ಬೆಂಗಳೂರು(ಡಿ.21); ಸಣ್ಣ ವ್ಯವಹಾರಗಳ ಮಾಲೀಕರು ಮತ್ತು ಮೊಬೈಲ್ ವೃತ್ತಿಪರರ ಉತ್ಪಾದಕತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ HP ಇಂದು ಭಾರತದಲ್ಲಿ ಹೊಸ ಶ್ರೇಣಿಯ ಪ್ರೋಬುಕ್ ನೋಟ್ ಬುಕ್ ಗಳನ್ನು ಬಿಡುಗಡೆ ಮಾಡಿದೆ. ಸುಲಭ ಮತ್ತು ಎಲ್ಲಿ ಬೇಕಾದರೂ ಬಳಕೆ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಮೂಲಕ ಗ್ರಾಹಕರು ಶಕ್ತಿಶಾಲಿಯಾದ ಭದ್ರತೆ ಮತ್ತು ಸಂಪರ್ಕದೊಂದಿಗೆ ತಮ್ಮ ವ್ಯವಹಾರಗಳ ಪ್ರಕ್ರಿಯೆಯನ್ನು ಇದರೊಂದಿಗೆ ಮಾಡಿಕೊಳ್ಳಬಹುದಾಗಿದೆ. ಎಚ್ ಪಿ ಪ್ರೋಬುಕ್ 635 ಏರೋ ಜಿ7 ನೋಟ್ ಬುಕ್ಸ್ ಎಎಂಡಿ ಆಧಾರಿತ ಅತ್ಯಂತ ಹಗುರವಾದ ಬ್ಯುಸಿನೆಸ್ ನೋಟ್ ಬುಕ್ ಆಗಿದೆ. ಇದರ ತೂಕ 1 kg[1] (2.2. ಪೌಂಡ್ ಗಳು)ಗಿಂತ ಕಡಿಮೆಯಿಂದ  ಆರಂಭವಾಗಲಿದೆ. ಭಾರತದಲ್ಲಿ AMD Ryzen™ 4000 Series Mobile Processors ಇದನ್ನು ಸಿದ್ಧಪಡಿಸಿದೆ.

ನಕಲಿ ಉತ್ಪನ್ನ ಮಾರಾಟಗಾರರಿಂದ ಗ್ರಾಹಕರ ರಕ್ಷಣೆಗೆ ಮುಂದಾದ HP!

ಎಚ್ ಪಿ ಏಷ್ಯಾ ಎಸ್ಎಂಬಿ ಔಟ್ ಲುಕ್ ವರದಿ 2020 ರ ಪ್ರಕಾರ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (ಎಸ್ಎಂಬಿಗಳು) ಕೋವಿಡ್ ಪರಿಣಾಮದಿಂದ ತಮ್ಮ ಬಹುತೇಕ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ಡಿಜಿಟಲ್ ಗೆ ಪರಿವರ್ತನೆ ಮಾಡಿಕೊಂಡಿವೆ ಮತ್ತು ಕೋವಿಡ್ ನಂತರ ವ್ಯವಹಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಏಷ್ಯಾದ ಇತರೆ ದೇಶಗಳಿಗಿಂತ ಹೆಚ್ಚು ವಿಶ್ವಾಸವನ್ನು ಹೊಂದಿವೆ. ಇದಲ್ಲದೇ, ಭಾರತದಲ್ಲಿನ ಎಸ್ಎಂಬಿಗಳು ತಮ್ಮ ವ್ಯವಹಾರಗಳನ್ನು ಡಿಜಿಟಲ್ ಮಾಡಿಕೊಳ್ಳುವುದು ಪ್ರಮುಖವಾಗಿದೆ ಎಂಬುದನ್ನು ಪರಿಗಣಿಸಿವೆ. ಸಮೀಕ್ಷೆ ನಡೆಸಿದ ನಾಲ್ಕನೇ ಮೂರರಷ್ಟು ಅಂದರೆ ಶೇ.75 ರಷ್ಟು ವ್ಯವಹಾರಸ್ಥರು ತಮ್ಮ ವ್ಯಾಪಾರ ಪ್ರಗತಿಗೆ ಡಿಜಿಟಲೀಕರಣ ಅತ್ಯಂತ ಅಗತ್ಯ ಅಥವಾ ಪ್ರಮುಖವಾಗಿದೆ ಎಂಬುದನ್ನು ನಂಬಿದ್ದಾರೆ. ದೇಶದ ಆರ್ಥಿಕತೆಯ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಎಸ್ಎಂಬಿಗಳು, ಉದ್ಯಮಿಗಳು ಮತ್ತು ಮೊಬೈಲ್ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡೇ ಎಚ್ ಪಿ ಪ್ರೋಬುಕ್ 635 ಏರೋ ಜಿ7 ಯನ್ನು ವಿನ್ಯಾಸಗೊಳಿಸಲಾಗಿದೆ.

ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಮ್ಮ ಜಿಡಿಪಿಗೆ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿವೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿವೆ. ಮನೆಯಿಂದಲೇ ಕೆಲಸ ಮಾಡುವುದು ಮುಂದುವರಿದಿದೆ ಮತ್ತು ವ್ಯವಹಾರಗಳು ತಮ್ಮ ಕಾರ್ಯಪಡೆಗಳನ್ನು ದೂರದಿಂದ ಮತ್ತು ಕಚೇರಿಯಲ್ಲಿ ಬೆಂಬಲಿಸುವ ಮೂಲಕ ಪಿಸಿ ಈ ಹೈಬ್ರೀಡ್ ವಾತಾವರಣಕ್ಕೆ ಅವಶ್ಯಕವಾಗಿದೆ. ಎಚ್ ಪಿ ಪ್ರೋಬುಕ್ 635 ಏರೋ ಜಿ7 ಒಂದು ಮೊಬೈಲ್ ಪವರ್ ಹೌಸ್ ಆಗಿ ವಿನ್ಯಾಸಗೊಂಡಿದ್ದು, ಇದು ಹೆಚ್ಚು ಶ್ರಮವಿಲ್ಲದೇ ಸಂಪರ್ಕವನ್ನು ಸಾಧಿಸುವ ಮೂಲಕ ಬಹು-ಕಾರ್ಯ, ಬಹು-ಸ್ಥಳಗಳ ಅಗತ್ಯತೆಗಳನ್ನು ಪೂರೈಸಲಿದೆ. ಇದು ಅತ್ಯಂತ ಭದ್ರತೆ ಮತ್ತು ಶಕ್ತಿಶಾಲಿ ಕಾರ್ಯದಕ್ಷತೆಯನ್ನು ಹೊಂದಿದ್ದು, ಅಲ್ಟ್ರಾ-ಲೈಟ್ ಮಾದರಿಯ ಅಂಶವನ್ನು ಒಳಗೊಂಡಿದೆ ಎಂದು HP ಇಂಡಿಯಾ ಮಾರ್ಕೆಟ್ ನ (ಪರ್ಸನಲ್ ಸಿಸ್ಟಮ್ಸ್) ಹಿರಿಯ ನಿರ್ದೇಶಕ ವಿಕ್ರಂ ಬೇಡಿ ಹೇಳಿದರು.

ಎಲ್ಲಿ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯ
13.3 ಇಂಚಿನ ಪ್ರೋಬುಕ್ 635 ಏರೋ ಮೆಗ್ನೀಸಿಯಂ ಮಿಶ್ರಲೋಹದಿಂದ ತಯಾರಿಸಲಾದ ಮೊದಲ ಪ್ರೋಬುಕ್ ಆಗಿದ್ದು, ಇದು ಮೆಗ್ನೀಸಿಯಂನ ಹಗುರ ಮತ್ತು ಅಲ್ಯೂಮೀನಿಯಂನ ಶಕ್ತಿ ಮತ್ತು ನಯವನ್ನು ಸಂಯೋಜಿಸುತ್ತದೆ. ಇದರ ಉನ್ನತ ಮಟ್ಟದ ವಿನ್ಯಾಸವು ಒಂದು ಪೀಳಿಗೆಯ ಮೊಬೈಲ್ ವೃತ್ತಿಪರರೊಂದಿಗೆ ಸಂವಹನ ನಡೆಸುವ ಸಾಧನವಾಗಿದೆ.

