ಹೆಚ್‌ಪಿಯಿಂದ ಗೇಮಿಂಗ್ ಅನುಭವ ನೀಡುವ Omen & Victus ಪಿಸಿ ಬಿಡುಗಡೆ!
ಕೇವಲ 2.1 ಕೆಜಿ ತೂಕ, ಟೆಂಪೆಸ್ಟ್ ಕೂಲಿಂಗ್ ವಿಶೇಷತೆ, HyperX 27” QHD ಗೇಮಿಂಗ್ ಮಾನಿಟರ್ ಸೇರಿದಂತೆ ಹತ್ತು ಹಲವು ವಿಶೇಷತೆಗಳ ಹೆಚ್‌ಪಿ ಪಿಸಿ ಬಿಡುಗಡೆಯಾಗಿದೆ.
ಬೆಂಗಳೂರು(ಜೂ.02): ಭಾರತದಲ್ಲಿರುವ ಎಲ್ಲಾ ರೀತಿಯ ಗೇಮರ್ ಗಳಿಗೆ ಅತ್ಯುತ್ತಮ ದರ್ಜೆಯ ಗೇಮಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ ಎಚ್ ಪಿ Omen & Victus ಗೇಮಿಂಗ್ ಡಿವೈಸ್ಬಿಡುಗಡೆ ಮಾಡಿದೆ. ಈ ಹೊಸ ಶ್ರೇಣಿಯು Omen Transcend 16, Omen 16 ಮತ್ತು Victus 16 ಒಳಗೊಂಡಿದ್ದು, ಗೇಮರ್ ಗಳು ತಮಗಿಷ್ಟವಾದ ರೀತಿಯಲ್ಲಿ ಗೇಮ್ ಗಳನ್ನು ಆಡಲು, ಗೇಮ್ ಗಳನ್ನು ರಚನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಹೊಸ ಪೋರ್ಟ್ ಫೋಲಿಯೋವು ಸುಧಾರಿತ Omen ಟೆಂಪೆಸ್ಟ್ ಕೂಲಿಂಗ್ ವೈಶಿಷ್ಟ್ಯತೆಯನ್ನು ಹೊಂದಿದ್ದು, ಇದು ಅತ್ಯುತ್ಕೃಷ್ಠವಾದ ಟಾಪ್ ಟೈಟಲ್ ಗಳ ಗೇಮ್ ಪ್ಲೇ ಮತ್ತು ಬಹು ಅಪ್ಲಿಕೇಶನ್ ಗಳ ಒತ್ತಡದ ಕೆಲಸದ ವೇಳೆಯಲ್ಲೂ ಕೂಲಿಂಗ್ ಮಾಡುವುದನ್ನು ಖಾತ್ರಿಪಡಿಸುತ್ತದೆ. ಭಾರತೀಯ ಗೇಮರ್ ಗಳ ಗೇಮಿಂಗ್ ಅನುಭವವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ Omen ಗೇಮಿಂಗ್ ಹಬ್ ನಲ್ಲಿರುವ ಕಾರ್ಯಕ್ಷಮತೆಯ ವಿಧಾನ ಮತ್ತು ನೆಟ್ ವರ್ಕ್ ಬೂಸ್ಟರ್ ನಂತಹ ಹೊಸ ಹೊಸ ಉನ್ನತೀಕರಿಸಿದ ವಿವಿಧ ವ್ಯಕ್ತಿಗತ ವೈಶಿಷ್ಟ್ಯತೆಗಳನ್ನು ನೀಡುತ್ತವೆ. ಇದಲ್ಲದೇ ಎಚ್ ಪಿ ಹೊಚ್ಚ ಹೊಸ HyperX 27’’ QHD ಗೇಮಿಂಗ್ ಮಾನಿಟರ್ ಅನ್ನೂ ಮಾರುಟ್ಟೆಗೆ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.
