ಹೆಚ್‌ಪಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಚಾಲಿತ ಲ್ಯಾಪ್‌ಟಾಪ್ ಬಿಡುಗಡೆ, ಊಹೆಗೂ ನಿಲುಕದ ತಂತ್ರಜ್ಞಾನ!
ವಿಡಿಯೋ ಮೀಟಿಂಗ್‌ನಲ್ಲಿ ನೀವು ಎಲ್ಲೆ ಕುಳಿತಿದ್ದರೂ ಕ್ಯಾಮೆರಾ ಆರ್ಟಿಫೀಶಿಯಲ್ ಇಂಟಿಲೆಜನ್ಸ್ ಮೂಲಕ ಎಡಜ್ಟ್ ಮಾಡಲಿದೆ. ಯಾವುದೇ ಮಾರುಕಟ್ಟೆಯಲ್ಲಿ ಕುಳಿತು ಮಾತನಾಡಿದರೂ ಬ್ಯಾಗ್ರೌಂಡ್ ವಾಯ್ಸ್ ಫಿಲ್ಟರ್ ಮಾಡಿ ನಿಮ್ಮ ಧ್ವನಿಯನ್ನು ಮಾತ್ರ ಇತರರಿಗೆ ಕೇಳುವಂತೆ ಮಾಡಲಿದೆ. ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ, ಬ್ಯಾಟರಿ ಲೈಫ್ ಸೇರಿದಂತೆ ಹಲವು ವಿಶೇಷತೆಗಳು ಈ ಲ್ಯಾಪ್‌ಟಾಪ್‌ನಲ್ಲಿದೆ.
ಬೆಂಗಳೂರು(ಏ.05) : ಭಾರತದ ಗೇಮರ್ಸ್ ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗಾಗಿ ಹೆಚ್‌ಪಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಲಿತ ಲ್ಯಾಪ್ ಟಾಪ್ ಬಿಡುಗಡೆ ಮಾಡಿದೆ. ಒಮೆನ್ ಟ್ರಾನ್ಸೆಂಡ್ 14 ಮತ್ತು ಎಚ್ ಪಿ x360 14 ಎಂಬ ಎರಡೂ ಲ್ಯಾಪ್ ಟಾಪ್ ಸೀರೀಸ್ ಗಳು ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳಿಂದ ಸುಸಜ್ಜಿತವಾಗಿದೆ. ಬಳಕೆದಾರರಿಗೆ ಹೈ-ಎಂಡ್ ಗೇಮಿಂಗ್ ಮತ್ತು ಕ್ರಿಯೇಶನ್ ಅನುಭವವನ್ನು ನೀಡಲಿದೆ.
ದರ & ಲಭ್ಯತೆ:
· ಒಮೆನ್ ಟ್ರಾನ್ಸೆಂಡ್ 14 ಎಲ್ಲಾ ಹೆಚ್‌ಪಿ ಸ್ಟೋರ್ ಗಳು ಮತ್ತು ಹೆಚ್‌ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಸೆರಾಮಿಕ್ ವೈಟ್ ಮತ್ತು ಶಾಡೋ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ 1,74,999 ರೂಪಾಯಿಗಳಿಂದ ಆರಂಭವಾಗಲಿದೆ.
ಹೆಚ್‌ಪಿಯಿಂದ ಗೇಮಿಂಗ್ ಅನುಭವ ನೀಡುವ Omen & Victus ಪಿಸಿ ಬಿಡುಗಡೆ!
· ಹೆಚ್‌ಪಿ ಎನ್ವಿ x360 14 ಎಲ್ಲಾ ಹೆಚ್‌ಪಿ ಸ್ಟೋರ್ ಗಳು ಮತ್ತು ಎಚ್ ಪಿ ಆನ್ ಲೈನ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಮೆಟೀರಿಯರ್ ಸಿಲ್ವರ್ ಮತ್ತು ಅಟ್ಮೋಸ್ಫೆರಿಕ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದ್ದು, ಇವುಗಳ ಬೆಲೆ 99,999 ರೂಪಾಯಿಗಳಿಂದ ಆರಂಭವಾಗಲಿದೆ.