ಎಚ್ ಪಿ ಪ್ರೋಬುಕ್ 635 ಏರೋ ಜಿ7 ವೈಶಿಷ್ಟ್ಯತೆಗಳು:

  • ·       ಸಂಪರ್ಕ- ಬಳಕೆದಾರರು ವೈ-ಫೈ 6 ಮತ್ತು ಕ್ಯಾಟ್ 9 4ಜಿ ಎಲ್ ಟಿಇ ವೈರ್ ಲೆಸ್ ವಾತಾವರಣದಲ್ಲಿಯೂ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಗಿಗಾಬೈಟ್ ವೇಗದಲ್ಲಿ ಸಂಪರ್ಕವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪ್ರವೇಶಿಸುವಂತೆ ಮಾಡಲಿದೆ.
  • ·       ಭದ್ರತೆ- :ಎಚ್ ಪಿ ಶ್ಯೂರ್ ವ್ಯೂ ರಿಫ್ಲೆಕ್ಟ್ ಬಳಕೆದಾರರಿಗೆ ವಿವೇಚನೆಯಿಂದ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲಿನ ಕಾಪರ್ ಬಣ್ಣದ ಪ್ರತಿಫಲಿತ ಗೌಪ್ಯತೆಯ ಪರದೆಯು ವಿಶ್ವದ ಅತ್ಯಾಧುನಿಕ ಗೌಪ್ಯತೆಯಾಗಿದೆ. ಇದು ಪ್ರಕಾಶಮಾನವಾದ ಮತ್ತು ಮಂದ ಬೆಳಕಿನ ಪರಿಸರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.
  • ·       ದೀರ್ಘ ಬಾಳಿಕೆಯ ಬ್ಯಾಟರಿ- 42ಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ ಕಾನ್ಫಿಗರ್ ಮಾಡಿದಾ 18 ಗಂಟೆಗಳವರೆಗೆ ಬ್ಯಾಟರಿ ಬರುತ್ತದೆ ಮತ್ತು 53 ಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ 23 ಗಂಟೆಗಳ ಬಾಳಿಕೆ ಬರುತ್ತದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರ್ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ಕಾರ್ಯದಕ್ಷತೆ ಮತ್ತು ಉತ್ಪಾದಕತೆಗೆ ವಿನ್ಯಾಸಗೊಳಿಸಲಾಗಿದೆ
ಈ ಎಚ್ ಪಿ ಪ್ರೋಬುಕ್ 635 ಏರೋವನ್ನು ಎಎಂಡಿ ರೈಝೆನ್ 4000 ಸೀರೀಸ್ ಮೊಬೈಲ್ ಪ್ರೊಸೆಸರ್ ವಿನ್ಯಾಸಗೊಳಿಸಿದೆ. ಇದರಲ್ಲಿ ಸಮಗ್ರವಾದ ಎಎಂಡಿ ರೇಡಿಯನ್ ವೆಗಾ ಗ್ರಾಫಿಕ್ಸ್ ಸೌಲಭ್ಯವಿದೆ. 8 ಕೋರ್ಸ್ ವರೆಗೆ ಶಕ್ತಿಶಾಲಿಯಾಗಿರುವ ಈ ಪ್ರೊಸೆಸರ್ ಗಳನ್ನು ವೇಗವಾದ ಮತ್ತು ಜವಾಬ್ದಾರಿಯುತವಾದ ಕಾರ್ಯದಕ್ಷತೆ, ಪ್ರೇರಕದಾಯಕ ಬ್ಯಾಟರಿ ಬಾಳಿಕೆ ಮತ್ತು ಸುಧಾರಿತವಾದ ನಿರ್ವಹಣೆವ ವ್ಯವಸ್ಥೆಗಳು ನೋಟ್ ಬುಕ್ ನ ಸಾಮರ್ಥ್ಯವನ್ನು ಅಸಾಧಾರಣಗೊಳಿಸಲಿವೆ. ಬ್ಯುಸಿನೆಸ್ ಬಳಕೆದಾರರು ಎಎಂಡಿ ಪಿಆರ್ ಒ ಟೆಕ್ನಾಲಾಜೀಸ್ ನೊಂದಿಗೆ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ. ಇದೇ ವೇಳೆ ತಮ್ಮ ಹೂಡಿಕೆಯನ್ನು ವಿಸ್ತರಣೆ ಮಾಡಿ ಸ್ಟೋರೇಜ್ ಸಾಮರ್ಥ್ಯವನ್ನು 1ಟಿಬಿಗೆ ಹೆಚ್ಚಿಸಿಕೊಳ್ಳಲು ಅವಕಾಶವಿದ್ದು, 32 ಜಿಬಿವರೆಗೆ ಕಾನ್ಫಿಗರ್ ಮಾಡಿಕೊಳ್ಳುವ ಮೂಲಕ ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಯನ್ನು ತಮಗೆ ಅನುಕೂಲ ಮತ್ತು ಅಗತ್ಯ ಬಿದ್ದಾಗ ಯಾವಾಗ ಬೇಕಾದರೂ ಮಾಡಿಕೊಳ್ಳಬಹುದು.

