Asianet Suvarna News Asianet Suvarna News

ಸಮುದ್ರದಲ್ಲಿ ಎಸೆದ ಪ್ಲಾಸ್ಟಿಕ್‌ ಬಳಸಿ ನಿರ್ಮಿಸಿದ HP ಲ್ಯಾಪ್‌ಟಾಪ್ ಬಿಡುಗಡೆ!

ಸಮುದ್ರದಲ್ಲಿ ಎಸೆದ ಪ್ಲಾಸ್ಟಿಕ್‌ಗಳನ್ನು ತೆಗೆದು, ಅದೇ ಪ್ಲಾಸ್ಟಿಕ್ ಬಳಸಿ ಇದೀಗ HP ನೂತನ ಲ್ಯಾಪ್‌ಟಾಪ್  ಬಿಡುಗಡೆ ಮಾಡಿದೆ. ಪರಿಸರವನ್ನು ಶುಚಿಗೊಳಿಸುವ ಕಾರ್ಯದ ಜೊತೆಗೆ ಪ್ಲಾಸ್ಟಿಕ್ ಪುನರ್ಬಳಕೆಯಾಗುವಂತೆ HP ನೋಡಿಕೊಂಡಿದೆ. ಈ ಪ್ಲಾಸ್ಟಿಕ್‌ನಿಂದ ನಿರ್ಮಾಣಗೊಂಡು ಇದೀಗ ಬಿಡುಗಡೆಯಾಗಿರುವ ಪ್ಲಾಸ್ಟಿಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

HP First Consumer laptop Made with Ocean Bound Plastics ckm
Author
Bengaluru, First Published Feb 23, 2021, 5:17 PM IST

ದೆಹಲಿ(ಫೆ.23):  ಎಚ್‌ಪಿ ಸಂಸ್ಥೆ ತನ್ನ ಪೆವಿಲಿಯನ್ ಸರಣಿ ಅಪ್‌ಡೇಟ್ ಘೋಷಿಸಿದೆ.  HP Pavilion 13, HP Pavilion 14, and HP Pavilion ಹಾಗೂ 15 Laptop ಬಿಡುಗಡೆ ಮಾಡಲಾಗಿದೆ. ಇದರ ವಿಶೇಷತೆ ಎಂದರೆ,  ಬಳಕೆದಾರರು ಬಳಸಿ ಎಸೆದು ಸಮುದ್ರಕ್ಕೆ ಸೇರಿರುವ ಪ್ಲಾಸ್ಟಿಕ್‌ಗಳಿಂದ ಇವುಗಳನ್ನು ಮಾಡಲಾಗಿದೆ. ಈ ಪೆವಿಲಿಯನ್ ಸರಣಿಯು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಿದ್ದು 11th Gen Intel Core  ಪ್ರೋಸೆಸರ್ ಹಾಗೂ Intel Iris Xe ಗ್ರಾಫಿಕ್ಸ್ ಒಳಗೊಂಡಿದೆ.

ಸುಲಭ ಬಳಕೆ ಮಾಡಬಹುದಾದ HP ಪ್ರೋಬುಕ್ ನೋಟ್ ಬುಕ್ ಬಿಡುಗಡೆ!

ಸುಸ್ಥಿರತೆಯು ಎಚ್‌ಪಿ ಸಂಸ್ಥೆಯ ಪ್ರಮುಖ ಆದ್ಯತೆಯಾಗಿದೆ. ಈ ಹೊಸ ಪೆವಿಲಿಯನ್ ನೋಟ್‌ಬುಕ್‌ಗಳು ಸಮುದ್ರ ಹಾಗೂ ತ್ಯಾಜ್ಯ ಗುಂಡಿಗಳಿಂದ ಸಂಗ್ರಹಿಸಿದ ಸುಮಾರು 92,000 ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ನಿರ್ಮಿಸಲಾದ ಸ್ಪೀಕರ್ ಹೌಸಿಂಗ್ ಒಳಗೊಂಡಿದ್ದು, ಹೊಸ ಸಾಧನದ ಪ್ಯಾಕೇಜಿಂಗ್‌ಗೆ ಬಳಸಲಾದ ಹೊರ ಆವರಣದ ಬಾಕ್ಸ್ ಮತ್ತು ಫೈಬರ್ ಕುಷನ್ ಕೂಡ ಶೇ. 100ರಷ್ಟು ಸುಸ್ಥಿರವಾಗಿವೆ ಹಾಗೂ ಮರುಬಳಕೆ ಮಾಡುವಂಥವಾಗಿವೆ. ಈ ಲ್ಯಾಪ್‌ಟಾಪ್‌ಗಳು  EPEAT Silver  ನೋಂದಣೀಯಾಗಿವೆ ಹಾಗೂ Energy Star ಪ್ರಮಾಣಿತವಾಗಿವೆ.

