Asianet Suvarna News Asianet Suvarna News

ನಕಲಿ ಉತ್ಪನ್ನ ಮಾರಾಟಗಾರರಿಂದ ಗ್ರಾಹಕರ ರಕ್ಷಣೆಗೆ ಮುಂದಾದ HP!

HPಯಿಂದ ನಕಲಿ ಮತ್ತು ವಂಚನೆ ವಿರೋಧಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ನಕಲಿ HP ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 10,000 ಕ್ಕೂ ಅಧಿಕ ವೆಬ್ ಸೈಟ್ ಗಳ ಪತ್ತೆ ಮಾಡಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. 

HP Anti Counterfeiting and Fraud Program Protects Online Shoppers Against Counterfeit Supplies ckm
Author
Bengaluru, First Published Oct 13, 2020, 8:34 PM IST

ಬೆಂಗಳೂರು(ಅ.13): HP ಇಂಡಿಯಾ ನಡೆಸಿದ ನಕಲಿ ವಿರೋಧಿ ಮತ್ತು ವಂಚನೆ (ಎಸಿಎಫ್) ಕಾರ್ಯಕ್ರಮದ ಫಲಿತಾಂಶಗಳನ್ನು ಪ್ರಕಟಿಸಿದೆ. ಇದರ ಉದ್ದೇಶ ಭಾರತದ ಮಾರುಕಟ್ಟೆಯಲ್ಲಿ ನಕಲಿ ಪ್ರಿಂಟಿಂಗ್ ಪೂರೈಕೆಯನ್ನು ತಡೆಯುವುದು ಮತ್ತು ಇಂತಹ ವಂಚನಾ ಜಾಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. HP ಎಸಿಎಫ್ ಕಾರ್ಯಕ್ರಮವು ನಕಲಿ ಪ್ರಿಂಟಿಂಗ್ ಯಂತ್ರಗಳು, ಇಂಕ್ ಗಳನ್ನು ಉತ್ಪಾದನೆ ಮಾಡುವುದು, ವಿತರಣೆ ಮತ್ತು ಮಾರಾಟ ಮಾಡುವುದರ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಿದೆ.

HPಯಿಂದ ವಿದ್ಯಾಭ್ಯಾಸ,ಕಚೇರಿ ಕೆಲಸ ಸುಲಭವಾಗಿಸುವ ಆಲ್ ಇನ್ ಒನ್ ಪಿಸಿ ಬಿಡುಗಡೆ!.

ವಿಶ್ವದಾದ್ಯಂತ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾಗಿದ್ದರ ದುರುಪಯೋಗ ಮಾಡಿಕೊಂಡು ನಕಲಿ ಉತ್ಪನ್ನಗಳ ತಯಾರಕರು ಮತ್ತು ವಂಚಕರು ಆನ್ ಲೈನ್ ಪ್ಲಾಟ್ ಫಾರ್ಮ್ ಅನ್ನು ಮಾರಾಟ ಮಾಡುವುದರತ್ತ ಗಮನ ಹರಿಸಿದ್ದಾರೆ. ಈ ಸಂದರ್ಭದಲ್ಲಿ ಎಚ್ ಪಿ ಎಸಿಎಫ್ ತಂಡವು ಇಂತಹ ವಂಚನಾ ಜಾಲದ ಮಾರಾಟ, ಇ-ಖರೀದಿ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿತ್ತು. ಇದರ ಪರಿಣಾಮ ನಕಲಿ ಉತ್ಪನ್ನಗಳ ಜತೆ ವ್ಯವಹಾರ ನಡೆಸುತ್ತಿದ್ದ ವೆಬ್ ಸೈಟ್ ಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ಎಚ್ ಪಿ ಎಸಿಎಫ್ ಕಾರ್ಯುಕ್ರಮವು ನಕಲಿ ಮತ್ತು ವಂಚನಾ ಜಾಲದ ವಿವರಗಳನ್ನು ನೀಡಿದೆ. ಇದರಲ್ಲಿ ಪ್ರಮುಖವಾಗಿ 10,000 ಕ್ಕೂ ಅಧಿಕ ವೆಬ್ ಸೈಟ್ ಗಳು ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಗುರುತಿಸಿ ಅವುಗಳನ್ನು ವೆಬ್ ಸೈಟ್ ಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ನಕಲಿ ಮತ್ತು ವಂಚನೆ ಪ್ರಕರಣಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎಚ್ ಪಿ ನಿರಂತರವಾಗಿ ಆಡಿಟ್ ಗಳನ್ನು ನಡೆಸುತ್ತಿದ್ದು ಮತ್ತು ನಕಲಿ ಉತ್ಪನ್ನಗಳ ಮಾರಾಟ ಮತ್ತು ವಿತರಣಾ ಜಾಲದ ವಿರುದ್ಧ ದಾಳಿ ನಡೆಸುವ ವಿಚಾರದಲ್ಲಿ ಕಾನೂನು ಜಾರಿ ಏಜೆನ್ಸಿಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಈ ಮೂಲಕ ಗ್ರಾಹಕರು ಮತ್ತು ವ್ಯವಹಾರಸ್ಥರನ್ನು ನಕಲಿ ಜಾಲದಿಂದ ರಕ್ಷಿಸುವ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಹಕಾರದ ಪರಿಣಾಮವಾಗಿ 2019 ರ ನವೆಂಬರ್ ನಿಂದ 2020 ರ ಜುಲೈವರೆಗೆ 6 ದಶಲಕ್ಷ ಯುಎಸ್ ಡಾಲರ್ ಮೌಲ್ಯದ(45 ಕೋಟಿ ರೂಪಾಯಿ) ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಮುಂಬೈವೊಂದರಲ್ಲೇ 3 ದಶಲಕ್ಷ ಯುಎಸ್ ಡಾಲರ್ ಗೂ ಅಧಿಕ ಮೌಲ್ಯದ (22.5 ಕೋಟಿ ರೂಪಾಯಿ) ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 78 ಕಡೆ ದಾಳಿ ನಡೆಸಿರುವ ಕಾನೂನು ಜಾರಿ ಸಂಸ್ಥೆಗಳು 68 ಜನರನ್ನು ಬಂಧಿಸಿದ್ದಾರೆ.