ಈಗಿನ ಹೈಬ್ರೀಡ್ ಪರಿಸರದಲ್ಲಿ ಗೇಮರ್ ಗಳು ತಮ್ಮ ಗುರಿಗಳನ್ನು ತಲುಪಲು ಮತ್ತು ತಮ್ಮ ಅಗತ್ಯತೆಗಳನ್ನು ಪೂರೈಸಬಹುದಾದ ಹೊಸ ಹೊಸ ಡಿವೈಸ್ ಗಳನ್ನು ಸದಾ ಹುಡುಕುತ್ತಿರುತ್ತಾರೆ. ಅವುಗಳಲ್ಲಿ ಪ್ರಮುಖವಾಗಿ ಆಟವಾಡುವುದು, ರಚನೆಯಿಂದಿಡಿದು ವಿಶ್ವದಾದ್ಯಂತ ಇರುವ ಸಾಮಾಜಿಕತೆಯೊಂದಿಗೆ ಬೆರೆಯುವವರೆಗೆ ಪೂರಕವಾದ ಸಾಧನಗಳಿಗೆ ಮೊರೆ ಹೋಗುತ್ತಾರೆ. ಇದಲ್ಲದೇ, ಬಹು ಬೇಡಿಕೆ ಇರುವ AAA ಗೇಮ್ ಗಳನ್ನು ಆಡಲು ಶಕ್ತಿಯನ್ನು ನೀಡುವಂತಹ ಮತ್ತು ಮಲ್ಟಿಟಾಸ್ಕಿಂಗ್, 3ಡಿ ಮಾದರಿಗಳ ರೆಂಡರಿಂಗ್ ವೇಗವನ್ನು ಹೆಚ್ಚುಗೊಳಿಸುವ ಅಥವಾ ಶಕ್ತಿಶಾಲಿ ಸೃಜನಾತ್ಮಕ ಟೂಲ್ ಗಳನ್ನು ಬಳಸುವ ಸಂದರ್ಭದಲ್ಲಿ ತೀವ್ರರೀತಿಯ ಸೃಜನಶೀಲ ಚಟುವಟಿಕೆಗಳನ್ನು ನಿರ್ವಹಣೆ ಮಾಡಲು ಸೂಕ್ತವಾದ ಡಿವೈಸ್ ಗಳನ್ನು ಗೇಮರ್ ಗಳು ಬಯಸುತ್ತಾರೆ. ಗೇಮರ್ ಗಳ ಈ ಎಲ್ಲಾ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಎಚ್ ಪಿ ಈ ಹೊಸ ಗೇಮಿಂಗ್ ಪೋರ್ಟ್ ಫೋಲಿಯೋವನ್ನು ವಿನ್ಯಾಸಗೊಳಿಸಿದೆ.
HP Chromebook ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಗೆ ಕ್ರೋಮ್‌ಬುಕ್ ಪರಿಚಯಿಸಿದ ಹೆಚ್‌ಪಿ!