ಎಚ್ ಪಿಯಲ್ಲಿ ಎಐ ಚಾಲಿತ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಗ್ರಾಹಕರು ಅಥವಾ ಬಳಕೆದಾರರಿಗೆ ಅವರ ಕೆಲಸಕ್ಕೆ ವೇಗ ತುಂಬುವುದು, ಲೈವ್ ಮತ್ತು ಆಟವಾಡಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಎಚ್ ಪಿ ಇಂಡಿಯಾದ ಹಿರಿಯ ಉಪಾಧ್ಯಕ್ಷ ಇಪ್ಸಿತಾ ದಾಸಗುಪ್ತಾ ಹೇಳಿದ್ದಾರೆ. ನಾವೀಗ ಉದ್ಯಮದ ದೊಡ್ಡದಾದ ಎಐ-ಚಾಲಿತ ಪಿಸಿಗಳ ಪೋರ್ಟ್ ಫೋಲಿಯೋವನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ಎಐ-ಚಾಲಿತ ವೈಯಕ್ತೀಕರಣದ ಮೂಲಕ ನಾವು ಇನ್ನೂ ಹೆಚ್ಚಿನ ವೈಯಕ್ತೀಕೃತ ಮತ್ತು ಅರ್ಥಪೂರ್ಣವಾದ ಬಳಕೆದಾರರ ಅನುಭವವನ್ನು ಹೆಚ್ಚಿಸುತ್ತಿದ್ದೇವೆ ಎಂದರು.
ಒಮೆನ್ ಟ್ರಾನ್ಸೆಂಡ್ 14: ಎಚ್ ಪಿಯಿಂದ ಮೊದಲ ಎಐ-ಉನ್ನತೀಕರಿಸಿದ ಒಮೆನ್ ಲ್ಯಾಪ್ ಟಾಪ್
ಉತ್ತಮ ಗೇಮಿಂಗ್ ಅನುಭವಕ್ಕೆ ಎಐ-ಉನ್ನತೀಕರಣ: ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಷನ್ ಎರಡರಲ್ಲೂ ಪಾಲ್ಗೊಳ್ಳಲು ಗೇಮರ್ ಗಳಿಗಾಗಿ ಈ ಲ್ಯಾಪ್ ಟಾಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಮೆನ್ ಟ್ರಾನ್ಸೆಂಡ್ 14 NVIDIA® GeForce® RTX™ 4060 ಗ್ರಾಫಿಕ್ಸ್ ನೊಂದಿಗೆ ಇದನ್ನು ಉನ್ನತೀಕರಿಸಲಾಗಿದೆ. ಇದು ವೇಗವರ್ಧಿತ ಗೇಮ್ ನ ಅನುಭವ ಮತ್ತು ಹೆಚ್ಚು ವೇಗದಲ್ಲಿ ಗ್ರಾಫಿಕ್ ರಚನೆಗಾಗಿ ಎಐ ವೈಶಿಷ್ಟ್ಯತೆಗಳ ಶಕ್ತಿಯನ್ನು ತುಂಬುತ್ತದೆ. ಹೊಸ ಒಮೆನ್ ಟ್ರಾನ್ಸ್ ಸೆಂಡ್ 14 ನಲ್ಲಿನ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳು ಗೇಮರ್ ಗಳಿಗಾಗಿ ಇತ್ತೀಚಿನ ಗೇಮ್ ಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅಥವಾ ಕಂಪ್ಯೂಟ್- ಇಂಟೆನ್ಸಿವ್ ಕಾರ್ಯಗಳನ್ನು ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ಒಮೆನ್ ಟ್ರಾನ್ಸ್ ಸೆಂಡ್ 14 ಇಂಟೆಲ್ ಮತ್ತು NVIDIA® ಪ್ರೊಸೆಸರ್ ಗಳ ಮೂಲಕ ಸ್ಥಳೀಯ ಎಐ ಸಾಮರ್ಥ್ಯಗಳ ಜೊತೆ ಜೊತೆಯಲ್ಲಿಯೇ ಒಟ್ಟರ್.ಇನ್ ನೊಂದಿಗೆ ಬಿಲ್ಟ್ –ಇನ್ ಎಐಗಳೆರಡನ್ನೂ ನೀಡುತ್ತದೆ. ಅಂದರೆ, ತರಗತಿಗಳ ಸಂದರ್ಭದಲ್ಲಿ ಲೈವ್ ಟ್ರಾನ್ಸ್ ಕ್ರಿಪ್ಟ್ ಮತ್ತು ರಿಯಲ್ –ಟೈಂ ಕ್ಯಾಪ್ಶನ್ ಗಳನ್ನು ಒದಗಿಸುತ್ತದೆ. ಇದರ ಜೊತೆಯಲ್ಲಿ ಟ್ರಾನ್ಸ್ ಕ್ರೈಬಿಂಗ್ ಆಡಿಯೋಗೆ ರೆಕಾರ್ಡ್ ಫಂಕ್ಷನ್ ಮತ್ತು ಎಐ-ಜನರೇಟೆಡ್ ನೋಟ್ಸ್ ಅನ್ನೂ ಸಹ ನೀಡುತ್ತದೆ.