ಈಗ ಪಿಸಿಗಳು ಪ್ರತಿಯೊಬ್ಬರಿಗೂ ಅಗತ್ಯ. ಹೊಸ ತಲೆಮಾರು ಸ್ಮಾರ್ಟ್ ಫೋನಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಪಿಸಿಗಳನ್ನು ಬಳಸುತ್ತಿದೆ. ತಮ್ಮ ಗೆಳೆಯರು ಹಾಗೂ ಕುಟುಂಬದ ಜತೆಗೆ ಸಂಬಂಧ ಹೊಂದಿರಲು, ಮನೋರಂಜನೆ ಪಡೆಯಲು, ಡಿಜಿಟಲ್ ಕ್ಲಾಸ್‌ರೂಮ್‌ಗಳಲ್ಲಿ ಕಲಿಯಲು ಬಳಕೆಯಾಗುತ್ತಿವೆ. ಈ ಎಲ್ಲ ಅಗತ್ಯಗಳನ್ನು ಗಮನದಲ್ಲಿ ಇರಿಸಿಕೊಂಡು, ಬಳಕೆದಾರರು ತಮ್ಮ ಸಾಮರ್ಥ್ಯವನ್ನು ಶ್ರುತಪಡಿಸಲು ಅನುಕೂಲವಾಗುವಂತೆ ಉತ್ಕೃಷ್ಟ ದರ್ಜೆಯ ಪಿಸಿಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ನಾವು ಭೂಮಿಯನ್ನು ಭವಿಷ್ಯಕ್ಕೆ ಸುಸ್ಥಿರವಾಗಿ ರೂಪಿಸುವ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದೇವೆ. ಹೊಸ ಪೆವಿಲಿಯನ್ ಯುವ, ವರ್ಣರಂಜಿಕ ವಿನ್ಯಾಸದೊಂದಿಗೆ ಎಲ್ಲರೊಂದಿಗೂ ಸದಾ ಸಂಪರ್ಕದಲ್ಲಿ ಇರುವಂತೆ ಮಾಡುತ್ತದೆ ಎನ್ನುತ್ತಾರೆ, - ವಿಕ್ರಂ ಬೇಡಿ, ಹಿರಿಯ ನಿರ್ದೇಶಕರು, ಪರ್ಸನಲ್ ಸಿಸ್ಟಮ್ಸ್, ಎಚ್‌ಪಿ ಇಂಡಿಯಾ ಮಾರ್ಕೆಟ್

ವಿದ್ಯಾರ್ಥಿಗಳಿಗಾಗಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ HP ಪ್ರಿಂಟ್ ಲರ್ನ್ ಸೆಂಟರ್ ಆರಂಭ!

