ಬೆಂಗಳೂರಿನಲ್ಲಿ ಏಸಸ್ ಹೊಸ ಮಳಿಗೆ; ಲ್ಯಾಪ್‌ಟಾಪ್ ಖರೀದಿಸಿ ಕ್ಷಣದೊಳಗೆ!
ಇನ್ಮುಂದೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವುದು ಇನ್ನಷ್ಟು ಸುಲಭವಾಗಲಿದೆ. ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿರುವ ಏಸಸ್ ಕಂಪನಿ ಬೆಂಗಳೂರಿನಲ್ಲಿ ಹೊಸತೊಂದು ಮಳಿಗೆ ಆರಂಭಿಸಿದ್ದು, ಇನ್ನೂ 100 ಮಳಿಗೆ ಆರಂಭಿಸುವ ಯೋಜನೆ ಹೊಂದಿದೆ.
ಬೆಂಗಳೂರು (ಅ.08): ಅತ್ಯಾಧುನಿಕ ಲ್ಯಾಪ್‌ಟಾಪ್‌ಗಳನ್ನು ಜನತೆಗೆ ಅರ್ಪಿಸುತ್ತಿರುವ ಏಸಸ್ ಕಂಪನಿ ಜನರಿಗೆ ಮತ್ತಷ್ಟು ಹತ್ತಿರಾಗಲು ಯೋಜನೆ ಹಾಕಿಕೊಂಡಿದೆ.
ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸುಮಾರು 100 ಹೊಸ ಏಸಸ್ ಮಳಿಗೆ ತೆರೆಯುವ ಉದ್ದೇಶ ಕಂಪನಿಗೆ ಇದೆ. ಅದರ ಭಾಗವಾಗಿ ಬೆಂಗಳೂರಿನ ಕೋರಮಂಗಲದಲ್ಲಿ ಮೆಗಾ ಐಟಿ ಸ್ಟೋರ್ ಅನ್ನು ಆರಂಭಿಸಲಾಗಿದೆ.
ಇದನ್ನೂ ಓದಿ: ಫಿಂಗರ್ ಪ್ರಿಂಟ್ ಆಯ್ತು, ಭಾರತದಲ್ಲೀಗ ಚಹರೆ ಗುರುತಿನ ವ್ಯವಸ್ಥೆ ಜಾರಿ!...
ಸಂಸ್ಥೆಯ ಉತ್ಪನ್ನಗಳಾದ ವಿವೋ ಬುಕ್, ಝೆನ್ ಬುಕ್, ಝೆನ್ ಬುಕ್-ಫ್ಲಿಪ್ ಮತ್ತು ರಿಪಬ್ಲಿಕ್ ಆಫ್ ಗೇಮರ್ಸ್ ಲ್ಯಾಪ್‌ಟಾಪ್‌ಗಳು ಮತ್ತಿತರ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಏಸಸ್ ಇಂಡಿಯಾ ಸಂಸ್ಥೆಯ ನ್ಯಾಷನಲ್ ಸೇಲ್ಸ್ ಹೆಡ್ ಜಿಗ್ನೆಶ್ ಭಾವ್ಸರ್ ಮತ್ತು ಗೌರವ್ ಡಿ ಜೈನ್ ಈ ಹೊಸ ಮಳಿಗೆಯನ್ನು ಉದ್ಘಾಟಿಸಿದರು.
‘ಬೆಂಗಳೂರಿನಲ್ಲಿ ಮಳಿಗೆ ತೆರೆಯುತ್ತಿರುವುದು ನಮಗೆ ಸಂತಸ ತಂದಿದೆ. ಗ್ರಾಹಕರು ಮಳಿಗೆಗೆ ಬಂದು ತಮಗೆ ಬೇಕಾದ ಏಸಸ್ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಬಹುದು’ ಎಂದು ಏಸಸ್ ಸಂಸ್ಥೆಯ ನೋಟ್ ಬುಕ್ ವಿಭಾಗ ಮುಖ್ಯಸ್ಥ ಆರ್ನಲ್ಡ್ ಸು ಹೇಳಿದರು.