ಜಗತ್ತಿನ ಕೂಲೆಸ್ಟ್ 14-ಇಂಚಿನ ಗೇಮಿಂಗ್ ಲ್ಯಾಪ್ ಟಾಪ್ : ಒಮೆನ್ ಟ್ರಾನ್ಸೆಂಡ್ 14 ನ ಗರಿಷ್ಠವಾದ ಕಾರ್ಯಕ್ಷಮತೆಗಾಗಿ ನೆರವಾಗಲು ಇಂಟೆಲ್ ನೊಂದಿಗೆ ಕೊ-ಎಂಜಿನಿಯರಿಂಗ್ ಮಾಡಲಾಗಿರುವ ಹೊಸ ಕೂಲಿಂಗ್ ಸಿಸ್ಟಂ ಅನ್ನು ಒದಗಿಸಲಾಗಿದೆ. ಇದರಲ್ಲಿನ ಚಾಸಿಸ್ ಗಾಳಿಯನ್ನು ಎಳೆದುಕೊಳ್ಳುತ್ತದೆ ಮತ್ತು ಇದಕ್ಕಾಗಿ ವೇಪರ್ ಚೇಂಬರ್ ಅನ್ನು ಬಳಸಿಕೊಂಡು ಹಿಂಭಾಗದ ದ್ವಾರಗಳ ಮೂಲಕ ಶಾಖವನ್ನು ಹೊರ ಬಿಡುತ್ತದೆ. ಈ ಮೂಲಕ ಹೆಚ್ಚು ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಕೂಲ್ ಅಥವಾ ತಂಪಾದ 14- ಇಂಚಿನ ಗೇಮಿಂಗ್ ಲ್ಯಾಪ್ ಟಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ತೆಳು & ಹಗುರ ವಿನ್ಯಾಸ: ಶಕ್ತಿಶಾಲಿಯಾದ ಒಮೆನ್ ಟ್ರಾನ್ಸೆಂಡ್ 14 ಎಚ್ ಪಿಯ ಅತ್ಯಂತ ಹಗುರವಾದ ಲ್ಯಾಪ್ ಟಾಪ್ ಕೂಡ ಆಗಿದೆ. ಈ ಡಿವೈಸ್ ನ ತೂಕ 1.637 ಕೆಜಿ ಇದ್ದು, ಇದರ ಬ್ಯಾಟರಿ ಕಾರ್ಯಕ್ಷಮತೆಯು 11.5 ಗಂಟೆಯವರೆಗೆ ಇರುತ್ತದೆ. ಟೈಪ್ –ಸಿ ಪಿಡಿ 140W ಅಡಾಪ್ಟರ್ ಇದ್ದು, ಈ ಹಿಂದಿಗಿಂತಲೂ ಕ್ಷಿಪ್ರವಾಗಿ ಚಾರ್ಜ್ ಆಗಲು ನೆರವಾಗುತ್ತದೆ.
ಹೈಪರ್X ನಿಂದ ಆಡಿಯೋ ಟ್ಯೂನ್ ಹೊಂದಿದ ವಿಶ್ವದ ಮೊದಲ ಗೇಮಿಂಗ್ ಲ್ಯಾಪ್ ಟಾಪ್: ಕೀಬೋರ್ಡ್ ತನ್ನ ಮೊದಲ ಲ್ಯಾಟಿಸ್-ಲೆಸ್ ವಿನ್ಯಾಸವಾಗಿದೆ. ಇದರಿಂದಾಗಿ ಕೀಕ್ಯಾಪ್ ಗಳು ಅಂಚಿನಿಂದ ಅಂಚಿನವರೆಗೆ ಇರುತ್ತವೆ. ಆದಾಗ್ಯೂ, ಮೆಕ್ಯಾನಿಕಲ್ ಕೀಬೋರ್ಡ್ ಗಳಿಗಾಗಿ ಹೈಪರ್X ನ ಪುಡ್ಡಿಂಗ್ ಕ್ಯಾಪ್ ಗಳ ನಂತರ ಕೀಕ್ಯಾಪ್ ಗಳನ್ನು ರೂಪಿಸಲಾಗಿದ್ದು, ಇದು ಪ್ರತಿ ಕೀ ಗೆ ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡುತ್ತದೆ.