ಹೊಸ ಪ್ರೋಬುಕ್ 635 ಏರೋದೊಂದಿಗೆ ನಾವು ಎಚ್ ಪಿಯೊಂದಿಗಿನ ಸಹಭಾಗಿತ್ವವನ್ನು ಮತ್ತಷ್ಟು ಬಲಯುತಗೊಳಿಸುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. ಎಚ್ ಪಿಯಿಂದ ವಿಶ್ವದ ಅತ್ಯಂತ ಹಗುರವಾದ ಎಎಂಡಿ ಆಧಾರಿತ ಬ್ಯುಸಿನೆಸ್ ನೋಟ್ ಬುಕ್ ಇದಾಗಿದೆ. ಇದನ್ನು ಎಎಂಡಿ ರೈಝೆನ್ 4000 ಸೀರೀಸ್ ಮೊಬೈಲ್ ಪ್ರೊಸೆಸರ್ಸ್ ವಿನ್ಯಾಸಗೊಳಿಸಲಾಗಿದೆ. ಎಸ್ಎಂಬಿಗಳು ಮತ್ತು ಉದ್ಯಮ ಗ್ರಾಹಕರಿಗೆ ಕಾರ್ಯದಕ್ಷತೆ ಮತ್ತು ಕಾರ್ಯಕ್ಷಮತೆಯಲ್ಲಿ ಗಮನಾರ್ಹವಾದ ವೇಗವರ್ಧನೆ ನೀಡಲು ಪೂರಕವಾಗಿ ಈ ಹೊಸ ಸರಣಿಯ ನೋಟ್ ಬುಕ್ ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಎಎಂಡಿ ಭಾರತದ ಮಾರಾಟಗಳ ವ್ಯವಸ್ಥಾಪಕ ನಿರ್ದೇಶಕ ವಿನಯ್ ಸಿನ್ಹಾ ಹೇಳಿದರು.

``ನಮ್ಮ ಉದ್ಯಮವು 7ಎನ್ಎಂ ತಂತ್ರಜ್ಞಾನದೊಂದಿಗೆ ಝೆನ್2 ವಾಸ್ತುಶಿಲ್ಪವನ್ನು ಮುನ್ನಡೆಸುತ್ತಿದೆ. ಎಚ್ ಪಿ ಪ್ರೋಬುಕ್ 635 ಏರೋವನ್ನು ಬಹುಕಾರ್ಯಕ್ಕೆ ಬಲವಾದ ಆಯ್ಕೆಯನ್ನಾಗಿ ಮಾಡುತ್ತದೆ ಹಾಗೂ ಇಂದಿನ ವ್ಯವಹಾರಗಳು ಮತ್ತು ಮೊಬೈಲ್ ಕೆಲಸ ಮಾಡುವ ವೃತ್ತಿಪರರ ವಿಕಾಸದ ಅಗತ್ಯಗಳನ್ನು ಪೂರೈಸುತ್ತದೆ’’ ಎಂದು ಅವರು ಹೇಳಿದರು.

ಬೆಲೆ ಮತ್ತು ಲಭ್ಯತೆ
ಪ್ರೋಬುಕ್ 635 ಏರೋ ಇಂದಿನಿಂದ ಲಭ್ಯವಿದೆ(ಚಾನೆಲ್ ಗಳಲ್ಲಿ), 74,999/- ರೂಪಾಯಿಗಳಿಂದ ಆರಂಭ.