ಎಚ್ ಪಿ ಎಸಿಎಫ್ ಕಾರ್ಯಕ್ರಮವು ಅಮೆಜಾನ್, ಫ್ಲಿಪ್ ಕಾರ್ಟ್, ಪೇಟಿಎಂ ಮತ್ತು ಶಾಪಕ್ಲೂಸ್ ನಂತಹ ಹಲವಾರು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳ ಜತೆಗೆ ನಿಕಟ ಸಂಪರ್ಕದಲ್ಲಿದ್ದು, ಅಧಿಕೃತ ಪಾಲುದಾರರಿಂದ ಅಸಲಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುವಂತೆ ಸೂಚಿಸುತ್ತಾ ಬಂದಿದೆ. ಈ ಪ್ರಕ್ರಿಯೆಯಿಂದಾಗಿ ಗ್ರಾಹಕರು ಮತ್ತು ಪಾಲುದಾರರು ನಕಲಿ ಇಂಕ್ ಮತ್ತು ಟೋನರ್ ಗಳನ್ನು ಖರೀದಿ ಮತ್ತು ಪೂರೈಕೆ ಮಾಡುವ ಅಪಾಯವನ್ನು ತಪ್ಪಿಸಿಕೊಂಡಿದ್ದಾರೆ.

ಇಂಕ್ ಮತ್ತು ಟೋನರ್ ಪೂರೈಕೆಯು ಗ್ರಾಹಕರಿಗಷ್ಟೇ ಅಲ್ಲ ವ್ಯಾಪಾರಿಗಳಿಗೂ ಬಹುದೊಡ್ಡ ಗಂಭೀರವಾದ ಬೆದರಿಕೆಯಾಗಿದೆ. ನಕಲಿ ಉತ್ಪನ್ನಗಳ ಬಳಕೆಯಿಂದಾಗಿ ಪ್ರಿಂಟರ್ ಗಳು ಹಾನಿಗೊಳ್ಳುತ್ತವೆ, ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರಬಹುದು ಮತ್ತು ಪ್ರಿಂಟರ್ ನ ಹಾರ್ಡ್ ವೇರ್ ವಾರಂಟಿಗೆ ವಿರುದ್ಧವಾಗಿರುತ್ತವೆ. ಇದರಿಂದ ಗ್ರಾಹಕರಿಗೆ ಮತ್ತು ವ್ಯಾಪಾರಸ್ಥರಿಗೆ ಆದಾಯದಲ್ಲಿ ನಷ್ಟ ಉಂಟಾಗುವುದರ ಜತೆಗೆ ಅನಗತ್ಯವಾಗಿ ಸಮಯ ವ್ಯರ್ಥವಾಗುತ್ತದೆ.

ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ನೆರವಾಗುವುದಲ್ಲದೇ, ಎಚ್ ಪಿ ತನ್ನ ಕಾಟ್ರಿಡ್ಜ್ ಗೆ ಇಂಕ್ ಮತ್ತು ಟೋನರ್ ಪ್ಯಾಕೇಜಿಂಗ್ ವ್ಯವಸ್ಥೆ ಕಾನೂನುಬದ್ಧವಾಗಿರುವಂತೆ ನೋಡಿಕೊಳ್ಳಲು ಭದ್ರತಾ ವೈಶಿಷ್ಟ್ಯತೆಗಳ ಮೇಲೆ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡುತ್ತಿದೆ.

ಇದಲ್ಲದೇ, ಗ್ರಾಹಕರು, ವ್ಯವಹಾರ ಗ್ರಾಹಕರು ಮತ್ತು ಪಾಲುದಾರರಿಗೆ ಭದ್ರತೆ, ಮಾನ್ಯತೆ ರಕ್ಷಣೆ ಮತ್ತು ತಡೆ ರಹಿತವಾದ ಕಾರ್ಯಾಚರಣೆಗೆ ಸಂಬಂಧಿಸಿದ ಮೌಲ್ಯವರ್ಧಿತ ಸೇವೆಗಳನ್ನೂ ನೀಡುತ್ತಿದೆ.