ಎಚ್ ಪಿ ಇಂಡಿಯಾದ ಕನ್ಸೂಮರ್ ಸೇಲ್ಸ್ ನ ಹಿರಿಯ ನಿರ್ದೇಶಕ ವಿನೀತ್ ಗೆಹಾನಿ ಅವರು ಮಾತನಾಡಿ, ``ಎಚ್ ಪಿಯಲ್ಲಿ ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಹೊಸ ಲೈನಪ್ ನಲ್ಲಿ ಒಮೆನ್ ಟ್ರಾನ್ಸೆಂಡ್ 14 ಮತ್ತು ಎಚ್ ಪಿ ಎನ್ವಿx360 14 ಸೇರಿವೆ. ಈ ಲ್ಯಾಪ್ ಟಾಪ್ ಗಳು ಅತ್ಯುತ್ಕೃಷ್ಠವಾದ ಗ್ರಾಫಿಕ್ಸ್ ಮತ್ತು ವೈಯಕ್ತೀಕರಣಗೊಳಿಸಿದ ಗೇಮ್ ಪ್ಲೇ ನಿಂದ ಸುಸಜ್ಜಿತವಾಗಿವೆ. ಅಲ್ಲದೇ, ಇವುಗಳನ್ನು ಉತ್ಪಾದಕತೆಯನ್ನು ಹೆಚ್ಚು ಮಾಡುವ ಸಾಮರ್ಥ್ಯವಿರುವ ಎಐ-ಉನ್ನತೀಕರಿಸಿದ ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಲಾಗಿದೆ. ಇದಲ್ಲದೇ, ಎಚ್ ಪಿ ಎನ್ವಿx 360 14 ನಲ್ಲಿ ಎಐ-ಉನ್ನತೀಕರಿಸಿದ ಆಡಿಯೋ ಮತ್ತು ವಿಡಿಯೋ ಸಾಮರ್ಥ್ಯಗಳು ಇದ್ದು, ಕ್ರಾಂತಿಕಾರಿ ಕಂಟೆಂಟ್ ಕ್ರಿಯೇಷನ್ ಗೆ ಸಹಕಾರಿಯಾಗಿವೆ. ಈ ಮೂಲಕ ಬಳಕೆದಾರರಿಗೆ ಸರಿಸಾಟಿಯಿಲ್ಲದ ಸಾಮರ್ಥ್ಯಗಳನ್ನು ನೀಡುತ್ತವೆ’’ ಎಂದು ತಿಳಿಸಿದರು.
ಎಚ್ ಪಿ ಎನ್ವಿx360 14 : ಬಳಕೆದಾರರಿಗೆ ಎಐ-ಉನ್ನತೀಕರಿಸಿದ ಸಂಗಾತಿ
· ತಡೆರಹಿತವಾದ ರಚನೆಗಾಗಿ ಎಐ-ಉನ್ನತೀಕರಣ: ಹೊಸ ಎನ್ವಿ 14 ಲ್ಯಾಪ್ ಟಾಪ್ ಗಳು ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಗಳಿಂದ ಸುಸಜ್ಜಿತವಾಗಿವೆ. ಇವುಗಳು ಅಡೋಬ್ ಫೋಟೋಶಾಪ್ ನಂತಹ ಆ್ಯಪ್ ಗಳ ಮೂಲಕ ಹೈ-ಎಂಡ್ ರಚನೆಯ ಅನುಭವವನ್ನು ನೀಡುತ್ತವೆ. ಈ ಲ್ಯಾಪ್ ಟಾಪ್ ಗಳು ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (NPU) ಅನ್ನು ಹೊಂದಿದ್ದು, ಅನಿಯಂತ್ರಿತವಾದ ರಚನೆ ಮತ್ತು ಉತ್ಪಾದಕತೆಯನ್ನು ನೀಡುವ ನಿಟ್ಟಿನಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ಶೇ.65 ರಷ್ಟು ಹೆಚ್ಚಿಸಲಿದೆ. ಹೊಸ ಎನ್ವಿ x360 14 ಕೀಬೋರ್ಡ್ ಮೇಲೆ ಮೈಕ್ರೋಸಾಫ್ಟ್ ಕೋಪೈಲಟ್ ಬಟನ್ ನೊಂದಿಗೆ ಬಿಡುಗಡೆಯಾಗಿರುವ ಎಚ್ ಪಿಯ ಮೊದಲ ಲ್ಯಾಪ್ ಟಾಪ್ ಆಗಿದೆ. ಈ ಬಟನ್ ಅಸಿಸ್ಟೆಡ್ ಸರ್ಚ್, ಕಂಟೆಂಟ್ ಜನರೇಶನ್ ಮತ್ತು ಇನ್ನೂ ಅನೇಕ ಎಐ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ.
