Canon Flagship DSLR ಉತ್ಪಾದನೆ ಸ್ಥಗಿತ: ಮಿರರ್‌ಲೆಸ್ ಕ್ಯಾಮೆರಾಗಳತ್ತ ಕ್ಯಾನನ್ ಚಿತ್ತ!
ಕ್ಯಾನನ್ ತನ್ನ ಗಮನವನ್ನ ಮಿರರ್‌ಲೆಸ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳತ್ತ ಬದಲಾಯಿಸಲು ಬಯಸಿದೆ ಎಂದು ಹೇಳಿದೆ. ಹಾಗಾಗಿ ಇನ್ನು ಮುಂದೆ ಇದು ಫ್ಲ್ಯಾಗ್‌ಶಿಪ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಉತ್ಪಾದಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.
Tech Desk: ಸುಪ್ರಸಿದ್ಧ ಕ್ಯಾಮೆರಾ ಬ್ರ್ಯಾಂಡ್, ಡಿಎಸ್‌ಎಲ್‌ಆರ್ ಕ್ಯಾಮೆರಾ ತಯಾರಿಸುವುದನ್ನು ನಿಲ್ಲಿಸಲಿದೆ ಎಂದು ಹೇಳಿದೆ. Canon 1D X Mark III ತನ್ನ ಕೊನೆಯ ಪ್ರಮುಖ ಡಿಎಸ್‌ಎಲ್‌ಆರ್ ಕ್ಯಾಮೆರಾ ಎಂದು ಕಂಪನಿಯು ದೃಢಪಡಿಸಿದೆ. ಕ್ಯಾನನ್ ತನ್ನ ಗಮನವನ್ನು ಮಿರರ್‌ಲೆಸ್ (ಕನ್ನಡಿರಹಿತ) ಡಿಎಸ್‌ಎಲ್‌ಆರ್ ಕ್ಯಾಮೆರಾಗಳತ್ತ ಬದಲಾಯಿಸಲು ಬಯಸಿದೆ ಎಂದು ಹೇಳಿದೆ ಆದ್ದರಿಂದ ಇನ್ನು ಮುಂದೆ ಇದು ಫ್ಲ್ಯಾಗ್‌ಶಿಪ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಉತ್ಪಾದಿಸುವುದಿಲ್ಲ ಎಂದು ಕಂಪನಿ ತಿಳಿಸಿದೆ.
ಜಪಾನಿನ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಇಒ ಫ್ಯೂಜಿಯೊ ಮಿಟರೈ ಅವರು ಫ್ಲ್ಯಾಗ್‌ಶಿಪ್ ಡಿಎಸ್‌ಎಲ್‌ಆರ್‌ಗಳ ಉತ್ಪಾದನೆಯು ಕೆಲವೇ ವರ್ಷಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ. "ಕ್ಯಾನನ್‌ನ ಎಸ್‌ಎಲ್‌ಆರ್ ಫ್ಲ್ಯಾಗ್‌ಶಿಪ್ ಮಾದರಿಯನ್ನು 'EOS-1' ಸರಣಿ ಎಂದು ಕರೆಯಲಾಗುತ್ತದೆ, ಅದರಲ್ಲಿ ಮೊದಲನೆಯದು 1989 ರಲ್ಲಿ ಬಿಡುಗಡೆಯಾಗಿತ್ತು. 2020 ರಲ್ಲಿ ಬಿಡುಗಡೆಯಾದ ಇತ್ತೀಚಿನ ಮಾದರಿ 'EOS-1D X Mark III' ವಾಸ್ತವವಾಗಿ ಕೊನೆಯ ಮಾದರಿಯಾಗಿದೆ. ಮಾರುಕಟ್ಟೆಯಲ್ಲಿ ಮಿರರ್‌ಲೆಸ್ ಕ್ಯಾಮೆರಾಗಳಿಗೆ ಹೆಚ್ಚು ಬೇಡಿಕೆ ಇದೆ . ಇದಕ್ಕೆ ಅನುಗುಣವಾಗಿ, ನಾವು ಬದಲಾಯಿಸುತ್ತಿದ್ದೇವೆ. ಆರಂಭಿಕ ಮತ್ತು ಮಧ್ಯಂತರ ಎಸ್‌ಎಲ್‌ಆರ್ ಕ್ಯಾಮೆರಾಗಳ ಬೇಡಿಕೆಯು ಪ್ರಬಲವಾಗಿದೆ, ಆದ್ದರಿಂದ ನಾವು ಸದ್ಯಕ್ಕೆ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಮುಂದುವರಿಸಲು ಯೋಜಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಮಿರರ್‌ಲೆಸ್ ಕ್ಯಾಮೆರಾಗಳತ್ತ ಕ್ಯಾನನ್ ಚಿತ್ತ!