Omen ಗೇಮಿಂಗ್ ಹಬ್: ಉನ್ನತೀಕರಿಸಿದ ಅನುಭವಕ್ಕಾಗಿ ಹೊಸ ಗೇಮಿಂಗ್ ಸಾಫ್ಟ್ ವೇರ್ ಅಪ್ಡೇಟ್
ಗೇಮರ್ ಗಳಿಗೆ ವೈಯಕ್ತಿಕ ಪಿಸಿ ಅನುಭವಗಳಿಗಾಗಿ ಶಕ್ತಿಶಾಲಿಯಾದ ಹೊಸ Omen ಗೇಮಿಂಗ್ ಹಬ್ ವೈಶಿಷ್ಟ್ಯತೆಗಳನ್ನು ಉನ್ನತೀಕರಿಸಲಾಗಿದೆ. OMEN ಆಪ್ಟಿಮೈಸರ್ ನಲ್ಲಿರುವ ಪ್ರೊಸೆಸರ್ ಕೋರ್ ಅಫಿನಿಟಿ ಆಪ್ಟಿಮೈಸೇಶನ್ FPS(iii) ನಲ್ಲಿ ಶೇ.10 ರಷ್ಟು ಸುಧಾರಣೆಯಾಗಲು ನೆರವಾಗುತ್ತದೆ. ಇಕೋ ಮೋಡ್ ಶೇ.20 ರಷ್ಟು ಅಧಿಕ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು ನಿಶ್ಯಬ್ಧತೆಯ ಗೇಮಿಂಗ್ ಸೆಶನ್ ಗಳಿಗಾಗಿ OMEN ಮತ್ತು Victus ಲ್ಯಾಪ್ ಟಾಪ್ ಗಳಲ್ಲಿ ಫ್ಯಾನ್ ಶಬ್ಧದಲ್ಲಿ 7 ಡಿಬಿಯಷ್ಟು ಕಡಿಮೆ ಮಾಡುತ್ತದೆ. ಪರ್ಫಾರ್ಮೆನ್ಸ್ ಮೋಡ್, ನೆಟ್ ವರ್ಕ್ ಬೂಸ್ಟರ್, ಸಿಸ್ಟಂ ವೈಟಲ್ಸ್, OMEN ಗೇಮಿಂಗ್ ಹಬ್ ನಂತಹ ವೈಶಿಷ್ಟ್ಯತೆಗಳನ್ನು ಅಡಕ ಮಾಡಲಾಗಿದೆ. ಇದು ಗೇಮರ್ ಗಳಿಗೆ ಇನ್ನೂ ಹೆಚ್ಚಿನ ಆನಂದದಾಯಕವಾದ ಅನುಭವವನ್ನು ನೀಡಲು ಮತ್ತು ಗೇಮಿಂಗ್ ಡಿವೈಸ್ ಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲು ಅವಕಾಶವನ್ನು ನೀಡುತ್ತದೆ.
OMEN Transcend 16 Laptop ಒಂದು ಅತ್ಯಂತ ತೆಳುವಾದ ಮತ್ತು ಹಗುರವಾದ ಗೇಮಿಂಗ್ ಪಿಸಿಯಾಗಿದೆ. ಇದರಲ್ಲಿ NVIDIA® GeForce® RTX™ 4070 ಸರಣಿಯ ಗ್ರಾಫಿಕ್ಸ್ ಮತ್ತು 13th Gen Intel® Core™ i9-13900HX ಪ್ರೊಸೆಸರ್ ಇದ್ದು ಶಕ್ತಿಶಾಲಿ ಕಾರ್ಯಕ್ಷಮತೆಯ ಸಾಮರ್ಥ್ಯವನ್ನು ಹೊಂದಿದೆ. ಕಟ್ಟಿಂಗ್ ಎಡ್ಜ್ ಸ್ಕ್ರೀನ್, ಪ್ರೀಮಿಯಂ ಸ್ಲಿಂ ಚಾಸಿಸ್ ಮತ್ತು ಹೈ-ಎಂಡ್ ಇಂಟರ್ನಲ್ ಕಾಂಪೋನೆಂಟ್ ಗಳಿಂದ ಇದನ್ನು ಗೇಮಿಂಗ್ ಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಎಚ್ ಪಿ ತಯಾರಿಸಿರುವ ಈ Omen Transcend 16 ಲ್ಯಾಪ್ ಟಾಪ್ 2.1 ಕೆಜಿ ಮತ್ತು 19.9 ಎಂಎಂ ನ ಅತ್ಯಂತ ತೆಳುವಾದ ಮತ್ತು ಹಗುರವಾದ ಗೇಮಿಂಗ್ ಲ್ಯಾಪ್ ಟಾಪ್ ಆಗಿದೆ.