ಜಾರಿ ಮತ್ತು ದಾಳಿಗಳು, ದೊಡ್ಡ ಮತ್ತು ಮಧ್ಯಮ ಪ್ರಮಾಣದ ವಶಗಳ ಹೊರತಾಗಿ ಎಚ್ ಪಿ ಗ್ರಾಹಕರು ಅಗತ್ಯ ಬಿದ್ದರೆ ಕಸ್ಟಮರ್ ಡೆಲಿವರಿ ಇನ್ಸ್ ಪೆಕ್ಷನ್ (ಸಿಡಿಐ) ಗೆ ಮನವಿ ಮಾಡಿಕೊಳ್ಳಬಹುದಾಗಿದೆ.  ಆನ್ ಲೈನ್ ನಲ್ಲಿ ಖರೀದಿಸಿದ ಉತ್ಪನ್ನಗಳ ಅಸಲಿಯತ್ತನ್ನು ಖಾತರಿಪಡಿಸಿಕೊಳ್ಳಲು ಈ ನೆರವನ್ನು ಪಡೆಯಬಹುದು. ಇದೇ ವೇಳೆ, ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಕರಣಗಳು ಬೆಳಕಿಗೆ ಬಂದಲ್ಲಿ ಎಚ್ ಪಿ ವೆಬ್ ಸೈಟ್ ನಲ್ಲಿ ದೂರು ದಾಖಲಿಸಬಹುದು. ಚಾನೆಲ್ ಪಾಲುದಾರ ಸಂರಕ್ಷಣಾ ಲೆಕ್ಕ ಪರಿಶೋಧನೆ (ಸಿಪಿಪಿಎ) ಮೂಲಕ ಚಾನೆಲ್ ಪಾಲುದಾರರು ಮತ್ತು ಗ್ರಾಹಕರನ್ನು ಅನಧಿಕೃತ ಅಥವಾ ನಕಲಿ ಉತ್ಪನ್ನಗಳಿಂದ ರಕ್ಷಣೆ ನಿಡುತ್ತದೆ.

ಸಿಪಿಪಿಎ ಪ್ರಮಾಣೀಕೃತ ಪಾಲುದಾರರಿಂದ ತಮ್ಮ ಉತ್ಪನ್ನಗಳನ್ನು ಪಡೆಯುವ ಗ್ರಾಹಕರಿಗೆ ಇಂಕ್ ಮತ್ತು ಟೋನರ್ ಪ್ರಿಂಟ್ ಪೂರೈಕೆಯ ಖಾತರಿ ಸಿಗುತ್ತದೆ. ಎಸಿಎಫ್ ಕಾರ್ಯಕ್ರಮದ ಮೂಲಕ ನಕಲಿ ಪೂರೈಕೆಗಳಿಂದ ಎದುರಾಗುವ ಸಮಸ್ಯೆಗಳಿಂದ ವ್ಯಾಪಾರಿಗಳಿಗೆ ರಕ್ಷಣೆ ನೀಡುವ ಉದ್ದೇಶವನ್ನು ಎಚ್ ಪಿ ಹೊಂದಿದೆ.

ಮೂಲ ಎಚ್ ಪಿ ಪೂರೈಕೆಗಳನ್ನು ಅಥವಾ ಉತ್ಪನ್ನಗಳನ್ನು ಖರೀದಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕೆಲವು ಸರಳ ಮಾರ್ಗಸೂಚಿಗಳನ್ನು ಅನುಸರಿಸಬಹುದು:
- ಆನ್ ಲೈನ್ ಹರಾಜು ಸೈಟ್ ಗಳಲ್ಲಿ ಸಗಟು ಖರೀದಿ ಮತ್ತು ನಿರೀಕ್ಷಿಸಲಾರದಷ್ಟು ಪ್ರಮಾಣದಲ್ಲಿ ಬೆಲೆಗಳನ್ನು ಕಡಿಮೆ ಮಾಡಿದ ಉತ್ಪನ್ನಗಳ ಮಾರಾಟ ವಿಧಾನಗಳ ಬಗ್ಗೆ ಎಚ್ಚರಿಕೆ ಇರಲಿ.
- ನಕಲಿ ಉತ್ಪನ್ನಗಳ ಅಪಾಯವನ್ನು ದೂರ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಚ್ ಪಿ ಸೇಲ್ಸ್ ನ ಅಧಿಕೃತ ಮಾರಾಟಗಾರರಿಂದಲೇ ಉತ್ಪನ್ನಗಳನ್ನು ಖರೀದಿಸಿ.
- ಖರೀದಿ ಮಾಡುವಾಗ ಅಥವಾ ಟೆಂಡರ್ ಮಾಡುವಾಗ ಮೂಲ ಎಚ್ ಪಿ ಉತ್ಪನ್ನಗಳ ಬಗ್ಗೆ ವಿಚಾರಿಸಿ.
 

Follow Us:
Download App:
  • android
  • ios