ಹುವೈ ಹೊರತಂದಿರುವ ಹೊಸ ಜಿಟಿ 2 ವಾಚ್‌ನ ಟ್ಯಾಗ್‌ಲೈನೇ ‘1 ಚಾರ್ಜ್ 2 ವೀಕ್ಸ್‌’; 500 ಹಾಡುಗಳನ್ನು ಸ್ಟೋರ್‌ ಮಾಡುವ ವ್ಯವಸ್ಥೆ; ಎರಡು ಮಾದರಿಗಳಲ್ಲಿ ಲಭ್ಯ

ಸ್ಮಾರ್ಟ್‌ವಾಚ್‌ಗಳಲ್ಲಿ ಚಾರ್ಜ್ ಬೇಗ ಖಾಲಿಯಾಗುತ್ತೆ ಅಂತ ಗೊಣಗೋಹಾಗಿಲ್ಲ. ಹುವೈ ಹೊರತಂದಿರುವ ಹೊಸ ಜಿಟಿ 2 ವಾಚ್‌ನ ಟ್ಯಾಗ್‌ಲೈನೇ ‘1 ಚಾರ್ಜ್ 2 ವೀಕ್ಸ್‌’. ಅಂದರೆ ಎರಡು ವಾರಕ್ಕೊಮ್ಮೆ ಚಾರ್ಜ್ ಮಾಡಿದರೆ ಸಾಕು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಡು ಕೇಳ್ಕೊಂಡು, ಫಿಟ್‌ನೆಸ್‌ಗೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೂ ಚಾರ್ಜ್ ಮುಗಿಯಲ್ಲ. ಇದರಲ್ಲಿ ಕಿರಿನ್‌ ಎ1 ಚಿಪ್‌ಸೆಟ್‌ ಅಳವಡಿಸಲಾಗಿದ್ದು, ಬ್ಯಾಟರಿ ಲೈಫ್‌ ಹೆಚ್ಚಿಸಲಿದೆ. 

ಇದನ್ನೂ ಓದಿ | ಟ್ಯಾಗ್‌ನ ವೈರ್‌ಲೆಸ್‌ ಇಯರ್‌ಬಡ್‌: ಕಿವಿಯಲ್ಲಿದ್ದರೆ ಸಾಕು, ಬದಲಿಸುತ್ತೆ ಮೂಡ್!...

1.39 ಇಂಚುಗಳ ಅಮೋಲ್ಡ್‌ ಡಿಸ್‌ಪ್ಲೇ ಇದೆ. ಸುಮಾರು 500 ಹಾಡುಗಳನ್ನು ಸ್ಟೋರ್‌ ಮಾಡುವ ವ್ಯವಸ್ಥೆ ಇದೆ. 

ಇದರಲ್ಲಿ ಎರಡು ಮಾದರಿಗಳಿವೆ. 46 ಎಂಎ ಸ್ಪೋರ್ಟ್‌ ಓ ವಾಚ್‌ನ ಬೆಲೆ 15,990 ರು., 46 ಎಂಎಂ ಲೆದರ್‌ ಬೆಲ್ಟ್‌ ವಾಚ್‌ ಬೆಲೆ: 17, 990 ರು. ಹಾಗೂ 46 ಎಂಎಂ ಮೆಟಲ್‌ ವಾಚ್‌ ಬೆಲೆ: 21,990 ರು.