಲ!

ಮೋಟೋ ಇ40 ಹೊಂದಿರುವ ವಿಶೇಷತೆಗಳನ್ನು ಮೋಟೋ ಇ30 ಸ್ಮಾರ್ಟ್‌ಫೋನ್ ಹೊಂದಿರುವ ಸಾಧ್ಯತೆ ಇದೆ. ಅಂದರೆ, 6.5 ಇಂಚ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, Unisoc T700 ಪ್ರೊಸೆಸರ್ ಇತ್ಯಾದಿ ಸಂಗತಿಗಳನ್ನು ನೀವ ಕಾಣಬಹುದು. ಈ ಎರಡೂ ಫೋನುಗಳ ಮಧ್ಯೆ ಇರುವ ವ್ಯತ್ಯಾಸ ಎಂದರೆ, ಆಪರೇಟಿಂಗ್ ಸಾಫ್ಟ್‌ವೇರ್ ಆಗಿದೆ. ಅಂದರೆ, ಇ40 ಸ್ಮಾರ್ಟ್‌ಫೋನ್ ಆಂಡ್ರಾಯಡ್ 11 (Android 11) ಒಎಸ್ ಆಧರಿತವಾಗಿದ್ದರೆ, ಈಗ ಬಿಡುಗಡೆಯಾಗಿರುವ ಮೋಟೋ ಇ30 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋ ಎಡಿಷನ್ (Go Edition) ಒಎಸ್ ಆಧಾರಿತವಾಗಿದೆ. ಇನ್ನುಳಿದಂತೆ ಸಾಕಷ್ಟು ಸಾಮ್ಯತೆಗಳನ್ನ ಗುರುತಿಸಬಹುದಾಗಿದೆ. 

Follow Us:
Download App:
  • android
  • ios