HP Chromebook ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಗೆ ಕ್ರೋಮ್‌ಬುಕ್ ಪರಿಚಯಿಸಿದ ಹೆಚ್‌ಪಿ!
· ಎಐ ನೊಂದಿಗೆ ಅತ್ಯುತ್ಕೃಷ್ಠವಾದ ಆಡಿಯೋ & ವಿಡಿಯೋ ವೈಶಿಷ್ಟ್ಯತೆಗಳು: ಈ ಎಚ್ ಪಿ ಎನ್ವಿ x360 14 ಲ್ಯಾಪ್ ಟಾಪ್ ಗಳು ಅತ್ಯುತ್ತಮ ವಿಡಿಯೋ ವೈಶಿಷ್ಟ್ಯತೆಗಳಿಗಾಗಿ ವಿಂಡೋಸ್ ಸ್ಟುಡಿಯೋ ಎಫೆಕ್ಟ್ ನಿಂದ ಸುಸಜ್ಜಿತವಾಗಿವೆ. NPU ನಿಂದ ಸಕ್ರಿಯಗೊಳಿಸಲಾಗಿದ್ದು, ವಿಂಡೋಸ್ ಸ್ಟುಡಿಯೋ ಪರಿಣಾಮಗಳು ಎಐ-ಆಧಾರಿತ ವೈಶಿಷ್ಟ್ಯತೆಗಳನ್ನು ಒದಗಿಸುತ್ತವೆ. ಉದಾಹರಣೆಗೆ ನೀವು ಚಲನೆ ಮಾಡುತ್ತಿರುವಾಗ ಚಿತ್ರವನ್ನು ಸ್ವಯಂಚಾಲಿತವಾಗಿ ಝೂಂ ಮಾಡುವುದು ಮತ್ತು ಕ್ರಾಪ್ ಮಾಡಲು ನೆರವಾಗುತ್ತವೆ. ಇದು ವಿಡಿಯೋ ಕರೆಗಳ ಸಮಯದಲ್ಲಿ ಕಣ್ಣಿನ ಸಂಪರ್ಕವನ್ನು ಉತ್ತಮವಾದ ರೀತಿಯಲ್ಲಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸುಗಮವಾಗಿ ಬ್ಲರ್ ಅನ್ನು ತೆಗೆದುಹಾಕಲು ಸಹಕಾರಿಯಾಗುತ್ತದೆ. ನೀವು ಕೆಲಸವನ್ನು ಮುಗಿಸಿ ಎದ್ದೇಳುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಲ್ಯಾಪ್ ಟಾಪ್ ಲಾಕ್ ಆಗುತ್ತದೆ ಮತ್ತು ನೀವು ಕೆಲಸ ಮಾಡುತ್ತಿದ್ದಾಗ ನಿಮ್ಮ ಹಿಂದಿನಿಂದ ಯಾರಾದರೂ ಬಂದು ನಿಂತರೆ ಸ್ಕ್ರೀನ್ ಅನ್ನು ಮಸುಕಾಗುವಂತೆ ಅಂದರೆ ಅವರಿಗೆ ಕಾಣದ ರೀತಿಯಲ್ಲಿ ಎಐ-ವರ್ಧಿತ ಗೌಪ್ಯತೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
· ಸ್ಲೀಕ್ & ಸ್ಟೈಲಿಶ್: ಕೇವಲ 1.4 ಕೆಜಿಯಷ್ಟು ಭಾರವಿರುವ ಎಚ್ ಪಿ ಎನ್ವಿ x360 14 ಲ್ಯಾಪ್ ಟಾಪ್ ಗಳು 14 ಇಂಚುಗಳ ಒಎಲ್ಇಡಿ ಟಚ್ ಡಿಸ್ ಪ್ಲೇಯ ಸ್ಕ್ರೀನ್ ಅನ್ನು ಹೊಂದಿವೆ. ಇದು ನಿಮ್ಮ ಕೆಲಸಕ್ಕೆ, ಬರೆಯುವುದಕ್ಕೆ, ವೀಕ್ಷಿಸಲು ಮತ್ತು ಆಟವಾಡಲು ಸೂಕ್ತವಾಗಿದೆ. ಇದು ಸಂಪೂರ್ಣವಾಗಿ ಅಲ್ಯೂಮೀನಿಯಂ ಚಾಸಿಸ್ ಅನ್ನು ಹೊಂದಿದ್ದು, ಎಲ್ಲಿ ಬೇಕಾದರೂ ನೀವು ಕೆಲಸ ಮಾಡಲು ಅನುಕೂಲಕರವಾದ ಲ್ಯಾಪ್ ಟಾಪ್ ಎನಿಸಿದೆ.