61% Discount: 5G ಸ್ಮಾರ್ಟ್‌ಫೋನ್ ಮೇಲೆ ಅಮೆಜಾನ್ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. 62 ಸಾವಿರ ರೂ. ಬೆಲೆಯ ಫೋನ್ ಕೇವಲ 23,999 ರೂ.ಗೆ ಲಭ್ಯವಿದೆ. ಫೀಚರ್ಸ್ ಹಾಗೂ ಡಿಸ್ಕೌಂಟ್ ಬಗ್ಗೆ ತಿಳಿಯಿರಿ.
ಎಲ್ಲರಿಗೂ ಅತ್ಯಧಿಕ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಹೊಂದಬೇಕು ಎಂಬ ಮಹಾದಾಸೆ ಇರುತ್ತದೆ. ಇಂದು ಸ್ಮಾರ್ಟ್‌ಫೋನ್ ಅಗತ್ಯವಾದ ವಸ್ತು ಆಗಿದ್ದು, ಜಗತಯ್ತು ಡಿಜಿಟಲೀಕರಣ ಆಗತ್ತಿದೆ. ಅತ್ಯಧಿಕ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ನಲ್ಲಿ ದೊಡ್ಡ ಮೊತ್ತದ ಡಿಸ್ಕೌಂಟ್ ಸಿಗುತ್ತಿದೆ. ಈ ಫೋನ್ ನಲ್ಲಿರುವ ವೈಶಿಷ್ಟ್ಯತೆಗಳು ಏನು? ಎಷ್ಟು ರಿಯಾಯ್ತಿ ಸಿಗುತ್ತೆ? ಈ ಸ್ಮಾರ್ಟ್‌ಫೋನ್ ಖರೀದಿ ಮಾಡೋದು ಹೇಗೆ ಅಂತ ಈ ಲೇಖನದಲ್ಲಿ ನೋಡೋಣ.
ಅಮೆಜಾನ್ ಗ್ರಾಹಕರಿಗೆ ಒಂದು ಸೂಪರ್ ಆಫರ್ ನೀಡುತ್ತಿದೆ. ಈ ಸೂಪರ್ ಆಫರ್‌ನಲ್ಲಿ ಗ್ರಾಹಕರಿಗೆ 62 ಸಾವಿರ ರೂ. ಬೆಲೆಯ ಅತ್ಯಧಿಕ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಕೇವಲ 23,999 ರೂ.ಗೆ ಸಿಗುತ್ತಿದೆ. ಶೇ.61ರಷ್ಟು ಡಿಸ್ಕೌಂಟ್ ಸಿಗುತ್ತಿರುವ ಸ್ಮಾರ್ಟ್‌ಫೋನ್ ಯಾವುದು ಗೊತ್ತಾ?
TECNO Phantom X2 Pro 5G ಸ್ಮಾರ್ಟ್‌ಫೋನ್ ಮೇಲೆ ಗ್ರಾಹಕರಿಗೆ ಶೇ.61ರಷ್ಟು ರಿಯಾಯ್ತಿ ಸಿಗುತ್ತಿದೆ. ಈ 5G ಸ್ಮಾರ್ಟ್‌ಫೋನ್ ಮೂಲಬೆಲೆ 61,999 ರೂಪಾಯಿ ಆಗಿದೆ. ಶೇ.61ರಷ್ಟು ರಿಯಾಯ್ತಿ ಬಳಿಕ ಗ್ರಾಹಕರಿಗೆ 23,999 ರೂಪಾಯಿಗೆ ಸಿಗುತ್ತದೆ. ಗ್ರಾಹಕರು ಈ ಸ್ಮಾರ್ಟ್‌ಫೋನ್‌ನ್ನು EMI ರೂಪದಲ್ಲಿಯೇ ಪಡೆದುಕೊಳ್ಳಬಹುದು. ತಿಂಗಳಿಗೆ 1,164 ರೂಪಾಯಿ ಪಾವತಿಸುವ ಮೂಲಕ TECNO Phantom X2 Pro 5G ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಬಹುದು.
ಇದನ್ನೂ ಓದಿ: ಇದುವರೆಗಿನ ಜಬರ್ದಸ್ತ್ ಆಫರ್; ಕಡಿಮೆ ಬೆಲೆಗೆ 330MP ಕ್ಯಾಮೆರಾ, 16GB RAM, 6700mAh ಬ್ಯಾಟರಿಯ 5G ಸ್ಮಾರ್ಟ್‌ಪೋನ್
TECNO Phantom X2 Pro 5G ಫೀಚರ್ಸ್
ಈ ಸ್ಮಾರ್ಟ್‌ಫೋನ್ HiOS ಆಪರೇಟಿಂಗ್ ಸಿಸ್ಟಮ್ ಆಧರಿತವಾಗಿದೆ. 12GB RAM ಮತ್ತು 256GB ಸ್ಟೋರೇಜ್ ಒಳಗೊಂಡಿದ್ದು,ಈ ಡಿವೈಸ್ 6.8 ಇಂಚಿನ ಫುಲ್ HD+ Curved AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಜೊತೆಯಲ್ಲಿ ಸ್ಮಾರ್ಟ್‌ಫೋನ್ ಸೇಫ್ಟಿಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. MediaTek Dimensity 9000 ಪ್ರೊಸೆಸರ್ ಜೊತೆ Mali-G710 MC10 GPUನಲ್ಲಿ ಈ ಸ್ಮಾರ್ಟ್‌ಫೋನ್ ನಿಮಗೆ ಸಿಗಲಿದೆ.
50MP ಮೇನ್ ಸೆನ್ಸಾರ್, 50MP ರಿಟ್ರ್ಯಾಕ್ಟಬಲ್ ಪೋಟ್ರೇಟ್ ಲೆನ್ಸ್ (Retractable portrait lens) ಮತ್ತು 13MP ಸೆನ್ಸಾರ್ ನಿಮಗೆ ಸಿಗಲಿದೆ. ಇನ್ನು ಸೆಲ್ಫಿ ಪ್ರಿಯರಿಗಾಗಿ 32MP ಕ್ಯಾಮೆರಾ ನೀಡಲಾಗಿದ್ದು, Imagiq 790 ಇಮೇಜ್ ಸಿಗ್ನಲ್ ಪ್ರೊಸೆಸರ್ (ISP)ಹೊಂದಿದೆ. TECNO Phantom X2 Pro ಸ್ಮಾರ್ಟ್‌ಫೋನ್ 5160mAh ಪವರ್‌ಫುಲ್ ಬ್ಯಾಟರಿ ಜೊತೆ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ: ಯುಗಾದಿಗೂ ಮುನ್ನವೇ ಬಂಪರ್ ಆಫರ್; ಕಡಿಮೆ ಬೆಲೆಯಲ್ಲಿ 43 ಇಂಚಿನ ಬಿಗ್ ಸ್ಕ್ರೀನ್ ಡಿಜಿಟಲ್ ಸ್ಮಾರ್ಟ್ ಟಿವಿ