· ಪೋರ್ಟೇಬಲ್ ಡಿಸೈನ್: ಈ ಡಿವೈಸ್ ಎಚ್ ಪಿಯಿಂದ ವಿನ್ಯಾಸಗೊಂಡಿರುವ ತೆಳುವಾದ ಮತ್ತು ಹಗುರವಾದ ಗೇಮಿಂಗ್ ಲ್ಯಾಪ್ ಟಾಪ್ ಆಗಿದ್ದು, ಇದು ಮೆಗ್ನೀಸಿಯಂ ಫ್ರೇಮ್ ಬಳಕೆ ಮಾಡಲಾದ ಮೊದಲ ಮತ್ತು ಏಕೈಕ OMEN ಲ್ಯಾಪ್ ಟಾಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 97Whr ಬ್ಯಾಟರಿ ಪ್ಯಾಕ್ ನೊಂದಿಗೆ ಇದು ಗೇಮರ್ ಗಳಿಗಾಗಿ ದೀರ್ಘಾವಧಿಯ ಬ್ಯಾಟರಿ ಬಾಳಿಕೆಯೊಂದಿಗೆ ಪ್ರೀಮಿಯಂ ಗೇಮಿಂಗ್ ಅನುಭವವನ್ನು ನೀಡುತ್ತದೆ.
· ಬ್ಲೇಸಿಂಗ್ ಪರ್ಫಾರ್ಮೆನ್ಸ್: ನೈಜ-ಸಮಯದ CPU ಮತ್ತು GPU ಸಾಮರ್ಥ್ಯವನ್ನು ನಿಖರವಾಗಿ ಪತ್ತೆ ಹಚ್ಚಲು OMEN ಗೇಮಿಂಗ್ ಹಬ್ ನಲ್ಲಿ OMEN ಡೈನಾಮಿಕ್ ಶಕ್ತಿಯ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
MD-ಚಾಲಿತ ಕ್ರೋಮ್‌ಬುಕ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ HP!
· ಕೂಲ್ ಡಿಸೈನ್: ಅಡ್ವಾನ್ಸ್ಡ್ OMEN Tempest Cooling ನೊಂದಿಗೆ ಟಾಪ್ ಟೈಟಲ್ ಗಳಲ್ಲಿ ಆಡುವಾಗಲಷ್ಟೇ ಅಲ್ಲ, ಬಹು ಕಾರ್ಯಗಳನ್ನು ನಿರ್ವಹಿಸುವಾಗಲೂ ಈ ಲ್ಯಾಪ್ ಟಾಪ್ ಅತ್ಯಂತ ಕೂಲ್ ಆಗಿರುತ್ತದೆ. ಗರಿಷ್ಠ ಕೂಲಿಂಗ್ ಗಾಗಿ ಇದನ್ನು ದೊಡ್ಡ ಔಟ್ಲೆಟ್ ಓಪನ್ ರೇಶಿಯೋ ಮತ್ತು ಶಕ್ತಿಶಾಲಿ ಥರ್ಮಲ್ ಏರ್ ಫ್ಲೋನೊಂದಿಗೆ ಸಿದ್ಧಪಡಿಸಲಾಗಿದೆ.
· ಪ್ರಖರವಾದ ದೃಶ್ಯಗಳು: ಈ ಡಿವೈಸ್ ನಂಬಲಸಾಧ್ಯವಾದ ವಿವರಗಳು ಮತ್ತು ರೋಮಾಂಚನಕಾರಿಯಾದ ನೈಜ-ಜೀವನದ ಬಣ್ಣಕ್ಕಾಗಿ ಅತ್ಯುತ್ಕೃಷ್ಠವಾದ HDR 1000 ಅನ್ನು ನೀಡುತ್ತದೆ. 16:10 ಅನುಪಾತದೊಂದಿಗೆ ಗೇಮರ್ ಗಳಿಗೆ ವೀಡಿಯೋ, ಆಡಿಯೋ ಮತ್ತು ಫೋಟೋಗ್ರಫಿಯನ್ನು ಎಡಿಟ್ ಮಾಡುವಾಗ ಹೆಚ್ಚು ಉತ್ಪಾದಕತೆಯನ್ನು ಪಡೆಯಲು ಅನುಕೂಲವಾಗುವಂತೆ ದೊಡ್ಡ ಸ್ಕ್ರೀನ್ ಅನ್ನು ಇದು ಹೊಂದಿದೆ.