ಕ್ಯಾನನ್ ಜನವರಿಯಲ್ಲಿ 1DX Mark III ಅನ್ನು ಅನಾವರಣಗೊಳಿಸಿತ್ತು (ಸರಿಸುಮಾರು ರೂ 4,84,789). ವೃತ್ತಿಪರ ಛಾಯಾಗ್ರಾಹಕರಲ್ಲಿ ಈ ಕ್ಯಾಮೆರಾಗೆ ಇನ್ನೂ ಬೇಡಿಕೆ ಇದೆ. ಈ ಬೆನ್ನಲ್ಲೇ ಕ್ಯಾನನ್ ವಕ್ತಾರರು ಪೆಟಾಪಿಕ್ಸೆಲ್‌ಗೆ ನೀಡಿದ ಹೇಳಿಕೆಯಲ್ಲಿ "ಕಂಪನಿಯು ಮಿರರ್‌ಲೆಸ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ತಯಾರಿಕೆಯಲ್ಲಿ ಮಾತ್ರ ಗಮನಹರಿಸಲು ಬಯಸುತ್ತದೆ ಎಂದು ಹೇಳಿದ್ದಾರೆ. " ನಾವು ನಮ್ಮ ಮುಂದಿನ ಪ್ರಮುಖ ಮಾದರಿಯಾಗಿ ಆರ್‌ಎಫ್ ಮೌಂಟ್ ಕ್ಯಾಮೆರಾವನ್ನು (RF mount camera) ಪರಿಗಣಿಸುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಕ್ಯಾನನ್ ತನ್ನ ಫ್ಲ್ಯಾಗ್‌ಶಿಪ್ ಡಿಎಸ್‌ಎಲ್‌ಆರ್ ಕ್ಯಾಮೆರಾ ಉತ್ಪಾದನೆಯನ್ನು ಯಾವಾಗ ಸ್ಥಗಿತಗೊಳಿಸುತ್ತದೆ ಎಂಬುದನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. "ಲೇಖನದಲ್ಲಿ ವಿವರಿಸಿದಂತೆ ಮಿತರಾಯ್ (CEO Fuijo Mitarai) ಅವರ ಸಂದರ್ಶನದ ವಿವರಗಳು ನಿಜ" ಆದಾಗ್ಯೂ, 'ಕೆಲವೇ ವರ್ಷಗಳಲ್ಲಿ' ಎಂದು ಅಂದಾಜಿಸಲಾಗಿದ್ದರೂ, ಪ್ರಮುಖ ಡಿಎಸ್‌ಎಲ್‌ಆರ್ ಕ್ಯಾಮೆರಾದ ಅಭಿವೃದ್ಧಿ / ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿಖರವಾದ ದಿನಾಂಕಗಳನ್ನು ದೃಢೀಕರಿಸಲಾಗಿಲ್ಲ," ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ
PetaPixel ಪ್ರಕಾರ, ನಿಕಾನ್ ಕೂಡ ಮಿರರ್‌ಲೆಸ್ ಕ್ಯಾಮೆರಾಗಳತ್ತ ಮುಖ ಮಾಡಿದೆ. ಇದು ಫ್ಲ್ಯಾಗ್‌ಶಿಪ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ತಯಾರಿಸುವುದನ್ನು ನಿಲ್ಲಿಸಿದೆ. ನಿಕಾನ್ ಕೂಡ ಫ್ಲ್ಯಾಗ್‌ಶಿಪ್ ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಬದಲಿಗೆ ಮಿರರ್‌ಲೆಸ್ ಕ್ಯಾಮೆರಾಗಳನ್ನು ಮಾತ್ರ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.
ಇದನ್ನೂ ಓದಿ:
1) Tecno Pova 5G: 6000mAh ಬ್ಯಾಟರಿಯೊಂದಿಗೆ ಟೆಕ್ನೋದ ಮೊದಲ 5G ಸ್ಮಾರ್ಟ್‌ಫೋನ್ ಬಿಡುಗಡೆ!
2) Samsung Galaxy Tab A8: 7040mAh ಬ್ಯಾಟರಿ, ವೇಗದ ಚಾರ್ಜಿಂಗ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ!
3) Military Clothing System: -50ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಸೇನಾ ಉಡುಪು ಭಾರತದಲ್ಲೇ ಅಭಿವೃದ್ಧಿ!