HP Pavilion 13 ನೈಸರ್ಗಿಕ ರಜತ ವರ್ಣದಲ್ಲಿ 8:30 ಗಂಟೆಗಳ ಬ್ಯಾಟರಿ ಬ್ಯಾಕ್-ಅಪ್ ಹಾಗೂ Wi-Fi 6 ಜತೆಗೆ ಶಕ್ತಿಶಾಲಿಯಾಗಿದೆ. ಹೊಸ ಪೆವಿಲಿಯನ್ ಪಿಸಿಗಳು ಕಲಾತ್ಮಕವಾಗಿವೆ. ಇದನ್ನು ಎಲ್ಲ ಮೂರು ಬದಿಗಳಿಂದ ಸುಲಭವಾಗಿ ತೆರೆಯುವಂತೆ ವಿನ್ಯಾಸಗೊಳಿಸಲಾಗಿದೆ. ಲೋಹದ 3ಡಿ ಚಾಸ್ಸಿಯನ್ನು ಹೊಂದಿದ್ದು, ತೆಳುವಾಗಿ, ಅಚ್ಚುಕಟ್ಟಾಗಿ, ಆಕರ್ಷಕವಾಗಿವೆ. ಸೆರಾಮಿಕ್ ವೈಟ್‌ನಲ್ಲಿ ಎಇಡಿ ಫಿನಿಶ್ ನೀಡಲಾಗಿದೆ.

Pavilion 15 ಶೇ. 86ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ (STBR) ಹೊಂದಿದೆ. ಉದ್ದ-ಅಗಲದ ಆಯಾಮಗಳನ್ನೂ ಸುಧಾರಿಸಲಾಗಿದೆ. ಮೂರು ಕಡೆಗಳಲ್ಲಿ ಮೈಕ್ರೋ ಅಂಚುಗಳುಳ್ಳ ಡಿಸ್‌ಪ್ಲೇ ಹೊಂದಿದೆ. Pavilion 13 Full HD ಡಿಸ್‌ಪ್ಲೇ ಒದಗಿಸುತ್ತಿದ್ದರೆ, Pavilion 14 ಹಾಗೂ Pavilion 15 ಒಂದೋ HD ಅಥವಾ Full HD ಪ್ಯಾನೆಲ್ ಹೊಂದಿವೆ. ಈ ಸಾಧನಗಳು Microsoft High Dynamic Range (HDR) ಸ್ಟ್ರೀಮಿಂಗ್ ಸಾಮರ್ಥ್ಯ, ಹೈ ಡೆಫಿನಿಶನ್ ವೀಡಿಯೋ ಕೋಡಿಂಗ್ (HEVC), FHD ಪ್ಯಾನೆಲ್ ಒಳಗೊಂಡಿದ್ದು, ವರ್ಣರಂಜಿತ ದೃಶ್ಯಾತ್ಮಕ ಅನುಭವಗಳಿಗೆ ಸಾಕ್ಷಿಯಾಗುತ್ತದೆ. ಅನುಭವವನ್ನು ಪರಿಪೂರ್ಣವಾಗಿಸಲು ಎಚ್‌ಪಿ 16GB RAM/512SSD ಹಾಗೂ FPR ಒಳಗೊಂಡಿದೆ.

ನೈಸರ್ಗಿಕ ಬೆಳ್ಳಿ, ಸೆರಾಮಿಕ್ ವೈಟ್ ವರ್ಣ ಸಂಯೋಜನೆಗಳಲ್ಲಿ ಇವು ಲಭ್ಯವಿವೆ. Pavilion14 ಟ್ರಾಂಕ್ವಿಲ್ ಪಿಂಕ್ ಬಣ್ಣದಲ್ಲೂ ಲಭ್ಯವಿದೆ. Pavilion 15 ಫಾಗ್ ಬ್ಲೂ ಸಹಿತ ನಾಲ್ಕು ವರ್ಣಗಳಲ್ಲಿ ಲಭ್ಯವಿದೆ. ಅಂಚಿನಿಂದ ಅಂಚಿನ ವರೆಗೆ ದೊಡ್ಡ ಗಾತ್ರದ, ಆಧುನಿಕ ಹಾಗೂ ನಿಖರವಾದ ಮಲ್ಟಿ ಟಚ್ ಸೌಲಭ್ಯದ ಟಚ್ ಪ್ಯಾಡ್, ಸುಲಭದ ನ್ಯಾವಿಗೇಶನ್ ಹಾಗೂ ಸುರಕ್ಷಿತ ಲಾಗ್-ಇನ್ ಹಾಗೂ ಐಚ್ಛಿಕ ಫಿಂಗರ್ ಪ್ರಿಂಟ್ ರೀಡರ್ ಜತೆಗೆ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

Follow Us:
Download App:
  • android
  • ios